• English
  • Login / Register

ಕಿಯಾ ಸೆಲ್ಟೋಸ್‌ ಟರ್ಬೊ ಪೆಟ್ರೋಲ್‌ DCT ಕಾರಿನ ನೈಜ ಕಾರ್ಯಕ್ಷಮತೆಯ ಹೋಲಿಕೆ: ಹೊಸತು Vs ಹಳೆಯದು

ಕಿಯಾ ಸೆಲ್ಟೋಸ್ ಗಾಗಿ ansh ಮೂಲಕ ಅಕ್ಟೋಬರ್ 25, 2023 03:42 pm ರಂದು ಪ್ರಕಟಿಸಲಾಗಿದೆ

  • 76 Views
  • ಕಾಮೆಂಟ್‌ ಅನ್ನು ಬರೆಯಿರಿ

ದೊಡ್ಡದಾದ ಟರ್ಬೊ ಪೆಟ್ರೋಲ್‌ ಎಂಜಿನ್‌ ಅನ್ನು ಹೊಂದಿರುವ ಸೆಲ್ಟೋಸ್‌ ಕಾರು ಹೆಚ್ಚು ವೇಗವನ್ನು ಹೊಂದಿದ್ದರೂ, ಹಳೆಯ ಕಾರು ಕಾಲು ಮೈಲಿ ಓಟದಲ್ಲಿ ಮುಂದಿದೆ

Kia Seltos Turbo-petrol DCT Real-world Performance Comparison: New vs Old

2023 ಕಿಯಾ ಸೆಲ್ಟೋಸ್ ಕಾರನ್ನು ಈ ವರ್ಷದ ಆರಂಭದಲ್ಲಿ ಹೊಸ ವಿನ್ಯಾಸ ಮತ್ತು ಸಾಕಷ್ಟು ಹೊಸ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಿದ್ದು, ಅದರ ಪವರ್‌ ಟ್ರೇನ್‌ ಅತ್ಯಂತ ಪ್ರಮುಖ ಬದಲಾವಣೆ ಎನಿಸಿದೆ. ಪರಿಷ್ಕರಣೆಗೆ ಮೊದಲ ಸೆಲ್ಟೋಸ್‌ ಕಾರು 1.4 ಲೀಟರ್‌ ಟರ್ಬೊ ಪೆಟ್ರೋಲ್‌ ಘಟಕದೊಂದಿಗೆ ಬಂದರೆ, ಪರಿಷ್ಕರಣೆಯ ನಂತರ ಇದು 1.5 ಲೀಟರ್‌ ಟರ್ಬೊ ಘಟಕದೊಂದಿಗೆ ಹೊರಬರಲಿದೆ. ಅಟೋಮ್ಯಾಟಿಕ್‌ ಟ್ರಾನ್ಸ್‌ ಮಿಶನ್‌ ಗಳು ಮತ್ತು 7 ಸ್ಪೀಡ್‌ ಡ್ಯುವಲ್‌ ಕ್ಲಚ್‌ ಸೆಟಪ್‌ ಜೊತೆಗೆ ಬರುವ ಈ ಕಾಂಪ್ಯಾಕ್ಟ್‌ SUV ಯ ಎರಡೂ ಆವೃತ್ತಿಗಳ ಕಾರ್ಯಕ್ಷಮತೆಗಳನ್ನು ನಾವು ಪರೀಕ್ಷಿಸಿದ್ದೇವೆ. ಆದರೆ ಫಲಿತಾಂಶಗಳತ್ತ ಕಣ್ಣು ಹಾಯಿಸುವ ಮೊದಲು ಎಂಜಿನ್‌ ವಿವರಗಳನ್ನು ನೋಡೋಣ.

 

ವಿವಿಧ ಟರ್ಬೊ ಎಂಜಿನ್‌ ಗಳು

ವಿವರಗಳು

2023 ಕಿಯಾ ಸೆಲ್ಟೋಸ್

ಪರಿಷ್ಕರಣೆಗೆ ಮೊದಲಿನ ಸೆಲ್ಟೋಸ್

ಎಂಜಿನ್

1.5-ಲೀಟರ್‌ ಟರ್ಬೊ ಪೆಟ್ರೋಲ್

1.4-ಲೀಟರ್‌ ಟರ್ಬೊ ಪೆಟ್ರೋಲ್

ಟ್ರಾನ್ಸ್‌ ಮಿಶನ್

6-ಸ್ಪೀಡ್ iMT/ 7-ಸ್ಪೀಡ್ DCT

6-ಸ್ಪೀಡ್ iMT/ 7-ಸ್ಪೀಡ್ DCT

ಪವರ್

160PS

140PS

ಟಾರ್ಕ್

253Nm

242Nm

 ಪರಿಷ್ಕೃತ ಸೆಲ್ಟೋಸ್‌ ಕಾರು, ಮ್ಯಾನುವಲ್‌ ಟ್ರಾನ್ಸ್‌ ಮಿಶನ್‌ ಬದಲಿಗೆ iMT ಯೊಂದಿಗೆ ದೊಡ್ಡದಾದ ಟರ್ಬೊ ಪೆಟ್ರೋಲ್‌ ಎಂಜಿನ್‌ ಅನ್ನು ಪಡೆಯಲಿದೆ. ಆದರೆ ತಾತ್ವಿಕವಾಗಿ DCT ಆಯ್ಕೆಯು ಅದೇ ಆಗಿದ್ದು, ಇದನ್ನು ನಾವು ಪರೀಕ್ಷೆಗೆ ಒಳಪಡಿಸಿದ್ದೇವೆ. 

 ಇದನ್ನು ಸಹ ಓದಿರಿ: ಮರೆಮಾಚಿದ ಸ್ಥಿತಿಯಲ್ಲಿ ಕಾಣಿಸಿಕೊಂಡ ಕಿಯಾ ಸೋನೆಟ್‌ ಫೇಸ್‌ ಲಿಫ್ಟ್‌ ಕಾರಿನ ಹೊರಾಂಗಣ; ಆನ್ಲೈನ್‌ ನಲ್ಲಿ ಬಿತ್ತರಗೊಂಡ ಚಿತ್ರಗಳು

ನಾವು ಮೊದಲಿಗೆ ಕಿಯಾ ಕಾರೆನ್ಸ್‌ ವಾಹನದಲ್ಲಿ ನೋಡಿದ ಹೊಸ ಎಂಜಿನ್, 20PS‌ ನಷ್ಟು ಹೆಚ್ಚಿನ ಶಕ್ತಿ ಮತ್ತು 11Nm ನಷ್ಟು ಹೆಚ್ಚಿನ ಟಾರ್ಕ್‌ ಅನ್ನು ಉಂಟು ಮಾಡುತ್ತದೆ. ಈ ಹೆಚ್ಚುವರಿ ಕಾರ್ಯಕ್ಷಮತೆಯು 2023 ಕಿಯಾ ಸೆಲ್ಟೋಸ್ ಕಾರಿನಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ನೋಡೋಣ.

 

ಕಾರ್ಯಕ್ಷಮತೆ: ವೇಗವರ್ಧನೆ

2023 Kia Seltos

ಪರೀಕ್ಷೆಗಳು

2023 ಕಿಯಾ ಸೆಲ್ಟೋಸ್

ಪರಿಷ್ಕರಣೆಗೆ ಮೊದಲಿನ ಕಿಯಾ ಸೆಲ್ಟೋಸ್

0-100kmph

9.24 ಸೆಕೆಂಡುಗಳು

9.51 ಸೆಕೆಂಡುಗಳು

ಕಾಲು ಮೈಲಿ

135.15kmph ನಲ್ಲಿ 17.19 ಸೆಕೆಂಡುಗಳು 

135.44kmph ನಲ್ಲಿ 17.02 ಸೆಕೆಂಡುಗಳು

ಕಿಕ್‌ ಡೌನ್ (20-80kmph)

5.18 ಸೆಕೆಂಡುಗಳು

5.47 ಸೆಕೆಂಡುಗಳು

ಹೊಸ ಎಂಜಿನ್‌, ಕಿಯಾ ಸೆಲ್ಟೋಸ್‌ ಕಾರಿಗೆ ಹೆಚ್ಚು ವೇಗವನ್ನು ನೀಡಿದೆ. 0-100kmph ಸ್ಪ್ರಿಂಟ್‌ ಮತ್ತು ಕಿಕ್‌ ಡೌನ್‌ ನಲ್ಲಿ, ಪರಿಷ್ಕೃತ ಸೆಲ್ಟೋಸ್‌ ಕಾರು, ಹಿಂದಿನ ಆವೃತ್ತಿಗಿಂತ ಹೆಚ್ಚಿನ ವೇಗವನ್ನು ಹೊಂದಿದೆ. ಆದರೆ, ಕಾಲು ಮೈಲಿಯನ್ನು ಪೂರ್ಣಗೊಳಿಸುವಲ್ಲಿ 1.4 ಲೀಟರ್‌ ಘಟಕವನ್ನು ಹೊಂದಿರುವ ಹಳೆಯ ಸೆಲ್ಟೋಸ್‌ ಕಾರು ಹೆಚ್ಚಿನ ವೇಗವನ್ನು ಹೊಂದಿತ್ತು.

 

ಕಾರ್ಯಕ್ಷಮತೆ: ಬ್ರೇಕಿಂಗ್

Pre-facelift Kia Seltos

ಪರೀಕ್ಷೆಗಳು

2023 ಕಿಯಾ ಸೆಲ್ಟೋಸ್

ಪರಿಷ್ಕರಣೆಗೆ ಮೊದಲಿನ ಕಿಯಾ ಸೆಲ್ಟೋಸ್

100-0kmph

39.67 ಮೀಟರ್

40.93 ಮೀಟರ್

80-0kmph

23.92 ಮೀಟರ್

25.51 ಮೀಟರ್

100kmph‌ ನಿಂದ ಹಠಾತ್‌ ಆಗಿ ನಿಲ್ಲಿಸುವ ವಿಚಾರ ಬಂದಾಗ, ಇವೆರಡು ಕಾರುಗಳ ನಡುವಿನ ನಿಲುಗಡೆಯ ಅಂತರವು ಕೇವಲ 1 ಮೀಟರ್‌ ಆಗಿತ್ತು. 80kmph ನಿಂದ 0 ಪರೀಕ್ಷೆಯಲ್ಲಿ ಅದೇ ಫಲಿತಾಂಶ  ಕಂಡುಬಂದಿತು. ಹೊಸ ಸೆಲ್ಟೋಸ್‌ ಕಾರಿನ ನಿಲುಗಡೆ ಅಂತರವು ಸುಮಾರು 1.5 ಮೀಟರ್‌ ನಷ್ಟು ಕಡಿಮೆ ಇತ್ತು. ಪರೀಕ್ಷೆಗೆ ಒಳಪಡಿಸಿದ ಎರಡೂ ಘಟಕಗಳು ಡಿಸ್ಕ್‌ ಬ್ರೆಕ್‌ ಗಳನ್ನು ಹೊಂದಿದ್ದರೂ, ಟೈರ್‌ ಗಳಲ್ಲಿ ವ್ಯತ್ಯಾಸವಿತ್ತು. ಪರಿಷ್ಕರಣೆಗೆ ಮೊದಲ ಸೆಲ್ಟೋಸ್‌ ಕಾರು 215/60 ರಬ್ಬರ್‌ ನಲ್ಲಿ ಸುತ್ತಿದ 17 ಇಂಚಿನ ಅಲೋಯ್‌ ಗಳನ್ನು ಹೊಂದಿದ್ದರೆ ಪರಿಷ್ಕೃತ SUV ಯು 215/55 ಟೈರ್‌ ಗಳ 18 ಇಂಚಿನ ಅಲೋಯ್‌ ಗಳಲ್ಲಿ ಚಲಿಸಿತು.

ಇದನ್ನು ಸಹ ಓದಿರಿ: ಭಾರತದಲ್ಲಿ ಜಾಗತಿಕ ಗುಣಮಟ್ಟದ Evಗಳನ್ನು ತಯಾರಿಸಲಿರುವ ಕಿಯಾ ಸಂಸ್ಥೆ, ತಲೆ ಎತ್ತಲಿರುವ EV ಎಕ್ಸ್‌ ಕ್ಲೂಸಿವ್‌ ಮಳಿಗೆಗಳು

ಹೊಸ ಎಂಜಿನ್‌ ಜೊತೆಗೆ ಬರುವ 2023 ಸೆಲ್ಟೋಸ್‌ ಕಾರು ಹಳೆಯ ಕಾರಿಗಿಂತಲೂ ಮಿಗಿಲಾದ ಕಾರ್ಯಕ್ಷಮತೆಯನ್ನು ತೋರಿದರೆ, 1.4 ಲೀಟರ್‌ ಎಂಜಿನ್‌ ನ ಹಳೆಯ ವಾಹನವು ಕಾಲು ಮೈಲಿ ಓಟದಲ್ಲಿ ಮಾತ್ರವೇ ಉತ್ತಮ ಸಾಧನೆ ಮಾಡಿತು. ಆದರೆ ಈ SUV ಗಳನ್ನು ಅಕ್ಕಪಕ್ಕದಲ್ಲಿ ಓಡಿಸಿ ಪರೀಕ್ಷಿಸಿಲ್ಲ.

ಬೆಲೆಗಳಲ್ಲಿ ವ್ಯತ್ಯಾಸ

Kia Seltos

ವೇರಿಯಂಟ್‌ ಗಳು

2023 ಕಿಯಾ ಸೆಲ್ಟೋಸ್

ಪರಿಷ್ಕರಣೆಗೆ ಮೊದಲಿನ ಕಿಯಾ ಸೆಲ್ಟೋಸ್

ವ್ಯತ್ಯಾಸ

X-ಲೈನ್ ಟರ್ಬೊ DCT

ರೂ 20.30 ಲಕ್ಷ

ರೂ 18.70 ಲಕ್ಷ

+ ರೂ 1.6 ಲಕ್ಷ


  * ಎಕ್ಸ್‌ - ಶೋರೂಂ ಬೆಲೆಗಳು

ನಮ್ಮ ಪರೀಕ್ಷೆಗಾಗಿ ಹೊಸ ಮತ್ತು ಹಳೆಯ ಕಿಯಾ ಸೆಲ್ಸೋಟ್‌ ಮಾದರಿಗಲ ಟಾಪ್‌ ಸ್ಪೆಕ್‌ ವೇರಿಯಂಟ್‌ ಗಳನ್ನು ಬಳಸಿದೆವು. ಅದೇ X-ಲೈನ್ DCT‌ ವೇರಿಯಂಟ್‌ ಗಾಗಿ ನೀವು ರೂ. 1.6 ಲಕ್ಷದಷ್ಟು ಹೆಚ್ಚಿನ ಮೊತ್ತವನ್ನು ಪಾವತಿಸಬೇಕಾಗಿದ್ದು, ಉತ್ತಮ ಗುಣವೈಶಿಷ್ಟ್ಯಗಳು, ಹೊಸ ವಿನ್ಯಾಸ ಮತ್ತು ಸುಧಾರಿತ ಕಾರ್ಯಕ್ಷಮತೆಯ ಮೂಲಕ ಇದು ರಸ್ತೆಗಿಳಿಯಲಿದೆ.

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಸೆಲ್ಟೋಸ್‌ ಡೀಸೆಲ್

ಅವರಿಂದ ಪ್ರಕಟಿಸಲಾಗಿದೆ
was this article helpful ?

Write your Comment on Kia ಸೆಲ್ಟೋಸ್

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience