• English
  • Login / Register

ಮಾರುತಿ ಫ್ರಾಂಕ್ಸ್: ಕಾಯುವಿಕೆ ಯೋಗ್ಯವೇ ಅಥವಾ ಇದರ ಪ್ರತಿಸ್ಪರ್ಧಿಗಳೊಂದಿಗೆ ಮುಂದುವರಿಯಬಹುದೇ?

ಮಾರುತಿ ಫ್ರಾಂಕ್ಸ್‌ ಗಾಗಿ rohit ಮೂಲಕ ಫೆಬ್ರವಾರಿ 01, 2023 11:49 am ರಂದು ಮಾರ್ಪಡಿಸಲಾಗಿದೆ

  • 48 Views
  • ಕಾಮೆಂಟ್‌ ಅನ್ನು ಬರೆಯಿರಿ

ಬಲೆನೊ ಮತ್ತು ಬ್ರೆಝಾ ಸ್ಥಾನವನ್ನು ತುಂಬಲು ಫ್ರಾಂಕ್ಸ್ ಬಯಸಿದ್ದು, ಇದೊಂದು ಆಸಕ್ತಿದಾಯಕ ಪ್ಯಾಕೇಜ್ ಆಗಿದೆ. ಆದರೆ ಇದು ಕಾಯುವಿಕೆಗೆ ಯೋಗ್ಯವಾಗಿದೆಯೇ ಅಥವಾ ಬದಲಿಗೆ ಇದರ ಪ್ರತಿಸ್ಪರ್ಧಿಗಳಲ್ಲಿ ಒಂದನ್ನು ನೀವು ಆಯ್ದುಕೊಳ್ಳಬೇಕೇ?

 

‘ಬಲೆನೊ-ಆಧಾರಿತ ಎಸ್‌ಯುವಿ,’ ಎಂದು ಸುದ್ದಿಯಾದ ನಂತರ, ಮಾರುತಿ ತನ್ನ ಹೊಸ ಮಾಡೆಲ್ ಆದ ಫ್ರಾಂಕ್ಸ್ ಅನ್ನು ಆಟೋ ಎಕ್ಸ್‌ಪೋ 2023ರಲ್ಲಿ ಅನಾವರಣಗೊಳಿಸಿತು. ಈ ಕಾರು ತಯಾರಕರು ಇದರ ವೇರಿಯೆಂಟ್‌ನ ಶ್ರೇಣಿ, ಪವರ್‌ಟ್ರೇನ್ ಮತ್ತು ವೈಶಿಷ್ಟ್ಯಗಳನ್ನು ಒಳಗೊಂಡಂತೆ ಈ ಕ್ರಾಸ್‌ಓವರ್‌ನ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಫ್ರಾಂಕ್ಸ್‌ನ ಬುಕಿಂಗ್‌ಗಳು ತೆರೆದಿರುವುದರಿಂದ, ಸಬ್‌ಕಾಂಟ್ಯಾಕ್ಟ್ ಎಸ್‌ಯುವಿ ವಿಭಾಗದ ಇತರೆ ಪ್ರತಿಸ್ಪರ್ಧಿಗಳಿಗೆ ಹೋಲಿಸಿದಾಗ ಇದನ್ನು ಆಯ್ಕೆ ಮಾಡಬೇಕೇ ಅಥವಾ ಬೇಡವೇ ಎಂಬ ಗೊಂದಲದಲ್ಲಿರಬಹುದು. ಬನ್ನಿ ಉತ್ತರ ಹುಡುಕೋಣ:

ಮಾಡೆಲ್

ಎಕ್ಸ್-ಶೋರೂಮ್ ಬೆಲೆ

ಮಾರುತಿ ಫ್ರಾಂಕ್ಸ್

ರೂ 8 ಲಕ್ಷದಿಂದ (ನಿರೀಕ್ಷಿತ)

ರೆನಾಲ್ಟ್ ಕೈಗರ್/ ನಿಸಾನ್ ಮಾಗ್ನೇಟ್

ರೂ 5.97 ಲಕ್ಷದಿಂದ ರೂ 10.79 ಲಕ್ಷ

ಹ್ಯುಂಡೈ ವೆನ್ಯೂ/ ಕಿಯಾ ಸೊನೆಟ್

ರೂ 7.62 ಲಕ್ಷದಿಂದ ರೂ 14.39 ಲಕ್ಷ

ಮಾರುತಿ ಬ್ರೆಝಾ

ರೂ 7.99 ಲಕ್ಷದಿಂದ ರೂ 13.96 ಲಕ್ಷ

ಎಲ್ಲಾ ಬೆಲೆಗಳು ಎಕ್ಸ್-ಶೋರೂಮ್ ದೆಹಲಿ


ರೆನಾಲ್ಟ್ ಕೈಗರ್/ ನಿಸಾನ್ ಮ್ಯಾಗ್ನೆಟ್: ಕೈಗೆಟಕುವ ಬೆಲೆಗೆ ಖರೀದಿಸಿ, ಸರಿಸುಮಾರು ಅದೇ ರೀತಿಯ ವೈಶಿಷ್ಟ್ಯಗಳು ಮತ್ತು ಉತ್ತಮ ಸುರಕ್ಷತಾ ರೇಟಿಂಗ್ ಹೊಂದಿದೆ.

Renault Kiger

Nissan Magnite

ಸಬ್-4m ಎಸ್‌ಯುವಿ ಸೆಗ್ಮೆಂಟ್‌ಗೆ ಸಂಬಂಧಿಸಿದಂತೆ, ಬೆಲೆಗಳ ವಿಷಯದಲ್ಲಿ ಕೈಗರ್ ಮತ್ತು ಮ್ಯಾಗ್ನೆಟ್ ನ ರೆನಾಲ್ಟ್-ನಿಸಾನ್ ಜೋಡಿಯಿಂದ ಪ್ರಾರಂಭಿಸಬಹುದು. ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನಂತೆಯೇ ಬೆಲೆಯಿದ್ದರೂ ಅವುಗಳ ಗಾತ್ರ ಮತ್ತು ವೈಶಿಷ್ಟ್ಯಗಳ ಪಟ್ಟಿ ಅವುಗಳ ಎಸ್‌ಯುವಿ ಬ್ರ್ಯಾಂಡ್‌ಗೆ ಸೂಕ್ತವಾಗಿದೆ. ಸನ್‌ರೂಫ್, ಎಂಟು-ಇಂಚಿನ ಟಚ್‌ಸ್ಕ್ರೀನ್, ಮತ್ತು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯನ್ನು ಹೊಂದುವುದರೊಂದಿಗೆ ಎರಡೂ ಸಹ ಪ್ರೀಮಿಯಂ ಸ್ಪರ್ಶವನ್ನು ಪಡೆದಿವೆ. ಎರಡೂ ಸಹ ಫ್ರಾಂಕ್ಸ್‌ನಂತೆಯೇ ಎರಡೂ ಪೆಟ್ರೋಲ್ ಇಂಜಿನ್ ಆಯ್ಕೆಯನ್ನು ಪಡೆದಿವೆ. ರೆನಾಲ್ಟ್ ಮತ್ತು ನಿಸಾನ್ 1-ಲೀಟರ್ ನ್ಯಾಚುರಲಿ ಆ್ಯಸ್ಪಿರೇಟೆಡ್ ಯೂನಿಟ್ (72PS/96Nm) ಅಥವಾ 1-ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್‌ (100PS/160Nm) ಆಯ್ಕೆಯನ್ನು ಒದಗಿಸಿದೆ. ಸಿವಿಟಿ ಗೇರ್‌ಬಾಕ್ಸ್‌ನೊಂದಿಗೆ, ಎರಡೂ ಎಸ್‌ಯುವಿಗಳಿಗಾಗಿ ಟರ್ಬೋಚಾರ್ಜ್‌ಡ್ ಪವರ್‌ಟ್ರೇನ್‌ ನಮ್ಮ ಆಯ್ಕೆಯಾಗಿರುತ್ತದೆ. ಕೈಗರ್ ಮತ್ತು ಮ್ಯಾಗ್ನೆಟ್ ಹೊಂದಿರುವ ಮತ್ತೊಂದು ಪ್ರಯೋಜನವೆಂದರೆ, ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಪರೀಕ್ಷೆಯಲ್ಲಿ ಅವುಗಳ ಕಾರ್ಯಕ್ಷಮತೆ ಉತ್ತವಾಗಿದ್ದು, ಎರಡೂ ಸಹ ನಾಲ್ಕು ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿವೆ.

ಸಂಬಂಧಿತ:  ಆಲ್-ಎಲೆಕ್ಟ್ರಿಕ್ ಮಾರುತಿ ಫ್ರಾಂಕ್ಸ್ ತಯಾರಿಕೆ ಹಂತದಲ್ಲಿದ್ದು, ಟಾಟಾ ನೆಕ್ಸಾನ್ ಇವಿಗೆ ಪ್ರತಿಸ್ಪರ್ಧಿಯಾಗುವ ಸಾಧ್ಯತೆಯಿದೆ

 

ಹ್ಯುಂಡೈ ವೆನ್ಯೂ/ ಕಿಯಾ ಸೊನೆಟ್: ಪ್ರೀಮಿಯಂ ಎಸ್‌ಯುವಿ ಅನುಭೂತಿ ಮತ್ತು ಡಿಸೇಲ್ ಪವರ್‌ಟ್ರೇನ್‌ಗಳಿಗಾಗಿ ಖರೀದಿಸಿ

Hyundai Venue

Kia Sonet

ಕಿಕ್ಕಿರಿದ ಮತ್ತು ಸ್ಪರ್ಧಾತ್ಮಕ ಸಬ್-4m ಎಸ್‌ಯುವಿಯಲ್ಲಿ, ಸುಲಭವಾಗಿ ಎದ್ದು ಕಾಣುವ ಎರಡು ಮಾಡೆಲ್‌ಗಳೆಂದರೆ ಹ್ಯುಂಡೈ ವೆನ್ಯೂ ಮತ್ತು ಕಿಯಾ ಸೊನೆಟ್. ನೀವು ಭಾರತದಲ್ಲಿ ಪ್ರೀಮಿಯಂ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯನ್ನು ನೋಡುತ್ತಿದ್ದರೆ, ಅವುಗಳ ರಸ್ತೆಯ ಉಪಸ್ಥಿತಿ, ಉತ್ತಮವಾಗಿ-ಲೋಡ್ ಮಾಡಲಾದ ಉಪಕರಣಾ ಪಟ್ಟಿ ಮತ್ತು ಮುಖ್ಯವಾಗಿ ಡಿಸೇಲ್ ಪವರ್‌ಟ್ರೇನ್‌ನ ಆಯ್ಕೆಯಿಂದಾಗಿ ಎರಡನ್ನೂ ಶಾರ್ಟ್‌ಲಿಸ್ಟ್ ಮಾಡಬಹುದು. ಸೊನೆಟ್ ಡಿಸೇಲ್‌ನೊಂದಿಗೆ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಆಯ್ಕೆಯನ್ನು ಸಹ ಪಡೆದಿದೆ. ಇನ್ನೊಂದೆಡೆ, ಎಸ್‌ಯುವಿಯ ಸ್ಪೋರ್ಟಿಯರ್ ಪುನರಾವರ್ತನೆಯನ್ನು ಖರೀದಿಸಲು ಬಯಸುವ ಜನರಿಗೆ ಭಾರತದಲ್ಲಿ ಹ್ಯುಂಡೈ ವೆನ್ಯೂಗಾಗಿ ಎನ್ ಲೈನ್ ಟ್ರೀಟ್‌ಮೆಂಟ್ ಅನ್ನು ಸಹ ನೀಡುತ್ತಿದೆ. 

ಮಾರುತಿ ಬ್ರೆಝಾ: ದೊಡ್ಡ ಪೆಟ್ರೋಲ್ ಇಂಜಿನ್ ಮತ್ತು ವಿಸ್ತಾರ ಹಾಗೂ ವಿಶಾಲವಾದ ಎಸ್‌ಯುವಿ ಆಯ್ಕೆಗಾಗಿ ಖರೀದಿಸಿ

Maruti Brezza

ಮಾರುತಿಯ ಭದ್ರನೆಲೆಯಲ್ಲಿ, ಸಬ್-4m ಎಸ್‌ಯುವಿಯ ಮಾಜಿ ರಾಜ ಬ್ರೆಝಾ ಆಗಿದೆ. ಇಳಿಜಾರಿನ ರೂಫ್‌ಲೈನ್ ಹೊಂದಿರುವ ಫ್ರಾಂಕ್ಸ್‌ಗೆ ಹೋಲಿಸಿದರೆ, ಹೊಸ ಬ್ರೆಝಾ ವಿಶಾಲವಾದ ಇಂಟಿರಿಯರ್‌ನೊಂದಿಗೆ ಸಾಕಷ್ಟು ದೊಡ್ಡ ಎಸ್‌ಯುವಿ ಆಗಿದ್ದು, ಮತ್ತು ಸಣ್ಣ ಎಸ್‌ಯುವಿಯ ವಿಶಿಷ್ಟವಾದ ಬಾಕ್ಸಿ ನೋಟವನ್ನು ನೀಡುತ್ತದೆ. ಇಷ್ಟೇ ಅಲ್ಲದೇ, ಇದು ಫೈವ್-ಸ್ಪೀಡ್ ಎಂಟಿ ಅಥವಾ ಸಡಿಲವಾದ ಮತ್ತು ಸಂಸ್ಕರಿಸಲ್ಪಟ್ಟ ಆಟೋಮ್ಯಾಟಿಕ್ ಜೊತೆಗೆ ದೊಡ್ಡದಾದ 1.5-ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಪಡೆದಿದೆ, ಇದು 103PS ಮತ್ತು 137Nm ಗರಿಷ್ಠ ಕಾರ್ಯಕ್ಷಮತೆಯನ್ನು ನೀಡುತ್ತದೆ.

ಮಾರುತಿ ಫ್ರಾಂಕ್ಸ್: ಇದರ ವಿಶಿಷ್ಟ ನೋಟ, ವಿಶಾಲ ಇಂಟೀರಿಯರ್, ವೈಶಿಷ್ಟ್ಯಭರಿತ ಕ್ಯಾಬಿನ್ ಮತ್ತು ಟರ್ಬೋ ಪೆಟ್ರೋಲ್ ಇಂಜಿನ್ ಆಯ್ಕೆಗಾಗಿ ಕಾಯಿರಿ

 

Maruti Fronx

ಮಾರುತಿಯು ಫ್ರಾಂಕ್ಸ್ ಅನ್ನು ಬಲೆನೊ ಆಧಾರದ ಮೇಲೆ ತಯಾರಿಸಿದ್ದು, ಮೊದಲನೆಯದು ನವೀಕೃತ ಮುಂಭಾಗ ಮತ್ತು ಹಿಂಭಾಗವನ್ನು ಪಡೆದಿದೆ ಹಾಗೂ ಇದು ಚಿಕ್ಕ ಗ್ರ್ಯಾಂಡ್ ವಿಟಾರಾ ದಂತೆ (ಆ ಸಂಪರ್ಕಿತ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಟೇಲ್‌ಲೈಟ್‌ಗಳನ್ನು ನೋಡಿ) ಕಾಣುತ್ತದೆ. ಅಲ್ಲದೇ ಸಾಮಾನ್ಯ ಪ್ಲ್ಯಾಟ್‌ಫಾರ್ಮ್‌ನ ಪ್ರಯೋಜನವೆಂದರೆ, ಆರು ಅಡಿಯವರೆಗೆ ಎತ್ತರವಿರುವ ಜನರಿಗೆ ಹೆಡ್‌ರೂಮ್ ಸೇರಿದಂತೆ ಸಾಕಷ್ಟು ಕ್ಯಾಬಿನ್ ಜಾಗವನ್ನು ಪಡೆದಿದೆ. ಮಾರುತಿಯು ಈ ಫ್ರಾಂಕ್ಸ್‌ಗೆ ಬಲೆನೊದ ಹೆಡ್‌ಲೈನಿಂಗ್ ವೈಶಿಷ್ಟ್ಯಗಳನ್ನು ಒದಗಿಸುವುದರ ಜೊತೆಗೆ, ಒಂಬತ್ತು-ಇಂಚಿನ ಟಚ್‌ಸ್ಕ್ರೀನ್, ಹೆಡ್ಸ್-ಅಪ್ ಡಿಸ್‌ಪ್ಲೇ, 360-ಡಿಗ್ರಿ ಕ್ಯಾಮೆರಾ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ಸೇರಿಸಿದೆ (ಹ್ಯಾಚ್‌ಬ್ಯಾಕ್‌ನಲ್ಲಿ ಕಾಣೆಯಾಗಿದೆ). ಅಷ್ಟೇ ಅಲ್ಲದೇ, ಈ ಫ್ರಾಂಕ್ಸ್ ಟರ್ಬೋ-ಪೆಟ್ರೋಲ್ ಇಂಜಿನ್ ಅನ್ನು ಮರಳಿ ಪಡೆದಿದ್ದು, ಮಾರುತಿ ಕಾರನ್ನು ಆಯ್ದುಕೊಳ್ಳುವ ಉತ್ಸಾಹಿಗಳಿಗೆ ಪ್ರೇರಣೆಯಾಗುವುದಂತೂ ಖಚಿತವಾಗಿದೆ. ಕೊನೆಯದಾಗಿ ಬಲೆನೊ ಆರ್‌ಎಸ್‌ನಲ್ಲಿ ಕಂಡುಬಂದಂತಹ 100PS 1-ಲೀಟರ್ ಬೂಸ್ಟರ್‌ಜೆಟ್ ಯೂನಿಟ್, ಅದರ ಪ್ರಾಯೋಗಿಕತೆಯನ್ನು ಹೆಚ್ಚಿಸಲು ಸಿಕ್ಸ್ ಸ್ಪೀಡ್ ಆಟೋಮ್ಯಾಟಿಕ್ ಆಯ್ಕೆಯನ್ನು ಸಹ ಪಡೆದಿದೆ.

ಇದನ್ನೂ ಓದಿ: ಸಿಡಿ ಸ್ಪೀಕ್: ಟರ್ಬೋ ಪೆಟ್ರೋಲ್ ಇಂಜಿನ್‌ಗಳು ಮಾರುತಿ ಕಾರುಗಳಿಗೆ ತಂಗಾಳಿಯನ್ನು ತರಬಹುದೇ?

 

 

ಅವರಿಂದ ಪ್ರಕಟಿಸಲಾಗಿದೆ
was this article helpful ?

Write your Comment on Maruti ಫ್ರಾಂಕ್ಸ್‌

1 ಕಾಮೆಂಟ್
1
V
vijay rathor
Mar 4, 2023, 8:35:07 PM

Cng ऑप्शन है क्या, इस कार में

Read More...
    ಪ್ರತ್ಯುತ್ತರ
    Write a Reply
    Read Full News

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience