ಹೊಸ ಹ್ಯುಂಡೈ ಔರಾ vs ಪ್ರತಿಸ್ಪರ್ಧಿಗಳು: ಬೆಲೆಗಳು ಏನು ಹೇಳುತ್ತವೆ?
ನವೀಕರಣದೊಂದಿಗೆ, ಹ್ಯುಂಡೈ ಔರಾದ ಬೆಲೆ ಮೊದಲಿಗಿಂತ ತುಸು ಹೆಚ್ಚಾಗಿದೆ. ಈ ಮಿಡ್‌ಲೈಫ್ ರಿಫ್ರೆಶ್ ಅನ್ನು ಅನುಸರಿಸಿ ಬೆಲೆಗಳಿಗೆ ಸಂಬಂಧಿಸಿದಂತೆ ಅದು ತನ್ನ ಪ್ರತಿಸ್ಪರ್ಧಿಗಳೊಂದಿಗೆ ಹೇಗೆ ಹೋಲಿಕೆಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವ ಸಮಯ
ಭಾರತದ ಶ್ರೇಣಿಯಲ್ಲಿ, ಹ್ಯುಂಡೈನ ಆರಂಭಿಕ ಹಂತದ ಸೆಡಾನ್‌ಗೆ ಈಗಷ್ಟೇ ಮಿಡ್‌ಲೈಫ್ ನವೀಕರಣವನ್ನು ನೀಡಲಾಗಿದೆ. ಈ ನವೀಕರಣದೊಂದಿಗೆ, ಔರಾ ಈಗ ಹೆಚ್ಚು ವಿಸ್ತಾರವಾದ ಫೀಚರ್‌ಗಳ ಲಿಸ್ಟ್‌ನೊಂದಿಗೆ ಹೊಸ ನೋಟಗಳನ್ನು ಹೊಂದಿದೆ. ಸಹಜವಾಗಿ, ಈ ಎಲ್ಲಾ ನವೀಕರಣಗಳು, ನವೀಕರಣ ಪೂರ್ವ ಮಾಡೆಲ್‌ಗಳಿಗಿಂತ ಪ್ರೀಮಿಯಂನಲ್ಲಿ ಬರುತ್ತದೆ, ಇದು ರೂ. 32,000 ತನಕದ ಶ್ರೇಣಿಯಲ್ಲಿರುತ್ತದೆ.
ಪ್ರತಿಸ್ಪರ್ಧಿಗಳಿಗೆ ಹೋಲಿಸಿದಂತೆ ನವೀಕೃತಗೊಂಡ ಔರಾದ ನವೀಕರಿಸಲಾದ ಬೆಲೆಗಳು ಹೇಗಿವೆ ಎಂಬುದರ ವಿವರ ಇಲ್ಲಿದೆ:
ಪೆಟ್ರೋಲ್-ಮ್ಯಾನುವಲ್
2023 ಹ್ಯುಂಡೈ ಔರಾ |
ಮಾರುತಿ ಡಿಝೈರ್ |
ಟಾಟಾ ಟಿಗೋರ್ |
ಹೋಂಡಾ ಅಮೇಝ್ |
E - ರೂ 6.30 ಲಕ್ಷ |
LXi - ರೂ 6.24 ಲಕ್ಷ |
XE - ರೂ 6.10 ಲಕ್ಷ |
|
E - ರೂ 6.89 ಲಕ್ಷ |
|||
XM - ರೂ 6.55 ಲಕ್ಷ |
|||
S - ರೂ 7.15 ಲಕ್ಷ |
VXi - ರೂ 7.28 ಲಕ್ಷ |
S - ರೂ 7.55 ಲಕ್ಷ |
|
XM CNG - ರೂ 7.45 ಲಕ್ಷ |
|||
XZ - ರೂ 7.05 ಲಕ್ಷ |
|||
S CNG - Rs 8.10 ಲಕ್ಷ |
VXi CNG - ರೂ 8.23 ಲಕ್ಷ |
XZ CNG - ರೂ 7.95 ಲಕ್ಷ |
|
SX - Rs 7.92 ಲಕ್ಷ |
ZXi - ರೂ 7.96 ಲಕ್ಷ |
||
XZ+ - ರೂ 7.65 ಲಕ್ಷ |
|||
SX CNG - Rs 8.87 ಲಕ್ಷ |
ZXi CNG - ರೂ 8.91 ಲಕ್ಷ |
XZ+ CNG - ರೂ 8.55 ಲಕ್ಷ |
|
SX (O) - Rs 8.58 ಲಕ್ಷ |
ZXi+ - ರೂ 8.68 ಲಕ್ಷ |
VX - ರೂ 8.66 ಲಕ್ಷ |
|
XZ+ DT CNG - ರೂ 8.65 ಲಕ್ಷ |
|||
XZ+ ಲೆದರೆಟ್ ಪ್ಯಾಕ್ CNG - ರೂ 8.75 ಲಕ್ಷ |
|||
XZ+ DT ಲೆದರೆಟ್ ಪ್ಯಾಕ್ CNG - Rs 8.84 ಲಕ್ಷ |
- ಹೊಸ ನವೀಕರಣಗಳೊಂದಿಗೆ, ಈ ಹ್ಯುಂಡೈ ಔರಾ ಈಗ ತನ್ನ ವಿಭಾಗಲ್ಲಿ ಎರಡನೇ ಅತ್ಯಂತ ಹೆಚ್ಚಿನ ಆರಂಭಿಕ ಬೆಲೆಯನ್ನು ಹೊಂದಿದೆ.
- ಔರಾದ ವೇರಿಯೆಂಟ್‌ಗಳು ಈಗ ಸುಮಾರಾಗಿ ಮಾರುತಿ ಡಿಝೈರ್ ಬೆಲೆಗಳಿಗೆ ಹತ್ತಿರವಾಗಿದೆ. ಇದು ಮಾರುತಿ ಸೆಡಾನ್ ಶ್ರೇಣಿಯ ಅಗ್ರಸ್ಥಾನದಲ್ಲಿರುವ- ZXi+ MT ವೇರಿಯೆಂಟ್ ಆಗಿದ್ದು ಇಲ್ಲಿನ ನಾಲ್ಕು ಸೆಡಾನ್‌ಗಳಲ್ಲಿ ಅತ್ಯಂತ ಹೆಚ್ಚಿನ ಬೆಲೆಯದ್ದಾಗಿದೆ.
- ಹೊಸ ಔರಾ ಮತ್ತು ಮಾರುತಿ ಡಿಝೈರ್‌ಗಿಂತ ಟಾಟಾ ಟಿಗೋರ್‌ನ ಶ್ರೇಣಿಗಳು ಬೋರ್ಡ್‌ನಾದ್ಯಂತ ಹೆಚ್ಚು ಕೈಗೆಟುಕುವವುಗಳಾಗಿವೆ.
- ಮಾರಾಟದಲ್ಲಿರುವ ಎಲ್ಲಾ ಸಬ್-4m ಗಳಲ್ಲಿ, ಕನಿಷ್ಠ ಸಂಖ್ಯೆಯ ಮ್ಯಾನುವಲ್ ವೇರಿಯೆಂಟ್‌ಗಳು (ಮೂರು) ಲಭ್ಯವಿರುವುದು ಹೋಂಡಾ ಅಮೇಝ್‌ನಲ್ಲಿ ಮಾತ್ರ. ಇದು ಲಾಟ್‌ನಲ್ಲಿ ಅತ್ಯಂತ ಹೆಚ್ಚಿನ ಆರಂಭಿಕ ಬೆಲೆಯನ್ನು ಹೊಂದಿದ್ದು, ಉಳಿದ ಮಾಡೆಲ್‌ಗಳಿಗೆ ಹೋಲಿಸಿದರೆ ಇದು ರೂ.50,000 ಕ್ಕಿಂತಲೂ ಹೆಚ್ಚು ಇದೆ.
- 1.2-ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಹೊಂದಿರುವ ಎಲ್ಲಾ ನಾಲ್ಕು ಸೆಡಾನ್‌ಗಳಲ್ಲಿ, ಡಿಝೈರ್ ಅತ್ಯಂತ ಶಕ್ತಿಶಾಲಿ ಇಂಜಿನ್ (90PS) ಅನ್ನು ಹೊಂದಿದೆ.
ಹೋಂಡಾ ಹೊರತಾಗಿ, ಇಲ್ಲಿ ಎಲ್ಲಾ ಕಾರು ತಯಾರಕರು ತಮ್ಮ ಸೆಡಾನ್‌ಗಳಿಗೆ ಐಚ್ಛಿಕ ಸಿಎನ್‌ಜಿ ಕಿಟ್ ನೀಡುತ್ತವೆ. ಹೆಚ್ಚಿನ ವೇರಿಯೆಂಟ್‌ಗಳಲ್ಲಿ, ಸಿಎನ್‌ಜಿ ಆಯ್ಕೆ ಬರುವುದು ಟಿಗೋರ್‌ನಲ್ಲಿ ಮತ್ತು ಇದು ರೂ. 7.45 ಲಕ್ಷ (XM) ದಲ್ಲಿ ಕನಿಷ್ಠ ಅತ್ಯಂತ ಕಡಿಮೆ ಪ್ರವೇಶ ಬಿಂದುವನ್ನು ಹೊಂದಿದೆ.
ಇದನ್ನೂ ಓದಿ: ಹೊಸ ಹ್ಯುಂಡೈ ಗ್ರ್ಯಾಂಡ್ i10 ನಿಯೋಸ್‌ನ ಪ್ರತಿ ವೇರಿಯೆಂಟ್‌ನ ವೈಶಿಷ್ಟ್ಯಗಳೇನು ಎಂಬ ವಿವರ ಲ್ಲಿದೆ
ಪೆಟ್ರೋಲ್-ಆಟೋ
2023 ಹ್ಯುಂಡೈ ಔರಾ |
ಮಾರುತಿ ಡಿಝೈರ್ |
ಟಾಟಾ ಟಿಗೋರ್ |
ಹೋಂಡಾ ಅಮೇಝ್ |
XMA - ರೂ 7.15 ಲಕ್ಷ |
|||
VXi - ರೂ 7.78 ಲಕ್ಷ |
|||
XZA+ - ರೂ 8.25 ಲಕ್ಷ |
|||
XZA+ DT - ರೂ 8.35 ಲಕ್ಷ |
|||
ZXi - ರೂ 8.46 ಲಕ್ಷ |
XZA+ ಲೆದರೆಟ್ ಪ್ಯಾಕ್ - ರೂ 8.45 ಲಕ್ಷ |
S CVT - ರೂ 8.45 ಲಕ್ಷ |
|
SX+ - ರೂ 8.73 ಲಕ್ಷ |
XZA+ DT ಲೆದರೆಟ್ ಪ್ಯಾಕ್ - ರೂ 8.54 ಲಕ್ಷ |
||
ZXi+ - ರೂ 9.18 ಲಕ್ಷ |
VX CVT - ರೂ 9.48 ಲಕ್ಷ |
- ಹ್ಯುಂಡೈ, ಮಾರುತಿ ಮತ್ತು ಟಾಟಾ ತಮ್ಮ ಮಾಡೆಲ್‌ಗಳಲ್ಲಿ AMT ಆಯ್ಕೆಯನ್ನು ನೀಡಿದರೆ, ಹೋಂಡಾ ಈ ಅಮೇಝ್‌ಗೆ CVT ಆಯ್ಕೆಯನ್ನು ನೀಡಿದೆ. ಅಲ್ಲದೇ ಎರಡರಲ್ಲಿ ಇದು ಅತ್ಯಂತ ಪರಿಷ್ಕೃತ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯಾಗಿದೆ.
- ಈ ಔರಾ ಪೆಟ್ರೋಲ್-ಆಟೋಗೆ ಕೇವಲ ಒಂದು ವೇರಿಯೆಂಟ್ ಅನ್ನು ನೀಡುತ್ತದೆ, ಮತ್ತು ಇದು ಈ ವಿಭಾಗದಲ್ಲಿ ಅತ್ಯಂತ ದುಬಾರಿ ಪ್ರವೇಶ-ಬಿಂದುವಾಗಿದೆ.
- ಟಾಟಾ, ಹೆಚ್ಚಿನ ವೇರಿಯೆಂಟ್‌ಗಳಲ್ಲಿ ಟೂ-ಪೆಡಲ್ ಸೆಟಪ್ ಅನ್ನು ಟಿಗೋರ್‌ನಲ್ಲಿ ನೀಡಿದೆ. ಅಲ್ಲದೇ ಇದು ಇಲ್ಲಿ ಅತ್ಯಂತ ಕೈಗೆಟುಕುವ ಪೆಟ್ರೋಲ್-ಆಟೋ ಆಯ್ಕೆಯಾಗಿದೆ.
-
ಹೋಂಡಾದ ಅಮೇಝ್, CVT ಯೊಂದಿಗಿನ ತನ್ನ ಟಾಪ್-ಶ್ರೇಣಿ VX ಟ್ರಿಮ್‌ನಲ್ಲಿ ಲಾಟ್‌ನಲ್ಲಿ ನೀಡಿರುವ ಎಲ್ಲದಕ್ಕಿಂತ ಅತ್ಯಂತ ದುಬಾರಿಯಾಗಿದ್ದು, ಇದರ ಬೆಲೆ ಸುಮಾರು ರೂ. 9.5-ಲಕ್ಷಕ್ಕೆ ಹತ್ತಿರವಿದೆ.
-
ಮಾರುತಿ ಡಿಝೈರ್‌ನ ಪೆಟ್ರೋ-ಆಟೋ ಈ ವಿಭಾಗದಲ್ಲಿ ಎರಡನೇ-ಅತ್ಯಂತ ಕೈಗೆಟುಕುವ ಬೆಲೆಯದ್ದಾಗಿದ್ದು, ಟಾಪ್ ವೇರಿಯೆಂಟ್‌ನಲ್ಲಿ ರೂ.ಒಂಭತ್ತು-ಲಕ್ಷ ದಾಟುವ ಇನ್ನೊಂದು ಏಕೈಕ ಮಾಡೆಲ್ ಆಗಿದೆ.
ಗಮನಿಸಿ: 1) ಟಾಟಾ ಟಿಗೋರ್ ಮಾತ್ರ ತನ್ನ ವಿಭಾಗದಲ್ಲಿ ಡ್ಯುಯಲ್-ಟೋನ್ ಆಯ್ಕೆಯನ್ನು ಹೊಂದಿದೆ ಅಲ್ಲದೇ ಇದು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಎರಡು ವೇರಿಯೆಂಟ್‌ಗಳಲ್ಲಿಯೂ ‘ಲೆದರೆಟ್ ಪ್ಯಾಕ್’ ಆಯ್ಕೆಯನ್ನು ನೀಡುತ್ತದೆ
2) ಎಲ್ಲಾ ಬೆಲೆಗಳೂ ದೆಹಲಿ ಎಕ್ಸ್-ಶೋರೂಂ ಪ್ರಕಾರ
ಸಂಬಂಧಿತ: ಮಾರುತಿ ಮತ್ತು ಹ್ಯುಂಡೈ ಇಂಡಿಯಾ ಒಟ್ಟಾಗಿ ಬಾಕಿ ಆರ್ಡರ್‌ಗಳನ್ನು ಹೊಂದಿವೆ ಸುಮಾರು 5 ಲಕ್ಷ