Login or Register ಅತ್ಯುತ್ತಮ CarDekho experience ಗೆ
Login

ಮಾರುತಿಯ ಹೊಸ ಕ್ರಾಸ್ಓವರ್, ದಿ ಫ್ರಾಂಕ್ಸ್, 9 ವಿಭಿನ್ನ ಬಣ್ಣಗಳಲ್ಲಿ ಮಾರುಕಟ್ಟೆಗೆ ಲಗ್ಗೆ

ಜನವರಿ 17, 2023 11:09 am ರಂದು shreyash ಮೂಲಕ ಪ್ರಕಟಿಸಲಾಗಿದೆ
55 Views

ಭಾರತದಾದ್ಯಂತ ನೆಕ್ಸಾ ಡೀಲರ್‌ಶಿಪ್‌ಗಳ ಮೂಲಕ ಫ್ರಾಂಕ್ಸ್ ಅನ್ನು ಮಾರಾಟ ಮಾಡಲಾಗುತ್ತದೆ, ಬುಕಿಂಗ್‌ಗಳು ನಡೆಯುತ್ತಿವೆ

  • ಫ್ರಾಂಕ್ಸ್ ಅನ್ನು 2023 ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಲಾಗಿದೆ.

  • ಹೊರ ಮೇಲ್ಮೈನ ಒಂಬತ್ತು ಬಣ್ಣಗಳ ಆಯ್ಕೆ – ಆರು ಮೊನೊಟೋನ್ ಮತ್ತು ಮೂರು ಡ್ಯುಯಲ್-ಟೋನ್‌

  • ಮೊನೊಟೋನ್ ಆಯ್ಕೆಗಳಲ್ಲಿ ನೆಕ್ಸಾ ಬ್ಲ್ಯೂ, ಆಪ್ಯುಲೆಂಟ್ ರೆಡ್, ಆರ್ಕ್ಟಿಕ್ ವೈಟ್, ಸ್ಪ್ಲೆಂಡಿಡ್ ಸಿಲ್ವರ್, ಗ್ರ್ಯಾಂಡ್ಯೂರ್ ಗ್ರೇ ಮತ್ತು ಅರ್ಥರ್ನ್ ಬ್ರೌನ್ ಸೇರಿವೆ.

  • ಕಪ್ಪು ಮಿಶ್ರಿತ ನೀಲಿ ಬಣ್ಣದ ರೂಫ್‌ನೊಂದಿಗೆ ಡ್ಯುಯಲ್-ಟೋನ್ ಆಯ್ಕೆಯನ್ನು ಬ್ರೌನ್, ಕೆಂಪು ಮತ್ತು ಸಿಲ್ವರ್ ಬಣ್ಣಗಳೊಂದಿಗೆ ನೀಡಲಾಗಿದೆ.

  • ಫ್ರಾಂಕ್ಸ್, ಡ್ಯುಯಲ್-ಟೋನ್ ಅನ್ನು ಕಪ್ಪು ಮತ್ತು ಮರೂನ್ ಕ್ಯಾಬಿನ್ ಥೀಮ್‌ನಲ್ಲಿ ಪ್ರಮಾಣಿತವಾಗಿ ಪಡೆದಿದೆ.

  • ರೂ. 8 ಲಕ್ಷದಿಂದ (ಎಕ್ಸ್-ಶೋರೂಮ್) ಇದರ ಬೆಲೆಯನ್ನು ನಿರೀಕ್ಷಿಸಲಾಗಿದೆ.

ಮಾರುತಿ ಆಟೋ ಎಕ್ಸ್‌ಪೋ 2023 ರಲ್ಲಿ, ಬಲೆನೋ-ಆಧಾರಿತ ಕ್ರಾಸ್‌ಓವರ್, ಫ್ರಾಂಕ್ಸ್ ಅನ್ನು ಅದರ ಬೆಲೆಯನ್ನು ಹೊರತುಪಡಿಸಿ ಎಲ್ಲಾ ವಿವರಗಳನ್ನು ಅನಾವರಣಗೊಳಿಸಿದೆ. ರೂ. 11,000 ಡೆಪಾಸಿಟ್‌ನಲ್ಲಿ ಪ್ರಿ-ಬುಕಿಂಗ್‌ಗಳು ನಡೆಯುತ್ತಿವೆ, ಮತ್ತು ಗ್ರಾಹಕರು ನಾಲ್ಕು ಪವರ್‌ಟ್ರೇನ್‌ನೊಂದಿಗೆ ಐದು ಟ್ರಿಮ್ ಲೇವಲ್‌ಗಳನ್ನು ಆಯ್ಕೆ ಮಾಡಬಹುದಾಗಿದೆ. ಬಣ್ಣದ ವಿಷಯದಲ್ಲಿಯೂ ಸಹ ಬಹಳಷ್ಟು ಆಯ್ಕೆಗಳು ಲಭ್ಯವಿವೆ (ವೇರಿಯೆಂಟ್ ಅನ್ನು ಅವಲಂಬಿಸಿ) ಮತ್ತು ನಿಮ್ಮ ಆಯ್ಕೆಗಳು ಈ ಕೆಳಗಿನಂತಿವೆ:

ಇದನ್ನೂ ನೋಡಿ: ಜಿಮ್ನಿಯ ಈ 7 ರೋಮಾಂಚಕ ಬಣ್ಣಗಳಲ್ಲಿ ನಿಮ್ಮ ಆಯ್ಕೆ ಯಾವುದು?

ಕಪ್ಪು ಮಿಶ್ರಿತ ನೀಲಿ ಬಣ್ಣದ ರೂಫ್‌ನೊಂದಿಗೆ ಅರ್ಥರ್ನ್ ಬ್ರೌನ್

ಕಪ್ಪು ಮಿಶ್ರಿತ ನೀಲಿ ಬಣ್ಣದ ರೂಫ್‌ನೊಂದಿಗೆ ಆಪ್ಯುಲೆಂಟ್ ರೆಡ್

ಕಪ್ಪು ಮಿಶ್ರಿತ ನೀಲಿ ಬಣ್ಣದ ರೂಫ್‌ನೊಂದಿಗೆ ಸ್ಪ್ಲೆಂಡಿಡ್ ಸಿಲ್ವರ್

ನೆಕ್ಸಾ ಬ್ಲ್ಯೂ

ಆಪ್ಯುಲೆಂಟ್ ರೆಡ್

ಆರ್ಕ್ಟಿಕ್ ಬಿಳಿ

ಸ್ಪೆಂಡಿಡ್ ಸಿಲ್ವರ್

ಗ್ರ್ಯಾಂಡ್ಯೂರ್ ಗ್ರೇ

ಅರ್ಥರ್ನ್ ಬ್ರೌನ್

ಮಾರುತಿಯ ಎಲ್ಲಾ-ಹೊಸ ಕ್ರಾಸ್‍ಓವರ್ ಎಸ್‌ಯುವಿ ಎರಡು ಪೆಟ್ರೋಲ್ ಇಂಜಿನ್‌ಗಳ ಆಯ್ಕೆಯನ್ನು ಹೊಂದಿವೆ: ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನದೊಂದಿಗೆ 1.0-ಲೀಟರ್ ಬೂಸ್ಟರ್‌ಜೆಟ್ ಇಂಜಿನ್ (100PS ಮತ್ತು 148Nm ತಯಾರಿಸುತ್ತದೆ), ಮತ್ತು ಬಲೆನೋದಿಂದ 1.2-ಲೀಟರ್ ಡ್ಯುಯಲ್ ಜೆಟ್ ಪೆಟ್ರೋಲ್ ಯೂನಿಟ್ (90PS ಮತ್ತು 113Nm ತಯಾರಿಸುತ್ತದೆ). ಮೊದಲನೆಯದು, ಐದು-ಸ್ಪೀಡ್ ಮ್ಯಾನ್ಯುವಲ್ ಅಥವಾ ಆರು-ಸ್ಪೀಡ್ ಆಟೋಮ್ಯಾಟಿಕ್ ಆಗಿದ್ದು, ಎರಡನೆಯದು ಐದು-ಸ್ಪೀಡ್ ಮ್ಯಾನ್ಯುವಲ್ ಅಥವಾ ಐದು-ಸ್ಪೀಡ್ AMT ಹೊಂದಿದೆ.

ಇದನ್ನೂ ಓದಿ: ಮಾರುತಿ ಆಟೋ ಎಕ್ಸ್‌ಪೋ 2023 ರಲ್ಲಿ ಅನಾವರಣಗೊಳಿಸಿದೆ 550ಕಿ.ಮೀ ರೇಂಜ್‌ನೊಂದಿಗೆ eVX ಎಲೆಕ್ಟ್ರಿಕ್ ಕಾನ್ಸೆಪ್ಟ್.

ಇದು ಒಂಬತ್ತು-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ವೈರ್‌ಲೆಸ್ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ, ಹೆಡ್ಸ್-ಅಪ್ ಡಿಸ್‌ಪ್ಲೇ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಸಹ ಹೊಂದಿದ್ದು ಫೀಚರ್ ಲಿಸ್ಟ್ ಬಹುತೇಕ ಬಲೆನೋಗೆ ಹೋಲುತ್ತದೆ. ಸುರಕ್ಷತೆಯ ವಿಷಯದಲ್ಲಿ, ಇದೂ ಸಹ ಆರು ಏರ್‌ಬ್ಯಾಗ್‌ಗಳು, ABS ಜೊತೆಗೆ EBD, ESP (ಎಲೆಕ್ಟ್ರಾನಿಕ್ ಸ್ಟೇಬಿಲಿಟಿ ಪ್ರೋಗ್ರಾಂ) ಮತ್ತು 360-ಡಿಗ್ರಿ ಕ್ಯಾಮರಾವನ್ನು ಹೊಂದಿದೆ.

ಇದನ್ನೂ ನೋಡಿ: ಮಾರುತಿಯು ಪ್ರದರ್ಶಿಸುತ್ತಿದೆ ಭಾರತದಲ್ಲಿಯೇ ಮೊಟ್ಟಮೊದಲ CNG-ed ಬ್ರೆಝಾ, ಸಬ್‌ಕಾಂಪ್ಯಾಕ್ಟ್ ಸಿಎನ್‌ಜಿ ಎಸ್‌ಯುವಿ

ಮಾರುತಿ ಫ್ರಾಂಕ್ಸ್‌ನ ಬೆಲೆಗಳನ್ನು ಮುಂದಿನ ಒಂದೆರಡು ತಿಂಗಳುಗಳಲ್ಲಿ ಘೋಷಿಸುವ ನಿರೀಕ್ಷೆಯಿದ್ದು, ಇದು ರೂ. 8 ಲಕ್ಷಗಳಿಂದ (ಎಕ್ಸ್-ಶೋರೂಮ್) ಆರಂಭವಾಗಲಿದೆ. ಇದು ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿರದಿದ್ದರೂ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ಗಳಾದ ಟಾಟಾ ಆಲ್ಟ್ರೋಝ್ ಮತ್ತು ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಳಾದ ಮಾರುತಿ ಬ್ರೆಝಾ, ಟಾಟಾ ನೆಕ್ಸಾನ್, ರೆನಾಲ್ಟ್ ಕಿಗರ್ ಮತ್ತು ಹ್ಯುಂಡೈ ವೆನ್ಯು ಇವುಗಳಿಗೆ ಪರ್ಯಾಯವಾಗಿರುತ್ತದೆ.

Share via

Write your Comment on Maruti ಫ್ರಾಂಕ್ಸ್‌

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

ಟ್ರೆಂಡಿಂಗ್ ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಫೇಸ್ ಲಿಫ್ಟ್
Rs.46.89 - 48.69 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.10 - 19.52 ಲಕ್ಷ*
ಎಲೆಕ್ಟ್ರಿಕ್ಹೊಸ ವೇರಿಯೆಂಟ್
Rs.17.49 - 22.24 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ