• English
  • Login / Register

ಒಂದು ವರ್ಷ ಪೂರೈಸಿದ ಹೊಸ Maruti Grand Vitara SUV: ಇಲ್ಲಿದೆ ಹಿನ್ನೋಟ

ಮಾರುತಿ ಗ್ರಾಂಡ್ ವಿಟರಾ ಗಾಗಿ rohit ಮೂಲಕ ಸೆಪ್ಟೆಂಬರ್ 28, 2023 07:44 am ರಂದು ಪ್ರಕಟಿಸಲಾಗಿದೆ

  • 48 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ SUV ಯ ಬೆಲೆಯು ರೂ. 34,000 ದಷ್ಟು ಹೆಚ್ಚಿದ್ದು, ಕಳೆದ ಒಂದು ವರ್ಷದಲ್ಲಿ ಮೂರು ಬಾರಿ ಹಿಂದಕ್ಕೆ ಕರೆದ ವಾಹನಗಳ ಪೈಕಿ ಇದು ಸಹ ಸೇರಿದೆ 

Maruti Grand Vitara

2022ರ ಸೆಪ್ಟೆಂಬರ್‌ ತಿಂಗಳಿನಲ್ಲಿ, ಕಾಂಪಾಕ್ಟ್‌ SUV ವಿಭಾಗದಲ್ಲಿ ಮಾರುತಿ ಸಂಸ್ಥೆಯ ಎರಡನೇ ಪ್ರಯತ್ನದ ಫಲವಾಗಿ ʻಗ್ರಾಂಡ್‌ ವಿಟಾರʼ ಎಂಬ ಹೆಸರಿನ ಪುನರುತ್ಥಾನವಾಯಿತು.  ಮಾರುತಿ ಗ್ರಾಂಡ್‌ ವಿಟಾರ ಕಾರು, ಹ್ಯುಂಡೈ ಕ್ರೆಟಾ ಕಾರಿನ ಪ್ರಬಲ ಪ್ರತಿಸ್ಪರ್ಧಿಯಾಗಿ ಮೂಡಿ ಬಂದು, ಹಳೆಯದಾಗುತ್ತಾ ಬಂದ S-ಕ್ರಾಸ್‌ ಮಾದರಿಯ ಸ್ಥಾನವನ್ನು ಆಕ್ರಮಿಸಿತು ಹಾಗೂ ಈ ಕಾರು ತಯಾರಕ ಸಂಸ್ಥೆಯ ನೆಕ್ಸಾ ಸಾಲಿನಲ್ಲಿ ಮಾರುತಿ ಫ್ರಾಂಕ್ಸ್‌ ಗಿಂತ ಮೇಲಿನ ಸ್ಥಾನವನ್ನು ಪಡೆದಿದೆ. ಈ SUV ಯು ಬಿಡುಗಡೆಯ ನಂತರ ಒಂದು ವರ್ಷವನ್ನು ಪೂರ್ಣಗೊಳಿಸಿದ್ದು, ಈಗ ಮಾರುಕಟ್ಟೆಯಲ್ಲಿ ಇದರ ಸ್ಥಿತಿಗತಿಯು ಹೇಗಿದೆ ಎಂಬುದನ್ನು ನೋಡೋಣ:

ಬೆಲೆಗಳಲ್ಲಿ ಹೆಚ್ಚಳ

 

     
 

ವೇರಿಯಂಟ್‌

 

ಬಿಡುಗಡೆಯ ಸಂದರ್ಭದ ಬೆಲೆ (ಸೆಪ್ಟೆಂಬರ್ 2022)

 

ಪ್ರಸ್ತುತ ಬೆಲೆ (ಸೆಪ್ಟೆಂಬರ್ 2023)

 

ವ್ಯತ್ಯಾಸ

ಮೈಲ್ಡ್-ಹೈಬ್ರೀಡ್

     

ಸಿಗ್ಮಾ MT

ರೂ 10.45 ಲಕ್ಷ

ರೂ 10.70 ಲಕ್ಷ

ರೂ. 25,000

ಡೆಲ್ಟಾ MT

ರೂ 11.90 ಲಕ್ಷ

ರೂ 12.10 ಲಕ್ಷ

ರೂ. 20,000

ಡೆಲ್ಟಾ AT

ರೂ 13.40 ಲಕ್ಷ

ರೂ 13.60 ಲಕ್ಷ

ರೂ. 20,000

ಝೀಟಾ MT

ರೂ 13.89 ಲಕ್ಷ

ರೂ 13.91 ಲಕ್ಷ

ರೂ. 2,000

ಝೀಟಾ AT

ರೂ 15.39 ಲಕ್ಷ

ರೂ 15.41 ಲಕ್ಷ

ರೂ. 2,000

ಆಲ್ಫಾ MT

ರೂ 15.39 ಲಕ್ಷ

ರೂ 15.41 ಲಕ್ಷ

ರೂ. 2,000

ಆಲ್ಫಾ AT

ರೂ 16.89 ಲಕ್ಷ

ರೂ 16.91 ಲಕ್ಷ

ರೂ. 2,000

ಆಲ್ಫಾ AWD MT

ರೂ 16.89 ಲಕ್ಷ

ರೂ 16.91 ಲಕ್ಷ

ರೂ. 2,000

ಸ್ಟ್ರಾಂಗ್-ಹೈಬ್ರೀಡ್

     

ಝೀಟಾ+ e-CVT

ರೂ 17.99 ಲಕ್ಷ

ರೂ 18.33 ಲಕ್ಷ

ರೂ. 34,000

ಆಲ್ಫಾ+ e-CVT

ರೂ 19.49 ಲಕ್ಷ

ರೂ 19.83 ಲಕ್ಷ

ರೂ. 34,000

ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್-ಶೋರೂಂ ಬೆಲೆಗಳಾಗಿವೆ

ಗ್ರಾಂಡ್‌ ವಿಟಾರ ಸಂಸ್ಥೆಯು ಬಿಡುಗಡೆಯ ಸಂದರ್ಭದಲ್ಲಿ ಹೊಂದಿದ್ದ ಬೆಲೆಗೆ ಹೋಲಿಸಿದರೆ, ಈ SUV ಯ ಬೆಲೆಯು ರೂ. 25,000 ದಷ್ಟು ಹೆಚ್ಚಳವನ್ನು ಕಂಡಿದೆ. ಇದರ ಲೋವರ್‌ ಸ್ಪೆಕ್‌ ಮೈಲ್ಡ್‌ ಹೈಬ್ರೀಡ್‌ ವೇರಿಯಂಟ್‌ ಗಳಲ್ಲಿ ರೂ. 20,000 ದಷ್ಟು ಹೆಚ್ಚಳ ಉಂಟಾಗಿದ್ದರೆ ಸ್ಟ್ರಾಂಗ್‌ ಹೈಬ್ರೀಡ್‌ ವೇರಿಯಂಟ್‌ ಗಳಲ್ಲಿ ರೂ. 34,000 ದಷ್ಟು ಏರಿಕೆ ಉಂಟಾಗಿದೆ. 

CNG ಮತ್ತು ಬ್ಲ್ಯಾಕ್‌ ಎಡಿಷನ್‌ ನ ಬಿಡುಗಡೆ

ಇದರ CNG ವೇರಿಯಂಟ್‌ ಗಳು (2023ರ ಆರಂಭದಲ್ಲಿ ಬಿಡುಗಡೆ ಮಾಡಲಾದ), ಇದನ್ನು ಈ ವಿಭಾಗದಲ್ಲಿ ಬದಲಿ ಇಂಧನ ಆಯ್ಕೆಯನ್ನು ಹೊಂದಿರುವ ಮೊದಲ ಮಾದರಿಯನ್ನಾಗಿಸಿವೆ.  ಇದನ್ನು ಈ SUV ಯ ಮಿಡ್‌ ಸ್ಪೆಕ್‌ ಡೆಲ್ಟಾ ಮತ್ತು ಝೀಟಾ ಟ್ರಿಮ್‌ ಗಳಲ್ಲಿ ಬಿಡುಗಡೆ ಮಾಡಲಾಗಿದೆ.

ವೇರಿಯಂಟ್‌

ಬಿಡುಗಡೆಯ ಸಂದರ್ಭದ ಬೆಲೆ (ಜನವರಿ 2023)

ಪ್ರಸ್ತುತ ಬೆಲೆ (ಸೆಪ್ಟೆಂಬರ್ 2023)

ವ್ಯತ್ಯಾಸ

ಡೆಲ್ಟಾ CNG

ರೂ 12.85 ಲಕ್ಷ

ರೂ 13.05 ಲಕ್ಷ

ರೂ. 20,000

ಝೀಟಾ CNG

ರೂ 14.84 ಲಕ್ಷ

ರೂ 14.86 ಲಕ್ಷ

ರೂ. 2,000

Maruti Grand Vitara CNG

ಸಾಮಾನ್ಯ ಪೆಟ್ರೋಲ್‌ ವೇರಿಯಂಟ್‌ ಗಳಿಗೆ ಹೋಲಿಸಿದರೆ, CNG ಗಳಿಗೆ ರೂ. ಒಂದು ಲಕ್ಷದಷ್ಟು ಹೆಚ್ಚಿನ ಬೆಲೆಯನ್ನು ಪಾವತಿಸಬೇಕು.

Maruti Grand Vitara Black Edition

ಮಾರುತಿ ಸಂಸ್ಥೆಯು ಒಂದಷ್ಟು ಅವಧಿಗೆ ಈ SUV ಯ ಬ್ಲ್ಯಾಕ್‌ ಎಡಿಷನ್‌ ಅನ್ನು ಸಹ ಬಿಡುಗಡೆ ಮಾಡಿದ್ದು, ಇದನ್ನು ಅಟೋ ಎಕ್ಸ್ಪೋ 2023ರಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಇದು ಗ್ರಾಂಡ್‌ ವಿಟಾರ ಕಾರಿಗೆ ತಾಜಾ ಕಪ್ಪು ಛಾಯೆಯನ್ನು ಪರಿಚಯಿಸಿತ್ತು ಹಾಗೂ ಕ್ರೋಮ್‌ ಎಲಿಮೆಂಟ್‌ ಗಳಿಗೆ ಮ್ಯಾಟ್‌ ಸಿಲ್ವರ್‌ ಫಿನಿಶ್‌ ಅನ್ನು ನೀಡಿತ್ತು. ಅಲ್ಲದೆ ರೂಫ್‌ ರೇಲ್‌ ಮತ್ತು ಅಲೋಯ್‌ ವೀಲ್‌ ಗಳಿಗೆ ಬ್ಲ್ಯಾಕ್‌ ಟ್ರೀಟ್ಮೆಂಟ್‌ ಲಭ್ಯವಾಗಿತ್ತು. ಈ SUVಯ ಬ್ಲ್ಯಾಕ್‌ ಎಡಿಷನ್‌, ಹೈಯರ್‌ ಸ್ಪೆಕ್‌ ಝೀಟಾ, ಝೀಟಾ+, ಆಲ್ಫಾ ಮತ್ತು ಆಲ್ಫಾ+ ವೇರಿಯಂಟ್‌ ಗಳಲ್ಲಿ ದೊರೆಯುತ್ತಿತ್ತು.

 ಸುರಕ್ಷಾ ಸೌಲಭ್ಯದಲ್ಲಿ ಸಣ್ಣ ಪರಿಷ್ಕರಣೆ

ಈ ಕಾರು ತಯಾರಕ ಸಂಸ್ಥೆಯು 2023ರ ಜುಲೈ ತಿಂಗಳಿನಲ್ಲಿ ಈ SUV ಯ ಸ್ಟ್ರಾಂಗ್‌ ಹೈಬ್ರೀಡ್‌ ವೇರಿಯಂಟ್‌ ಗಳಿಗೆ ʻಅಕೋಸ್ಟಿಕ್‌ ವೆಹಿಕಲ್‌ ಅಲರ್ಟಿಂಗ್‌ ಸಿಸ್ಟಂʼ ಅಥವಾ AVAS ಅನ್ನು ಪರಿಚಯಿಸುವ ಮೂಲಕ ಸುರಕ್ಷಾ ಸೌಲಭ್ಯದಲ್ಲಿ ಸಣ್ಣದಾದ ಬದಲಾವಣೆಯನ್ನು ಮಾಡಿತ್ತು. ಇದು EV ಮೋಡ್‌ ನಲ್ಲಿ ಸದ್ದಿಲ್ಲದೆ ಕಾರ್ಯ ನಿರ್ವಹಿಸುವಾಗ ಗ್ರಾಂಡ್‌ ವಿಟಾರ ಹೈಬ್ರೀಡ್‌ ವಾಹನದ ಸುತ್ತ ಇರುವ ಜನರನ್ನು ಎಚ್ಚರಿಸುತ್ತದೆ.

Maruti Grand Vitara cabin

ಈ SUV ಯ ಸಾಧನಗಳ ಪಟ್ಟಿಯಲ್ಲಿ ಯಾವುದೇ ಇತರ ಬದಲಾವಣೆಗಳನ್ನು ಮಾಡಿಲ್ಲ. ಇದು ಇನ್ನೂ ಸಹ 9 ಇಂಚಿನ ಟಚ್‌ ಸ್ಕ್ರೀನ್‌ ಸಿಸ್ಟಂ, ವೈರ್‌ ಲೆಸ್‌ ಫೋನ್‌ ಚಾರ್ಜಿಂಗ್‌, ವೆಂಟಿಲೇಟೆಡ್‌ ಫ್ರಂಟ್‌ ಸೀಟುಗಳು, ಪ್ಯಾನೊರಾಮಿಕ್‌ ಸನ್‌ ರೂಫ್‌ ಮತ್ತು ಹೆಡ್ಸ್‌ ಅಪ್‌ ಡಿಸ್ಪ್ಲೇಯನ್ನು ಹೊಂದಿದೆ. ಇದರ ಸುರಕ್ಷತಾ ಪಟ್ಟಿಯಲ್ಲಿ ಆರು ಏರ್‌ ಬ್ಯಾಗ್‌ ಗಳು, ISOFIX ಚೈಲ್ಡ್‌ ಸೀಟ್‌ ಮೌಂಟ್‌ ಗಳು, ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಪ್ರೋಗ್ರಾಂ (ESP) ಮತ್ತು 360 ಡಿಗ್ರಿ ಕ್ಯಾಮರಾ ಇತ್ಯಾದಿ ಸೇರಿಕೊಂಡಿವೆ.

ಇದನ್ನು ಸಹ ಓದಿರಿ: ಮಾರುತಿ ಗ್ರಾಂಡ್‌ ವಿಟಾರ AWD 3000km ಅವಲೋಕನ

ಈಗಾಗಲೇ ಮೂರು ಬಾರಿ ಹಿಂದಕ್ಕೆ ಕರೆಯಲಾಗಿದೆ

ಮಾರುತಿ ಗ್ರಾಂಡ್‌ ವಿಟಾರ ಕಾರನ್ನು ದುರದೃಷ್ಟವಶಾತ್ 2022ರ ಕೊನೆಯ ಅವಧಿಯಿಂದ ಹಿಡಿದು 2023ರ ಆರಂಭಿಕ ಅವಧಿಯ ತನಕ ವಾಪಸ್‌ ಕರೆಯಲಾಗಿದೆ. ಮೊದಲ ಬಾರಿಗೆ, ಮುಂದಿನ ಸಾಲಿನ ಸೀಟ್‌ ಬೆಲ್ಟ್‌ ಗಳಲ್ಲಿ ಶೋಲ್ಡರ್‌ ಹೈಟ್‌ ಅಡ್ಜಸ್ಟರ್‌ ಅಸೆಂಬ್ಲಿಯ ಚೈಲ್ಡ್‌ ಪಾರ್ಟ್‌ ಗಳಲ್ಲಿ ಸಂಭಾವ್ಯ ಸಮಸ್ಯೆ ಇದ್ದ ಕಾರಣ ಹಿಂದಕ್ಕೆ ಕರೆಯಲಾದ ಒಟ್ಟು 9,125 ಮಾರುತಿ ಕಾರುಗಳ ಪೈಕಿ ಇದು ಸಹ ಒಳಗೊಂಡಿತ್ತು.

Maruti Grand Vitara

2023ರ ಅರಂಭದಲ್ಲಿ ಎರಡನೇ ಹಾಗೂ ಮೂರನೇ ಬಾರಿಗೆ ಈ ಕಾರನ್ನು ಹಿಂದಕ್ಕೆ ಕರೆಯಲಾಗಿತ್ತು. ಎರಡನೇ ಬಾರಿಗೆ,  ತಮ್ಮ ಏರ್‌ ಬ್ಯಾಗ್‌ ಕಂಟ್ರೋಲರ್‌ ಗಳಲ್ಲಿ ಶಂಕಿತ ಸಮಸ್ಯೆಯ ಕಾರಣ ಹಿಂದಕ್ಕೆ ಕರೆಯಲಾದ ಸುಮಾರು 17,000 ಮಾದರಿಗಳಲ್ಲಿ ಈ SUV ಸಹ ಒಳಗೊಂಡಿತ್ತು. ಮೂರನೇ ಬಾರಿಗೆ ರಿಯರ್‌ ಸೀಟ್‌ ಬೆಲ್ಟ್‌ ಮೌಂಟಿಂಗ್‌ ಬ್ರಾಕೆಟ್‌ ಗಳಲ್ಲಿ ಸಂಭಾವ್ಯ ದೋಷದ ಕಾರಣ 11,000 ಕ್ಕೂ ಹೆಚ್ಚಿನ ಕಾರುಗಳನ್ನು ಹಿಂದಕ್ಕೆ ಕರೆಯಲಾಗಿತ್ತು. ಇದರ ಟೊಯೊಟಾ ಪ್ರತಿಸ್ಪರ್ಧಿ ಅರ್ಬನ್‌ ಕ್ರೂಸರ್‌ ಹೈರೈಡರ್‌ ಮಾದರಿಯನ್ನು ಸಹ ಮೂರು ಬಾರಿ ಹಿಂದಕ್ಕೆ ಕರೆಯಲಾಗಿತ್ತು.

ಮಾರಾಟದಲ್ಲಿ ಈವರೆಗಿನ ಸಾಧನೆ

Maruti Grand Vitara

ಮಾರುತಿಯ ಈ ಹೊಸ ಕಾಂಪ್ಯಾಕ್ಟ್‌ SUV ಯು ಇದರ ಬಿಡುಗಡೆಯ ಮೊದಲೇ ಸಾಕಷ್ಟು ಗಮನವನ್ನು ಸೆಳೆದಿದ್ದು, 57,000 ಕ್ಕಿಂತಲೂ ಹೆಚ್ಚಿನ ಬಿಡುಗಡೆಗೆ ಪೂರ್ವದ ಆರ್ಡರ್‌ ಗಳನ್ನು ಪಡೆದಿತ್ತು ಎಂದು ಈ ಕಾರು ತಯಾರಕ ಸಂಸ್ಥೆ ಹೇಳಿಕೊಂಡಿದೆ. ಇದರ ಬೆಲೆಯನ್ನು ಘೋಷಿಸಿದ ನಂತರ, ಇದರ ಒಟ್ಟು ಬುಕಿಂಗ್‌ ಗಳಲ್ಲಿ, ಕಾಲು ಭಾಗದಷ್ಟು ಪಾಲನ್ನು SUV ಯ ಸ್ಟ್ರಾಂಗ್‌ ಹೈಬ್ರೀಡ್‌ ವೇರಿಯಂಟ್‌ ಗಳು ಹೊಂದಿದ್ದವು. ಈ SUV ಯ ಕಳೆದ 6 ತಿಂಗಳುಗಳ ಮಾರಾಟವು ಸುಮಾರು 9,000 ಘಟಕಗಳ ಆಸುಪಾಸಿನಲ್ಲಿ ಇದ್ದು, ಒಟ್ಟು ಮಾರಾಟವು 1 ಲಕ್ಷದ ಸಮೀಪಕ್ಕೆ ತಲುಪಿದೆ. ಈ ವಿಭಾಗದಲ್ಲಿ ಇದು 20 ಶೇಕಡಾದಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದು, ಹ್ಯುಂಡೈ ಕ್ರೆಟಾದ ಹಿಂದಿನ ಸ್ಥಾನದಲ್ಲಿದೆ. ಮಾರುತಿ ಸಂಸ್ಥೆಯು 2023ರ ಆರಂಭದಲ್ಲಿ ಈ ಕಾರಿನ ರಫ್ತನ್ನು ಪ್ರಾರಂಭಿಸಿದ್ದು, ಈ SUV ಯನ್ನು 60 ದೇಶಗಳಿಗೆ ಕಳುಹಿಸಲಿದೆ.

ಸದ್ಯವೇ ಕ್ರ್ಯಾಶ್‌ ಟೆಸ್ಟ್‌ ರೇಟಿಂಗ್

ಭಾರತ್ NCAP (ಹೊಸ ಕಾರು ಮೌಲ್ಯಮಾಪನ ಕಾರ್ಯಕ್ರಮ)ಯನ್ನು ಪರಿಚಯಿಸಿದ ತಕ್ಷಣವೇ ಮಾರುತಿ ಸುಝುಕಿ ಸಂಸ್ಥೆಯು ಸರ್ಕಾರದ ಈ ಉಪಕ್ರಮವನ್ನು ಸ್ವಾಗತಿಸಿದ್ದು, ಮೊದಲ ಗುಂಪಿನಲ್ಲಿಯೇ  ಕನಿಷ್ಠ ಮೂರು ಕಾರುಗಳನ್ನು ಪರೀಕ್ಷೆಗಾಗಿ ಕಳುಹಿಸುವುದಾಗಿ ಹೇಳಿದೆ. ಗ್ರಾಂಡ್‌ ವಿಟಾರ ಕಾರು ಈ ಮೂರರಲ್ಲಿ ಒಂದೆನಿಸಲಿದ್ದು, ಅತ್ಯಂತ ಶಕ್ತಿಶಾಲಿ ಕಾಂಪ್ಯಾಕ್ಟ್‌ SUV ಕಾರುಗಳಲ್ಲಿ ತಾನೂ ಒಂದು ಎಂಬುದಾಗಿ ಸಾಬೀತುಪಡಿಸುವುದಕ್ಕಾಗಿ ತನ್ನದೇ ಆದ ಕ್ರ್ಯಾಶ್‌ ಟೆಸ್ಟ್‌ ರೇಟಿಂಗ್‌ ಅನ್ನು ಪಡೆಯಲಿದೆ.

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಮಾರುತಿ ಗ್ರಾಂಡ್‌ ವಿಟಾರ ಆನ್‌ ರೋಡ್‌ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Maruti ಗ್ರಾಂಡ್ ವಿಟರಾ

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience