1999 ರಿಂದ 30 ಲಕ್ಷಕ್ಕೂ ಹೆಚ್ಚು ವ್ಯಾಗನ್‌ಆರ್‌ಗಳನ್ನು ಮಾರಾಟ ಮಾಡಿದ ಮಾರುತಿ!
ಮ ಾರುತಿ ವ್ಯಾಗನ್ ಆರ್ ಗಾಗಿ tarun ಮೂಲಕ ಮೇ 19, 2023 04:34 pm ರಂದು ಪ್ರಕಟಿಸಲಾಗಿದೆ
- 24 Views
- ಕಾಮೆಂಟ್ ಅನ್ನು ಬರೆಯಿರಿ
ಕಳೆದ ಎರಡು ವರ್ಷಗಳಿಂದ ಇದು ಭಾರತದಲ್ಲಿ ಅತ್ಯುತ್ಯಮವಾಗಿ ಮಾರಾಟವಾಗುತ್ತಿರುವ ಕಾರು
- 1999ರಲ್ಲಿ ಪಾದಾರ್ಪಣೆ ಮಾಡಿದ ನಂತರ ಮಾರುತಿಯು 30 ಲಕ್ಷ ಯೂನಿಟ್‌ಗಳಿಗಿಂತಲೂ ಹೆಚ್ಚಿನ ವ್ಯಾಗನ್‌ಆರ್‌ಗಳನ್ನು ಮಾರಾಟ ಮಾಡಿದೆ.
- ಅನೇಕರು ತಮ್ಮ ಹಳೆಯ ವ್ಯಾಗನ್‌ಆರ್‌ನಿಂದ ಹೊಸದಕ್ಕೆ ನವೀಕರಿಸಲು ಆದ್ಯತೆ ನೀಡುವುದರಿಂದ ಇದು ಪುನರಾವರ್ತಿತ ಖರೀದಿದಾರರ ಅತ್ಯಂತ ಹೆಚ್ಚಿನ ಶೇಕಡಾವಾರು ಸಂಖ್ಯೆಯನ್ನು ಹೊಂದಿದೆ.
- ಈ ಟಾಲ್-ಬಾಯ್ ಹ್ಯಾಚ್ ಪ್ರಸ್ತುತ 1-ಲೀಟರ್ ಮತ್ತು 1.2-ಲೀಟರ್ ಪೆಟ್ರೋಲ್ ಇಂಜಿನ್‌ಗಳನ್ನು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳೊಂದಿಗೆ ಪಡೆದಿದೆ.
- ಬೆಲೆಯನ್ನು ರೂ 5.55 ಲಕ್ಷದಿಂದ ರೂ 7.43 ಲಕ್ಷದ (ಎಕ್ಸ್-ಶೋರೂಂ) ತನಕ ನಿಗದಿಪಡಿಸಲಾಗಿದೆ.
ವ್ಯಾಗನ್‌ಆರ್‌ನ ಮಾರಾಟ ಗಡಿಯು 30-ಲಕ್ಷ ದಾಟಿರುವುದರಿಂದ ಮಾರುತಿಯು ಇದರೊಂದಿಗೆ ಹೊಸ ಮೈಲುಗಲ್ಲನ್ನು ಸಾಧಿಸಿದೆ. ಈ ಟಾಲ್ ಬಾಯ್ ಹ್ಯಾಚ್ ಬ್ಯಾಕ್ 1999ರಲ್ಲಿ ಪಾದಾರ್ಪಣೆ ಮಾಡಿದ್ದು, ಕಳೆದ ದಶಕದಿಂದ ಭಾರತದಲ್ಲಿ ಅತ್ಯುತ್ತಮ-ಮಾರಾಟವಾಗುತ್ತಿರುವ ಟಾಪ್ 10 ಕಾರುಗಳಲ್ಲಿ ಒಂದಾಗಿದೆ.
ಮಾರುತಿಯ ಮಾರ್ಕೆಟಿಂಗ್ ಮತ್ತು ಸೇಲ್ಸ್ ವಿಭಾಗದ ಸೀನಿಯರ್ ಎಕ್ಸಿಕ್ಯೂಟಿವ್ ಆಫೀಸರ್ ಆಗಿರುವ ಶಶಾಂಕ್ ಶ್ರೀವಾತ್ಸವ ಕೂಡಾ 24 ಪ್ರತಿಶತದಷ್ಟು ವ್ಯಾಗನ್‌ಆರ್ ಗ್ರಾಹಕರು ಹೊಸ ವ್ಯಾಗನ್‌ಆರ್‌ಗೆ ಅಪ್‌ಗ್ರೇಡ್ ಆಗಲು ಬಯಸುವುದರಿಂದ ಇದು ಅತ್ಯಂತ ಹೆಚ್ಚಿನ ಪುನರಾವರ್ತಿತ ಖರೀದಿದಾರರ ಶೇಕಡಾವಾರು ಹೊಂದಿದೆ ಎಂಬುದನ್ನು ದೃಢೀಕರಿಸಿದ್ದಾರೆ. 25 ಲಕ್ಷ ಯೂನಿಟ್‌ಗಳಿಗೂ ಹೆಚ್ಚು ಮಾರಾಟ ಕಂಡಿದ್ದ ಸುಮಾರು ಒಂದು ದಶಕದ ಹಿಂದೆ ಸ್ಥಗಿತಗೊಂಡ ಮಾರುತಿ 800 ಅನ್ನು ಇದು ಹಿಂದಿಕ್ಕಿದೆ. ಆದಾಗ್ಯೂ, 40 ಲಕ್ಷಕ್ಕೂ ಹೆಚ್ಚು ಸಂಚಿತ ಯೂನಿಟ್‌ಗಳ ಮಾರಾಟದೊಂದಿಗೆ ಆಲ್ಟೋ ಕೂಡಾ ಅತ್ಯುತ್ತಮವಾಗಿ ಮರಾಟವಾಗುವ ಮಾರುತಿ ಎಂಬ ನಾಮಫಲಕವನ್ನು ಹೊಂದಿದೆ.
ಇದನ್ನೂ ಓದಿ: ರೂ 20 ಲಕ್ಷದ ಕೆಳಗಿನ ಈ 7 ಆಲ್-ಬ್ಲ್ಯಾಕ್ ಕಾರುಗಳೊಂದಿಗೆ ನೀವು ಮಾಡಬಹುದು ಸ್ಟೈಲ್ ಸ್ಟೇಟ್‌ಮೆಂಟ್
ಪ್ರಸ್ತುತ ತನ್ನ ಮೂರನೇ ಪೀಳಿಗೆಯಲ್ಲಿರುವ ಈ ವ್ಯಾಗನ್‌ಆರ್, ಎರಡು ಇಂಜಿನ್‌ಗಳಲ್ಲಿ ಲಭ್ಯವಿದೆ: 67PS 1-ಲೀಟರ್ ಮತ್ತು 90PS 1.2-ಲೀಟರ್ ಪೆಟ್ರೋಲ್ ಯೂನಿಟ್‌ಗಳು. ಎರಡೂ ಪವರ್‌ಟ್ರೇನ್‌ಗಳು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 5-ಸ್ಪೀಡ್ AMT ಆಯ್ಕೆಯನ್ನು ಪಡೆದಿದೆ. 1-ಲೀಟರ್ ಇಂಜಿನ್ CNG ಆಯ್ಕೆಯನ್ನು ಪಡೆದಿದ್ದು 57PS ತನಕ ಉತ್ಪಾದಿಸುತ್ತದೆ ಮತ್ತು 34.05km/kg ಇಂಜಿನ್ ದಕ್ಷತೆಯನ್ನು ಕ್ಲೈಮ್ ಮಾಡುತ್ತದೆ.
ಪೆಟ್ರೋಲ್ ಇಂಜಿನ್‌ಗಳಿಗೆ ಹೊರತಾಗಿ, ಈ ವ್ಯಾಗನ್ ಆರ್ ಭವಿಷ್ಯದಲ್ಲಿ ಇಲೆಕ್ಟ್ರಿಕ್ ಆವೃತಿಯನ್ನೂ ಪಡೆಯಲಿದೆ. ಇದು 10 ಲಕ್ಷದೊಳಗಿನ ದರ ಮತ್ತು ಸುಮಾರು 300 ಕಿಲೋಮೀಟರ್‌ಗಳಿಗಿಂತಲೂ ಹೆಚ್ಚಿನ ರೇಂಜ್ ನೀಡುವ ನಿರೀಕ್ಷೆ ಇದ್ದು ಟಾಟಾ ಟಿಯಾಗೋ EVಗೆ ಸಮರ್ಥ ಪ್ರತಿಸ್ಪರ್ಧಿಯಾಗಲಿದೆ.
ಇದರ ಫೀಚರ್ ಪಟ್ಟಿಯು ಕಾಲಕಾಲಕ್ಕೆ ಹೆಚ್ಚಿನ ನವೀಕರಣಗಳನ್ನು ಹೊಂದಿದ್ದು, ಈಗ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಜೊತೆಗೆ 7-ಇಂಚು ಟಚ್‌ಸ್ಕ್ರೀನ್, ಸ್ಟೀರಿಂಗ್ ಮೌಂಟಡ್ ಆಡಿಯೋ ಕಂಟ್ರೋಲ್‌ಗಳು, ಐಡ್ಲ್ ಸ್ಟಾರ್ಟ್-ಸ್ಟಾಪ್ ಸಿಸ್ಟಮ್, ಮ್ಯಾನುವಲ್ AC ಮತ್ತು ರಿಮೋಟ್ ಕೀಲೆಸ್ ಎಂಟ್ರಿಯನ್ನು ಪಡೆದಿದೆ. ಸುರಕ್ಷತಾ ಫೀಚರ್‌ಗಳೆಂದರೆ, ಮುಂಭಾಗದ ಎರಡು ಏರ್‌ಬ್ಯಾಗ್‌ಗಳು, ABS ಮತ್ತು EBD, ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP) ಅನ್ನು ಸ್ಟಾಂಡರ್ಡ್ ಆಗಿ ಪಡೆದಿದೆ. ಆಟೋಮ್ಯಾಟಿಕ್ ವೇರಿಯೆಂಟ್‌ಗಳು ಹಿಲ್ ಹೋಲ್ಡ್ ಅಸಿಸ್ಟ್‌ನ ಸುರಕ್ಷತೆಯನ್ನು ಪಡೆದಿದೆ.ಈ ಹ್ಯಾಚ್‌ಬ್ಯಾಕ್‌ನ ಸುರಕ್ಷತಾ ಪ್ಯಾಕೇಜ್ ಮುಂಬರುವ ಮಾನದಂಡಗಳಿಗೆ ಅನುಸಾರವಾಗಿ ಹೆಚ್ಚಿನ ಕಿಟ್ ಅನ್ನು ಶೀಘ್ರದಲ್ಲೇ ನೀಡುವ ನಿರೀಕ್ಷೆ ಇದೆ.
ಇದನ್ನೂ ಓದಿ: ಮಾರುತಿಯ ಆರಂಭಿಕ ಹಂತದ ಮತ್ತು ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್‌ಗಳ ನಡುವೆ ಸುರಕ್ಷತಾ ಢಿಕ್ಕಿ: ಯಾವುದು ಹೆಚ್ಚಿನ ಸ್ಕೋರ್ ಗಳಿಸಿದೆ?
ಈ ವ್ಯಾಗನ್‌ಆರ್ ರೂ 5.55 ಲಕ್ಷದಿಂದ ರೂ 7.43 ಲಕ್ಷದ (ಎಕ್ಸ್-ಶೋರೂಂ) ತನಕ ಬೆಲೆಯನ್ನು ಹೊಂದಿದೆ. ಇದು ಮಾರುತಿ ಸಿಲೆರಿಯೋ, ಟಾಟಾ ಟಿಯಾಗೋ ಮತ್ತು ಸಿಟ್ರನ್ C3ಗೆ ಪೈಪೋಟಿ ನೀಡುತ್ತದೆ.
ಇನ್ನಷ್ಟು ಓದಿ : ಮಾರುತಿ ವ್ಯಾಗನ್ ಆರ್‌ನ ಆನ್ ರೋಡ್ ಬೆಲೆ
0 out of 0 found this helpful