ನಿತಿನ್ ಗಡ್ಕರಿ ಅನಾವರಣಗೊಳಿಸಿದ್ದಾರೆ BS6 ಫೇಸ್ 2-ಅನುಸರಣೆಯ ಫ್ಲೆಕ್ಸ್-ಫ್ಯುಯಲ್ Toyota Innova Hycross ಸ್ಟ್ರಾಂಗ್-ಹೈಬ್ರಿಡ್ ಪರೀಕ್ಷಾರ್ಥ ಮಾಡೆಲ್
ಹೈಬ್ರಿಡ್ ವ್ಯವಸ್ಥೆಯ ಸಹಾಯದಿಂದ ನಿರ್ದಿಷ್ಟ ಪರೀಕ್ಷಾ ಪರಿಸ್ಥಿತಿಗಳಲ್ಲಿ ಈ ಪರೀಕ್ಷಾರ್ಥ ಮಾಡೆಲ್ 85 ಪ್ರತಿಶತ ಎಥೆನಾಲ್ ಮಿಶ್ರಣವನ್ನು ಬಳಸಿ ಕಾರ್ಯನಿರ್ವಹಿಸುತ್ತದೆ ಮತ್ತು ಒಟ್ಟು ಉತ್ಪಾದನೆಯ 60 ಪ್ರತಿಶತವನ್ನು EV ಪವರ್ ಇಂದ ಪಡೆದುಕೊಳ್ಳಲಾಗುತ್ತದೆ
- ಈ ಪರೀಕ್ಷಾರ್ಥ ಮಾಡೆಲ್ 186PS 2-ಲೀಟರ್ ಸ್ಟ್ರಾಂಗ್-ಹೈಬ್ರಿಡ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ.
- 20 ಪ್ರತಿಶತ ಎಥೆನಾಲ್ ಮಿಶ್ರಣವು ಪೆಟ್ರೋಲ್‌ಗಿಂತ 14 ಪ್ರತಿಶತ ಕಡಿಮೆ PM2.5 ಎಮಿಷನ್ ಅನ್ನು ಉಂಟುಮಾಡುತ್ತದೆ.
- ಎಥೆನಾಲ್ ಪೆಟ್ರೋಲ್‌ಗಿಂತ ಹೆಚ್ಚು ಅಗ್ಗವಾಗಿದೆ ಏಕೆಂದರೆ ಇದನ್ನು ಹೆಚ್ಚಾಗಿ ಕಬ್ಬಿನಿಂದ ತಯಾರಿಸಲಾಗುತ್ತದೆ.
- ಭಾರತೀಯ ರಸ್ತೆಗಳಿಗೆ ಸೂಕ್ತವಾಗುವಂತೆ ನೋಡಿಕೊಳ್ಳಲು ಈ ಪರೀಕ್ಷಾರ್ಥ ಮಾಡೆಲ್ ಮೇಲೆ ಹೆಚ್ಚಿನ ಪರೀಕ್ಷೆಗಳನ್ನು ನಡೆಸಬೇಕಾಗಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರು ಫ್ಲೆಕ್ಸ್ ಫ್ಯುಯೆಲ್ ಟೊಯೊಟಾ ಇನ್ನೋವಾ ಹೈಕ್ರಾಸ್ ಹೈಬ್ರಿಡ್ ಪರೀಕ್ಷಾರ್ಥ ಮಾಡೆಲ್ ಅನ್ನು ಅನಾವರಣಗೊಳಿಸಿದ್ದು, ಇದು ಶೇಕಡಾ 85 ರಷ್ಟು ಎಥೆನಾಲ್ ಮಿಶ್ರಿತ ಇಂಧನವನ್ನು ಬಳಸಿ ಕಾರ್ಯನಿರ್ವಹಿಸುತ್ತದೆ. ಈ ಪರೀಕ್ಷಾರ್ಥ ಮಾಡೆಲ್ ಅಪ್‌ಡೇಟ್ ಮಾಡಲಾದ BS6 ಫೇಸ್ 2 ಮಾನದಂಡಗಳನ್ನು ಅನುಸರಿಸುತ್ತದೆ ಮತ್ತು ಫ್ಲೆಕ್ಸ್-ಫ್ಯುಯೆಲ್ ಇನ್ನೋವಾ ಹೈಕ್ರಾಸ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲಾ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.
ಕ್ಲೀನ್ ಪವರ್‌ಟ್ರೇನ್
ಫ್ಲೆಕ್ಸ್ ಫ್ಯುಯೆಲ್ ಹೈಕ್ರಾಸ್ 186PS 2-ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ (186 ಪಿಎಸ್) ನಿಂದ ಚಾಲಿತವಾಗಿದ್ದು, ಇದು ಶೇಕಡಾ 85 ರಷ್ಟು ಎಥೆನಾಲ್ ಹಾಗೂ ಉಳಿದ 15 ಪ್ರತಿಶತ ಪೆಟ್ರೋಲ್ ಮಿಶ್ರಿತ ಇಂಧನವನ್ನು ಬಳಸಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಇದು ಶುದ್ಧ ICE ಪವರ್‌ಟ್ರೇನ್‌ಗಿಂತ ಹೆಚ್ಚು ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿಯಾಗಿದೆ.
ಪ್ರಯೋಜನಗಳು
ಎಥೆನಾಲ್ ಪೆಟ್ರೋಲ್ ಅಥವಾ ಡೀಸೆಲ್‌ಗಿಂತ ಶುದ್ಧ ಇಂಧನವಾಗಿದೆ, ಇದರಿಂದ ಎಮಿಷನ್ ಕಡಿಮೆಯಾಗುತ್ತದೆ ಮತ್ತು ಪರಿಸರಕ್ಕೆ ಕಡಿಮೆ ಹಾನಿಕಾರಕವಾಗಿದೆ.
ಇದನ್ನೂ ಓದಿ: 10.29 ಲಕ್ಷ ಆರಂಭಿಕ ಬೆಲೆಯೊಂದಿಗೆ ಬಿಡುಗಡೆಯಾದ ಟೊಯೊಟಾ ರುಮಿಯಾನ್
ಟೊಯೋಟಾ ದ ಪ್ರಕಾರ, ಪೆಟ್ರೋಲ್‌ಗೆ ಹೋಲಿಸಿದರೆ E20 ಇಂಧನ (20 ಪ್ರತಿಶತ ಎಥೆನಾಲ್ ಮಿಶ್ರಣ) PM2.5 ಎಮಿಷನ್ ಅನ್ನು 14 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲದೇ, ಅನೇಕ ರಾಜ್ಯಗಳಲ್ಲಿ ಎಥೆನಾಲ್ ಪೆಟ್ರೋಲ್‌ಗಿಂತ ಅಗ್ಗವಾಗಿರುವುದರಿಂದ ಗ್ರಾಹಕರಿಗೆ ಬಹಳಷ್ಟು ಉಳಿತಾಯವಾಗುತ್ತದೆ. ಹಾಗೆಯೇ, ಎಥೆನಾಲ್ ಅನ್ನು ಕಬ್ಬಿನಿಂದ ತಯಾರಿಸುವುದರಿಂದ ಅದರ ತಯಾರಿಕಾ ವೆಚ್ಚವೂ ತುಂಬಾ ಕಡಿಮೆಯಾಗಿದೆ.
ಇದನ್ನೂ ಓದಿ: ಮಾರುತಿ ಬಲೆನೊ ಮತ್ತು ಟೊಯೋಟಾ ಗ್ಲಾನ್ಜಾ ಡ್ರೈವ್ ಮಾಡುವ ಮೂಲಕ ನಾವು ತಿಳಿದುಕೊಂಡ 5 ವಿಷಯಗಳು
ಕಾರು ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡುವತ್ತ ತಮ್ಮ ಗಮನವನ್ನು ಕೇಂದ್ರೀಕರಿಸಿವೆ. ಆದರೆ, ಪೆಟ್ರೋಲ್/ಡೀಸೆಲ್ ಕಾರುಗಳಿಂದ ನೇರವಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗುವುದು ಅಷ್ಟು ಸುಲಭವಲ್ಲ, ಹಾಗಾಗಿ ಹೈಬ್ರಿಡ್ ವಾಹನಗಳು ಮತ್ತು ಫ್ಲೆಕ್ಸ್ ಫ್ಯುಯೆಲ್ ವಾಹನಗಳು ಈ ಪರಿವರ್ತನೆಯನ್ನು ಸರಾಗಗೊಳಿಸುವ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತಿವೆ.
ಫ್ಲೆಕ್ಸ್-ಫ್ಯುಯಲ್ ಇನ್ನೋವಾ ಹೈಕ್ರಾಸ್ ಉತ್ಪಾದನೆಗೆ ಸಿದ್ಧವಾಗಿರುವ ಮಾಡೆಲ್ ಅಲ್ಲ, ಇನ್ನೂ ಒಂದು ಪರೀಕ್ಷಾರ್ಥ ಮಾಡೆಲ್ ಆಗಿದೆ. ಭಾರತೀಯ ರಸ್ತೆಗಳಿಗೆ ಸೂಕ್ತವಾಗಿದೆಯೇ ಎನ್ನುವುದನ್ನು ತಿಳಿದುಕೊಳ್ಳಲು ಈ ಪರೀಕ್ಷಾರ್ಥ ಮಾಡೆಲ್ ಮೇಲೆ ಹಲವಾರು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಕಾಮೆಂಟ್ ವಿಭಾಗದಲ್ಲಿ ಈ ಕಾರಿನ ಮಾಡೆಲ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮಗೆ ತಿಳಿಸಿ.
ಇನ್ನಷ್ಟು ಓದಿ: ಇನ್ನೋವಾ ಹೈಕ್ರಾಸ್ ಆಟೋಮ್ಯಾಟಿಕ್