• English
  • Login / Register

ಹೊಸ Maruti Swift ಬಿಡುಗಡೆಗೆ ದಿನಾಂಕ ಫಿಕ್ಸ್‌

ಮಾರುತಿ ಸ್ವಿಫ್ಟ್ ಗಾಗಿ rohit ಮೂಲಕ ಮೇ 06, 2024 07:45 pm ರಂದು ಪ್ರಕಟಿಸಲಾಗಿದೆ

  • 30 Views
  • ಕಾಮೆಂಟ್‌ ಅನ್ನು ಬರೆಯಿರಿ

ಹೊಸ ಮಾರುತಿ ಸ್ವಿಫ್ಟ್ ಮೇ 9 ರಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ ಮತ್ತು 11,000 ರೂ.ಗೆ ಬುಕಿಂಗ್ ಅನ್ನು ತೆರೆಯಲಾಗಿದೆ

2024 Maruti Swift launch on May 9

  • ಹೊಸ ಸ್ವಿಫ್ಟ್‌ನ ವಿನ್ಯಾಸವು ನವೀಕರಿಸಿದ ಗ್ರಿಲ್, ತೀಕ್ಷ್ಣವಾದ ಲೈಟಿಂಗ್‌ ಸೆಟಪ್ ಮತ್ತು ತಾಜಾ ಅಲಾಯ್‌ವೀಲ್‌ಗಳನ್ನು ಒಳಗೊಂಡಿದೆ.
  • ಇದರ ಕ್ಯಾಬಿನ್ ಈಗ ದೊಡ್ಡ 9-ಇಂಚಿನ ಟಚ್‌ಸ್ಕ್ರೀನ್, ನವೀಕರಿಸಿದ ಕ್ಲೈಮೇಟ್‌ ಕಂಟ್ರೋಲ್‌ ಪ್ಯಾನೆಲ್‌ ಮತ್ತು ನಯವಾದ ಎಸಿ ವೆಂಟ್‌ಗಳನ್ನು ಹೊಂದಿದೆ.
  • ಆಟೋ ಎಸಿ, ಆರು ಏರ್‌ಬ್ಯಾಗ್‌ಗಳು ಮತ್ತು ಬಹುಶಃ ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಅನ್ನು ಒಳಗೊಂಡಿರುವ ಇತರ ಸೌಕರ್ಯಗಳು ಇರಬಹುದು.
  • ಹೊಸ 1.2-ಲೀಟರ್ Z ಸರಣಿಯ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಲು; 5-ವೇಗದ ಮ್ಯಾನುಯಲ್‌ ಮತ್ತು ಎಎಮ್‌ಟಿ ಆಯ್ಕೆಗಳನ್ನು ಪಡೆಯುವ ನಿರೀಕ್ಷೆಯಿದೆ.
  • ಬೆಲೆಗಳು 6.5 ಲಕ್ಷ ರೂ.ನಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗಬಹುದು.

 ಇದು ಅಧಿಕೃತ ಮಾಹಿತಿ! ನಾಲ್ಕನೇ ತಲೆಮಾರಿನ ಮಾರುತಿ ಸುಜುಕಿ ಸ್ವಿಫ್ಟ್ ಭಾರತದಲ್ಲಿ ಇದೇ ತಿಂಗಳ 9 ರಂದು ಮಾರುಕಟ್ಟೆಗೆ ಪ್ರವೇಶಿಸಲಿದೆ. ಈ ಕಾರು ತಯಾರಕರು ಇತ್ತೀಚೆಗೆ ಹೊಸ ಹ್ಯಾಚ್‌ಬ್ಯಾಕ್‌ಗಾಗಿ ಆನ್‌ಲೈನ್ ಮತ್ತು ಅದರ ಡೀಲರ್‌ಶಿಪ್‌ಗಳಲ್ಲಿ ರೂ 11,000 ಗೆ ಬುಕ್ಕಿಂಗ್‌ಗಳನ್ನು ತೆರೆದಿದ್ದಾರೆ. ಜನಪ್ರಿಯ ಮಾರುತಿ ಹ್ಯಾಚ್‌ಬ್ಯಾಕ್‌ನ ಬುಕಿಂಗ್‌ ಲಿಸ್ಟ್‌ನಲ್ಲಿ ನಿಮ್ಮ ಹೆಸರನ್ನು ಸೇರಿಸುವ ಮೊದಲು ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ:

ವಿನ್ಯಾಸದ ವಿವರಗಳ ಕುರಿತು

2024 Maruti Swift

ಹೊಸ ಸ್ವಿಫ್ಟ್‌ನ ಒಂದು ನೋಟವು ಹ್ಯಾಚ್‌ಬ್ಯಾಕ್ ಅನ್ನು ತಕ್ಷಣವೇ ಗುರುತಿಸಲು ಸಾಧ್ಯವಾಗುತ್ತದೆ, ಏಕೆಂದರೆ ಅದರ ವಿನ್ಯಾಸವು ಹೊರಹೋಗುವ ಮಾದರಿಯ ಆಪ್‌ಗ್ರೇಡ್‌ ಆಗಿದೆ. ಇದರ ಹೊರಭಾಗದ ಮುಖ್ಯಾಂಶಗಳು ಮೆಶ್ ಮಾದರಿಯೊಂದಿಗೆ ಓವಲ್ ಆಕೃತಿಯ ಗ್ರಿಲ್, ತೀಕ್ಷ್ಣವಾದ ಎಲ್ಇಡಿ ಹೆಡ್‌ಲೈಟ್‌ಗಳು ಮತ್ತು ಎಲ್-ಆಕಾರದ ಎಲ್ಇಡಿ ಡಿಆರ್‌ಎಲ್‌ಗಳನ್ನು ಒಳಗೊಂಡಿವೆ. ಇತರ ಗಮನಾರ್ಹವಾದ ಬಾಹ್ಯ ವಿನ್ಯಾಸದ ಅಂಶಗಳಲ್ಲಿ ಡ್ಯಾಪರ್ ಅಲಾಯ್‌ ವೀಲ್‌ಗಳು ಮತ್ತು ಸುತ್ತುವರಿದ ಎಲ್ಇಡಿ ಟೈಲ್ ಲೈಟ್‌ಗಳು ಸೇರಿವೆ.

ಸಾಕಷ್ಟು ಇಂಟೀರಿಯರ್ ಆಪ್‌ಡೇಟ್‌ಗಳು

2024 Maruti Swift cabin

 ಹೊಸ ಸ್ವಿಫ್ಟ್‌ನ ಕ್ಯಾಬಿನ್ ನಯವಾದ ಎಸಿ ವೆಂಟ್‌ಗಳ ಜೊತೆಗೆ ಲೈಟ್‌ ಮತ್ತು ಡಾರ್ಕ್‌ ಕಲರ್‌ನ ಮೆಟಿರೀಯಲ್‌ಗಳನ್ನು ಬಳಸುತ್ತದೆ ಮತ್ತು ಈ ಹಿಂದಿನ ಮಾದರಿಯಂತೆ ಅದೇ ಸ್ಟೀರಿಂಗ್ ವೀಲ್ ಅನ್ನು ಬಳಸುತ್ತದೆ. ಕೊಡುಗೆಯಲ್ಲಿರುವ ಹೊಸ ವೈಶಿಷ್ಟ್ಯಗಳು ದೊಡ್ಡ 9-ಇಂಚಿನ ಟಚ್‌ಸ್ಕ್ರೀನ್, ಹೊಸ ಬಲೆನೊ ಮತ್ತು ಗ್ರ್ಯಾಂಡ್ ವಿಟಾರಾದಲ್ಲಿ ಕಂಡುಬರುವಂತೆ ಪರಿಷ್ಕೃತ ಕ್ಲೈಮೇಟ್‌ ಕಂಟ್ರೋಲ್‌ ಪ್ಯಾನೆಲ್‌ ಮತ್ತು ಡ್ಯುಯಲ್-ಪಾಡ್ ಅನಲಾಗ್ ಸೆಟಪ್‌ನೊಂದಿಗೆ ನವೀಕರಿಸಿದ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ.

ಬೋರ್ಡ್‌ನಲ್ಲಿ ನಿರೀಕ್ಷಿತ ಇತರ ತಂತ್ರಜ್ಞಾನಗಳೆಂದರೆ ಹೆಡ್-ಅಪ್ ಡಿಸ್‌ಪ್ಲೇ, ಆಟೋ ಎಸಿ, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಒಳಗೊಂಡಿರುತ್ತದೆ. ಸುರಕ್ಷತೆಯ ದೃಷ್ಟಿಯಿಂದ, ಮಾರುತಿಯು ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ (ಪರೀಕ್ಷಾ ಆವೃತ್ತಿಯೊಂದರಲ್ಲಿ ಗಮನಿಸಿದಂತೆ) ಒದಗಿಸುವ ಸಾಧ್ಯತೆಯಿದೆ. ನಾಲ್ಕನೇ ತಲೆಮಾರಿನ ಸ್ವಿಫ್ಟ್‌ನಲ್ಲಿ ಯಾವುದೇ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ವೈಶಿಷ್ಟ್ಯಗಳನ್ನು ನೀಡಲಾಗುತ್ತದೆ ಎಂದು ನಿರೀಕ್ಷಿಸಬೇಡಿ.

ಇದನ್ನೂ ಪರಿಶೀಲಿಸಿ: 2024ರ ಏಪ್ರಿಲ್ ನಲ್ಲಿ ಬಿಡುಗಡೆಯಾದ ಎಲ್ಲಾ ಹೊಸ ಕಾರುಗಳು   

ಪೆಟ್ರೋಲ್‌ ಎಂಜಿನ್‌ ಮಾತ್ರ

 ಮಾರುತಿಯು ಹೊಸ ಸ್ವಿಫ್ಟ್ ಅನ್ನು ತಾಜಾ ಪವರ್‌ಟ್ರೇನ್ ಸೆಟಪ್‌ನೊಂದಿಗೆ ಕೆಳಗೆ ವಿವರಿಸಿದಂತೆ ನೀಡುತ್ತದೆ: 

ವಿಶೇಷತೆಗಳು

1.2-ಲೀಟರ್, 3-ಸಿಲಿಂಡರ್ Z ಸರಣಿ ಪೆಟ್ರೋಲ್ ಎಂಜಿನ್

ಪವರ್‌

82 ಪಿಎಸ್

ಟಾರ್ಕ್‌

112 ಎನ್ಎಂ ವರೆಗೆ

ಗೇರ್‌ಬಾಕ್ಸ್‌*

5-ಸ್ಪೀಡ್ ಮ್ಯಾನುಯಲ್‌, 5-ಸ್ಪೀಡ್ ಎಎಮ್‌ಟಿ

*ನಿರೀಕ್ಷಿತ

ಸ್ವಿಫ್ಟ್ ಜಪಾನ್‌ನಲ್ಲಿ ಮೈಲ್ಡ್‌-ಹೈಬ್ರಿಡ್ ಪವರ್‌ಟ್ರೇನ್ ಮತ್ತು ಆಲ್-ವೀಲ್-ಡ್ರೈವ್ (ಎಡಬ್ಲ್ಯೂಡಿ) ಆವೃತ್ತಿಯ ಆಯ್ಕೆಯನ್ನು ಪಡೆದರೂ, ಈ ಎರಡೂ ಆಯ್ಕೆಗಳನ್ನು ಇಂಡಿಯಾ-ಸ್ಪೆಕ್ ಮೊಡೆಲ್‌ಗಳಲ್ಲಿ ನೀಡಲಾಗುತ್ತಿಲ್ಲ. ಅಲ್ಲದೆ, ಗ್ಲೋಬಲ್-ಸ್ಪೆಕ್ ಸ್ವಿಫ್ಟ್ 5-ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಆಟೋಮ್ಯಾಟಿಕ್‌ ಆಯ್ಕೆಗಳೊಂದಿಗೆ ಬರುತ್ತದೆ, ಆದರೆ ಹ್ಯಾಚ್‌ಬ್ಯಾಕ್ ಅನ್ನು ಹೆಚ್ಚು ಕೈಗೆಟುಕುವಂತೆ ಮಾಡಲು ಸಿವಿಟಿ ಬದಲಿಗೆ 5-ಸ್ಪೀಡ್ ಎಎಮ್‌ಟಿ ಅನ್ನು ಭಾರತ-ಸ್ಪೆಕ್ ಮಾದರಿಯು ಪಡೆಯುವ ಸಾಧ್ಯತೆಯಿದೆ.  

ಇದರ ಬೆಲೆ ಎಷ್ಟಿರಬಹುದು?

2024 Maruti Swift rear

ಹೊಸ ಮಾರುತಿ ಸ್ವಿಫ್ಟ್ ನ ಬೆಲೆಯು 6.5 ಲಕ್ಷ ರೂ.ಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ. ಇದು ಹ್ಯುಂಡೈ ಗ್ರಾಂಡ್ i10 ನಿಯೋಸ್‌ನೊಂದಿಗೆ ತನ್ನ ಪೈಪೋಟಿಯನ್ನು ಮತ್ತೆ ಮುಂದುವರೆಸಲಿದೆ, ಹಾಗೆಯೇ ರೆನಾಲ್ಟ್ ಟ್ರೈಬರ್ ಸಬ್-4ಮೀ ಕ್ರಾಸ್‌ಒವರ್ ಎಮ್‌ಪಿವಿಗೆ ಪರ್ಯಾಯವಾಗಿದೆ.

ಇನ್ನಷ್ಟು ಓದಿ: ಮಾರುತಿ ಸ್ವಿಫ್ಟ್ ಎಎಂಟಿ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Maruti ಸ್ವಿಫ್ಟ್

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience