BYD Atto 3: ಜುಲೈ 10 ಕ್ಕೆ ಹೊಸ ವೇರಿಯಂಟ್‌ನ ಲಾಂಚ್
ಬಿವೈಡಿ ಆಟ್ಟೋ 3 ಗಾಗಿ dipan ಮೂಲಕ ಜುಲೈ 09, 2024 09:51 pm ರಂದು ಪ್ರಕಟಿಸಲಾಗಿದೆ
- 49 Views
- ಕಾಮೆಂಟ್ ಅನ್ನು ಬರೆಯಿರಿ
ಕೆಲವು ನಿರ್ದಿಷ್ಟ ಡೀಲರ್‌ಶಿಪ್‌ಗಳಲ್ಲಿ ರೂ 50,000 ಪಾವತಿಸಿ ನೀವು ಅನಧಿಕೃತವಾಗಿ ಈ ಹೊಸ ವೇರಿಯಂಟ್ ಅನ್ನು ಬುಕ್ ಮಾಡಬಹುದು
-
ಇದು ಆಟ್ಟೋ 3 ಸಿರೀಸ್ ನ ಅತ್ಯಂತ ಕೈಗೆಟಕುವ ಬೆಲೆಯ ಮಾಡೆಲ್ ಆಗಿದೆ ಮತ್ತು ಚಿಕ್ಕದಾದ 50 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುವ ನಿರೀಕ್ಷೆಯಿದೆ.
-
ಈಗಿರುವ ಆಟ್ಟೋ 3 ಕೇವಲ 60 kWh ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ ಮತ್ತು ಎಲೆಕ್ಟ್ರಿಕ್ ಮೋಟಾರ್ ಜೊತೆಗೆ 204 PS/310 Nm ಪರ್ಫಾರ್ಮೆನ್ಸ್ ಅನ್ನು ನೀಡುತ್ತದೆ.
-
ಪ್ರಸ್ತುತ ಬೆಲೆಗಳು ರೂ 33.99 ಲಕ್ಷದಿಂದ ರೂ 34.49 ಲಕ್ಷದ (ಎಕ್ಸ್ ಶೋ ರೂಂ) ನಡುವೆ ಇದೆ.
-
MG ZS EV ಯೊಂದಿಗೆ ಸ್ಪರ್ಧಿಸುವ ಗುರಿಯನ್ನು ಇಟ್ಟುಕೊಂಡು ಹೊಸ ಮಾಡೆಲ್ ಬೆಲೆಯನ್ನು ಸುಮಾರು ರೂ. 25 ಲಕ್ಷದ ಹತ್ತಿರ ಇಡುವ ನಿರೀಕ್ಷೆಯಿದೆ
BYD ಯ ಸೋಶಿಯಲ್ ಮೀಡಿಯಾ ಹ್ಯಾಂಡಲ್ ನಲ್ಲಿ ಬಂದಿರುವ ಅಧಿಕೃತ ಟೀಸರ್‌ಗಳು ಜುಲೈ 10 ರಂದು ನಿಗದಿಪಡಿಸಲಾದ ಆಟ್ಟೋ 3 ನ ಅತ್ಯಂತ ಕೈಗೆಟಕುವ ಬೆಲೆಯ ವೇರಿಯಂಟ್ ನ ಮುಂಬರುವ ಲಾಂಚ್ ಅನ್ನು ಖಚಿತಪಡಿಸುತ್ತವೆ. BYD ಈ ಹೊಸ ವೇರಿಯಂಟ್ ನ ಕುರಿತು ಇನ್ನೂ ನಿರ್ದಿಷ್ಟ ವಿವರಗಳನ್ನು ಒದಗಿಸಿಲ್ಲ, ಆದರೆ ನೀವು ಇದನ್ನು ಅನಧಿಕೃತವಾಗಿ ಕೆಲವು ಡೀಲರ್‌ಶಿಪ್‌ಗಳಲ್ಲಿ ರೂ 50,000 ಪಾವತಿ ಮಾಡಿ ಬುಕ್ ಮಾಡಬಹುದು.
ಹೊಸ ವೇರಿಯಂಟ್ ನಲ್ಲಿ ಏನೇನಿದೆ?
ಈ ವೇರಿಯಂಟ್ ಚಿಕ್ಕದಾದ 50 kWh ಬ್ಯಾಟರಿ ಪ್ಯಾಕ್ ಮತ್ತು ಪ್ರಸ್ತುತ ಆಟ್ಟೋ 3 ನಲ್ಲಿರುವ ಅದೇ ಎಲೆಕ್ಟ್ರಿಕ್ ಮೋಟರ್ ಅನ್ನು ಪಡೆದಿದೆ ಎಂದು ಡೀಲರ್ ಗಳು ಮಾಹಿತಿ ನೀಡಿದ್ದಾರೆ.
ಈಗಿರುವ ಮಾಡೆಲ್ ನಲ್ಲಿ 60 kWh ಬ್ಯಾಟರಿ ಪ್ಯಾಕ್ ಅನ್ನು ಒಂದೇ ಮೋಟಾರ್‌ನೊಂದಿಗೆ ಜೋಡಿಸಲಾಗಿದೆ, ಅದರ ಸ್ಪೆಸಿಫಿಕೇಷನ್ ಗಳು ಈ ಕೆಳಗಿನಂತಿವೆ:
ಸ್ಪೆಸಿಫಿಕೇಷನ್ ಗಳು |
BYD ಆಟ್ಟೋ 3 (ಈಗಿರುವ ಲೈನ್ ಅಪ್) |
ಬ್ಯಾಟರಿ ಪ್ಯಾಕ್ |
60 kWh |
ಪವರ್ |
204 PS |
ಟಾರ್ಕ್ |
310 Nm |
ರೇಂಜ್ |
510 km (ARAI) 510 ಕಿಮೀ (ARAI) |
ಚಿಕ್ಕ ಬ್ಯಾಟರಿ ಪ್ಯಾಕ್‌ನಿಂದ ಗರಿಷ್ಠ ರೇಂಜ್ ಅನ್ನು ಪಡೆಯಲು ಉತ್ತಮ ಪರ್ಫಾರ್ಮೆನ್ಸ್ ಗಾಗಿ ಹೊಸ ವೇರಿಯಂಟ್ ಕಡಿಮೆ ಟ್ಯೂನ್ ಸ್ಟೇಟಸ್ ಅನ್ನು ಹೊಂದಿರಬಹುದು.
ಇದರೊಂದಿಗೆ, ಈ ಹೊಸ ವೇರಿಯಂಟ್ ಬಜೆಟ್ ಮಾಡೆಲ್ ಆಗಿರುವ ಕಾರಣ ಪ್ರಸ್ತುತ ಮಾಡೆಲ್ ಗಳಲ್ಲಿ ಲಭ್ಯವಿರುವ ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ (ADAS) ನಂತಹ ಕೆಲವು ಫೀಚರ್ ಗಳು ಲಭ್ಯವಿರುವ ಸಾಧ್ಯತೆಯಿಲ್ಲ.
BYD ಆಟ್ಟೋ 3 ಓವರ್ ವ್ಯೂ
BYD ಆಟ್ಟೋ 3 2022 ರಲ್ಲಿ ಭಾರತದ ಮಾರುಕಟ್ಟೆಗೆ ಬಂದ ನಂತರ ಈ EV ತಯಾರಕರ ಎರಡನೇ ಕಾರಾಗಿದೆ. ಪ್ರಸ್ತುತ, BYD ಆಟ್ಟೋ 3 ಎರಡು ವೇರಿಯಂಟ್ ಗಳಲ್ಲಿ ಲಭ್ಯವಿದೆ: ಎಲೆಕ್ಟ್ರಿಕ್ ಮತ್ತು ಸ್ಪೆಷಲ್ ಎಡಿಷನ್, ಇವೆರಡೂ 60 kWh ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿವೆ.
ಫೀಚರ್ ಗಳ ವಿಷಯದಲ್ಲಿ, ಇದು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಜೊತೆಗೆ 12.8-ಇಂಚಿನ ರೊಟೇಟಿಂಗ್ ಟಚ್‌ಸ್ಕ್ರೀನ್, 5-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು 6-ವೇ ಪವರ್ಡ್ ಡ್ರೈವರ್ ಸೀಟ್, 8-ಸ್ಪೀಕರ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜರ್, ಆಟೋಮ್ಯಾಟಿಕ್ AC, ಪನರೋಮಿಕ್ ಸನ್‌ರೂಫ್ ಮತ್ತು ಕೀಲೆಸ್ ಎಂಟ್ರಿಯನ್ನು ಪಡೆಯುತ್ತದೆ.
ಇದು ಸುರಕ್ಷತಾ ಕಿಟ್ ನಲ್ಲಿ ಏಳು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಹಿಲ್ ಡಿಸೆಂಟ್ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), 360-ಡಿಗ್ರಿ ಕ್ಯಾಮೆರಾ ಮತ್ತು ISOFIX ಚೈಲ್ಡ್-ಸೀಟ್ ಆಂಕರೇಜ್‌ಗಳನ್ನು ಒಳಗೊಂಡಿದೆ. ಇದು ಫಾರ್ವರ್ಡ್ ಕೊಲಿಷನ್ ವಾರ್ನಿಂಗ್, ಲೇನ್-ಕೀಪ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, ಆಟೋ ಎಮರ್ಜೆನ್ಸಿ ಬ್ರೇಕಿಂಗ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ (ADAS) ಫೀಚರ್ ಗಳನ್ನು ಕೂಡ ಹೊಂದಿದೆ.
ಪ್ರತಿಸ್ಪರ್ಧಿಗಳು
BYD ಆಟ್ಟೋ 3 ಪ್ರಸ್ತುತ ಬೆಲೆಯು ರೂ 33.99 ಲಕ್ಷದಿಂದ ರೂ 34.49 ಲಕ್ಷದ (ಎಕ್ಸ್ ಶೋ ರೂಂ) ನಡುವೆ ಇದೆ, ಮತ್ತು ಇದು ಹ್ಯುಂಡೈ ಐಯೊನಿಕ್ 5 ಗೆ ಕೈಗೆಟುಕುವ ಬೆಲೆಯ ಪರ್ಯಾಯ ಆಯ್ಕೆಯಾಗಿದೆ. ಆದರೆ, ಈ ಹೊಸ ವೇರಿಯಂಟ್ ನ ಬಿಡುಗಡೆಯ ನಂತರ, ಇದು MG ZS EV ಮತ್ತು ಮುಂಬರುವ ಮಾರುತಿ ಸುಜುಕಿ eVX ಮತ್ತು ಹುಂಡೈ ಕ್ರೆಟಾ EV ಯೊಂದಿಗೆ ಸ್ಪರ್ಧಿಸಬಹುದು.
ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್ ಗಳು ಬೇಕೇ? ಕಾರ್ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ.
ಇನ್ನಷ್ಟು ಓದಿ : BYD ಆಟ್ಟೋ 3 ಆಟೋಮ್ಯಾಟಿಕ್
0 out of 0 found this helpful