• English
  • Login / Register

Wagon R ಮತ್ತು Balenoದ ಸುಮಾರು 16,000 ಕಾರುಗಳನ್ನು ಹಿಂಪಡೆದ Maruti

ಮಾರುತಿ ಬಾಲೆನೋ ಗಾಗಿ rohit ಮೂಲಕ ಮಾರ್ಚ್‌ 27, 2024 05:59 pm ರಂದು ಪ್ರಕಟಿಸಲಾಗಿದೆ

  • 29 Views
  • ಕಾಮೆಂಟ್‌ ಅನ್ನು ಬರೆಯಿರಿ

2019ರ ಜುಲೈನಿಂದ ನವೆಂಬರ್‌ನ ನಡುವೆ ತಯಾರಿಸಲಾದ ಕಾರುಗಳ ಹಿಂಪಡೆಯುವಿಕೆಯನ್ನು ಪ್ರಾರಂಭಿಸಲಾಗಿದೆ

2019 Maruti Baleno and Wagon R recalled

ಮಾರುತಿ ವ್ಯಾಗನ್ ಆರ್‌ನ 11,851 ಕಾರುಗಳನ್ನು ಮತ್ತು ಮಾರುತಿ ಬಲೆನೊ ಹ್ಯಾಚ್‌ಬ್ಯಾಕ್‌ನ 4,190 ಕಾರುಗಳನ್ನು ಇಂಧನ ಪಂಪ್ ಮೋಟರ್‌ನ ಒಂದು ಭಾಗದಲ್ಲಿ ಸಂಭವನೀಯ ದೋಷದಿಂದಾಗಿ ಹಿಂಪಡೆಯುವುದಾಗಿ ಮಾರುತಿ ಸುಜುಕಿ ಇಂಡಿಯಾ ಘೋಷಿಸಿದೆ. ಎರಡು ಹ್ಯಾಚ್‌ಬ್ಯಾಕ್‌ಗಳ ಈ ಕಾರುಗಳನ್ನು 2019ರ ಜುಲೈ 30 ರಿಂದ 2019ರ ನವೆಂಬರ್ 01ರ ನಡುವೆ ತಯಾರಿಸಲಾಗಿದೆ.

ಹಿಂಪಡೆಯುವ ಕುರಿತು ಹೆಚ್ಚಿನ ಮಾಹಿತಿಗಳು

2019 Maruti Wagon R

ಭಾರತೀಯ ಮೂಲದ ಈ ಕಾರಿನ ಡೀಲರ್‌ಶಿಪ್‌ಗಳು ಹಿಂಪಡೆಯುವ ಕಾರುಗಳ ಮಾಲೀಕರನ್ನು ಯಾವುದೇ ಶುಲ್ಕಗಳಿಲ್ಲದೆ ತಮ್ಮ ವಾಹನಗಳಲ್ಲಿ ಸಮಸ್ಯೆ ಇರುವ ಭಾಗವನ್ನು ಪರೀಕ್ಷಿಸಲು ಮತ್ತು ಬದಲಾಯಿಸಲು ಕರೆಸುತ್ತಾರೆ. ತಯಾರಕರ ಪ್ರಕಾರ, ಇಂಧನ ಪಂಪ್ ಮೋಟರ್‌ನಲ್ಲಿನ ದೋಷಯುಕ್ತ ಭಾಗವು ಎಂಜಿನ್ ಸ್ಥಗಿತ ಅಥವಾ ಎಂಜಿನ್ ಪ್ರಾರಂಭಿಸುವಾಗಿನ ಸಮಸ್ಯೆಗೆ ಕಾರಣವಾಗಬಹುದು.

ಮಾರುತಿ ಬಲೆನೊವನ್ನು 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಎಂಜಿನ್‌ನೊಂದಿಗೆ ಮಾತ್ರ ನೀಡಲಾಗುತ್ತದೆ, ಮಾರುತಿ ವ್ಯಾಗನ್ ಆರ್ 1-ಲೀಟರ್ ಮತ್ತು 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಎಂಜಿನ್‌ಗಳ ಆಯ್ಕೆಯನ್ನು ಪಡೆಯುತ್ತದೆ. ವ್ಯಾಗನ್ ಆರ್‌ನ ಯಾವ ಎಂಜಿನ್ ಆವೃತ್ತಿಯನ್ನು ಹಿಂಪಡೆಯುವ ಪಟ್ಟಿಗೆ ಸೇರಿಸಲಾಗಿದೆ ಎಂಬುದನ್ನು ಇನ್ನೂ ನಿರ್ದಿಷ್ಟಪಡಿಸಲಾಗಿಲ್ಲ.

ಮಾಲೀಕರು ಏನು ಮಾಡಬಹುದು ?

ಈ ಮಾರುತಿ ಮಾಡೆಲ್‌ಗಳ ಮಾಲೀಕರು ತಮ್ಮ ಕಾರ್‌ಗಳನ್ನು ವರ್ಕ್‌ಶಾಪ್‌ಗಳಿಗೆ ತೆಗೆದುಕೊಂಡು ಹೋಗಿ ಪಾರ್ಟ್ಸ್‌ ಅನ್ನು ಪರಿಶೀಲಿಸಬಹುದು. ಇದೇ ಸಮಯದಲ್ಲಿ, ಅವರು ಮಾರುತಿ ಸುಜುಕಿ ವೆಬ್‌ಸೈಟ್‌ನಲ್ಲಿನ ‘Imp Customer Info’ ವಿಭಾಗಕ್ಕೆ ಭೇಟಿ ನೀಡುವ ಮೂಲಕ ಮತ್ತು ತಮ್ಮ ಕಾರಿನ ಚಾಸಿಸ್ ಸಂಖ್ಯೆಯನ್ನು (MA3/MBJ/MBH ನಂತರ 14 ಅಂಕೆಗಳ ಆಲ್ಫಾ-ನ್ಯೂಮೆರಿಕ್ ನಂಬರ್) ನಮೂದಿಸುವ ಮೂಲಕ ತಮ್ಮ ವಾಹನವನ್ನು ಹಿಂಪಡೆಯಲಾಗಿದೆಯೇ ಎಂದು ಪರಿಶೀಲಿಸಬಹುದು.

ನೀವು ಹಿಂಪಡೆಯಲಾದ ಕಾರುಗಳನ್ನು ಚಾಲನೆ ಮಾಡುವುದನ್ನು ಮುಂದುವರಿಸಬಹುದೇ?

2019 Maruti Baleno

ಎರಡು ಹ್ಯಾಚ್‌ಬ್ಯಾಕ್‌ಗಳ ಹಿಂಪಡೆಯಲಾಗುತ್ತಿರುವ ಕಾರುಗಳನ್ನು ಅವುಗಳ ಪ್ರಸ್ತುತ ಸ್ಥಿತಿಯಲ್ಲಿ ಚಲಾಯಿಸಲು ಸುರಕ್ಷಿತವಾಗಿದೆಯೇ ಎಂದು ಇನ್ನೂ ನಿರ್ದಿಷ್ಟಪಡಿಸಲಾಗಿಲ್ಲವಾದರೂ, ನಿಮ್ಮ ವಾಹನವು ಹಿಂಪಡೆಯುವ ಪಟ್ಟಿಗೆ  ಒಳಪಟ್ಟಿದೆಯೇ ಎಂದು ನೀವು ತಿಳಿದುಕೊಳ್ಳಲು ನಾವು ಶಿಫಾರಸು ಮಾಡುತ್ತೇವೆ. ಪಟ್ಟಿಗೆ ಒಳಪಟ್ಟಿದ್ದರೆ, ನಿಮ್ಮ ವಾಹನವನ್ನು ಉತ್ತಮ ಸ್ಥಿತಿಯಲ್ಲಿಡಲು ಯಾವುದೇ ವಿಳಂಬವಿಲ್ಲದೆ ಅದನ್ನು ಪರೀಕ್ಷಿಸಿ.

ಇದನ್ನು ಸಹ ಓದಿ: 2024 ಮಾರುತಿ ಸ್ವಿಫ್ಟ್: ನಿರೀಕ್ಷಿಸಬಹುದಾದ ಟಾಪ್ 5 ಹೊಸ ವೈಶಿಷ್ಟ್ಯಗಳು

ಇನ್ನಷ್ಟು ಓದಿ: ಮಾರುತಿ ಬಲೆನೊ ಎಎಂಟಿ 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Maruti ಬಾಲೆನೋ

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • ಕಿಯಾ syros
    ಕಿಯಾ syros
    Rs.9 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಮಾರಚ್‌, 2025
  • ಬಿವೈಡಿ seagull
    ಬಿವೈಡಿ seagull
    Rs.10 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಜನವ, 2025
  • ಎಂಜಿ 3
    ಎಂಜಿ 3
    Rs.6 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಫೆಬರವಾರಿ, 2025
  • ನಿಸ್ಸಾನ್ ಲೀಫ್
    ನಿಸ್ಸಾನ್ ಲೀಫ್
    Rs.30 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಫೆಬರವಾರಿ, 2025
  • ರೆನಾಲ್ಟ್ ಕ್ವಿಡ್ ev
    ರೆನಾಲ್ಟ್ ಕ್ವಿಡ್ ev
    Rs.5 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಜನವ, 2025
×
We need your ನಗರ to customize your experience