Login or Register ಅತ್ಯುತ್ತಮ CarDekho experience ಗೆ
Login

ಜುಲೈನಲ್ಲಿ ಬಿಡುಗಡೆಗೊಳ್ಳಲಿದೆ ‘ಮಾರುತಿ’ ಇನ್ನೋವಾ ಹೈಕ್ರಾಸ್

ಟೊಯೋಟಾ ಇನ್ನೋವಾ ಹೈಕ್ರಾಸ್ ಗಾಗಿ tarun ಮೂಲಕ ಮೇ 02, 2023 07:35 pm ರಂದು ಪ್ರಕಟಿಸಲಾಗಿದೆ

ಇದು ಮಾರುತಿಯ ಎರಡನೇ ಸ್ಟ್ರಾಂಗ್-ಹೈಬ್ರಿಡ್ ಮತ್ತು ADAS ಸೇಫ್ಟಿ ಟೆಕ್ ಹೊಂದಿರುವ ಮೊದಲನೇ ಆಫರಿಂಗ್ ಆಗಿರಲಿದೆ.

  • ಮಾರುತಿ ತನ್ನ ಇನ್ನೋವಾ ಹೈಕ್ರಾಸ್ ಆವೃತ್ತಿಯನ್ನು ಜುಲೈನಲ್ಲಿ ಬಿಡುಗಡೆ ಮಾಡಲಿದೆ.
  • ಇದು ಪನೋರಮಿಕ್ ಸನ್‌ರೂಫ್, 10-ಇಂಚು ಟಚ್‌ಸ್ಕ್ರೀನ್ ಸಿಸ್ಟಮ್ ಮತ್ತು ರಡಾರ್ ಆಧಾರಿತ ಸುರಕ್ಷತಾ ತಂತ್ರಜ್ಞಾನ, ADAS ಅನ್ನು ಪಡೆಯಲಿದೆ.
  • 21.1kmpl ಕ್ಲೈಮ್ ಮಾಡುವ ಸ್ರ್ಟಾಂಗ್-ಹೈಬ್ರಿಡ್ ಆಯ್ಕೆಯನ್ನು ಹೊಂದಿರುವ ಹೈಕ್ರಾಸ್‌ನ 2-ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಬಳಸುತ್ತದೆ.
  • ಬೆಲೆಗಳು ರೂ 20 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುವ ನಿರೀಕ್ಷೆ ಇದೆ.

ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಟೋಯೋಟಾ ಇತ್ತೀಚೆಗಷ್ಟೆ ಇನ್ನೋವಾ ಹೈಕ್ರಾಸ್‌‌ನ ಟಾಪ್ ಎಂಡ್ ಮಾಡೆಲ್‌ಗಳ ಬುಕಿಂಗ್‌ಗಳನ್ನು ತಡೆಹಿಡಿದಿದೆ. ಇದರ ಕಾಯುವಿಕೆ ಅವಧಿಯು 12 ತಿಂಗಳಿಗಿಂತಲೂ ಹೆಚ್ಚಿದೆ. ಚಿಂತಿಸಬೇಡಿ. ಮಾರುತಿಯ MPV ಆವೃತ್ತಿ ಕೂಡಾ ಬೇಗನೇ ಅಂದರೆ ಪ್ರಾಯಶಃ ಜುಲೈನಲ್ಲೇ ಬರಲಿದೆ.

ಕಂಪನಿಯ ಇತ್ತೀಚಿನ ವಾರ್ಷಿಕ ಹಣಕಾಸು ಫಲಿತಾಂಶಗಳ ಸಮ್ಮೇಳನದಲ್ಲಿ, ಮಾರುತಿ ಸುಝುಕಿ ಅಧ್ಯಕ್ಷರಾದ, RC ಭಾರ್ಗವ ಅವರು, “ನಾವು ಟೋಯೋಟಾದಿಂದ 3-ಸಾಲಿನ ಸ್ಟ್ರಾಂಗ್ ಹೈಬ್ರಿಡ್ ಮತ್ತು ಟಾಪ್ ಎಂಡ್ ಬೆಲೆಯ ವಾಹನಗಳನ್ನು ಸೋರ್ಸಿಂಗ್ ಮಾಡಲಿದ್ದೇವೆ. ಇದರ ಗಾತ್ರವು ತುಂಬಾ ದೊಡ್ಡದಲ್ಲದಿದ್ದರೂ ಇದು ನವೀನವಾಗಿರಲಿದೆ,” ಎಂದು ಹೇಳಿದ್ದಾರೆ. ಈ ಸ್ಟ್ರಾಂಗ್ ಹೈಬ್ರಿಡ್ MPV ಅಂದಾಜು ಮುಂದಿನ ಎರಡು ತಿಂಗಳಲ್ಲಿ ಮಾರಾಟವಾಗಬೇಕು ಎಂದು ಮಾರುತಿಯ ಮಾಲೀಕರು ಹೇಳಿದ್ದಾರೆ.

ಈ ಇನ್ನೋವಾ ಹೈಕ್ರಾಸ್-ಆಧಾರಿತ MPV ಟೋಯೋಟಾ ಬ್ಯಾಡ್ಜ್ ಹೊಂದಿರುವ ಮೊದಲ ಮಾರುತಿಯಾಗಿರಲಿದೆ. ಈ ಮಾರುತಿ MPV ಹೈಕ್ರಾಸ್‌ನಂತೆಯೇ ತಳಹದಿಗಳು, ಪವರ್‌ಟ್ರೇನ್‌ಗಳು, ಟ್ರಾನ್ಸ್‌ಮಿಷನ್ ಮತ್ತು ಸ್ಟ್ರಾಂಗ್-ಹೈಬ್ರಿಡ್ ತಂತ್ರಜ್ಞಾನವನ್ನು ಬಳಸುತ್ತದೆ. ಅಲ್ಲದೇ ಗ್ರ್ಯಾಂಡ್ ವಿಟಾರಾ ಮತ್ತು ಹೈರೈಡರ್ ಅದೇ ವೇದಿಕೆ ಮತ್ತು ಪವರ್‌ಟ್ರೇನ್‌ಗಳನ್ನು ಹಂಚಿಕೊಳ್ಳಲಿವೆ.

ಇದನ್ನೂ ಓದಿ: ಟೊಯೋಟಾ ಇನ್ನೋವಾ ಹೈಕ್ರಾಸ್ ಪೆಟ್ರೋಲ್ ವರ್ಸಸ್ ಹೈಬ್ರಿಡ್: ಇಲೆಕ್ಟ್ರಿಫೈಡ್ MPV ಎಷ್ಟು ಹೆಚ್ಚು ಮಿತವ್ಯಯಕಾರಿಯಾಗಿದೆ?

ಈ ಮಾರುತಿ MPV ಇನ್ನೋವಾದ ಪ್ರೀಮಿಯಮ್ ಫೀಚರ್ ಪಟ್ಟಿಯನ್ನು ಪಡೆಯಲಿದ್ದು, ಇದು ಪನೋರಮಿಕ್ ಸನ್‌ರೂಫ್, 10-ಇಂಚು ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟಡ್ ಫ್ರಂಟ್ ಸೀಟುಗಳು ಮತ್ತು ಚಾಲಿತ ಎರಡನೇ-ಸಾಲಿನ ಅಟ್ಟೋಮನ್ ಸೀಟುಗಳನ್ನು ಒಳಗೊಂಡಿದೆ. ADAS (ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್), ಆರರ ತನಕದ ಏರ್‌ಬ್ಯಾಗ್‌ಗಳಿಂದ ಸುರಕ್ಷಿತವಾಗಿದೆ, ಮತ್ತು 360-ಡಿಗ್ರಿ ಕ್ಯಾಮರಾ ಹೊಂದಿದೆ. ಈ ಮಾರುತಿ MPV ಇನ್ನೋವಾದಂತೆಯೇ ಫೀಚರ್ ಪಟ್ಟಿಯನ್ನು ಹೊಂದಿರಲಿದೆ.

ಈ ಟಯೋಟಾ ಇನ್ನೋವಾ ಹೈಕ್ರಾಸ್ 2-ಸ್ವಾಭಾವಿಕವಾಗಿ ಚೂಷಿಸಲ್ಪಡುವ ಪೆಟ್ರೋಲ್ ಇಂಜಿನ್ ಅನು ಸ್ಟ್ರಾಂಗ್ ಹೈಬ್ರಿಡ್ ಆಯ್ಕೆಯೊಂದಿಗೆ ಪಡೆದಿದೆ. ಈ ಸ್ಟ್ರಾಂಗ್ ಹೈಬ್ರಿಡ್ ವೇರಿಯೆಂಟ್‌ಗಳು 21.1kmpl ತನಕದ ಇಂಧನ ಮಿತವ್ಯಯತೆಯನ್ನು ಕ್ಲೈಮ್ ಮಾಡುತ್ತದೆ. ಸಾಮಾನ್ಯ ಪೆಟ್ರೋಲ್ ಇಂಜಿನ್‌ಗೆ CVT ಟ್ರಾನ್ಸ್‌ಮಿಷನ್ ಸ್ಟಾಂಡರ್ಡ್ ಆಗಿರುತ್ತದೆ ಆದರೆ ಹೈಬ್ರಿಡ್ ವೇರಿಯೆಂಟ್‌ಗಳು e-CVT ಅನ್ನು ಪಡೆಯುತ್ತವೆ. ಮಾರುತಿ MPVಯಲ್ಲಿಯೂ ಇದೇ ರೀತಿಯಾದ ವೇದಿಕೆ ಮತ್ತು ಇಂಜಿನ್ ಅನ್ನು ಕಾಣಬಹುದು.

ಇದನ್ನೂ ಓದಿ: EVಗಳು ವರ್ಸಸ್ ಸ್ಟ್ರಾಂಗ್ -ಹೈಬ್ರಿಡ್‌ಗಳು: ಯಾವುದನ್ನು ನೀವು ಆಯ್ಕೆ ಮಾಡಬೇಕು?

ಈ ಇನ್ನೋವಾ ಹೈಕ್ರಾಸ್ ಬೆಲೆಯನ್ನು ರೂ 19.40 ಲಕ್ಷದಿಂದ ರೂ 29.72 ಲಕ್ಷದ ತನಕ (ಎಕ್ಸ್-ಶೋರೂಂ ದೆಹಲಿ) ನಿಗದಿಪಡಿಸಲಾಗಿದೆ. ಮಾರುತಿಯ ಆವೃತ್ತಿ ಕೂಡಾ ರೂ. 20 ಲಕ್ಷದ ಸಮೀಪದಿಂದ ಪ್ರಾರಂಭವಾಗುವ ನಿರೀಕ್ಷೆ ಇದೆ. ಇನ್ನೋವಾದಂತೆಯೇ, ಈ ಮಾರುತಿ MPVಗೆ ತನ್ನ ಟೋಯೋಟಾ ಕಸಿನ್ ಹೊರತಾಗಿ ಯಾವುದೇ ನೇರ ಪ್ರತಿಸ್ಪರ್ಧಿಗಳಿಲ್ಲ.

ಇನ್ನಷ್ಟು ಓದಿ : ಟೋಯೋಟಾ ಇನ್ನೋವಾ ಹೈಕ್ರಾಸ್ ಆಟೋಮ್ಯಾಟಿಕ್

Share via

Write your Comment on Toyota ಇನೋವಾ Hycross

explore ಇನ್ನಷ್ಟು on ಟೊಯೋಟಾ ಇನ್ನೋವಾ ಹೈಕ್ರಾಸ್

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಮ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಎಲೆಕ್ಟ್ರಿಕ್
Rs.26.90 - 29.90 ಲಕ್ಷ*
ಎಲೆಕ್ಟ್ರಿಕ್ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.10.60 - 19.70 ಲಕ್ಷ*
ಹೊಸ ವೇರಿಯೆಂಟ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ