ಈ ಸೆಗ್‌ಮೆಂಟ್‌ನಲ್ಲೇ ಮೊದಲ ಫೀಚರ್‌ಗಳೊಂದಿಗೆ ಬರ್ತಿದೆ ಹೊ ಸ-ಪೀಳಿಗೆಯ ಹ್ಯುಂಡೈ ವರ್ನಾ
ಹುಂಡೈ ವೆರ್ನಾ ಗಾಗಿ shreyash ಮೂಲಕ ಮಾರ್ಚ್ 11, 2023 08:35 pm ರಂದು ಪ್ರಕಟಿಸಲಾಗಿದೆ
- 21 Views
- ಕಾಮೆಂಟ್ ಅನ್ನು ಬರೆಯಿರಿ
ಹ್ಯುಂಡೈ ತನ್ನ ಮುಂದಿನ-ಪೀಳಿಗೆ ಕಾಂಪ್ಯಾಕ್ಟ್ ಸೆಡಾನ್ ಅನ್ನು ಮಾರ್ಚ್ 21 ರಂದು ಬಿಡುಗಡೆಗೊಳಿಸಲು ಸಿದ್ಧವಾಗಿದೆ.
- 2023 ವರ್ನಾ, ಈ ವಿಭಾಗದಲ್ಲೇ ಮೊದಲ ಬಾರಿಗೆ ವೆಂಟಿಲೇಟೆಡ್ ಮತ್ತ ಹೀಟೆಡ್ ಫ್ರಂಟ್ ಸೀಟುಗಳನ್ನು ನೀಡುತ್ತಿದೆ.
- ಇನ್‌ಫೊಟೈನ್‌ಮೆಂಟ್ ಮತ್ತು ಆಟೋ ಎಸಿ ಸಿಸ್ಟಮ್‌ಗಾಗಿ ಬದಲಾಯಿಸಬಹುದಾದ ಟಚ್ ಕಂಟ್ರೋಲ್ ಕನ್ಸೋಲ್ ಅನ್ನು ಪಡೆದಿದೆ.
- ಈ ಕಾಂಪ್ಯಾಕ್ಟ್ ಸೆಡಾನ್‌ಗೆ ಎರಡು ಇಂಜಿನ್ ಆಯ್ಕೆಗಳನ್ನು ನೀಡಲಾಗಿದೆ: ಒಂದು 1.5-ಲೀಟರ್ ಟರ್ಬೋ ಪೆಟ್ರೋಲ್ ಮತ್ತು 1.5-ಲೀಟರ್ ನ್ಯಾಚುರಲಿ ಆ್ಯಸ್ಪಿರೇಟೆಡ್ ಪೆಟ್ರೋಲ್.
- ರೂ 25,000 ಗಳ ಮುಂಗಡ ಮೊತ್ತಕ್ಕೆ ಇದರ ಬುಕಿಂಗ್‌ಗಳನ್ನು ಈಗಾಗಲೇ ಆರಂಭಿಸಲಾಗಿದೆ.
ಬಿಡುಗಡೆಗೆ ಮುಂಚಿತವಾಗಿ ಅಧಿಕೃತ ಟೀಸರ್‌ಗಳು ಮತ್ತು ಸ್ಪೈಶಾಟ್‌ಗಳ ಮೂಲಕ 2023 ಹ್ಯುಂಡೈ ವರ್ನಾ ಕುರಿತಾದ ಹಲವಾರು ವಿವರಗಳು ದೊರಕಿವೆ. ಈಗ, ಈ ವಾಹನ ತಯಾರಕರು ಹೊಸ-ಜನರೇಷನ್ ಸೆಡಾನ್‌ನಲ್ಲಿ ಹೆಚ್ಚಿನ ಇಂಟಿರಿಯರ್ ಫೀಚರ್‌ಗಳನ್ನು ಬಹಿರಂಗಪಡಿಸಿದ್ದಾರೆ ಮಾತ್ರವಲ್ಲದೇ ಈ ಹಿಂದೆ ಗುರುತಿಸಲಾದ ವಿವರಗಳನ್ನು ದೃಢಪಡಿಸಿದ್ದಾರೆ.
ಇನ್‌ಫೋಟೈನ್‌ಮೆಂಟ್ ಮತ್ತು ಕ್ಲೈಮೇಟ್ ಕಂಟ್ರೋಲ್ ವಿವರಣೆಗಳು
ಹೊಸ ಟೀಸರ್‌ನಲ್ಲಿ 10.25-ಇಂಚಿನ ಇನ್‌ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಗಾಗಿ ಸಂಯೋಜಿತ ಸ್ಕ್ರೀನ್ ಅನ್ನು ನೋಡಬಹುದು. ನಾವು ಹಿಂದಿನ ಟೀಸರ್‌ನಲ್ಲಿ ಗುರುತಿಸಿದಂತೆಯೇ ಇದು ಬೋಸ್‌ನ ಎಂಟು-ಸ್ಪೀಕರ್ ಸೌಂಡ್ ಸಿಸ್ಟಮ್ ಒಳಗೊಂಡಿರುವುದನ್ನು ಖಚಿತಪಡಿಸಿದೆ.
ಇದನ್ನೂ ಗಮನಿಸಿ: ತವರಿನಲ್ಲಿ ಕ್ರ್ಯಾಶ್ ಪರೀಕ್ಷೆಗೆ ಒಳಗಾದ ಹೊಸ ಹ್ಯುಂಡೈ ವರ್ನಾ- ಇಲ್ಲಿದೆ ಫಲಿತಾಂಶ
ನಾವು ಹೊಸ ಡ್ಯಾಶ್‌ಬೋರ್ಡ್ ಅನ್ನು ಸಂಪೂರ್ಣವಾಗಿ ನೋಡದಿದ್ದರೂ, ಹೊಸ ಟಚ್-ಬೇಸ್‌ಡ್ ಕ್ಲೈಮೆಟ್ ಕಂಟ್ರೋಲ್ ಪ್ಯಾನೆಟ್ ಅನ್ನು ಹತ್ತಿರದಿಂದ ನೋಡಿದ್ದೇವೆ, ಇದು ಎರಡೂ ಒಂದು ಬದಿಗೆ ಭೌತಿಕ ಡಯಲ್‌ಗಳನ್ನು ಹೊಂದಿರುವ ಇನ್‌ಫೋಟೈನ್‌ಮೆಂಟ್ ಕಂಟ್ರೋಲ್ ಅನ್ನೂ ಹಂಚಿಕೊಂಡಿದೆ. ಇದು ಪ್ರೀಮಿಯಂ ಸೆಂಟ್ರಲ್ ಕನ್ಸೋಲ್ ವಿನ್ಯಾಸವಾಗಿದ್ದು ಕಿಯಾ EV6 ನಲ್ಲಿಯೂ ಕಂಡುಬರುತ್ತದೆ.
ಇದನ್ನೂ ಓದಿ: ತನ್ನ ಹೊಸ-ಜನರೇಷನ್ ವರ್ನಾದ ವಿನ್ಯಾಸ ಮತ್ತು ಆಯಾಮಗಳನ್ನು ಬಿಡುಗಡೆಗೊಳಿಸಿದ ಹ್ಯುಂಡೈ
ನಿರೀಕ್ಷಿತ ಸುರಕ್ಷತಾ ಫೀಚರ್‌ಗಳು
ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ, ಈ ಕಾಂಪ್ಯಾಕ್ಟ್ ಸೆಡಾನ್ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಿಸಿಟಿ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್‌ಸಿ) ಮತ್ತು ಇಬಿಡಿ ಜೊತೆಗೆ ಎಬಿಎಸ್ ಅನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಲೇನ್ ಕೀಪ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಆಟೋ ಎಮರ್ಜೆನ್ಸಿ ಬ್ರೇಕಿಂಗ್‌ನಂತಹ ಫೀಚರ್‌ಗಳೊಂದಿಗೆ ಹೊಸ ವರ್ನಾ ADAS (ಅಡ್ವಾನ್ಸ್‌ಡ್ ಡ್ರೈವರ್ ಅಸಿಸಿಟೆನ್ಸ್ ಸಿಸ್ಟಮ್ಸ್) ಟೆಕ್ ಅನ್ನು ಹೊಂದಿರಲಿದೆ ಎಂಬುದನ್ನು ಟೀಸರ್ ದೃಢಪಡಿಸಿದೆ.
ಪವರ್‌ಟ್ರೇನ್ ವಿವರಣೆಗಳು
ಹ್ಯುಂಡೈ1.5-ಲೀಟರ್ MPi (ನ್ಯಾಚುರಲಿ ಆ್ಯಸ್ಪಿರೇಟೆಡ್) ಪೆಟ್ರೋಲ್ ಇಂಜಿನ್ (115PS ಮತ್ತು 144Nm ಉತ್ಪಾದಿಸುವ) ಅನ್ನು ಉಳಿಸಿಕೊಂಡು ಹೊಸ 1.5-ಲೀಟರ್ T-GDi (ಟರ್ಬೋ ಪೆಟ್ರೋಲ್) ಇಂಜಿನ್ (160PS ಮತ್ತು 253Nm ಉತ್ಪಾದಿಸುವ) ಅನ್ನು ತನ್ನ ಹೊಸ-ಜನರೇಷನ್ ವರ್ನಾಗೆ ತರುವುದಾಗಿ ಈಗಾಗಲೇ ದೃಢಪಡಿಸಿದೆ. ಎರಡೂ ಯೂನಿಟ್‌ಗಳು ಸಿಕ್ಸ್ ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅನ್ನು ಪ್ರಮಾಣಿತವಾಗಿ ಪಡೆದರೆ, ಮೊದಲನೆಯದು ಸೆವೆನ್-ಸ್ಪೀಡ್ ಡಿಸಿಟಿ ಆಯ್ಕೆಯನ್ನು ಪಡೆದಿದೆ ಮತ್ತು ಎರಡನೆಯದು ಸ್ವಯಂಚಾಲಿತ ಆಯ್ಕೆಯನ್ನು ಹೊಂದಿದೆ.
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಹ್ಯುಂಡೈ ಮಾರ್ಚ್ 21 ರಂದು ಮುಂದಿನ-ಜನರೇಷನ್ ವರ್ನಾ ಬೆಲೆಯನ್ನು ಪ್ರಕಟಿಸಲಿದ್ದು, ಇದು 10 ಲಕ್ಷದಿಂದ (ಎಕ್ಸ್-ಶೋರೂಮ್) ಪ್ರಾರಂಭವಾಗಬಹುದು ಎಂದು ನಾವು ನಿರೀಕ್ಷಿಸುತ್ತೇವೆ. ಬಿಡುಗಡೆಯಾದ ನಂತರ ಇದು ಹೋಂಡಾ ಸಿಟಿ, ಸ್ಕೋಡಾ ಸ್ಲೆವಿಯಾ, ಫೋಕ್ಸ್ವ್ಯಾಗನ್ ವರ್ಚಸ್ ಮತ್ತು ಮಾರುತಿ ಸುಝುಕಿ ಸಿಯಾಜ್ ಗೆ ಪ್ರತಿಸ್ಪರ್ಧಿಯಾಗಲಿದೆ.
0 out of 0 found this helpful