ಮಾರುತಿ S-ಪ್ರೆಸ್ಸೋ ಬಿಡುಗಡೆ ಆಗಿದೆ ರೂ 3.69 ಲಕ್ಷ ದಲ್ಲಿ
ಮಾರುತಿ ಎಸ್-ಪ್ರೆಸ್ಸೊ ಗಾಗಿ sonny ಮೂಲಕ ಅಕ್ಟೋಬರ್ 04, 2019 12:07 pm ರಂದು ಪ್ರಕಟಿಸಲಾಗಿದೆ
- 27 Views
- ಕಾಮೆಂಟ್ ಅನ್ನು ಬರೆಯಿರಿ
ಹೊಸ ಮೈಕ್ರೋ -SUV ನಲ್ಲಿ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಕೊಡಲಾಗಿದೆ
- ಮಾರುತಿ S-ಪ್ರೆಸ್ಸೋ ಬಿಡುಗಡೆ ಆಗಿದೆ ಬೆಲೆ ವ್ಯಾಪ್ತಿ ರೂ 3.69 ಲಕ್ಷ ದಿಂದ ರೂ 4.91 ಲಕ್ಷ ವರೆಗೆ (ಎಕ್ಸ್ ಶೋ ರೂಮ್ ,ದೆಹಲಿ)
- ಇದರಲ್ಲಿ ಕೇವಲ BS6- ಕಂಪ್ಲೇಂಟ್ 1.0- ಲೀಟರ್ ಪೆಟ್ರೋಲ್ ಎಂಜಿನ್ , ಜೊತೆಗೆ 5- ಸ್ಪೀಡ್ MT ಮತ್ತು AMT ಕೊಡಲಾಗಿದೆ
- ಡ್ಯಾಶ್ ಬೋರ್ಡ್ ಮದ್ಯದಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ , 7-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಪವರ್ ವಿಂಡೋ ಕೊಡಲಾಗಿದೆ.
- ಪ್ರತಿಸ್ಪರ್ದಿಗಳು ರೆನಾಲ್ಟ್ ಕ್ವಿಡ್, ಡಾಟ್ಸನ್ ರೆಡಿ-Go ಮತ್ತು GO, ಮಾರುತಿ ಆಲ್ಟೊ K10 ಮತ್ತು ವ್ಯಾಗನ್ R.
ಪರಿಕಲ್ಪನೆ ಮಾಡೆಲ್ ಆಗಿ 2018 ಆಟೋ ಎಕ್ಸ್ಪೋ ದಲ್ಲಿ ಬಿಡುಗಡೆ ಆದನಂತರ, ಮಾರುತಿ S- ಪ್ರೆಸ್ಸೋ ಮೈಕ್ರೋ -SUV ಯನ್ನು, ಆರಂಭಿಕ ಹಂತದ ಮಾಡೆಲ್ ಈ ಕಾರ್ ಮೇಕರ್ ಲೈನ್ ಅಪ್ ನಲ್ಲಿ ಬಿಡುಗಡೆ ಮಾಡಿದೆ. ಅದು ಒಟ್ಟಾರೆ ಒಂಬತ್ತು ವೇರಿಯೆಂಟ್ ಗಳಲ್ಲಿ ಲಭ್ಯವಿದೆ ಹಾಗು ಬೆಲೆ ವ್ಯಾಪ್ತಿ ರೂ 3.69 ಲಕ್ಷ ದಿಂದ ರೂ Rs 4.91 ಲಕ್ಷ (ಎಕ್ಸ್ ಶೋ ರೂಮ್ ದೆಹಲಿ ). S- ಪ್ರೆಸ್ಸೋ ದಲ್ಲಿ BS6- ಕಂಪ್ಲೇಂಟ್ 1.0- ಲೀಟರ್ ಪೆಟ್ರೋಲ್ ಎಂಜಿನ್ ಕೊಡಲಾಗಿದೆ ಅದು 68PS ಪವರ್ ಮತ್ತು and 90Nm ಟಾರ್ಕ್ ಕೊಡುತ್ತದೆ. ಅದನ್ನು 5- ಸ್ಪೀಡ್ ಮಾನ್ಯುಯಲ್ ಹಾಗು ಆಯ್ಕೆ ಆಗಿ 5- ಸ್ಪೀಡ್ AMT ಯೊಂದಿಗೆ ಸಂಯೋಜಿಸಲಾಗಿದೆ. ARAI- ಅಧಿಕೃತ ಮೈಲೇಜ್ ಎರೆಡೂ ವೇರಿಯೆಂಟ್ ಗಳಿಗೆ 21.7 kmpl ಆಗಿರುತ್ತದೆ.
ಡಿಸೈನ್ ವಿಚಾರದಲ್ಲಿ, S-ಪ್ರೆಸ್ಸೋ ಹೊರಗಿನ ಸ್ಟೈಲಿಂಗ್ ಬಜೆಟ್ ವೆಹಿಕಲ್ ಸ್ಟೇಟಸ್ ಗೆ ಅನುಗುಣವಾಗಿಲ್ಲ. ಇದರಲ್ಲಿ ದೊಡ್ಡ ಕಪ್ಪು ಬಂಪರ್ ಗಳು ಕೊಡಲಾಗಿದ್ದು ಅವು SUV-ತರಹದ ನಿಲುವನ್ನು ಕೊಡುತ್ತದೆ,, ಆದರೆ ಚಿಕ್ಕ ಸ್ಟೀಲ್ ವೀಲ್ ಕೊಡಲಾಗಿದೆ. ಗ್ರಿಲ್ ಡಿಸೈನ್ ಮಾರುತಿ ವಿಟಾರಾ ಬ್ರೆಝ ತರಹ ಇದೆ ಆದರೆ ಎತ್ತರದ ನಿಲುವು ವ್ಯಾಗನ್ R. ಹೋಲುತ್ತದೆ.
S-ಪ್ರೆಸ್ಸೋ ಆಂತರಿಕ ಡಿಸೈನ್ ಹೆಚ್ಚು ಆಕರ್ಷಕವಾಗಿದೆ. ಟಾಪ್ ಸ್ಪೆಕ್ ನಲ್ಲಿ ಇದರಲ್ಲಿ 7-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ , ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಸ್ಟಿಯರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್ ಕೊಡಲಾಗಿದೆ. ಕ್ಲಸ್ಟರ್ ಮತ್ತು ಇನ್ಫೋಟೈಮೆಂಟ್ ಡಿಸ್ಪ್ಲೇ ಎರೆಡನ್ನು ಡ್ಯಾಶ್ ಬೋರ್ಡ್ ಮದ್ಯದಲ್ಲಿ ಕೊಡಲಾಗಿದೆ ಜೊತೆಗೆ ಆಕರ್ಷಕ ಆರೆಂಜ್ ಇನ್ಸರ್ಟ್ ಕೊಡಲಾಗಿದೆ. ಫ್ರಂಟ್ ಪವರ್ ವಿಂಡೋ ಮತ್ತು ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್ ಕಂಟ್ರೋಲ್ ಗಳನ್ನೂ ಸಹ ಸರ್ಕಲ್ ಒಳಗೆ ಕೊಡಲಾಗಿದೆ. ಈ ಕನ್ಸೋಲ್ ಡಿಸೈನ್ ಬೆಲೆ ಕಡಿತಗೊಳಿಸುವ ಉದ್ದೇಶ ಆಗಿರಬಹುದು, ಅದರ ಮಾರುತಿ ವ್ಯಾಪ್ತಿಯಲ್ಲಿ ಆಕರ್ಷಣೆ ಹೊಂದಿದೆ.
ಮಾರುತಿ S-ಪ್ರೆಸ್ಸೋ ದಲ್ಲಿ ಡ್ರೈವರ್ ಸೈಡ್ ಏರ್ಬ್ಯಾಗ್, ರೇರ್ ಪಾರ್ಕಿಂಗ್ ಸೆನ್ಸರ್, ಫ್ರಂಟ್ ಸೀಟ್ ಬೆಲ್ಟ್ ರಿಮೈಂಡರ್, ಸ್ಪೀಡ್ ಅಲರ್ಟ್ ಮತ್ತು ABS ಅನ್ನು ಸ್ಟ್ಯಾಂಡರ್ಡ್ ಆಗಿ ಕೊಡುತ್ತಿದ್ದಾರೆ. ಫ್ರಂಟ್ ಪ್ಯಾಸೆಂಜರ್ ಏರ್ಬ್ಯಾಗ್ ಮತ್ತು ಫ್ರಂಟ್ ಸೀಟ್ ಬೆಲ್ಟ್ ಪ್ರಿ ಟೆನ್ಶನರ್ ಗಳನ್ನು ಆಯ್ಕೆ ವೇರಿಯೆಂಟ್ ನ ಭಾಗವಾಗಿ ಕೊಡುತ್ತಿದ್ದಾರೆ ಅದಕ್ಕಾಗಿ ರೂ 6,000 ಹೆಚ್ಹು ಕೊಡಬೇಕಾಗುತ್ತದೆ. ಕೇವಲ ಟಾಪ್ ಸ್ಪೆಕ್ ನಲ್ಲಿ ಸುರಕ್ಷತೆ ಫೀಚರ್ ಗಳು ಈಗಾಗಲೇ ಕೊಡಲಾಗಿದೆ ಆದರೆ ಇದರಲ್ಲಿ ರೇರ್ ವ್ಯೂ ಕ್ಯಾಮೆರಾ ಮಿಸ್ ಆಗಿದೆ.
ಹೊಸ ಮಾರುತಿ ಸುಜುಕಿ S-ಪ್ರೆಸ್ಸೋ ಪೂರ್ಣ ವೇರಿಯೆಂಟ್ ಪಟ್ಟಿ ಹಾಗು ಬೆಲೆ ಪಟ್ಟಿಯನ್ನು ಕೊಡಲಾಗಿದೆ:
S-Presso Variants |
Price (ex-showroom, Delhi) |
Std/Std(O) |
Rs 3.69lakh/ Rs 3.75 lakh |
Lxi/Lxi(O) |
Rs 4.05 lakh/ Rs 4.11 lakh |
Vxi/Vxi(O) |
Rs 4.24 lakh/ Rs 4.30 lakh |
Vxi+ |
Rs 4.48 lakh |
Vxi AGS/Vxi(O) AGS |
Rs 4.67 lakh/ Rs 4.73 lakh |
Vxi+ AGS |
Rs 4.91 lakh |
ಮಾರುತಿ S-ಪ್ರೆಸ್ಸೋ ಸ್ಥಾನ ಆಲ್ಟೊ ಮತ್ತು ವ್ಯಾಗನ್ R ನಡುವೆ ಇದೆ ಕಾರ್ ಮೇಕರ್ ನ ಪಟ್ಟಿಯಲ್ಲಿ ಮತ್ತು ಅದನ್ನು ಅರೇನಾ ಡೀಲೇರ್ಶಿಪ್ ಸರಪಳಿಯಲ್ಲಿ ಮಾರಾಟ ಮಾಡಲಾಗುತ್ತದೆ. ಇದರ ಪ್ರತಿಸ್ಪರ್ದಿಗಳು ರೆನಾಲ್ಟ್ ಕ್ವಿಡ್ ಮತ್ತು ಡಾಟ್ಸನ್ ರೆಡಿ -GO ಆಗಿರುತ್ತದೆ ಟಾಪ್ ವೇರಿಯೆಂಟ್ S-ಪ್ರೆಸ್ಸೋ ವ್ಯಾಗನ್ R, ಸ್ಯಾಂಟ್ರೋ ಮತ್ತು GO ಹ್ಯಾಚ್ ಬ್ಯಾಕ್ ಗಳೊಂದಿಗೂ ಸಹ ಸ್ಪರ್ದಿಸುತ್ತದೆ.