ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್ ಹೊಸ ಟೀಸರ್ ಔಟ ್, ಏನಿದೆ ಈ ಬಾರಿ ವಿಶೇಷ ?
ನಿಸ್ಸಾನ್ ಮ್ಯಾಗ್ನೈಟ್ ಗಾಗಿ shreyash ಮೂಲಕ ಸೆಪ್ಟೆಂಬರ್ 26, 2024 06:02 pm ರಂದು ಮಾರ್ಪಡಿಸಲಾಗಿದೆ
- 24 Views
- ಕಾಮೆಂಟ್ ಅನ್ನು ಬರೆಯಿರಿ
ಹೊಸ ಟೀಸರ್ ಹೊಸ ಮ್ಯಾಗ್ನೈಟ್‌ನ ಟೈಲ್ ಲೈಟ್‌ಗಳ ಇಣುಕುನೋಟವನ್ನು ತೋರಿಸುತ್ತದೆ, ಮತ್ತು ಇದರಲ್ಲಿ ಅಪ್ಡೇಟ್ ಆಗಿರುವ LED ಲೈಟ್‌ಗಳನ್ನು ನೀಡಲಾಗಿದೆ. ಗ್ರಿಲ್ ಡಿಸೈನ್ ಹಿಂದಿನ ಮಾಡೆಲ್‌ನಲ್ಲಿ ಇದ್ದಂತೆಯೇ ಇದೆ
-
ನಿಸ್ಸಾನ್ ಅಕ್ಟೋಬರ್ 4 ರಂದು ಭಾರತದಲ್ಲಿ ಫೇಸ್‌ಲಿಫ್ಟ್ ಆಗಿರುವ ಮ್ಯಾಗ್ನೈಟ್ ಅನ್ನು ಲಾಂಚ್ ಮಾಡಲಿದೆ.
-
ಇದರ ಹೊರಭಾಗದ ಬದಲಾವಣೆಗಳಲ್ಲಿ ಅಪ್ಡೇಟ್ ಆಗಿರುವ ಮುಂಭಾಗದ ಬಂಪರ್ ಮತ್ತು ಹೆಡ್‌ಲೈಟ್‌ಗಳನ್ನು ಒಳಗೊಂಡಿರಬಹುದು.
-
ಇದು ಹೊಸ 6-ಸ್ಪೋಕ್ ಡ್ಯುಯಲ್-ಟೋನ್ ಅಲಾಯ್ ವೀಲ್ಸ್ ಅನ್ನು ಕೂಡ ಪಡೆಯುತ್ತದೆ.
-
ಇದು ಹೊಸ ಇಂಟೀರಿಯರ್ ಟ್ರಿಮ್‌ಗಳು ಮತ್ತು ಸೀಟ್ ಅಪ್‌ಹೋಲ್‌ಸ್ಟರಿಯೊಂದಿಗೆ ಬರುವ ನಿರೀಕ್ಷೆಯಿದೆ.
-
ನಿಸ್ಸಾನ್ ಇದರಲ್ಲಿ ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ಸನ್‌ರೂಫ್‌ನಂತಹ ಪ್ರೀಮಿಯಂ ಫೀಚರ್‌ಗಳನ್ನು ನೀಡುವ ಸಾಧ್ಯತೆಯಿದೆ.
-
ಸುರಕ್ಷತಾ ಫೀಚರ್‌ಗಳಲ್ಲಿ 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), 360-ಡಿಗ್ರಿ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಒಳಗೊಂಡಿರಬಹುದು.
-
ಇದು ಹಿಂದಿನ ಮಾಡೆಲ್‌ನಲ್ಲಿರುವ ಅದೇ 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಮತ್ತು 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ನೀಡುತ್ತದೆ.
-
ಬೆಲೆಯು ರೂ. 6.30 ಲಕ್ಷದಿಂದ (ಎಕ್ಸ್ ಶೋ ರೂಂ) ಶುರುವಾಗುವ ನಿರೀಕ್ಷೆಯಿದೆ.
ಅಕ್ಟೋಬರ್ 4 ರಂದು ನಿಸ್ಸಾನ್ ಮ್ಯಾಗ್ನೈಟ್ ತನ್ನ ಮೊದಲ ದೊಡ್ಡ ಅಪ್ಡೇಟ್ ಅನ್ನು ಪಡೆಯಲಿದೆ ಮತ್ತು ಅಪ್ಡೇಟ್ ಆಗಿರುವ ಎಸ್‌ಯುವಿಯ ಲಾಂಚ್ ದಿನಾಂಕ ಹತ್ತಿರವಾಗುತ್ತಿದ್ದಂತೆ ಕಂಪನಿಯು ಹೊಸ ಟೀಸರ್‌ಗಳನ್ನು ಹೊರಬಿಡಲು ಪ್ರಾರಂಭಿಸಿದೆ. ಹಿಂದಿನ ಟೀಸರ್ ನಿಸ್ಸಾನ್ ಎಸ್‌ಯುವಿಯ ಹೊಸ ಅಲಾಯ್ ವೀಲ್ ಡಿಸೈನ್ ಅನ್ನು ತೋರಿಸಿದೆ, ಮತ್ತು ಇತ್ತೀಚಿನ ಟೀಸರ್ ಗ್ರಿಲ್ ಮತ್ತು ಅಪ್ಡೇಟ್ ಆಗಿರುವ ಟೈಲ್ ಲೈಟ್‌ಗಳ ನೋಟವನ್ನು ನೀಡುತ್ತದೆ.
ಟೀಸರ್‌ನಲ್ಲಿ ಏನಿದೆ?
ಹೊಸ ವೀಡಿಯೊ ಕ್ಲಿಪ್ ನಮಗೆ ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್‌ನ ಗ್ರಿಲ್ ಡಿಸೈನ್ ಅನ್ನು ತೋರಿಸುತ್ತದೆ ಮತ್ತು ಇದು ಹಳೆಯ ಮಾಡೆಲ್ ಅನ್ನು ಹೋಲುತ್ತದೆ. ಆದರೆ, ಮ್ಯಾಗ್ನೈಟ್ ಫೇಸ್‌ಲಿಫ್ಟ್‌ನ ಈ ಹಿಂದೆ ಲೀಕ್ ಆಗಿದ್ದ ಚಿತ್ರವು ಇದು ದೊಡ್ಡ ಗ್ರಿಲ್ ಅನ್ನು ಹೊಂದಿರಬಹುದು ಎಂದು ಸೂಚಿಸುತ್ತದೆ. ಇಲ್ಲಿ 2024 ಮ್ಯಾಗ್ನೈಟ್‌ನ ಟೈಲ್ ಲೈಟ್‌ಗಳನ್ನು ಕೂಡ ತೋರಿಸಲಾಗಿದೆ, ಮತ್ತು ಅವುಗಳು ಒಂದೇ ರೀತಿಯ ಆಕಾರವನ್ನು ಹೊಂದಿವೆ ಆದರೆ ಒಳಗೆ ಅಪ್ಡೇಟ್ ಆಗಿರುವ LED ಲೈಟ್‌ಗಳನ್ನು ಹೊಂದಿವೆ.
ಮ್ಯಾಗ್ನೈಟ್ ಫೇಸ್‌ಲಿಫ್ಟ್‌ನ ಹಿಂದಿನ ಟೀಸರ್ ರೀಡಿಸೈನ್ ಮಾಡಿರುವ 6-ಸ್ಪೋಕ್ ಡ್ಯುಯಲ್-ಟೋನ್ ಅಲಾಯ್ ವೀಲ್ಸ್ ಅನ್ನು ಪಡೆಯಲಿದೆ ಎಂದು ದೃಢಪಡಿಸಿದೆ. ಮ್ಯಾಗ್ನೈಟ್‌ನ ಈಗಿರುವ ವರ್ಷನ್‌ನಲ್ಲಿ ಈಗಾಗಲೇ ಇರುವ 16 ಇಂಚುಗಳನ್ನೇ ಪಡೆಯುವ ನಿರೀಕ್ಷೆಯಿದೆ.
ನಿರೀಕ್ಷಿಸಲಾಗಿರುವ ಇತರ ಬದಲಾವಣೆಗಳು
ಫೇಸ್‌ಲಿಫ್ಟ್ ಆಗಿರುವ ಮ್ಯಾಗ್ನೈಟ್ ಅನ್ನು ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ಫೆಸಿಲಿಟಿಯಲ್ಲಿ ಕೂಡ ನೋಡಲಾಗಿದೆ, ಹಾಗಾಗಿ ಇದು ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಕೂಡ ಪಡೆಯಬಹುದು. ಸ್ಪೈ ಮಾಡಿರುವ ಮಾಡೆಲ್ ಟ್ವೀಕ್ ಮಾಡಲಾದ ಮುಂಭಾಗದ ಬಂಪರ್ ಮತ್ತು ರೀಡಿಸೈನ್‌ಗೊಳಿಸಲಾದ ಹೆಡ್‌ಲೈಟ್ ಹೌಸಿಂಗ್ ಅನ್ನು ಒಳಗೊಂಡಿತ್ತು.
ಇದನ್ನು ಕೂಡ ಓದಿ: ಟಾಟಾ ನೆಕ್ಸಾನ್ ಸಿಎನ್‌ಜಿಯ ಪ್ರತಿಯೊಂದು ವೇರಿಯಂಟ್ ವಿವರ ಇಲ್ಲಿದೆ
ಒಳಭಾಗ ಮತ್ತು ನಿರೀಕ್ಷಿಸಲಾಗಿರುವ ಫೀಚರ್‌ಗಳು
2024 ಮ್ಯಾಗ್ನೈಟ್‌ನ ಕ್ಯಾಬಿನ್‌ನ ಒಳಗಿನ ಬದಲಾವಣೆಗಳನ್ನು ನಿಸ್ಸಾನ್ ಇನ್ನೂ ಬಹಿರಂಗಪಡಿಸಿಲ್ಲ, ಆದರೆ ಇದು ಹೊಸ ಟ್ರಿಮ್‌ಗಳು ಮತ್ತು ಅಪ್ಡೇಟ್ ಆಗಿರುವ ಸೀಟ್ ಅಪ್‌ಹೋಲ್‌ಸ್ಟರಿಯೊಂದಿಗೆ ಬರುವ ನಿರೀಕ್ಷೆಯಿದೆ. ಫೇಸ್‌ಲಿಫ್ಟ್ ಆಗಿರುವ ಮ್ಯಾಗ್ನೈಟ್ ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು ಸಿಂಗಲ್ ಪೇನ್ ಸನ್‌ರೂಫ್‌ನಂತಹ ಫೀಚರ್ ಗಳನ್ನು ಪಡೆಯುವ ನಿರೀಕ್ಷೆಯಿದೆ. 9-ಇಂಚಿನ ಟಚ್‌ಸ್ಕ್ರೀನ್ (ಈಗಿರುವ-ಸ್ಪೆಕ್ ಮಾಡೆಲ್‌ನ ಗೆಜಾ ಎಡಿಷನ್ ನಲ್ಲಿ ನೀಡಲಾಗಿದೆ), 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನಂತಹ ಫೀಚರ್‌ಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗುವುದು.
ಸುರಕ್ಷತೆಯ ವಿಷಯದಲ್ಲಿ, ಇದು 360-ಡಿಗ್ರಿ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಮತ್ತು ISOFIX ಚೈಲ್ಡ್ ಸೀಟ್ ಆಂಕರ್ ಪಾಯಿಂಟ್‌ಗಳ ಜೊತೆಗೆ ಆರು ಏರ್‌ಬ್ಯಾಗ್‌ಗಳನ್ನು (ಸ್ಟ್ಯಾಂಡರ್ಡ್ ಆಗಿ) ಪಡೆಯಬಹುದು.
ಹಿಂದಿನ ಮಾಡೆಲ್‌ನಲ್ಲಿರುವ ಅದೇ ಎಂಜಿನ್ ಆಯ್ಕೆಗಳು
ನಿಸ್ಸಾನ್ ಪ್ರಸ್ತುತ ಮಾಡೆಲ್‌ನಲ್ಲಿರುವ ಎಂಜಿನ್ ಆಯ್ಕೆಗಳನ್ನು ಮ್ಯಾಗ್ನೈಟ್ ಫೇಸ್‌ಲಿಫ್ಟ್‌ನಲ್ಲಿ ಕೂಡ ನೀಡುತ್ತಿದೆ. ಅವುಗಳೆಂದರೆ:
ಇಂಜಿನ್ |
1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ |
1-ಲೀಟರ್ ಟರ್ಬೊ-ಪೆಟ್ರೋಲ್ |
ಪವರ್ |
72 PS |
100 PS |
ಟಾರ್ಕ್ |
96 Nm |
160 Nm ವರೆಗೆ |
ಟ್ರಾನ್ಸ್‌ಮಿಷನ್ |
5-ಸ್ಪೀಡ್ MT, 5-ಸ್ಪೀಡ್ AMT |
5-ಸ್ಪೀಡ್ MT, CVT |
ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್ ಬೆಲೆಯು 6.30 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋರೂಂ) ಶುರುವಾಗಬಹುದು. ಏಕೆಂದರೆ, ಈಗಿರುವ ಎಡಿಷನ್ ಬೆಲೆಯು ರೂ 6 ಲಕ್ಷದಿಂದ ರೂ 11.27 ಲಕ್ಷದವರೆಗೆ (ಎಕ್ಸ್ ಶೋ ರೂಂ ಪ್ಯಾನ್-ಇಂಡಿಯಾ) ಇದೆ. ಇದು ರೆನಾಲ್ಟ್ ಕಿಗರ್, ಟಾಟಾ ನೆಕ್ಸಾನ್, ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ ಮತ್ತು ಮಹೀಂದ್ರಾ XUV 3OOಗಳೊಂದಿಗೆ ಸ್ಪರ್ಧಿಸುತ್ತದೆ ಮತ್ತು ಮುಂಬರುವ ಸ್ಕೋಡಾ ಕೈಲಾಕ್ ಗೆ ಕೂಡ ಪ್ರತಿಸ್ಪರ್ಧಿಯಾಗಲಿದೆ. ಇದು ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಅರ್ಬನ್ ಕ್ರೂಸರ್ ಟೈಸರ್‌ನಂತಹ ಸಬ್-4m ಕ್ರಾಸ್‌ಒವರ್‌ಗಳಿಗೆ ಕೂಡ ಪ್ರತಿಸ್ಪರ್ಧಿಯಾಗಿದೆ.
ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ
ಇನ್ನಷ್ಟು ಓದಿ: ನಿಸ್ಸಾನ್ ಮ್ಯಾಗ್ನೈಟ್ AMT