Login or Register ಅತ್ಯುತ್ತಮ CarDekho experience ಗೆ
Login

Maruti Nexaದ 2024ರ ಏಪ್ರಿಲ್ ಆಫರ್‌ಗಳ ಭಾಗ 1- 87,000 ರೂ.ವರೆಗೆ ರಿಯಾಯಿತಿಗಳು

published on ಏಪ್ರಿಲ್ 09, 2024 06:43 pm by rohit for ಮಾರುತಿ ಬಾಲೆನೋ

ಈ ಕೊಡುಗೆಗಳು ಏಪ್ರಿಲ್ 17 ರವರೆಗೆ ಮಾನ್ಯವಾಗಿರುತ್ತವೆ, ನಂತರ ರಿಯಾಯಿತಿಗಳನ್ನು ಪರಿಷ್ಕರಿಸುವ ಸಾಧ್ಯತೆಯಿದೆ

  • ಗ್ರ್ಯಾಂಡ್ ವಿಟಾರಾದ ಸ್ಟ್ರಾಂಗ್-ಹೈಬ್ರಿಡ್ ವೇರಿಯೆಂಟ್‌ಗಳಲ್ಲಿ ಗರಿಷ್ಠ 87,000 ರೂ.ವರೆಗಿನ ಡಿಸ್ಕೌಂಟ್‌ಗಳು ಲಭ್ಯವಿವೆ.
  • ಫ್ರಾಂಕ್ಸ್‌ 32,000 ರೂ.ವರೆಗಿನ ಒಟ್ಟು ಪ್ರಯೋಜನಗಳನ್ನು ನೀಡುತ್ತಿದೆ.
  • ಮಾರುತಿಯು ಬಲೆನೊ ಮತ್ತು ಜಿಮ್ನಿಯನ್ನು ಗರಿಷ್ಠ 57,000 ರೂ.ವರೆಗಿನ ಉಳಿತಾಯದೊಂದಿಗೆ ನೀಡುತ್ತಿದೆ.
  • XL6 ಸಿಎನ್‌ಜಿ ಮತ್ತು ಇನ್ವಿಕ್ಟೋದಲ್ಲಿ ಯಾವುದೇ ಪ್ರಯೋಜನಗಳು ಲಭ್ಯವಿಲ್ಲ.

ಬಲೆನೊ ಸೇರಿದಂತೆ ಮಾರುತಿ ತನ್ನ ಸಂಪೂರ್ಣ ನೆಕ್ಸಾದ ಕಾರುಗಳಲ್ಲಿ ಏಪ್ರಿಲ್ ತಿಂಗಳಿಗೆ ವಿವಿಧ ರಿಯಾಯಿತಿಗಳನ್ನು ಪರಿಚಯಿಸಿದೆ. ಆದರೆ, ಕೆಳಗೆ ತಿಳಿಸಲಾದ ಕೊಡುಗೆಗಳು ಏಪ್ರಿಲ್ 17 ರವರೆಗೆ ಮಾತ್ರ ಅನ್ವಯಿಸುತ್ತವೆ, ನಂತರ ಅವು ಪರಿಷ್ಕರಣೆಗಳಿಗೆ ಒಳಪಟ್ಟಿರುತ್ತವೆ. 2024ರ ಏಪ್ರಿಲ್ ಮೊದಲಾರ್ಧದಲ್ಲಿ ಲಭ್ಯವಿರುವ ನಿಖರವಾದ ಮೊಡೆಲ್‌-ವಾರು ರಿಯಾಯಿತಿಗಳನ್ನು ನೋಡೋಣ:

ಬಲೆನೊ

ಆಫರ್‌

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

35,000 ರೂ. ವರೆಗೆ

ಎಕ್ಸ್‌ಚೇಂಜ್‌ ಬೋನಸ್

15,000 ರೂ.

ಕಾರ್ಪೊರೇಟ್ ಡಿಸ್ಕೌಂಟ್‌

7,000 ರೂ.

ಒಟ್ಟು ಪ್ರಯೋಜನಗಳು

57,000 ರೂ.ವರೆಗೆ

  • ಮೇಲೆ ತಿಳಿಸಿದ ಪ್ರಯೋಜನಗಳು ಮಾರುತಿ ಬಲೆನೊದ ಎಎಮ್‌ಟಿ ಆವೃತ್ತಿಗಳಲ್ಲಿ ಲಭ್ಯವಿದೆ.

  • ನೀವು ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಹ್ಯಾಚ್‌ಬ್ಯಾಕ್ ಅನ್ನು ಖರೀದಿಸಲು ಬಯಸಿದರೆ, ನಗದು ರಿಯಾಯಿತಿಯು ರೂ 30,000 ಕ್ಕೆ ಇಳಿಯುತ್ತದೆ, ಆದರೆ ಇತರ ಕೊಡುಗೆಗಳು ಬದಲಾಗದೆ ಉಳಿಯುತ್ತವೆ.

  • ಗ್ರಾಹಕರು ವಿನಿಮಯ ಬೋನಸ್ ಬದಲಿಗೆ 20,000 ರೂಗಳ ಒಪ್ಶನಲ್‌ ಸ್ಕ್ರ್ಯಾಪ್‌ಪೇಜ್ ಬೋನಸ್ ಅನ್ನು ಆಯ್ಕೆ ಮಾಡಬಹುದು.

  • ಇದರ ಸಿಎನ್‌ಜಿ ವೇರಿಯೆಂಟ್‌ ಅನ್ನು ಖರೀದಿಸಲು ಬಯಸುವವರಿಗೆ, ಮಾರುತಿಯು 10,000 ರೂಪಾಯಿಗಳ ನಗದು ರಿಯಾಯಿತಿ ಮತ್ತು ವಿನಿಮಯ ಬೋನಸ್ ಅಥವಾ ಸ್ಕ್ರ್ಯಾಪ್‌ಪೇಜ್ ಬೋನಸ್ ಆಯ್ಕೆಯನ್ನು ಒದಗಿಸುತ್ತಿದೆ. ಬಲೆನೊ ಸಿಎನ್‌ಜಿ ಯಾವುದೇ ಕಾರ್ಪೊರೇಟ್ ರಿಯಾಯಿತಿಯನ್ನು ಪಡೆಯುವುದಿಲ್ಲ.

  • ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಅನ್ನು ಮಾರುತಿಯು 6.66 ಲಕ್ಷ ರೂ.ನಿಂದ 9.88 ಲಕ್ಷ ರೂ.ವಿನ ನಡುವೆ ಮಾರಾಟ ಮಾಡುತ್ತದೆ.

ಗ್ರ್ಯಾಂಡ್ ವಿಟಾರಾ

ಆಫರ್‌

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

30,000 ರೂ. ವರೆಗೆ

ಎಕ್ಸ್‌ಚೇಂಜ್‌ ಬೋನಸ್

50,000 ರೂ. ವರೆಗೆ

ಕಾರ್ಪೊರೇಟ್ ಡಿಸ್ಕೌಂಟ್‌

7,000 ರೂ.

ಒಟ್ಟು ಪ್ರಯೋಜನಗಳು

87,000 ರೂ. ವರೆಗೆ

  • 18.43 ಲಕ್ಷ ರೂ.ನಿಂದ ಪ್ರಾರಂಭವಾಗುವ ಮಾರುತಿ ಗ್ರ್ಯಾಂಡ್ ವಿಟಾರಾ ಸ್ಟ್ರಾಂಗ್‌-ಹೈಬ್ರಿಡ್ ಆವೃತ್ತಿಗಳ ಮೇಲೆ ಗರಿಷ್ಠ ರಿಯಾಯಿತಿಗಳು ಲಭ್ಯವಿವೆ.

  • ಮಾರುತಿಯು ಎಸ್‌ಯುವಿಯ ಸ್ಟ್ರಾಂಗ್-ಹೈಬ್ರಿಡ್ ಆವೃತ್ತಿಗಳನ್ನು 55,000 ರೂ.ಗಳ ಅತ್ಯಧಿಕ ಒಪ್ಶನಲ್‌ ಸ್ಕ್ರ್ಯಾಪ್‌ಪೇಜ್ ಬೋನಸ್‌ನೊಂದಿಗೆ ನೀಡುತ್ತಿದೆ.

  • ಪೆಟ್ರೋಲ್ ಆಯ್ಕೆಯನ್ನು ಮಾತ್ರ ಹೊಂದಿರುವ ಎಸ್‌ಯುವಿಯ ಟಾಪ್‌-ಸ್ಪೆಕ್ ಝೀಟಾ ಮತ್ತು ಆಲ್ಫಾ ಆವೃತ್ತಿಗಳನ್ನು (AWD ಒಳಗೊಂಡು) ಆಯ್ಕೆ ಮಾಡುವವರಿಗೆ, ನಗದು ರಿಯಾಯಿತಿಯು 5,000 ರೂ. ನಷ್ಟು ಕಡಿಮೆಯಾದರೆ, ವಿನಿಮಯ ಮತ್ತು ಸ್ಕ್ರ್ಯಾಪ್‌ಪೇಜ್ ಬೋನಸ್‌ಗಳು ತಲಾ ರೂ 20,000 ರೂ. ನಷ್ಟು ಕಡಿಮೆಯಾಗುತ್ತವೆ.

  • ಗ್ರ್ಯಾಂಡ್ ವಿಟಾರಾದ ಮಿಡ್-ಸ್ಪೆಕ್ ಡೆಲ್ಟಾ ಆವೃತ್ತಿಯನ್ನು ರೂ 20,000 ನಗದು ರಿಯಾಯಿತಿ, ರೂ 30,000 ವಿನಿಮಯ ಬೋನಸ್ ಮತ್ತು ರೂ 7,000 ಕಾರ್ಪೊರೇಟ್ ರಿಯಾಯಿತಿಯೊಂದಿಗೆ ನೀಡಲಾಗುತ್ತಿದೆ.

  • ಮಾರುತಿಯು ಎಸ್‌ಯುವಿಯ ಬೇಸ್-ಸ್ಪೆಕ್ ಸಿಗ್ಮಾ ವೇರಿಯೆಂಟ್‌ ಅನ್ನು ಕೇವಲ 7,000 ರೂಗಳ ಕಾರ್ಪೊರೇಟ್ ರಿಯಾಯಿತಿಯೊಂದಿಗೆ ನೀಡುತ್ತಿದೆ.

  • ಗ್ರಾಂಡ್ ವಿಟಾರಾವು 10.80 ಲಕ್ಷ ರೂ.ನಿಂದ 20.09 ಲಕ್ಷ ರೂ.ವರೆಗೆ ಮಾರಾಟವಾಗುತ್ತದೆ.

ಜಿಮ್ನಿ

ಆಫರ್‌

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

50,000 ರೂ.

ಎಕ್ಸ್‌ಚೇಂಜ್‌ ಬೋನಸ್

ಕಾರ್ಪೊರೇಟ್ ಡಿಸ್ಕೌಂಟ್‌

7,000 ರೂ.

ಒಟ್ಟು ಪ್ರಯೋಜನಗಳು

57,000 ರೂ.ವರೆಗೆ

  • ಮಾರುತಿ ಜಿಮ್ನಿಯ ಎಲ್ಲಾ ಆವೃತ್ತಿಗಳು 57,000 ರೂ.ವರೆಗಿನ ಒಟ್ಟು ಪ್ರಯೋಜನಗಳೊಂದಿಗೆ ಲಭ್ಯವಿದೆ.

  • ಮಾರುತಿಯ ಈ ಆಫ್-ರೋಡರ್‌ನಲ್ಲಿ ಯಾವುದೇ ವಿನಿಮಯ ಬೋನಸ್ ಅಥವಾ ಸ್ಕ್ರ್ಯಾಪ್‌ಪೇಜ್ ಬೋನಸ್ ಇಲ್ಲ.

  • ಜಿಮ್ನಿಯ ಬೆಲೆ 12.74 ಲಕ್ಷ ರೂ.ನಿಂದ 14.95 ಲಕ್ಷ ರೂ.ವರೆಗೆ ಇದೆ.

ಇದನ್ನು ಸಹ ಓದಿ: ಭಾರತದಲ್ಲಿ 3 ಕೋಟಿ ವಾಹನಗಳ ಉತ್ಪಾದನಾ ಮೈಲಿಗಲ್ಲನ್ನು ಸಾಧಿಸಿದ ಮಾರುತಿ

ಫ್ರಾಂಕ್ಸ್‌

ಆಫರ್‌

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

15,000 ರೂ.ವರೆಗೆ.

ಎಕ್ಸ್‌ಚೇಂಜ್‌ ಬೋನಸ್

10,000 ರೂ.

ಕಾರ್ಪೊರೇಟ್ ಡಿಸ್ಕೌಂಟ್‌

7,000 ರೂ.

ಒಟ್ಟು ಪ್ರಯೋಜನಗಳು

32,000 ರೂ.ವರೆಗೆ.

  • ಮಾರುತಿ ಫ್ರಾಂಕ್ಸ್‌ನ ಟರ್ಬೊ ಆವೃತ್ತಿಗಳ ಮೇಲೆ ತಿಳಿಸಿದ ನಗದು ರಿಯಾಯಿತಿಯ ಜೊತೆಗೆ ರೂ 43,000 ಮೌಲ್ಯದ ವೆಲಾಸಿಟಿ ಎಡಿಷನ್ ಆಕ್ಸೆಸರಿ ಕಿಟ್‌ನೊಂದಿಗೆ ಬರುತ್ತವೆ.

  • ಎಕ್ಸ್‌ಚೇಂಜ್ ಬೋನಸ್ ಬದಲಿಗೆ 15,000 ರೂಪಾಯಿಯ ಸ್ಕ್ರ್ಯಾಪ್‌ಪೇಜ್ ಬೋನಸ್ ಅನ್ನು ಸಹ ನೀವು ಆಯ್ಕೆ ಮಾಡಬಹುದು.

  • ಅದರ ರೆಗುಲರ್‌ ಪೆಟ್ರೋಲ್ ಆವೃತ್ತಿಗಳನ್ನು ಖರೀದಿಸಲು ಬಯಸುವವರಿಗೆ, ನಗದು ರಿಯಾಯಿತಿಯು ರೂ 10,000 ಕ್ಕೆ ಇಳಿಯುತ್ತದೆ, ಆದರೆ ಫ್ರಾಂಕ್ಸ್ ಸಿಎನ್‌ಜಿಯು ಕೇವಲ ಎಕ್ಸ್‌ಚೇಂಜ್‌ ಬೋನಸ್ ಅಥವಾ ಸ್ಕ್ರ್ಯಾಪೇಜ್ ಬೋನಸ್‌ನೊಂದಿಗೆ ಬರುತ್ತದೆ.

  • ಫ್ರಾಂಕ್ಸ್‌ನ ಬೆಲೆಯು 7.51 ಲಕ್ಷ ರೂ.ನಿಂದ 13.04 ಲಕ್ಷ ರೂ.ವರೆಗೆ ಇದೆ.

XL6

ಆಫರ್‌

ಮೊತ್ತ

ಎಕ್ಸ್‌ಚೇಂಜ್‌ ಬೋನಸ್

20,000 ರೂ

ಒಟ್ಟು ಪ್ರಯೋಜನಗಳು

20,000 ರೂ.ವರೆಗೆ

  • Maruti XL6ನ ಪೆಟ್ರೋಲ್ ಆವೃತ್ತಿಗಳನ್ನು ಮಾತ್ರ 20,000 ರೂಪಾಯಿಗಳ ಎಕ್ಸ್‌ಚೇಂಜ್‌ ಬೋನಸ್ ರೂಪದ ಪ್ರಯೋಜನಗಳೊಂದಿಗೆ ನೀಡಲಾಗುತ್ತಿದೆ.

  • ಮೇಲೆ ತಿಳಿಸಿದ ಕೆಲವು ಇತರ ಮೊಡೆಲ್‌ಗಳಂತೆ, ಎಕ್ಸ್‌ಎಲ್‌6 ಕೂಡ ಎಕ್ಸ್‌ಚೇಂಜ್ ಬೋನಸ್‌ಗೆ ಬದಲಾಗಿ ಒಪ್ಶನಲ್‌ ಸ್ಕ್ರ್ಯಾಪ್‌ಪೇಜ್ ಬೋನಸ್ ರೂ 25,000 ನೊಂದಿಗೆ ಹೊಂದಬಹುದು.

  • XL6 ನ ಸಿಎನ್‌ಜಿ ಆವೃತ್ತಿಗಳಲ್ಲಿ ಮಾರುತಿ ಯಾವುದೇ ಡಿಸ್ಕೌಂಟ್‌ಗಳನ್ನು ನೀಡುತ್ತಿಲ್ಲ.

  • XL6ನ ಬೆಲೆಯು 11.61 ಲಕ್ಷ ರೂ.ಗಳಿಂದ 14.77 ಲಕ್ಷ ರೂ.ವಿನ ನಡುವೆ ಇದೆ.

ಸಿಯಾಝ್‌

ಆಫರ್‌

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

25,000 ರೂ.

ಎಕ್ಸ್‌ಚೇಂಜ್‌ ಬೋನಸ್

25,000 ರೂ.

ಕಾರ್ಪೊರೇಟ್ ಡಿಸ್ಕೌಂಟ್‌

10,000 ರೂ.

ಒಟ್ಟು ಪ್ರಯೋಜನಗಳು

60,000 ರೂ.ವರೆಗೆ.

  • ಮಾರುತಿ ಸಿಯಾಜ್‌ನ ಎಲ್ಲಾ ಆವೃತ್ತಿಗಳು ಮೇಲೆ ತಿಳಿಸಿದ ಉಳಿತಾಯಕ್ಕೆ ಅರ್ಹವಾಗಿವೆ.

  • ಗ್ರಾಹಕರು ಎಕ್ಸ್‌ಚೇಂಜ್‌ ಬೋನಸ್‌ನ ಬದಲಿಗೆ ಒಪ್ಶನಲ್‌ ಸ್ಕ್ರ್ಯಾಪ್‌ಪೇಜ್ ಬೋನಸ್ 30,000 ರೂ.ವನ್ನು ಆಯ್ಕೆ ಮಾಡಬಹುದು.

  • ಮಾರುತಿಯ ಈ ಕಾಂಪ್ಯಾಕ್ಟ್ ಸೆಡಾನ್‌ನ ಬೆಲೆ 9.40 ಲಕ್ಷ ರೂ.ನಿಂದ 12.29 ಲಕ್ಷ ರೂ.ವರೆಗೆ ಇದೆ.

ಇದನ್ನೂ ಓದಿ: 2024ರ ಮಾರ್ಚ್‌ನಲ್ಲಿ ಹ್ಯುಂಡೈ, ಟಾಟಾ ಮತ್ತು ಮಹೀಂದ್ರಾ ಕಂಪನಿಗಳಿಗಿಂತ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ

ಇಗ್ನಿಸ್‌

ಆಫರ್‌

ಮೊತ್ತ

ಕ್ಯಾಶ್‌ ಡಿಸ್ಕೌಂಟ್‌

40,000 ರೂ.

ಎಕ್ಸ್‌ಚೇಂಜ್‌ ಬೋನಸ್

15,000 ರೂ.

ಕಾರ್ಪೊರೇಟ್ ಡಿಸ್ಕೌಂಟ್‌

7,000 ರೂ.

ಒಟ್ಟು ಪ್ರಯೋಜನಗಳು

62,000 ರೂ.ವರೆಗೆ

  • ಮೇಲೆ ತಿಳಿಸಲಾದ ಕೊಡುಗೆಗಳು ಮಾರುತಿ ಇಗ್ನಿಸ್‌ನ ಎಲ್ಲಾ ಆವೃತ್ತಿಗಳಿಗೆ ಅನ್ವಯಿಸುತ್ತವೆ.

  • ನೀವು 15,000 ರೂಪಾಯಿಗಳ ವಿನಿಮಯ ಬೋನಸ್ ಅನ್ನು ಆರಿಸಿಕೊಳ್ಳಬಹುದು ಅಥವಾ 20,000 ರೂಪಾಯಿಗಳ ಸ್ಕ್ರ್ಯಾಪೇಜ್ ಬೋನಸ್‌ಗೆ ಹೋಗಬಹುದು.

  • ಮಾರುತಿ ಇಗ್ನಿಸ್‌ನ ಬೆಲೆ 5.84 ಲಕ್ಷ ರೂ.ನಿಂದ 8.11 ಲಕ್ಷ ರೂ.ವರೆಗೆ ಇದೆ.

ಗಮನಿಸಿ:

  • ಗ್ರಾಹಕರ ಅರ್ಹತೆಯ ಆಧಾರದ ಮೇಲೆ ಕಾರ್ಪೊರೇಟ್ ಕೊಡುಗೆಗಳು ಬದಲಾಗಬಹುದು.

  • ರಾಜ್ಯ ಮತ್ತು ನಗರವನ್ನು ಅವಲಂಬಿಸಿ ಪ್ರಯೋಜನಗಳು ಬದಲಾಗಬಹುದು, ಆದ್ದರಿಂದ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ಮಾರುತಿ ನೆಕ್ಸಾ ಡೀಲರ್‌ಶಿಪ್ ಅನ್ನು ಸಂಪರ್ಕಿಸಿ.

  • ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಬೆಲೆಗಳು

ಹೆಚ್ಚು ಓದಿ: ಬಲೆನೊ ಎಎಮ್‌ಟಿ

r
ಅವರಿಂದ ಪ್ರಕಟಿಸಲಾಗಿದೆ

rohit

  • 44 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಾರುತಿ ಬಾಲೆನೋ

Read Full News

explore similar ಕಾರುಗಳು

ಮಾರುತಿ ಗ್ರಾಂಡ್ ವಿಟರಾ

ಪೆಟ್ರೋಲ್21.11 ಕೆಎಂಪಿಎಲ್
ಸಿಎನ್‌ಜಿ26.6 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಮಾರುತಿ ಫ್ರಾಂಕ್ಸ್‌

ಪೆಟ್ರೋಲ್21.79 ಕೆಎಂಪಿಎಲ್
ಸಿಎನ್‌ಜಿ28.51 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಮಾರುತಿ ಎಕ್ಸ್‌ಎಲ್ 6

ಪೆಟ್ರೋಲ್20.97 ಕೆಎಂಪಿಎಲ್
ಸಿಎನ್‌ಜಿ26.32 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಮಾರುತಿ ಬಾಲೆನೋ

ಪೆಟ್ರೋಲ್22.35 ಕೆಎಂಪಿಎಲ್
ಸಿಎನ್‌ಜಿ30.61 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ