• English
    • Login / Register

    2024ರ ಏಪ್ರಿಲ್‌ನಲ್ಲಿನ Maruti Nexa ಆಫರ್‌ಗಳ ಭಾಗ 2- ರೂ 87,000 ವರೆಗೆ ಡಿಸ್ಕೌಂಟ್‌ಗಳು

    ಮಾರುತಿ ಬಾಲೆನೋ ಗಾಗಿ rohit ಮೂಲಕ ಏಪ್ರಿಲ್ 22, 2024 09:23 pm ರಂದು ಪ್ರಕಟಿಸಲಾಗಿದೆ

    • 33 Views
    • ಕಾಮೆಂಟ್‌ ಅನ್ನು ಬರೆಯಿರಿ

    ಪರಿಷ್ಕೃತ ಆಫರ್‌ಗಳು ಈಗ 2024ರ ಏಪ್ರಿಲ್‌ನ ಅಂತ್ಯದವರೆಗೆ ಮಾನ್ಯವಾಗಿರುತ್ತವೆ

    Offers on Nexa cars valid till the end of April 2024

    • ಗ್ರ್ಯಾಂಡ್ ವಿಟಾರಾದ ಸ್ಟ್ರಾಂಗ್-ಹೈಬ್ರಿಡ್ ಆವೃತ್ತಿಗಳಲ್ಲಿ ಗರಿಷ್ಠ 87,000 ರೂ.ವರೆಗಿನ ರಿಯಾಯಿತಿಗಳು ಲಭ್ಯವಿವೆ.
    • ಬಲೆನೋ 54,000 ರೂ.ವರೆಗೆ ರಿಯಾಯಿತಿಗಳನ್ನು ಹೊಂದಿದೆ.
    • ಮಾರುತಿ ಫ್ರಾಂಕ್ಸ್‌ನಲ್ಲಿ 32,000 ರೂ.ವರೆಗೆ ರಿಯಾಯಿತಿ ಪಡೆಯಿರಿ.
    • ಮಾರುತಿಯು ಜಿಮ್ನಿ ಮೇಲೆ 57,000 ರೂ.ವರೆಗೆ ರಿಯಾಯಿತಿಯನ್ನು ನೀಡುತ್ತಿದೆ.

    Maruti ಈಗ ತನ್ನ ನೆಕ್ಸಾ ಕಾರುಗಳಿಗಾಗಿ ಪರಿಷ್ಕೃತ ಆಫರ್‌ಗಳನ್ನು ಹೊರತಂದಿದೆ, ಅದು ಈಗ 2024ರ  ಏಪ್ರಿಲ್‌ನ ಅಂತ್ಯದವರೆಗೆ ಮಾನ್ಯವಾಗಿರುತ್ತದೆ. ಮೊದಲಿನಂತೆ, ಹೊಸ ಆಫರ್‌ಗಳು ಕ್ಯಾಶ್‌ ಡಿಸ್ಕೌಂಟ್‌ ಮತ್ತು ಎಕ್ಸ್‌ಚೇಂಜ್‌ ಬೋನಸ್‌ ಸೇರಿದಂತೆ ವಿವಿಧ ಪ್ರಯೋಜನಗಳನ್ನು ಒಳಗೊಂಡಿವೆ. ಏಪ್ರಿಲ್ 30 ರವರೆಗೆ ಮಾನ್ಯವಾಗಿರುವ ಮಾಡೆಲ್-ವಾರು ನವೀಕರಿಸಿದ ಆಫರ್‌ಗಳ ತ್ವರಿತ ನೋಟ ಇಲ್ಲಿದೆ:

    Baleno

    Maruti Baleno

    ಆಫರ್‌

    ಮೊತ್ತ

    ಕ್ಯಾಶ್‌ ಡಿಸ್ಕೌಂಟ್‌

      32,000 ರೂ.ವರೆಗೆ

    ಎಕ್ಸ್‌ಚೇಂಜ್‌ ಬೋನಸ್‌

      15,000 ರೂ.

    ಕಾರ್ಪೋರೇಟ್‌ ಡಿಸ್ಕೌಂಟ್‌

    7,000 ರೂ.

    ಒಟ್ಟು ಲಾಭಗಳು

      54,000 ರೂ.ವರೆಗೆ

    • ಈ ಎಲ್ಲಾ ರಿಯಾಯಿತಿಗಳು ಮಾರುತಿ ಬಲೆನೊದ ಎಎಮ್‌ಟಿ ಆವೃತ್ತಿಗಳಿಗೆ ಮಾತ್ರ ಅನ್ವಯಿಸುತ್ತವೆ.

    • ನೀವು ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಹ್ಯಾಚ್‌ಬ್ಯಾಕ್ ಖರೀದಿಸಲು ಬಯಸಿದರೆ, ಕ್ಯಾಶ್‌ ಡಿಸ್ಕೌಂಟ್‌ 27,000 ರೂ.ಗೆ ಇಳಿಯುತ್ತದೆ, ಆದರೆ ಇತರ ಕೊಡುಗೆಗಳು ಬದಲಾಗದೆ ಉಳಿಯುತ್ತವೆ.

    • ಖರೀದಿದಾರರು ಎಕ್ಸ್‌ಚೇಂಜ್‌ ಬೋನಸ್‌ನ ಬದಲಿಗೆ 20,000 ರೂಗಳ ಒಪ್ಶನಲ್‌ ಸ್ಕ್ರ್ಯಾಪ್‌ಪೇಜ್ ಬೋನಸ್ ಅನ್ನು ಆಯ್ಕೆ ಮಾಡಬಹುದು.

    • ಅದರ ಸಿಎನ್‌ಜಿ ವೇರಿಯೆಂಟ್‌ ಅನ್ನು ಖರೀದಿಸಲು ಬಯಸುವವರಿಗೆ, ಮಾರುತಿಯು 10,000 ರೂಪಾಯಿಗಳ ಕ್ಯಾಶ್‌ ಡಿಸ್ಕೌಂಟ್‌ ಮತ್ತು ಎಕ್ಸ್‌ಚೇಂಜ್‌ ಬೋನಸ್‌ ಅಥವಾ ಸ್ಕ್ರ್ಯಾಪೇಜ್ ಬೋನಸ್ ಆಯ್ಕೆಯನ್ನು ಒದಗಿಸುತ್ತಿದೆ. ಬಲೆನೊ ಸಿಎನ್‌ಜಿ ಯಾವುದೇ ಕಾರ್ಪೊರೇಟ್ ಡಿಸ್ಕೌಂಟ್‌ ಅನ್ನು ಪಡೆಯುವುದಿಲ್ಲ. 

    • ಮಾರುತಿ ತನ್ನ ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಅನ್ನು 6.66 ಲಕ್ಷ ರೂ.ನಿಂದ  9.88 ಲಕ್ಷ ರೂ.ಗೆ ಮಾರಾಟ ಮಾಡುತ್ತದೆ.

    ಗ್ರ್ಯಾಂಡ್ ವಿಟಾರಾ

    Maruti Grand Vitara

    ಆಫರ್‌

    ಮೊತ್ತ

    ಕ್ಯಾಶ್‌ ಡಿಸ್ಕೌಂಟ್‌

    30,000 ರೂ.ವರೆಗೆ

    ಎಕ್ಸ್‌ಚೇಂಜ್‌ ಬೋನಸ್‌

    50,000 ರೂ.ವರೆಗೆ

    ಕಾರ್ಪೋರೇಟ್‌ ಡಿಸ್ಕೌಂಟ್‌

    7,000 ರೂ.

    ಒಟ್ಟು ಲಾಭಗಳು

    87,000 ರೂ.ವರೆಗೆ

    • 18.43 ಲಕ್ಷ ರೂ.ನಿಂದ ಪ್ರಾರಂಭವಾಗುವ ಮಾರುತಿ ಗ್ರ್ಯಾಂಡ್ ವಿಟಾರಾದ ಸ್ಟ್ರಾಂಗ್‌-ಹೈಬ್ರಿಡ್ ಆವೃತ್ತಿಗಳು ಮೇಲಿನ ಕೋಷ್ಟಕದಲ್ಲಿ ತಿಳಿಸಿದಂತೆ ಗರಿಷ್ಠ ಲಾಭದೊಂದಿಗೆ ಲಭ್ಯವಿದೆ. 

    • ಮಾರುತಿಯು ಎಸ್‌ಯುವಿಯ ಸ್ಟ್ರಾಂಗ್-ಹೈಬ್ರಿಡ್ ಆವೃತ್ತಿಗಳನ್ನು 55,000 ರೂ.ರ ಅತ್ಯಧಿಕ ಒಪ್ಶನಲ್‌ ಸ್ಕ್ರ್ಯಾಪ್‌ಪೇಜ್ ಬೋನಸ್‌ನೊಂದಿಗೆ ನೀಡುತ್ತಿದೆ.

    • ಈ ಎಸ್‌ಯುವಿಯ ಪೆಟ್ರೋಲ್ ಎಂಜಿನ್‌ನ ಟಾಪ್‌-ಸ್ಪೆಕ್ ಝೀಟಾ ಮತ್ತು ಆಲ್ಫಾ ಆವೃತ್ತಿಗಳನ್ನು (ಎಡಬ್ಲ್ಯೂಡಿ ಒಳಗೊಂಡಿರುವ) ಆಯ್ಕೆ ಮಾಡುವವರಿಗೆ, ಕ್ಯಾಶ್‌ ಡಿಸ್ಕೌಂಟ್‌ 5,000 ರೂ.ನಷ್ಟು ಕಡಿಮೆಯಾದರೆ, ವಿನಿಮಯ ಮತ್ತು ಸ್ಕ್ರ್ಯಾಪ್‌ಪೇಜ್ ಬೋನಸ್‌ಗಳು ತಲಾ 20,000 ರೂ.ನಷ್ಟು ಕಡಿಮೆಯಾಗುತ್ತವೆ.

    • ಮಿಡ್-ಸ್ಪೆಕ್ ಗ್ರಾಂಡ್ ವಿಟಾರಾದ ಡೆಲ್ಟಾ ಮೊಡೆಲ್‌ 10,000 ರೂ.ನಗದು ರಿಯಾಯಿತಿ, 30,000 ರೂ. ಎಕ್ಸ್‌ಚೇಂಜ್‌ ಬೊನಸ್‌ ಮತ್ತು 7,000 ರೂ.ನಷ್ಟು ಕಾರ್ಪೊರೇಟ್ ಬೋನಸ್‌ ಅನ್ನು ಹೊಂದಿದೆ.

    • ಮಾರುತಿಯು ಎಸ್‌ಯುವಿಯ ಬೇಸ್-ಮೊಡೆಲ್‌ ಸಿಗ್ಮಾ ಆವೃತ್ತಿಯನ್ನು ಕೇವಲ 7,000 ರೂಗಳ ಕಾರ್ಪೊರೇಟ್ ಡಿಸ್ಕೌಂಟ್‌ನೊಂದಿಗೆ ನೀಡುತ್ತಿದೆ.

    • ಗ್ರಾಂಡ್ ವಿಟಾರಾದ ಬೆಲೆಯು 11 ಲಕ್ಷ ರೂ.ನಿಂದ ಪ್ರಾರಂಭವಾಗಿ 20.09 ಲಕ್ಷ ರೂ.ವರೆಗೆ ಇದೆ.

    ಜಿಮ್ನಿ

    Maruti Jimny

    ಆಫರ್‌

    ಮೊತ್ತ

    ಕ್ಯಾಶ್‌ ಡಿಸ್ಕೌಂಟ್‌

    50,000 ರೂ.

    ಎಕ್ಸ್‌ಚೇಂಜ್‌ ಬೋನಸ್‌

    ಕಾರ್ಪೋರೇಟ್‌ ಡಿಸ್ಕೌಂಟ್‌

    7,000 ರೂ.

    ಒಟ್ಟು ಲಾಭಗಳು

    57,000 ರೂ.ವರೆಗೆ

    •   ಮೇಲೆ ತಿಳಿಸಿದ ರಿಯಾಯಿತಿಗಳು ಮಾರುತಿ ಜಿಮ್ನಿಯ ಎಲ್ಲಾ ಆವೃತ್ತಿಗಳೊಂದಿಗೆ ಲಭ್ಯವಿದೆ.

    • ಹಾಗೆಯೇ ಮಾರುತಿಯ ಈ ಆಫ್-ರೋಡರ್‌ನಲ್ಲಿ ಯಾವುದೇ ವಿನಿಮಯ ಬೋನಸ್ ಅಥವಾ ಸ್ಕ್ರ್ಯಾಪ್‌ಪೇಜ್ ಬೋನಸ್ ಇರುವುದಿಲ್ಲ.

    • ಜಿಮ್ನಿಯ ಬೆಲೆಯು 12.74 ಲಕ್ಷ ರೂ.ನಿಂದ 14.95 ಲಕ್ಷ ರೂ.ವರೆಗೆ ಇದೆ.

    ಇದನ್ನು ಓದಿ: 2024ರ ಮಾರ್ಚ್‌ನಲ್ಲಿ ಅತಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಮತ್ತು ಮಧ್ಯಮ ಗಾತ್ರದ ಹ್ಯಾಚ್‌ಬ್ಯಾಕ್‌ಗಳ ಪಟ್ಟಿಯಲ್ಲಿ Marutiಯೇ ನಂ.1

    ಫ್ರಾಂಕ್ಸ್‌

    Maruti Fronx

    ಆಫರ್‌

    ಮೊತ್ತ

    ಕ್ಯಾಶ್‌ ಡಿಸ್ಕೌಂಟ್‌

    15,000 ರೂ.ವರೆಗೆ

    ಎಕ್ಸ್‌ಚೇಂಜ್‌ ಬೋನಸ್‌

    10,000 ರೂ.

    ಕಾರ್ಪೋರೇಟ್‌ ಡಿಸ್ಕೌಂಟ್‌

    7,000 ರೂ.

    ಒಟ್ಟು ಲಾಭಗಳು

      32,000 ರೂ.ವರೆಗೆ

    • ನೀವು ಮಾರುತಿ ಫ್ರಾಂಕ್ಸ್ ಟರ್ಬೊ ಆವೃತ್ತಿಯನ್ನು ಆರಿಸಿದರೆ, ಅವುಗಳು ಮೇಲೆ ತಿಳಿಸಿದ ಕ್ಯಾಶ್‌ ಡಿಸ್ಕೌಂಟ್‌ನ ಜೊತೆಗೆ ರೂ 43,000 ಮೌಲ್ಯದ ವೆಲಾಸಿಟಿ ಎಡಿಷನ್ ಆಕ್ಸೆಸರಿ ಕಿಟ್‌ನೊಂದಿಗೆ ಲಭ್ಯವಿವೆ.

    • ಎಕ್ಸ್‌ಚೇಂಜ್ ಬೋನಸ್ ಬದಲಿಗೆ 15,000 ರೂಪಾಯಿಯ ಸ್ಕ್ರ್ಯಾಪೇಜ್ ಬೋನಸ್ ಅನ್ನು ಸಹ ನೀವು ಆಯ್ಕೆ ಮಾಡಬಹುದು.

    • ಮಾರುತಿಯು ತನ್ನ ಈ ಕ್ರಾಸ್‌ಒವರ್‌ನ ರೆಗುಲರ್‌ ಪೆಟ್ರೋಲ್ ಆವೃತ್ತಿಗಳನ್ನು ರೂ 10,000 ನಗದು ರಿಯಾಯಿತಿಯೊಂದಿಗೆ ನೀಡುತ್ತಿದೆ, ಆದರೆ ಫ್ರಾಂಕ್ಸ್ ಸಿಎನ್‌ಜಿ ಕೇವಲ ವಿನಿಮಯ ಬೋನಸ್ ಅಥವಾ ಸ್ಕ್ರ್ಯಾಪೇಜ್ ಬೋನಸ್‌ನೊಂದಿಗೆ ಮಾತ್ರ ಬರುತ್ತದೆ.

    • ಫ್ರಾಂಕ್ಸ್‌ನ ಬೆಲೆಯು 7.51 ಲಕ್ಷ ರೂ.ನಿಂದ ಪ್ರಾರಂಭವಾಗಿ 13.04 ಲಕ್ಷ ರೂ. ವರೆಗೆ ಇದೆ. 

    XL6

    Maruti XL6

    ಆಫರ್‌

    ಮೊತ್ತ

    ಎಕ್ಸ್‌ಚೇಂಜ್‌ ಬೋನಸ್‌

    20,000 ರೂ.

    ಒಟ್ಟು ಲಾಭಗಳು

    20,000 ರೂ.ವರೆಗೆ

    • ಮಾರುತಿ XL6 ನ ಪೆಟ್ರೋಲ್ ವೇರಿಯೆಂಟ್‌ಗಳು ಮಾತ್ರ 20,000 ರೂಪಾಯಿಗಳ ವಿನಿಮಯ ಬೋನಸ್ ರೂಪದಲ್ಲಿ ಪ್ರಯೋಜನಗಳನ್ನು ಪಡೆಯುತ್ತವೆ.

    • ಮೇಲೆ ತಿಳಿಸಲಾದ ಕೆಲವು ಇತರ ಮಾದರಿಗಳಂತೆ, ಎಕ್ಸ್‌ಎಲ್‌6 ಅನ್ನು ಸಹ ಎಕ್ಸ್‌ಚೇಂಜ್ ಬೋನಸ್‌ನ ಬದಲಿಗೆ 25,000 ರೂ.ನ ಒಪ್ಶನಲ್‌ ಸ್ಕ್ರ್ಯಾಪ್‌ಪೇಜ್ ಬೋನಸ್‌ನೊಂದಿಗೆ ಖರೀದಿಸಬಹುದು. 

    • ಎಕ್ಸ್‌ಎಲ್‌6 ನ ಸಿಎನ್‌ಜಿ ಆವೃತ್ತಿಗಳಲ್ಲಿ ಯಾವುದೇ ಆಫರ್‌ಗಳಿಲ್ಲ.

    • 6 ಆಸನಗಳ ಈ ಮಾರುತಿ ಎಂಪಿವಿಯ ಬೆಲೆ 11.61 ಲಕ್ಷ ರೂ.ನಿಂದ 14.77 ಲಕ್ಷ ರೂ.ವರೆಗೆ ಇದೆ. 

    ಸಿಯಾಝ್‌

    Maruti Ciaz

    ಆಫರ್‌

    ಮೊತ್ತ

    ಕ್ಯಾಶ್‌ ಡಿಸ್ಕೌಂಟ್‌

    20,000 ರೂ.

    ಎಕ್ಸ್‌ಚೇಂಜ್‌ ಬೋನಸ್‌

    25,000 ರೂ.

    ಕಾರ್ಪೋರೇಟ್‌ ಡಿಸ್ಕೌಂಟ್‌

    10,000 ರೂ.

    ಒಟ್ಟು ಲಾಭಗಳು

      55,000 ರೂ.ವರೆಗೆ

    •  ನೀವು ಮಾರುತಿ ಸಿಯಾಜ್‌ನ ಎಲ್ಲಾ ಆವೃತ್ತಿಗಳಲ್ಲಿ ಮೇಲೆ ತಿಳಿಸಿದ ಉಳಿತಾಯವನ್ನು ಪಡೆಯಬಹುದು.

    • ಖರೀದಿದಾರರು ಎಕ್ಸ್‌ಚೇಂಜ್‌ ಬೋನಸ್‌ನ ಬದಲಿಗೆ ಒಪ್ಶನಲ್‌ ಸ್ಕ್ರ್ಯಾಪ್‌ಪೇಜ್ ಬೋನಸ್ 30,000 ರೂ.ವನ್ನು ಸಹ ಆಯ್ಕೆ ಮಾಡಬಹುದು. 

    • ಮಾರುತಿ ತನ್ನ ಈ ಕಾಂಪ್ಯಾಕ್ಟ್ ಸೆಡಾನ್ ಬೆಲೆಯನ್ನು 9.40 ಲಕ್ಷ ರೂ.ನಿಂದ 12.29 ಲಕ್ಷ ರೂ.ವರೆಗೆ ಇದೆ.

    ಇಗ್ನಿಸ್‌

    Maruti Ignis

    ಆಫರ್‌

    ಮೊತ್ತ

    ಕ್ಯಾಶ್‌ ಡಿಸ್ಕೌಂಟ್‌

    40,000 ರೂ.

    ಎಕ್ಸ್‌ಚೇಂಜ್‌ ಬೋನಸ್‌

    15,000 ರೂ.

    ಕಾರ್ಪೋರೇಟ್‌ ಡಿಸ್ಕೌಂಟ್‌

    7,000 ರೂ.

    ಒಟ್ಟು ಲಾಭಗಳು

    62,000 ರೂ.

    • ಮೇಲೆ ತಿಳಿಸಲಾದ ಎಲ್ಲಾ ಆಫರ್‌ಗಳು ಮಾರುತಿ ಇಗ್ನಿಸ್‌ನ ಎಲ್ಲಾ ಎಎಮ್‌ಟಿ ಆವೃತ್ತಿಗಳಿಗೆ ಮಾತ್ರ ಅನ್ವಯಿಸುತ್ತವೆ.

    • ಮ್ಯಾನುಯಲ್‌ ಆವೃತ್ತಿಗಳನ್ನು ಆಯ್ಕೆ ಮಾಡಲು ಬಯಸುವವರಿಗೆ, ಮಾರುತಿಯು ನಗದು ರಿಯಾಯಿತಿಯನ್ನು   35,000 ರೂ.ಗೆ ಇಳಿಕೆ ಮಾಡುತ್ತದೆ ಮತ್ತು ಇತರ ರಿಯಾಯಿತಿಗಳು ಬದಲಾಗದೆ ಉಳಿಯುತ್ತವೆ.

    • ನೀವು 15,000 ರೂಪಾಯಿಗಳ ಎಕ್ಸ್‌ಚೇಂಜ್‌ ಬೋನಸ್ ಅನ್ನು ಆರಿಸಿಕೊಳ್ಳಬಹುದು ಅಥವಾ 20,000 ರೂಪಾಯಿಗಳ ಸ್ಕ್ರ್ಯಾಪ್‌ಪೇಜ್ ಬೋನಸ್‌ಗೆ ಹೋಗಬಹುದು.

    • ಮಾರುತಿ ಇಗ್ನಿಸ್‌ನ ಬೆಲೆಯು 5.84 ಲಕ್ಷ ರೂ.ನಿಂದ ಪ್ರಾರಂಭವಾಗಿ 8.11 ಲಕ್ಷ ರೂ.ವರೆಗೆ ಇದೆ. 

    ಗಮನಿಸಿ

    • ಗ್ರಾಹಕರ ಅರ್ಹತೆಯ ಆಧಾರದ ಮೇಲೆ ಕಾರ್ಪೊರೇಟ್ ಡಿಸ್ಕೌಂಟ್‌ಗಳು  ಬದಲಾಗಬಹುದು.

    • ರಾಜ್ಯ ಮತ್ತು ನಗರಗಳಿಗೆ ಅನುಗುಣವಾಗಿ ಪ್ರಯೋಜನಗಳು ಬದಲಾಗಬಹುದು, ಆದ್ದರಿಂದ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ಮಾರುತಿ ನೆಕ್ಸಾ ಡೀಲರ್‌ಶಿಪ್ ಅನ್ನು ಸಂಪರ್ಕಿಸಿ.

    • ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಬೆಲೆಗಳು .

     ಇನ್ನಷ್ಟು ಓದಿ: ಮಾರುತಿ ಬಲೆನೊ ಎಎಂಟಿ

    was this article helpful ?

    Write your Comment on Maruti ಬಾಲೆನೋ

    explore similar ಕಾರುಗಳು

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಹ್ಯಾಚ್ಬ್ಯಾಕ್ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience