• English
  • Login / Register

ADAS ಸೇರಿದಂತೆ 30 ಸುರಕ್ಷತಾ ಫೀಚರ್‌ ನೊಂದಿಗೆ ಬರುತ್ತಿದೆ ಹೊಸ ಹ್ಯುಂಡೈ ವರ್ನಾ..!

ಹುಂಡೈ ವೆರ್ನಾ ಗಾಗಿ rohit ಮೂಲಕ ಮಾರ್ಚ್‌ 16, 2023 09:11 pm ರಂದು ಪ್ರಕಟಿಸಲಾಗಿದೆ

  • 30 Views
  • ಕಾಮೆಂಟ್‌ ಅನ್ನು ಬರೆಯಿರಿ

ಇದರ ಅತ್ಯುತ್ತಮ ಸುರಕ್ಷತಾ ಭಾಗವಾಗಿ ಆರು ಏರ್‌ಬ್ಯಾಗ್‌ಗಳು, ಆಟೋ ಹೆಡ್‌ಲ್ಯಾಂಪ್‌ಗಳು ಮತ್ತು ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳನ್ನು ಒಳಗೊಂಡಿದೆ.

2023 Hyundai Verna

 

  •  ಹ್ಯುಂಡೈ ಮಾರ್ಚ್ 21ರಂದು ಆರನೇ-ಪೀಳಿಗೆ ವರ್ನಾವನ್ನು ಬಿಡುಗಡೆ ಮಾಡಲಿದೆ.
  •  ಮೊದಲ ಬಾರಿಗೆ ADAS ಫೀಚರ್‌ಗಳನ್ನು ಪಡೆಯಲಿದ್ದು ಇದು ಫಾರ್ವಡ್-ಕೊಲಿಶನ್ ವಾರ್ನಿಂಗ್ ಮತ್ತು ಅಡಾಪ್ಟಿವ್ ಕ್ರ್ಯೂಸ್ ಕಂಟ್ರೋಲ್ ಅನ್ನು ಒಳಗೊಂಡಿರುತ್ತದೆ.
  •  ಇತರ ಸುರಕ್ಷತಾ ಫೀಚರ್‌ಗಳು ESC ಮತ್ತು ಫ್ರಂಟ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಒಳಗೊಂಡಿರುತ್ತದೆ.
  •  2023 ವರ್ನಾ ಎರಡು ಪೆಟ್ರೋಲ್ ಇಂಜಿನ್ ಆಯ್ಕೆಗಳನ್ನು ಪಡೆಯಲಿದೆ: 115PS, 1.5—ಲೀಟರ್ ಪೆಟ್ರೋಲ್ ಮತ್ತು 160PS, 1.5-ಲೀಟರ್ ಟರ್ಬೋ-ಪೆಟ್ರೋಲ್
  •  ಬೆಲೆ ರೂ 10 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುವ ನಿರೀಕ್ಷೆ ಇದೆ.

ಆರನೇ-ಪೀಳಿಗೆ ಹ್ಯುಂಡೈ ವರ್ನಾ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಈ ಬಿಡುಗಡೆಗೂ ಮುನ್ನ, ಕಾರು ತಯಾರಕ ಸಂಸ್ಥೆಯು ಈ ಹೊಸ ಸೆಡಾನ್‌ನಲ್ಲಿರುವ ಪ್ರಮುಖ ಸುರಕ್ಷತಾ ಫೀಚರ್‌ಗಳನ್ನು ಬಹಿರಂಗಪಡಿಸಿದೆ. ಇದರಲ್ಲಿ ಒಟ್ಟು 65 ಸುರಕ್ಷತಾ ಫೀಚರ್‌ಗಳಿವೆ. ಇದು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್‌ (ADAS)  ಅನ್ನು ಒಳಗೊಂಡಿದ್ದು ಇವುಗಳಲ್ಲಿ 30 ಸ್ಟಾಂಡರ್ಡ್ ಆಗಿವೆ.

 ಸ್ಟಾಂಡರ್ಡ್ ಸುರಕ್ಷತಾ ಸೆಟ್

ಈ 2023 ವರ್ನಾದ ಸ್ಟಾಂಡರ್ಡ್ ಸುರಕ್ಷತಾ ಕಿಟ್ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು (ಎಲ್ಲಾ ಪ್ರಯಾಣಿಕರಿಗೆ), ಆರು ಏರ್‌ಬ್ಯಾಗ್‌ಗಳು, ಸೀಟ್‌ಬೆಲ್ಟ್ ರಿಮೈಂಡರ್,  ABS ಜೊತೆಗೆ EBD, ISOFIX ಚೈಲ್ಡ್ ಸೀಟ್ ಆ್ಯಂಕೋರೇಜ್‌ಗಳು, ಆಟೋ-ಹೆಡ್‌ಲೈಟ್‌ಗಳು, ರಿಯರ್ ಡಿಫಾಗರ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಒಳಗೊಂಡಿರುತ್ತದೆ.

ADAS ಅಧಿಕೃತವಾಗಿ ದೃಢೀಕರಿಸಲಾಗಿದೆ

ಪೀಳಿಗೆ ನವೀಕರಣದೊಂದಿಗೆ, ಹ್ಯುಂಡೈ ತನ್ನ ಕಾಂಪ್ಯಾಕ್ಟ್ ಸೆಡಾನ್‌ಗೆ ಕೆಲವು ADAS ಫೀಚರ್‌ಗಳಿಗಾಗಿ ಸೆನ್ಸರ್‌ಗಳು ಮತ್ತು ಫ್ರಂಟ್‌ ಕ್ಯಾಮರಾವನ್ನು ನೀಡಲಿದೆ. ಈ ಬ್ರ್ಯಾಂಡ್‌ನ ಸ್ಮಾರ್ಟ್ ಸೆನ್ಸ್ ಸ್ಯೂಟ್, ಫಾರ್ವರ್ಡ್-ಕೊಲಿಶನ್ ವಾರ್ನಿಂಗ್ ಮತ್ತು ಅಡಾಪ್ಟಿವ್ ಕ್ರ್ಯೂಸ್ ಕಂಟ್ರೋಲ್ ಅನ್ನು ಒಳಗೊಂಡಿದೆ. ಇತರ ADAS ಫೀಚರ್‌ಗಳು ಡ್ರೈವರ್ ಅಟೆನ್ಷನ್ ವಾರ್ನಿಂಗ್, ಹೈ-ಬೀಮ್ ಅಸಿಸ್ಟ್ ಮತ್ತು ಲೀಡ್ ವೆಹಿಕಲ್ ಡಿಪರ್ಚರ್ ಅಲರ್ಟ್ ಅನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ:  GM ನ ತಲೆಗಾಂವ್ ಘಟಕ ಸ್ವಾಧೀನಪಡಿಸಿಕೊಳ್ಳಲು ಟರ್ಮ್ ಶೀಟ್‌ಗೆ ಸಹಿ ಮಾಡಿದೆ ಹ್ಯುಂಡೈ ಇಂಡಿಯಾ

 ಇತರ ಸುರಕ್ಷತಾ ಫೀಚರ್‌ಗಳು

2023 Hyundai Verna disc brake

ಹ್ಯುಂಡೈ ತನ್ನ ವರ್ನಾವನ್ನು ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಫ್ರಂಟ್ ಪಾರ್ಕಿಂಗ್ ಸೆನ್ಸರ್‌ಗಳು, ಎಲ್ಲಾ ಡಿಸ್ಕ್ ಬ್ರೇಕ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್‌ನೊಂದಿಗೆ ಸಜ್ಜುಗೊಳಿಸಲಿದೆ ಆದರೆ ಇವೆಲ್ಲವೂ ಉನ್ನತ ಟ್ರಿಮ್‌ಗಳಿಗೆ ಮಾತ್ರ ಕಾಯ್ದಿರಿಸಬಹುದಾದ ನಿರೀಕ್ಷೆ ಇದೆ.

ಪೆಟ್ರೋಲ್ ಪವರ್ ಮಾತ್ರ

Hyundai Verna 1.5 Turbo badge

 ಈ ಆರನೇ ಪೀಳಿಗೆ ವರ್ನಾ ಪೆಟ್ರೋಲ್-ಮಾತ್ರ ಆಗಿರಲಿದೆ. ಇದು ಸ್ಥಗಿತಗೊಳ್ಳುತ್ತಿರುವ ಮಾಡೆಲ್‌ನ 1.5-ಲೀಟರ್‌ನ ಸಾಮಾನ್ಯ ಪೆಟ್ರೋಲ್ ಇಂಜಿನ್ (115PS/144Nm) ಮತ್ತು ಹೊಸ 1.5-ಲೀಟರ್ ಟರ್ಬೋ-ಪೆಟ್ರೋಲ್ ಯೂನಿಟ್ (160PS/253Nm) ಅನ್ನು ಪಡೆಯುತ್ತದೆ. ಹಾಗೆಯೇ ಹ್ಯುಂಡೈ ಇದಕ್ಕೆ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅನ್ನು ಸ್ಟಾಂಡರ್ಡ್ ಆಗಿ ನೀಡುತ್ತಿದ್ದು, ಮೊದಲನೆಯದು CVT ಅನ್ನೂ ಪಡೆಯುತ್ತದೆ ಮತ್ತು ಎರಡನೆಯದು 7-ಸ್ಪೀಡ್ DCT ಅನ್ನು ಪಡೆಯುತ್ತದೆ.  

 ಸಂಬಂಧಿತ: ಹೊಸ ಹ್ಯುಂಡೈ ವರ್ನಾದ ಈ ಹೊಸ ಆವೃತ್ತಿ ಭಾರತದಲ್ಲಿ ಲಭ್ಯವಿರುವುದಿಲ್ಲ!

ಬಿಡುಗಡೆ ಮತ್ತು ಪ್ರತಿಸ್ಪರ್ಧಿಗಳು

2023 Hyundai Verna rear

 ಹ್ಯುಂಡೈ ಹೊಸ ವರ್ನಾವನ್ನು ಭಾರತದಲ್ಲಿ ಮಾರ್ಚ್ 21ರಂದು ಬಿಡುಗಡೆಗೊಳಿಸಲು ಸಿದ್ಧವಾಗಿದೆ. ಇದರ ಬೆಲೆಯು ರೂ 11 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುವ ನಿರೀಕ್ಷೆ ಇದೆ. ಈ ಹೊಸ ಕಾಂಪ್ಯಾಕ್ಟ್ ಸೆಡಾನ್ ಸ್ಕೋಡಾ ಸ್ಲಾವಿಯಾ, ಫೋಕ್ಸ್‌ವಾಗೆನ್ ವರ್ಟಸ್, ಮಾರುತಿ ಸಿಯಾಝ್ ಮತ್ತು ನವೀಕೃತ ಹೋಂಡಾ ಸಿಟಿಗೆ ಪ್ರತಿಸ್ಪರ್ಧಿಯಾಗಲಿದೆ.

 ಇದನ್ನೂ ಓದಿ:  ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ ರೂ. 10 ಲಕ್ಷದ ಕೆಳಗಿನ ಅತ್ಯಂತ ಕೈಗೆಟುಕುವ ಬೆಲೆಯ 10 ಕಾರುಗಳು

was this article helpful ?

Write your Comment on Hyundai ವೆರ್ನಾ

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience