Login or Register ಅತ್ಯುತ್ತಮ CarDekho experience ಗೆ
Login

MG ಕಾಮೆಟ್ EV ವರ್ಸಸ್ ಪ್ರತಿಸ್ಪರ್ಧಿಗಳು: ಬೆಲೆಗಳ ವಿಸ್ತೃತ ತುಲನೆ

published on ಮೇ 08, 2023 10:10 pm by rohit for ಎಂಜಿ ಕಾಮೆಟ್ ಇವಿ

ಅತ್ಯಂತ ಅಗ್ಗದ ಆರಂಭಿಕ ಬೆಲೆಯೊಂದಿಗೆ ತನ್ನ ವಿಭಾಗದಲ್ಲಿ ಅತ್ಯಂತ ಚಿಕ್ಕ ಬ್ಯಾಟರಿಯನ್ನು ಹೊಂದಿರುವ (17.3kWh) ಕಾಮೆಟ್ EV ಅನ್ನು ನೀಡುತ್ತಿರುವ ಎಂಜಿ.

ನಾವು ಈಗ MG ಕಾಮೆಟ್ EV ಯ ಎಲ್ಲಾ ವೇರಿಯಂಟ್‌ಗಳ ಬೆಲೆ ಪಟ್ಟಿಯನ್ನು ಹೊಂದಿದ್ದೇವೆ. ಪ್ರಸ್ತುತ ಈ ಎಲೆಕ್ಟ್ರಿಕ್ ಕಾರಿನ ಟೆಸ್ಟ್ ಡ್ರೈವ್ ನಡೆಯುತ್ತಿದೆ. ಅದರ ಬುಕಿಂಗ್‌ಗಳು ಮೇ 15 ರಿಂದ ಪ್ರಾರಂಭವಾಗುತ್ತದೆ, ಆದರೆ ಅದರ ಡೆಲಿವರಿಯನ್ನು ಮೇ 22 ರಿಂದ ಪ್ರಾರಂಭಿಸಲಾಗುತ್ತದೆ. ನೀವು ಕಾಮೆಟ್ EV ಅನ್ನು ಕೊಳ್ಳುವ ಬಯಕೆಯನ್ನು ಹೊಂದಿದ್ದು, ಅದರ ಪ್ರತಿಸ್ಪರ್ಧಿಗಳೊಂದಿಗೆ ಅದರ ಬೆಲೆಯನ್ನು ಹೋಲಿಸಲು ಬಯಸಿದರೆ, ಕೆಳಗಿನ ಕೋಷ್ಟಕವನ್ನು ನಿಮಗೆಂದೇ ತಯಾರಿಸಲಾಗಿದೆ:

MG ಕಾಮೆಟ್ EV

ಟಾಟಾ ಟಿಯಾಗೋ EV

ಸಿಟ್ರಾನ್ eC3

17.3kWh ಬ್ಯಾಟರಿ ಪ್ಯಾಕ್

3.3kW ಚಾರ್ಜರ್‌ನೊಂದಿಗೆ19.2kWh

ಪೇಸ್ - Rs 7.98 lakh

XE - 8.69 ಲಕ್ಷ ರೂ.ಗಳು

ಪ್ಲೇ- 9.28 ಲಕ್ಷ ರೂ.ಗಳು

XT - 9.29 ಲಕ್ಷ ರೂ.ಗಳು

3.3kW ಚಾರ್ಜರ್‌ನೊಂದಿಗೆ 24kWh

ಪ್ಲಶ್ - 9.98 ಲಕ್ಷ ರೂ.ಗಳು

XT - 10.19 ಲಕ್ಷ ರೂ.ಗಳು

XZ+ - 10.99 ಲಕ್ಷ ರೂ.ಗಳು

XZ+ ಟೆಕ್ ಲಕ್ಸ್- 11.49 ಲಕ್ಷ ರೂ.ಗಳು

7.2kW ಚಾರ್ಜರ್‌ನೊಂದಿಗೆ 24kWh

29.2kWh ಬ್ಯಾಟರಿ ಪ್ಯಾಕ್

XZ+ - 11.49 ಲಕ್ಷ ರೂ.ಗಳು

ಲೈವ್- Rs 11.50 lakh

ಸಂಬಂಧಿತ: MG ಕಾಮೆಟ್ EV ಅನ್ನು ನಿಮ್ಮ ಅಭಿರುಚಿಗೆ ತಕ್ಕಂತೆ ಕಸ್ಟಮೈಸ್ ಮಾಡೋದು ಹೇಗೆ

ಸಾರಾಂಶ

  • ಕಾಮೆಟ್ EV ಯ ಬೆಲೆಯು ಪ್ರಾಸ್ತಾವಿಕವಾಗಿದೆ ಮತ್ತು ಮೊದಲ 5,000 ಗ್ರಾಹಕರಿಗೆ ಮಾತ್ರ ಮಾನ್ಯವಾಗಿದೆ ಎಂಬುದನ್ನು ಗಮನಿಸಿ.

  • ಉಳಿದೆಲ್ಲಾ ಕಾರುಗಳಿಗೆ ಹೋಲಿಸಿದರೆ ಕಾಮೆಟ್ EV ಅತ್ಯಂತ ಕಡಿಮೆ ಆರಂಭಿಕ ಬೆಲೆಯನ್ನು ಹೊಂದಿದೆ. ಇದು ಟಿಯಾಗೊ EV ಯ ಪ್ರಾರಂಭಿಕ ಮಟ್ಟದ ವೇರಿಯಂಟ್‌ನ ಬೆಲೆಗಿಂತ 71,000 ರೂ. ಅಗ್ಗವಾಗಿದೆ.
  • ಕಾಮೆಟ್ EV ಯ ಮಿಡ್-ಸ್ಪೆಕ್ ಪ್ಲೇ ವೇರಿಯಂಟ್‌ನ ಬೆಲೆ ಚಿಕ್ಕ ಬ್ಯಾಟರಿ ಪ್ಯಾಕ್‌ ಹೊಂದಿರುವ ಟಿಯಾಗೊ EV ಯ XT ವೇರಿಯಂಟ್‌ನ ಬೆಲೆಗೆ ಬಹುತೇಕ ಸಮವಾಗಿದೆ.
  • ಕಾಮೆಟ್ EV ಯ ಟಾಪ್ ವೇರಿಯಂಟ್, ಟಿಯಾಗೊ EV ಯ XT ವೇರಿಯಂಟ್‌ಗಿಂತ (24 kWh ಬ್ಯಾಟರಿ ಪ್ಯಾಕ್ ಮತ್ತು 3.3 kW ಚಾರ್ಜರ್‌ನೊಂದಿಗೆ) ರೂ. 21,000 ಅಗ್ಗವಾಗಿದೆ. ರೇಂಜ್ ಮತ್ತು ವಾಸ್ತವಿಕತೆಗೆ ಹೋಲಿಸಿದರೆ ವೈಶಿಷ್ಟ್ಯಗಳು ಮತ್ತು ವಿನ್ಯಾಸಕ್ಕೆ ಹೆಚ್ಚಿನ ಮನ್ನಣೆ ನೀಡಿರುವುದು ಸ್ಪಷ್ಟವಾಗುತ್ತದೆ.

  • ಸಿಟ್ರಾನ್ eC3 ಹ್ಯಾಚ್‌ಬ್ಯಾಕ್‌ನ ಆರಂಭಿಕ ಮಟ್ಟದ ವೇರಿಯಂಟ್ ಟಾಪ್-ಸ್ಪೆಕ್ MG ಕಾಮೆಟ್ EV ಗಿಂತ ರೂ. 1.5 ಲಕ್ಷ ದುಬಾರಿಯಾಗಿದೆ.
  • MG EV ಯು ಸಣ್ಣ 17.3kWh ಬ್ಯಾಟರಿ ಪ್ಯಾಕ್‌ ಅನ್ನು ಹೊಂದಿದ್ದು , 230km ರೇಂಜ್ ಅನ್ನು ಹೊಂದಿದೆ ಎಂದು ಕ್ಲೈಮ್ ಮಾಡಲಾಗಿದೆ. (ವಿಭಾಗದಲ್ಲೇ ಅತ್ಯಂತ ಕಡಿಮೆ).

  • ಟಾಟಾ ಟಿಯಾಗೊ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು (19.2 kWh ಮತ್ತು 24 kWh) ನೀಡುವ ಏಕೈಕ EV ಆಗಿದೆ. ಇದರಿಂದಾಗಿ, ಟಿಯಾಗೊ EV ಯ ಹಲವಾರು ವೇರಿಯಂಟ್‌ಗಳು ಆಯ್ಕೆಗೆ ಲಭ್ಯವಾಗುತ್ತವೆ. ಟಿಯಾಗೊ EV ಯ ಸಣ್ಣ ಬ್ಯಾಟರಿ ಪ್ಯಾಕ್ ಆವೃತ್ತಿಯು 250km ರೇಂಜ್, ಹಾಗೂ ದೊಡ್ಡ ಬ್ಯಾಟರಿ ಪ್ಯಾಕ್ ಆವೃತ್ತಿಯು 315km ರೇಂಜ್ ಅನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ.
  • ಸಿಟ್ರಾನ್ eC3 ಯು ಅತಿದೊಡ್ಡ ಬ್ಯಾಟರಿ ಪ್ಯಾಕ್ (29.2kWh) ಅನ್ನು ಹೊಂದಿರುವ ಕಾರು ಆಗಿದೆ. ಈ ವಾಹನದ ಕ್ಲೈಮ್ ಮಾಡಲಾದ ರೇಂಜ್ (320km) ಇತರ ಎರಡು ಕಾರುಗಳಿಗೆ ಹೋಲಿಸಿದರೆ ಅತ್ಯಧಿಕವಾಗಿದೆ.

ಎಲ್ಲವೂ ಎಕ್ಸ್ ಶೋರೂಂ ದೆಹಲಿಯ ಬೆಲೆಗಳಾಗಿವೆ.

ಇನ್ನಷ್ಟು ಓದಿ: MG ಕಾಮೆಟ್ EV ಆಟೋಮ್ಯಾಟಿಕ್

r
ಅವರಿಂದ ಪ್ರಕಟಿಸಲಾಗಿದೆ

rohit

  • 17 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಎಂಜಿ Comet EV

Read Full News

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
Rs.10.99 - 15.49 ಲಕ್ಷ*
Rs.7.99 - 11.89 ಲಕ್ಷ*
Rs.6.99 - 9.40 ಲಕ್ಷ*
Rs.60.95 - 65.95 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ