MY2025ರ Skoda Slavia ಮತ್ತು Skoda Kushaq ಬಿಡುಗಡೆ; ಬೆಲೆಯಲ್ಲಿ ಕಡಿತ
ಸ್ಕೋಡಾ ಸ್ಲಾವಿಯಾ ಗಾಗಿ dipan ಮೂಲಕ ಮಾರ್ಚ್ 03, 2025 09:37 pm ರಂದು ಪ್ರಕಟಿಸಲಾಗಿದೆ
- 3 Views
- ಕಾಮೆಂಟ್ ಅನ್ನು ಬರೆಯಿರಿ
ಈ ಆಪ್‌ಡೇಟ್ ಎರಡೂ ಕಾರುಗಳಲ್ಲಿನ ವೇರಿಯೆಂಟ್-ವಾರು ಫೀಚರ್‌ಗಳನ್ನು ಮರುಜೋಡಿಸಿದೆ ಮತ್ತು ಸ್ಲಾವಿಯಾದ ಬೆಲೆಗಳನ್ನು 45,000 ವರೆಗೆ ಕಡಿಮೆ ಮಾಡಿದೆ, ಆದರೆ ಕುಶಾಕ್‌ನ ಬೆಲೆಯನ್ನು 69,000 ರೂ.ಗಳವರೆಗೆ ಹೆಚ್ಚಿಸಲಾಗಿದೆ
ಸ್ಕೋಡಾ ಸ್ಲಾವಿಯಾ ಮತ್ತು ಸ್ಕೋಡಾ ಕುಶಾಕ್ ತಮ್ಮ MY2025 (ಮೊಡೆಲ್ ಇಯರ್ 2025) ಆಪ್‌ಡೇಟ್‌ಗಳನ್ನು ಸ್ವೀಕರಿಸಿವೆ. ಆಪ್‌ಡೇಟ್‌ಗಳು ಎರಡೂ ಸ್ಕೋಡಾ ಕಾರುಗಳ ಸಲಕರಣೆಗಳ ವಿನ್ಯಾಸವನ್ನು ಬದಲಾಯಿಸದಿದ್ದರೂ, ಸ್ಲಾವಿಯಾ ಮತ್ತು ಕುಶಾಕ್ ಎರಡರ ವೇರಿಯೆಂಟ್-ವಾರು ಫೀಚರ್‌ಗಳು ಮತ್ತು ಬೆಲೆಗಳನ್ನು ಮರುರೂಪಿಸಲಾಗಿದೆ. ಎರಡೂ ಕಾರುಗಳ ಹೊಸ ಬೆಲೆಗಳು ಇಲ್ಲಿವೆ:
ಸ್ಕೋಡಾ ಸ್ಲಾವಿಯಾ: ಬೆಲೆಗಳು
ವೇರಿಯೆಂಟ್‌ಗಳು |
ಹೊಸ ಬೆಲೆ |
ಹಳೆಯ ಬೆಲೆ |
ವ್ಯತ್ಯಾಸ |
1-ಲೀಟರ್ ಟರ್ಬೊ-ಪೆಟ್ರೋಲ್ ಮ್ಯಾನ್ಯುವಲ್ |
|||
ಕ್ಲಾಸಿಕ್ |
10.34 ಲಕ್ಷ ರೂ. |
10.69 ಲಕ್ಷ ರೂ. |
(- 35,000 ರೂ.) |
ಸಿಗ್ನೇಚರ್ |
13.59 ಲಕ್ಷ ರೂ. |
13.99 ಲಕ್ಷ ರೂ. |
(- 40,000 ರೂ.) |
ಸ್ಪೋರ್ಟ್‌ಲೈನ್ |
13.69 ಲಕ್ಷ ರೂ. |
14.05 ಲಕ್ಷ ರೂ. |
(- 36,000ರೂ.) |
ಮಾಂಟೆ ಕಾರ್ಲೋ |
15.34 ಲಕ್ಷ ರೂ. |
15.79 ಲಕ್ಷ ರೂ. |
(- 45,000 ರೂ.) |
ಪ್ರೆಸ್ಟಿಜ್ |
15.54 ಲಕ್ಷ ರೂ. |
15.99 ಲಕ್ಷ ರೂ. |
(- 45,000 ರೂ.) |
1-ಲೀಟರ್ ಟರ್ಬೊ-ಪೆಟ್ರೋಲ್ ಆಟೋಮ್ಯಾಟಿಕ್ |
|||
ಸಿಗ್ನೇಚರ್ |
14.69 ಲಕ್ಷ ರೂ. |
15.09 ಲಕ್ಷ ರೂ. |
(- 40,000 ರೂ.) |
ಸ್ಪೋರ್ಟ್‌ಲೈನ್ |
14.79 ಲಕ್ಷ ರೂ. |
15.15 ಲಕ್ಷ ರೂ. |
(- 36,000 ರೂ.) |
ಮಾಂಟೆ ಕಾರ್ಲೋ |
16.44 ಲಕ್ಷ ರೂ. |
16.89 ಲಕ್ಷ ರೂ. |
(- 45,000 ರೂ.) |
ಪ್ರೆಸ್ಟಿಜ್ |
16.64 ಲಕ್ಷ ರೂ. |
17.09 ಲಕ್ಷ ರೂ. |
(- 45,000 ರೂ.) |
1.5-ಲೀಟರ್ ಟರ್ಬೊ-ಪೆಟ್ರೋಲ್ ಡಿಸಿಟಿ |
|||
ಸಿಗ್ನೇಚರ್ |
– |
16.69 ಲಕ್ಷ ರೂ. |
ಸ್ಥಗಿತಗೊಂಡಿದೆ |
ಸ್ಪೋರ್ಟ್‌ಲೈನ್ |
16.39 ಲಕ್ಷ ರೂ. |
16.75 ಲಕ್ಷ ರೂ. |
(- 36,000 ರೂ.) |
ಮಾಂಟೆ ಕಾರ್ಲೋ |
18.04 ಲಕ್ಷ ರೂ. |
18.49 ಲಕ್ಷ ರೂ. |
(- 45,000 ರೂ.) |
ಪ್ರೆಸ್ಟಿಜ್ |
18.24 ಲಕ್ಷ ರೂ. |
18.69 ಲಕ್ಷ ರೂ. |
(- 45,000 ರೂ.) |
ಸ್ಕೋಡಾ ಸ್ಲಾವಿಯಾ ಬೆಲೆಯಲ್ಲಿ 45,000 ರೂ.ಗಳವರೆಗೆ ಕಡಿತ ಮಾಡಲಾಗಿದೆ ಎಂದು ಕೋಷ್ಟಕವು ಸೂಚಿಸುತ್ತದೆ. ಇದಲ್ಲದೆ, 7-ಸ್ಪೀಡ್ ಡಿಸಿಟಿ ಆಯ್ಕೆಯೊಂದಿಗೆ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಲಭ್ಯವಿರುವ ಸಿಗ್ನೇಚರ್ ಟ್ರಿಮ್ ಅನ್ನು ಈಗ ನಿಲ್ಲಿಸಲಾಗಿದೆ.
ಸ್ಕೋಡಾ ಸೂಪರ್ಬ್: ಬೆಲೆಗಳು
ವೇರಿಯೆಂಟ್‌ಗಳು |
ಹೊಸ ಬೆಲೆ |
ಹಳೆಯ ಬೆಲೆ |
ವ್ಯತ್ಯಾಸ |
1-ಲೀಟರ್ ಟರ್ಬೊ-ಪೆಟ್ರೋಲ್ ಮ್ಯಾನ್ಯುವಲ್ |
|||
ಕ್ಲಾಸಿಕ್ |
10.99 ಲಕ್ಷ ರೂ. |
10.89 ಲಕ್ಷ ರೂ. |
+ 10,000 ರೂ. |
ಒನಿಕ್ಸ್ |
– |
12.89 ಲಕ್ಷ ರೂ. |
ಸ್ಥಗಿತಗೊಂಡಿದೆ |
ಸಿಗ್ನೇಚರ್ |
14.88 ಲಕ್ಷ ರೂ. |
14.19 ಲಕ್ಷ ರೂ. |
+ 69,000 ರೂ. |
ಸ್ಪೋರ್ಟ್‌ಲೈನ್ |
14.91 ಲಕ್ಷ ರೂ. |
14.70 ಲಕ್ಷ ರೂ. |
+ 21,000 ರೂ. |
ಮಾಂಟೆ ಕಾರ್ಲೋ |
16.12 ಲಕ್ಷ ರೂ. |
15.90 ಲಕ್ಷ ರೂ. |
+ 22,000 ರೂ. |
ಪ್ರೆಸ್ಟಿಜ್ |
16.31 ಲಕ್ಷ ರೂ. |
16.09 ಲಕ್ಷ ರೂ. |
+ 22,000 ರೂ. |
1-ಲೀಟರ್ ಟರ್ಬೊ-ಪೆಟ್ರೋಲ್ ಆಟೋಮ್ಯಾಟಿಕ್ |
|||
ಒನಿಕ್ಸ್ |
13.59 ಲಕ್ಷ ರೂ. |
13.49 ಲಕ್ಷ ರೂ. |
+ 10,000 ರೂ. |
ಸಿಗ್ನೇಚರ್ |
15.98 ಲಕ್ಷ ರೂ. |
15.29 ಲಕ್ಷ ರೂ. |
+ 69,000 ರೂ. |
ಸ್ಪೋರ್ಟ್‌ಲೈನ್ |
16.01 ಲಕ್ಷ ರೂ. |
15.80 ಲಕ್ಷ ರೂ. |
+ 21,000 ರೂ. |
ಮಾಂಟೆ ಕಾರ್ಲೋ |
17.22 ಲಕ್ಷ ರೂ. |
17 ಲಕ್ಷ ರೂ. |
+ 22,000 ರೂ. |
ಪ್ರೆಸ್ಟಿಜ್ |
17.41 ಲಕ್ಷ ರೂ. |
17.19 ಲಕ್ಷ ರೂ. |
+ 22,000 ರೂ. |
1.5-ಲೀಟರ್ ಟರ್ಬೊ-ಪೆಟ್ರೋಲ್ ಡಿಸಿಟಿ |
|||
ಸ್ಪೋರ್ಟ್‌ಲೈನ್ |
17.61 ಲಕ್ಷ ರೂ. |
17.40 ಲಕ್ಷ ರೂ. |
+ 21,000 ರೂ. |
ಮಾಂಟೆ ಕಾರ್ಲೋ |
18.82 ಲಕ್ಷ ರೂ. |
18.60 ಲಕ್ಷ ರೂ. |
+ 22,000 ರೂ. |
ಪ್ರೆಸ್ಟಿಜ್ |
19.01 ಲಕ್ಷ ರೂ. |
18.79 ಲಕ್ಷ ರೂ. |
+ 22,000 ರೂ. |
ಎಲ್ಲಾ ಬೆಲೆಗಳು ಭಾರತದಾದ್ಯಂತದ ಎಕ್ಸ್-ಶೋರೂಮ್ ಆಗಿದೆ.
ಸ್ಲಾವಿಯಾ ಬೆಲೆಯು ಇಳಿಕೆ ಕಂಡರೆ, ಕುಶಾಕ್ ಬೆಲೆ 69,000 ರೂ.ಗಳವರೆಗೆ ಏರಿಕೆ ಕಂಡಿದೆ. ಇದಲ್ಲದೆ, 1-ಲೀಟರ್ ಟರ್ಬೊ-ಪೆಟ್ರೋಲ್-ಮ್ಯಾನುಯಲ್ ಆಯ್ಕೆಯೊಂದಿಗೆ ಓನಿಕ್ಸ್ ವೇರಿಯೆಂಟ್‌ಅನ್ನು ಈಗ ನಿಲ್ಲಿಸಲಾಗಿದೆ.
ಏನು ವ್ಯತ್ಯಾಸ?
ಸ್ಕೋಡಾ ಸ್ಲಾವಿಯಾ ಮತ್ತು ಸ್ಕೋಡಾ ಕುಶಾಕ್ ವಿನ್ಯಾಸವು 2024ರ ಮೊಡೆಲ್‌ಗಳಿಗೆ ಹೋಲುತ್ತದೆ. ಇದಲ್ಲದೆ, ಫೀಚರ್‌ಗಳ ಸೂಟ್ ಸಹ ಬದಲಾಗಿಲ್ಲ, ಮತ್ತು ಎರಡೂ ಕಾರುಗಳು ಒಂದೇ ರೀತಿಯ ಫೀಚರ್‌ಗಳು ಮತ್ತು ಸುರಕ್ಷತಾ ಕಿಟ್‌ಗಳನ್ನು ನೀಡುತ್ತಲೇ ಇವೆ.
ಆದರೆ, ವಿಭಿನ್ನವಾದ ವಿಷಯವೆಂದರೆ, ಸ್ಲಾವಿಯಾ ಮತ್ತು ಕುಶಾಕ್ ಎರಡರ ಬೇಸ್-ಸ್ಪೆಕ್ ಕ್ಲಾಸಿಕ್ ವೇರಿಯೆಂಟ್‌ಗಳಲ್ಲಿ ಈಗ ವಯರ್ಡ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಕನೆಕ್ಷನ್ ಅನ್ನು ಒದಗಿಸಲಾಗಿದೆ. ಇದಲ್ಲದೆ, ಎರಡೂ ಕಾರುಗಳು, ಅವುಗಳ ಲೋವರ್-ಸ್ಪೆಕ್ ಸಿಗ್ನೇಚರ್ ಟ್ರಿಮ್‌ಗಳಲ್ಲಿ, ಈಗ ಸಿಂಗಲ್-ಪೇನ್ ಸನ್‌ರೂಫ್, ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಎಲ್‌ಇಡಿ ಹೆಡ್‌ಲೈಟ್‌ಗಳು, ಆಟೋ-ಡಿಮ್ಮಿಂಗ್ ಇನ್ಸೈಡ್ ರಿಯರ್‌ವ್ಯೂ ಮಿರರ್ (IRVM), ಮಳೆ-ಸಂವೇದಿ ವೈಪರ್‌ಗಳು ಮತ್ತು ಹಿಂಭಾಗದ ವೆಂಟ್‌ಗಳೊಂದಿಗೆ ಆಟೋ AC ಸೇರಿದಂತೆ ಸೌಲಭ್ಯಗಳನ್ನು ಹೊಂದಿವೆ. ಕುಶಾಕ್ ಸಿಗ್ನೇಚರ್ ವೇರಿಯೆಂಟ್ ಹಿಂಭಾಗದ ಫಾಗ್ ಲ್ಯಾಂಪ್‌ಗಳೊಂದಿಗೆ ಲಭ್ಯವಿದೆ.
ಇದಲ್ಲದೆ, ಕುಶಾಕ್‌ನ ಎಂಟ್ರಿ-ಲೆವೆಲ್ ಓನಿಕ್ಸ್ ವೇರಿಯೆಂಟ್ ಎಕ್ಸ್‌ಕ್ಲೂಸಿವ್ ಆಗಿ ಈಗ 16-ಇಂಚಿನ ಅಲಾಯ್ ವೀಲ್‌ಗಳೊಂದಿಗೆ ಲಭ್ಯವಿದೆ, ಇದು ಆಪ್‌ಡೇಟ್‌ನ ಮೊದಲು ಸ್ಟೀಲ್‌ನ ವೀಲ್‌ಗಳನ್ನು ಒಳಗೊಂಡಿತ್ತು.
ಹಾಗೆ ಹೇಳುತ್ತಾ ಹೋದರೆ, ಸ್ಕೋಡಾ ಸ್ಲಾವಿಯಾ ಈಗ 3 ವರ್ಷಗಳು ಅಥವಾ 1 ಲಕ್ಷ ಕಿ.ಮೀ (ಯಾವುದು ಮೊದಲೋ ಅದು) ಸ್ಟ್ಯಾಂಡರ್ಡ್ ವೇರಿಯೆಂಟ್‌ನೊಂದಿಗೆ ಬರುತ್ತದೆ. ಮತ್ತೊಂದೆಡೆ, ಕುಶಾಕ್ 5 ವರ್ಷಗಳು ಅಥವಾ 1.25 ಲಕ್ಷ ಕಿ.ಮೀ (ಯಾವುದು ಮೊದಲೋ ಅದು) ಸ್ಟ್ಯಾಂಡರ್ಡ್ ವ್ಯಾರಂಟಿಯನ್ನು ಹೊಂದಿದೆ, ಇದು ಆಪ್‌ಡೇಟ್‌ನ ಮೊದಲು 4 ವರ್ಷಗಳು ಅಥವಾ 1 ಲಕ್ಷ ಕಿ.ಮೀ ಆಗಿತ್ತು.
ಇದನ್ನೂ ಓದಿ: ಭಾರತದಲ್ಲಿ Skoda Kodiaq ಮಾರಾಟ ಸ್ಥಗಿತ, ಹೊಸ ಜನರೇಶನ್‌ನ ಆಪ್‌ಡೇಟ್‌ನೊಂದಿಗೆ ಸದ್ಯದಲ್ಲೇ ಬಿಡುಗಡೆ
ಇತರ ಸೌಕರ್ಯ ಮತ್ತು ಅನುಕೂಲತೆ ಮತ್ತು ಸುರಕ್ಷತಾ ಫೀಚರ್‌ಗಳು
ಸ್ಕೋಡಾ ಸ್ಲಾವಿಯಾ ಮತ್ತು ಕುಶಾಕ್ 8-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ 10-ಇಂಚಿನ ಟಚ್‌ಸ್ಕ್ರೀನ್ ಮತ್ತು 8-ಸ್ಪೀಕರ್ ಸೌಂಡ್ ಸಿಸ್ಟಮ್‌ನೊಂದಿಗೆ ಬರುತ್ತವೆ. ಎರಡೂ ಕಾರುಗಳು ಹಿಂಭಾಗದ ವೆಂಟ್‌ಗಳೊಂದಿಗೆ ಆಟೋ ಎಸಿ, ಮುಂಭಾಗದ ಸೀಟುಗಳಲ್ಲಿ ವೆಂಟಿಲೇಶನ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಸಿಂಗಲ್-ಪೇನ್ ಸನ್‌ರೂಫ್‌ನೊಂದಿಗೆ ಬರುತ್ತವೆ.
ಸುರಕ್ಷತಾ ಸೂಟ್ 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), ISOFIX ಚೈಲ್ಡ್-ಸೀಟ್ ಆಂಕಾರೇಜ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಹಿಲ್-ಹೋಲ್ಡ್ ಅಸಿಸ್ಟ್ ಮತ್ತು ರಿಯರ್ ಪಾರ್ಕಿಂಗ್ ಕ್ಯಾಮೆರಾವನ್ನು ಒಳಗೊಂಡಿದೆ. ಎರಡೂ ಕಾರುಗಳು ಸುಧಾರಿತ ಚಾಲಕ ಸಹಾಯ ಸಿಸ್ಟಮ್‌ಗಳೊಂದಿಗೆ (ADAS) ಬರುವುದಿಲ್ಲ.
ಪವರ್‌ಟ್ರೈನ್ ಆಯ್ಕೆಗಳು
ಸ್ಕೋಡಾ ಸ್ಲಾವಿಯಾ ಮತ್ತು ಸ್ಕೋಡಾ ಕುಶಾಕ್ ಎರಡೂ, MY2025 ಆಪ್‌ಡೇಟ್‌ನ ನಂತರವೂ, ಒಂದೇ ರೀತಿಯ ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತಲೇ ಇವೆ, ಅವುಗಳ ವಿವರಗಳು ಈ ಕೆಳಗಿನಂತಿವೆ:
ಎಂಜಿನ್ |
1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ |
1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ |
ಪವರ್ |
115 ಪಿಎಸ್ |
150 ಪಿಎಸ್ |
ಟಾರ್ಕ್ |
178 ಎನ್‌ಎಮ್ |
250 ಎನ್‌ಎಮ್ |
ಗೇರ್‌ಬಾಕ್ಸ್ |
6-ಸ್ಪೀಡ್ ಮ್ಯಾನ್ಯುವಲ್ / 6-ಸ್ಪೀಡ್ AT* |
7-ಸ್ಪೀಡ್ DCT^ |
*AT = ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್
^DCT = ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್
ಮೊದಲೇ ಹೇಳಿದಂತೆ, ಎರಡೂ ಸ್ಕೋಡಾ ಕೊಡುಗೆಗಳು ಮೇಲಿನ ಎರಡೂ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತವೆ ಮತ್ತು ಒಂದೇ ರೀತಿಯ ಪರ್ಫಾರ್ಮೆನ್ಸ್‌ಅನ್ನು ಹೊಂದಿವೆ.
ಪ್ರತಿಸ್ಪರ್ಧಿಗಳು
ಸ್ಕೋಡಾ ಸ್ಲಾವಿಯಾ ಕಾರು ವೋಕ್ಸ್‌ವ್ಯಾಗನ್ ವರ್ಟಸ್, ಹುಂಡೈ ವೆರ್ನಾ, ಹೋಂಡಾ ಸಿಟಿ ಮತ್ತು ಮಾರುತಿ ಸಿಯಾಜ್ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಮತ್ತೊಂದೆಡೆ, ಸ್ಕೋಡಾ ಕುಶಾಕ್ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್, ಎಂಜಿ ಆಸ್ಟರ್ ಮತ್ತು ವೋಕ್ಸ್‌ವ್ಯಾಗನ್ ಟೈಗನ್‌ಗಳೊಂದಿಗೆ ಪೈಪೋಟಿ ನಡೆಸುತ್ತದೆ.
ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ