ಹೊಸ Kia ಎಸ್‌ಯುವಿಗೆ Syros ಎಂದು ನಾಮಕರಣ, ಶೀಘ ್ರದಲ್ಲೇ ಮಾರುಕಟ್ಟೆಗೆ ಲಗ್ಗೆ
ಕಿಯಾ syros ಗಾಗಿ rohit ಮೂಲಕ ನವೆಂಬರ್ 12, 2024 08:36 pm ರಂದು ಪ್ರಕಟಿಸಲಾಗಿದೆ
- 382 Views
- ಕಾಮೆಂಟ್ ಅನ್ನು ಬರೆಯಿರಿ
ಸಿರೊಸ್ ಕಾರು ತಯಾರಕರ ಎಸ್‌ಯುವಿ ಶ್ರೇಣಿಯಲ್ಲಿ ಸೊನೆಟ್ ಮತ್ತು ಸೆಲ್ಟಸ್ ನಡುವೆ ಫಿಟ್ ಆಗಲಿದೆ ಎಂದು ಹೇಳಲಾಗಿದೆ
-
ಇತ್ತೀಚಿನ ಟೀಸರ್ ವರ್ಟಿಕಲ್ ಆಗಿ ಜೋಡಿಸಲಾದ 3-ಪಾಡ್ LED ಹೆಡ್‌ಲೈಟ್‌ಗಳೊಂದಿಗೆ ಉದ್ದವಾದ LED DRL ಗಳನ್ನು ತೋರಿಸುತ್ತದೆ.
-
ಹಿಂದಿನ ಟೀಸರ್‌ಗಳು ಫ್ಲೇರ್ ಆಗಿರುವ ವೀಲ್ ಆರ್ಕ್‌ಗಳು, ಉದ್ದನೆಯ ರೂಫ್ ರೈಲ್‌ಗಳು ಮತ್ತು L-ಆಕಾರದ ಟೈಲ್ ಲೈಟ್‌ಗಳನ್ನು ಖಚಿತಪಡಿಸಿವೆ.
-
ಕ್ಯಾಬಿನ್ ಡ್ಯುಯಲ್-ಟೋನ್ ಥೀಮ್ ಮತ್ತು 2-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಪಡೆಯುವ ನಿರೀಕ್ಷೆಯಿದೆ.
-
ನೀಡಲಾಗಿರುವ ಫೀಚರ್‌ಗಳಲ್ಲಿ ಡ್ಯುಯಲ್-ಡಿಜಿಟಲ್ ಡಿಸ್‌ಪ್ಲೇಗಳು, ವೆಂಟಿಲೇಟೆಡ್ ಸೀಟ್‌ಗಳು ಮತ್ತು ಆರು ಏರ್‌ಬ್ಯಾಗ್‌ಗಳು ಸೇರಿವೆ.
-
ಕಿಯಾ ಇಲ್ಲಿ ಸೋನೆಟ್‌ನಲ್ಲಿರುವ ಎಂಜಿನ್ ಆಯ್ಕೆಗಳನ್ನೇ ನೀಡುವ ನಿರೀಕ್ಷೆಯಿದೆ.
-
ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದ್ದು, ಬೆಲೆಯು ರೂ 9 ಲಕ್ಷದಿಂದ ಪ್ರಾರಂಭವಾಗಬಹುದು (ಎಕ್ಸ್ ಶೋರೂಂ).
ಹೊಸ ಎಸ್‌ಯುವಿಯ ಟೀಸರ್ ಸ್ಕೆಚ್‌ಗಳನ್ನು ಬಹಿರಂಗಪಡಿಸಿದ ನಂತರ, ಅದನ್ನು ಕಿಯಾ ಸಿರೋಸ್ ಎಂದು ಕರೆಯಲಾಗಿದೆ. "ಸಿರೊಸ್" ಎಂಬ ಹೆಸರನ್ನು ಭಾರತದಲ್ಲಿ ಕಾರು ತಯಾರಕರಿಂದ ಟ್ರೇಡ್‌ಮಾರ್ಕ್ ಮಾಡಲಾಗಿದೆ ಮತ್ತು ಅದರ ಎಸ್‌ಯುವಿಗಳನ್ನು 'S' ಅಕ್ಷರದೊಂದಿಗೆ ಹೆಸರಿಸುವ ಬ್ರ್ಯಾಂಡ್‌ನ ಅಭ್ಯಾಸಕ್ಕೆ ಇದು ಸರಿಹೊಂದುತ್ತದೆ. ಮುಂಬರುವ ಈ ಕಿಯಾ ಎಸ್‌ಯುವಿ ಬಗ್ಗೆ ನಮಗೆ ತಿಳಿದಿರುವ ಎಲ್ಲಾ ವಿವರಗಳು ಇಲ್ಲಿದೆ:
ಕಿಯಾ ಸಿರೋಸ್ ಡಿಸೈನ್
ಡಿಸೈನ್ ಸ್ಕೆಚ್‌ಗಳು ಸಿರೊಸ್ ಎತ್ತರದ, ಬಾಕ್ಸಿ ಆಕಾರವನ್ನು ಹೊಂದಿದೆ ಎಂದು ತೋರಿಸುತ್ತದೆ, ಇದು ಕಿಯಾ EV9 ಎಲೆಕ್ಟ್ರಿಕ್ ಎಸ್‌ಯುವಿ ಮತ್ತು ಕಿಯಾ ಕಾರ್ನಿವಲ್ ಎರಡರಿಂದಲೂ ಸ್ಫೂರ್ತಿ ಪಡೆದಂತೆ ಕಾಣುತ್ತದೆ. ಇತ್ತೀಚಿನ ಟೀಸರ್ ಹೆಸರನ್ನು ಬಹಿರಂಗಪಡಿಸುತ್ತದೆ ಮತ್ತು ವರ್ಟಿಕಲ್ ಆಗಿರುವ 3-ಪಾಡ್ LED ಹೆಡ್‌ಲೈಟ್‌ಗಳು ಮತ್ತು ಉದ್ದವಾದ LED DRL ಗಳೊಂದಿಗೆ ಎಸ್‌ಯುವಿ ಅನ್ನು ತೋರಿಸುತ್ತದೆ.
ಇತರ ಹೊರಭಾಗದ ಫೀಚರ್‌ಗಳಲ್ಲಿ ದೊಡ್ಡ ವಿಂಡೋ ಪ್ಯಾನೆಲ್‌ಗಳು, ಫ್ಲಾಟ್ ರೂಫ್ ಮತ್ತು ಸಿ-ಪಿಲ್ಲರ್ ಬಳಿ ವಿಂಡೋ ಲೈನ್‌ನಲ್ಲಿ ಕರ್ವ್ ಸೇರಿವೆ. ಟೀಸರ್ ಸ್ಕೆಚ್‌ಗಳು ಫ್ಲೇರ್ ಆಗಿರುವ ವೀಲ್ ಆರ್ಕ್‌ಗಳು, ಶಕ್ತಿಶಾಲಿಯಾದ ಶೋಲ್ಡರ್ ಲೈನ್ ಮತ್ತು ಫ್ಲಶ್-ಟೈಪ್ ಡೋರ್ ಹ್ಯಾಂಡಲ್‌ಗಳನ್ನು ಕೂಡ ತೋರಿಸಿದೆ. ಉದ್ದನೆಯ ರೂಫ್ ರೈಲ್ಸ್, L-ಆಕಾರದ ಟೈಲ್ ಲೈಟ್‌ಗಳು ಮತ್ತು ನೇರವಾದ ಟೈಲ್‌ಗೇಟ್ ಸಿರೋಸ್‌ನ ಹೊರಭಾಗದಲ್ಲಿ ಕಾಣಸಿಗುತ್ತದೆ.
ಕಿಯಾ ಸಿರೋಸ್ ಕ್ಯಾಬಿನ್ ಮತ್ತು ಫೀಚರ್‌ಗಳು
ಕ್ಯಾಬಿನ್ ಬಗ್ಗೆ ನಮ್ಮ ಹತ್ತಿರ ಹೆಚ್ಚು ವಿವರಗಳಿಲ್ಲದಿದ್ದರೂ ಕೂಡ, ಇದು ಸೋನೆಟ್ ಮತ್ತು ಸೆಲ್ಟೋಸ್ ಎಸ್‌ಯುವಿಗಳ ಒಳಭಾಗವನ್ನು ಹೋಲುವ ನಿರೀಕ್ಷೆಯಿದೆ. ಕಿಯಾ ಡ್ಯುಯಲ್-ಟೋನ್ ಇಂಟೀರಿಯರ್ ಅನ್ನು ನೀಡುವ ಸಾಧ್ಯತೆಯಿದೆ ಮತ್ತು ಆನ್‌ಲೈನ್‌ನಲ್ಲಿ ಕೆಲವು ಸ್ಪೈ ಫೋಟೋಗಳು 2-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಕೂಡ ತೋರಿಸಿವೆ.
ಫೀಚರ್‌ಗಳ ವಿಷಯದಲ್ಲಿ, ಇದು ಇತರ ಎರಡು ಕಿಯಾ ಎಸ್‌ಯುವಿಗಳಲ್ಲಿರುವ ಡ್ಯುಯಲ್-ಡಿಸ್ಪ್ಲೇ ಸೆಟಪ್, ಆಟೋ ಕ್ಲೈಮೇಟ್ ಕಂಟ್ರೋಲ್, ಪನರೋಮಿಕ್ ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ಗಳನ್ನು ಪಡೆಯುವ ನಿರೀಕ್ಷೆಯಿದೆ. ಅದರ ಸುರಕ್ಷತಾ ಸೂಟ್‌ನಲ್ಲಿ ಆರು ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), ISOFIX ಚೈಲ್ಡ್ ಸೀಟ್ ಆಂಕಾರೇಜ್‌ಗಳು, ರಿವರ್ಸಿಂಗ್ ಕ್ಯಾಮೆರಾ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಒಳಗೊಂಡಿರುವ ನಿರೀಕ್ಷೆಯಿದೆ.
ಇದನ್ನು ಕೂಡ ಓದಿ: ಅಕ್ಟೋಬರ್ 2024 ರ ಟಾಪ್ 15 ಅತ್ಯಂತ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿ ಇಲ್ಲಿದೆ
ಕಿಯಾ ಸಿರೋಸ್ ಎಂಜಿನ್ ಮತ್ತು ಗೇರ್ ಬಾಕ್ಸ್ ಆಯ್ಕೆಗಳು
ಕಿಯಾ ತನ್ನ ಹೊಸ ಸಿರೋಸ್‌ಗಾಗಿ ಎಂಜಿನ್ ಆಯ್ಕೆಗಳನ್ನು ಬಹಿರಂಗಪಡಿಸಿಲ್ಲ, ಆದರೆ ಇದು ಸೋನೆಟ್‌ನಲ್ಲಿರುವ ಅದೇ ಎಂಜಿನ್ ಮತ್ತು ಗೇರ್‌ಬಾಕ್ಸ್ ಆಯ್ಕೆಗಳನ್ನು ಹೊಂದಿರುವ ಸಾಧ್ಯತೆಯಿದೆ. ವಿವರಗಳು ಈ ಕೆಳಗಿನಂತಿವೆ:
ಸ್ಪೆಸಿಫಿಕೇಷನ್ ಗಳು |
1.2-ಲೀಟರ್ N/A ಪೆಟ್ರೋಲ್ |
1-ಲೀಟರ್ ಟರ್ಬೊ-ಪೆಟ್ರೋಲ್ |
1.5-ಲೀಟರ್ ಡೀಸೆಲ್ |
ಪವರ್ |
83 PS |
120 PS |
116 PS |
ಟಾರ್ಕ್ |
115 Nm |
172 Nm |
250 Nm |
ಟ್ರಾನ್ಸ್‌ಮಿಷನ್ |
5-ಸ್ಪೀಡ್ MT |
6- ಸ್ಪೀಡ್ iMT*/ 7- ಸ್ಪೀಡ್ DCT^ |
6- ಸ್ಪೀಡ್ MT, 6- ಸ್ಪೀಡ್ iMT, 6- ಸ್ಪೀಡ್ AT |
*iMT - ಇಂಟಲಿಜೆಂಟ್ ಮ್ಯಾನ್ಯುಯಲ್ ಟ್ರಾನ್ಸ್‌ಮಿಷನ್ (ಕ್ಲಚ್‌ಲೆಸ್ ಮ್ಯಾನ್ಯುಯಲ್)
^DCT - ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್
ಕಿಯಾ ಸಿರೋಸ್ ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಕಿಯಾ ಸಿರೋಸ್ ಆರಂಭಿಕ ಬೆಲೆಯು ರೂ 9 ಲಕ್ಷದಿಂದ (ಎಕ್ಸ್ ಶೋ ರೂಂ) ಶುರುವಾಗುವ ನಿರೀಕ್ಷೆಯಿದೆ. ಇದು ಭಾರತದಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿರುವುದಿಲ್ಲ.
ನಿರಂತರ ಆಟೋಮೋಟಿವ್ ಅಪ್‌ಡೇಟ್‌ಗಳಿಗಾಗಿ ಕಾರ್‌ದೇಖೋ ವಾಟ್ಸ್ಆಪ್ ಚಾನೆಲ್ ಅನ್ನು ಫಾಲೋ ಮಾಡಿ
0 out of 0 found this helpful