• English
  • Login / Register

ಇಲ್ಲಿಯವರೆಗೆ 1 ಲಕ್ಷ ಯೂನಿಟ್‌ಗಳ ಮಾರಾಟ ಕಂಡ ಟಾಟಾ ಹ್ಯಾರಿಯರ್

ಟಾಟಾ ಹ್ಯಾರಿಯರ್ 2019-2023 ಗಾಗಿ ansh ಮೂಲಕ ಮೇ 23, 2023 02:00 pm ರಂದು ಪ್ರಕಟಿಸಲಾಗಿದೆ

  • 23 Views
  • ಕಾಮೆಂಟ್‌ ಅನ್ನು ಬರೆಯಿರಿ

ಲ್ಯಾಂಡ್ ರೋವರ್-ಪ್ರೇರಿತ ಪ್ಲ್ಯಾಟ್‌ಫಾರ್ಮ್ ಆಧಾರಿತ ಮೊದಲ ಟಾಟಾ ಎಸ್‌ಯುವಿ ಜನವರಿ 2019 ರಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಿತು 

Tata Harrier

  • ಈ ಹ್ಯಾರಿಯರ್ ಎಸ್‌ಯುವಿ ಬಿಡುಗಡೆಯಾದಾಗಿನಿಂದ 170PS, 2-ಲೀಟರ್ ಡಿಸೇಲ್ ಎಂಜಿನ್‌ ಅನ್ನು ಹೊಂದಿದೆ.
  •  ಮಾರಾಟಕ್ಕೆ ಬಂದ ಮೊದಲ ವರ್ಷ ಕೇವಲ ಮ್ಯಾನ್ಯುವಲ್ ಟ್ರಾನ್‌ಮಿಷನ್ ಅನ್ನು ಹೊಂದಿತ್ತು ಆದರೆ 2020 ರಲ್ಲಿ ಆಟೋಮ್ಯಾಟಿಕ್ ಆಯ್ಕೆಯನ್ನು ಸಹ ಸೇರಿಸಲಾಯಿತು. 
  •  ಈಗ 10.25-ಇಂಚಿನ ಇನ್‌ಫೋಟೇನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ವಿಹಂಗಮ ಸನ್‌ರೂಫ್‌ನಂತಹ ಫೀಚರ್‌ಗಳನ್ನು ಪಡೆದಿದೆ.
  •  ಇದು ಮುಂದಿನ ಘರ್ಷಣೆ-ವಾರ್ನಿಂಗ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಮತ್ತು ಆಟೋನಾಮಸ್ ಎಮರ್ಜೆನ್ಸಿ ಬ್ರೇಕಿಂಗ್‌ನಂತಹ ADAS ಫೀಚರ್‌ಗಳೊಂದಿಗೆ ಸಜ್ಜುಗೊಂಡಿದೆ.
  •  ಈ ಹ್ಯಾರಿಯರ್ ಪ್ರಸ್ತುತ ರೂ. 15 ಲಕ್ಷದಿಂದ ರೂ. 24.07 ಲಕ್ಷ (ಎಕ್ಸ್-ಶೋರೂಮ್).

2019 ರಲ್ಲಿ ಪ್ರಾರಂಭವಾದ, ಟಾಟಾ ಹ್ಯಾರಿಯರ್ ಅನೇಕ ನಿರೀಕ್ಷೆಗಳನ್ನು ಹೊತ್ತು ತಂದಿತು ಏಕೆಂದರೆ ಇದು ಒಮೆಗಾ ಆರ್ಟ್ ಪ್ಲ್ಯಾಟ್‌ಫಾರ್ಮ್ ಅನ್ನು ಆಧರಿಸಿದ ಬ್ರ್ಯಾಂಡ್‌ನ ಮೊದಲ ಎಸ್‌ಯುವಿ ಆಗಿದ್ದು ಇದನ್ನು ಐಷಾರಾಮಿ ಆಫ್-ರೋಡರ್‌ಗಳ ರಾಜ ಲ್ಯಾಂಡ್ ರೋವರ್‌ನಿಂದ ಎರವಲು ಪಡೆಯಲಾಗಿದೆ. ಅಂದಿನಿಂದ, ಇದು ತನ್ನದೇ ಆದ ಹೆಸರನ್ನು ಪಡೆದು ಸಾಕಷ್ಟು ಜನಪ್ರಿಯತೆ ಗಳಿಸಿದೆ. ನಾಲ್ಕು ವರ್ಷಗಳ ನಂತರ, ಟಾಟಾ ಎಸ್‌ಯುವಿ 1-ಲಕ್ಷ-ಯೂನಿಟ್ ಮಾರಾಟವನ್ನು ದಾಟುವ ಮೂಲಕ ಹೊಸ ಮೈಲಿಗಲ್ಲನ್ನು ಸಾಧಿಸಿದೆ.

 

 ಪವರ್‌ಟ್ರೇನ್

Tata Harrier Automatic Transmission

 ಹ್ಯಾರಿಯರ್ ಅನ್ನು 2019 ರಿಂದ ಒಂದೇ ಎಂಜಿನ್ ಆಯ್ಕೆಯೊಂದಿಗೆ ನೀಡಲಾಗಿದೆ: 170PS ಮತ್ತು 350Nm ಬಿಡುಗಡೆಗೊಳಿಸುವ 2-ಲೀಟರ್ ಡಿಸೇಲ್ ಎಂಜಿನ್. ಇದು ಕೇವಲ 6-ಸ್ಪೀಡ್ ಮ್ಯಾನ್ಯುವಲ್‌ನೊಂದಿಗೆ ಪ್ರಾರಂಭವಾಯಿತು ಮತ್ತು ನಂತರ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಪಡೆಯಿತು. ಇದು 2024ರಲ್ಲಿ ಬರುವ ನವೀಕರಣದೊಂದಿಗೆ ಮೊದಲ ಬಾರಿಗೆ ಪೆಟ್ರೋಲ್ ಆಯ್ಕೆಯನ್ನು ಪಡೆಯಬಹುದು.

 

ಫೀಚರ್‌ಗಳು ಮತ್ತು ಸುರಕ್ಷತೆ

Tata Harrier Red Dark Edition Cabin

 ಪವರ್‌ಟ್ರೇನ್ ನಂತರ, ಇದು ನೀಡುತ್ತಿರುವ ಫೀಚರ್‌ಗಳ ಕುರಿತು ನೋಡೋಣ. ಈ ಎಸ್‌ಯುವಿ ಮೂಲತಃ ಉತ್ತಮವಾಗಿ ಕಾಣುವ  8.8-ಇಂಚಿನ ಫ್ರೀ-ಸ್ಟ್ಯಾಂಡಿಗ್ ಟಚ್‌ಸ್ಕ್ರೀನ್ ಸಿಸ್ಟಮ್, 7-ಇಂಚಿನ ಡಿಸ್‌ಪ್ಲೇ ಜೊತೆಗೆ ಸೆಮಿ-ಡಿಜಿಟಲ್ ಕ್ಲಸ್ಟರ್, ಜೆಬಿಎಲ್ ಸೌಂಡ್ ಸಿಸ್ಟಮ್, ಆಟೋ ಎಸಿ ಮತ್ತು ಟೆರೈನ್ ಮೋಡ್‌ಗಳನ್ನು ಹೊಂದಿತ್ತು. ಅಂದಿನಿಂದ ಇದು ವಿಶೇಷ ಆವೃತ್ತಿಗಳ ಮೂಲಕ ವಿವಿಧ ಫೀಚರ್‌ ನವೀಕರಣವನ್ನು ಪಡೆದಿದ್ದು ಈಗ ಹೆಚ್ಚು ಪ್ರೀಮಿಯಂ ಕ್ಯಾಬಿನ್ ಅನ್ನು ಪಡೆದಿದೆ. ಈ ಹ್ಯಾರಿಯರ್ ಈಗ 10.25-ಇಂಚಿನ ಟಚ್‌ಸ್ಕ್ರೀನ್ ಇನ್‌ಫೊಟೈನ್‌ಮೆಂಟ್ ಸಿಸ್ಟಮ್ ಜೊತೆಗೆ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಪ್ಯಾನರಾಮಿಕ್ ಸನ್‌ರೂಪ್, ಮೆಮೊರಿ ಹಾಗೂ ವೆಲ್‌ಕಮ್ ಫಂಕ್ಷನ್ ಹಾಗೂ ವೈರ್‌ಲೆಸ್ ಫೋನ್ ಚಾರ್ಜಿಂಗ್ ಜೊತೆಗೆ ಆರು- ರೀತಿಯ ಪವರ್ ಹೊಂದಾಣಿಕೆ ಡ್ರೈವರ್ ಸೀಟನ್ನು ಹೊಂದಿದೆ.

ಇದನ್ನೂ ಓದಿ:  2 ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ 2 ಲಕ್ಷ ಉತ್ಪಾದನಾ ಮೈಲಿಗಲ್ಲು ದಾಟಿದ ಟಾಟಾ ಪಂಚ್

ಸುರಕ್ಷತೆಯ ವಿಷಯದಲ್ಲಿ, ಇದು ಆರು ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆಗೆ ಇಬಿಡಿ, ಎಲೆಕ್ಟ್ರಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್‌ಪಿ), 360-ಡಿಗ್ರಿ ಕ್ಯಾಮಾರಾ, ಹಿಲ್-ಹೋಲ್ಡ್ ಮತ್ತು ಹಿಲ್-ಡಿಸೆಂಟ್ ಕಂಟ್ರೋಲ್ ಅನ್ನು ಹೊಂದಿದೆ. ಈ ಸುರಕ್ಷತಾ ಫೀಚರ್‌ಗಳನ್ನು ಹೊರತುಪಡಿಸಿದರೆ, ಹ್ಯಾರಿಯರ್‌ನ ಕೆಲವು ವೇರಿಯೆಂಟ್‌ಗಳು ಮುಂದಿನ-ಘರ್ಷಣೆ ವಾರ್ನಿಂಗ್, ಆಟೋ ಎಮರ್ಜೆನ್ಸಿ ಬ್ರೇಕಿಂಗ್ ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರಿಂಗ್‌ನಂತಹ ADAS ಕಾರ್ಯಗಳನ್ನು ಸಹ ಹೊಂದಿದೆ.

 

ಬೆಲೆ ಮತ್ತು ಪ್ರತಿಸ್ಪರ್ಧಿಗಳು

Tata Harrier

 ಟಾಟಾ ತನ್ನ ಹ್ಯಾರಿಯರ್‌ನ ಬೆಲೆಯನ್ನು ರೂ. 15 ಲಕ್ಷ ಮತ್ತು ರೂ. 24.07 ಲಕ್ಷ (ಎಕ್ಸ್-ಶೋರೂಮ್) ಗಳಷ್ಟು ನಿಗದಿಪಡಿಸಿದೆ. ಬಿಡುಗಡೆಯ ಸಮಯದಲ್ಲಿ, ಟಾಪ್-ಸ್ಪೆಕ್ ಮ್ಯಾನ್ಯುವಲ್‌ನ ಬೆಲೆಯು ರೂ.16.25 ಲಕ್ಷ ನಿಗದಿಪಡಿಸಲಾಗಿತ್ತು ಮತ್ತು ಇಂದು ಟಾಪ್-ಸ್ಪೆಕ್ ಮ್ಯಾನ್ಯುವಲ್‌ನ ಬೆಲೆಯು ರೂ. 21.77 ಲಕ್ಷಕ್ಕೆ ನಿಗದಿಪಡಿಸಲಾಗಿದೆ (ಎಕ್ಸ್-ಶೋರೂಮ್, ದೆಹಲಿ). ಈ ಹ್ಯಾರಿಯರ್ ಮಹೀಂದ್ರಾ XUV700, ಎಂಜಿ ಹೆಕ್ಟರ್, ಜೀಪ್ ಕಂಪಾಸ್ ಗೆ ಪ್ರತಿಸ್ಪರ್ಧಿಯಾದರೆ ಇದರ ಟಾಪ್-ಸ್ಪೆಕ್ ವೇರಿಯೆಂಟ್‌ಗಳು ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್‌ಗೆ ಸ್ಪರ್ಧೆಯನ್ನು ಒಡ್ಡುತ್ತವೆ.

ಇನ್ನಷ್ಟು ಇಲ್ಲಿ ಓದಿ : ಹ್ಯಾರಿಯರ್ ಡಿಸೇಲ್

was this article helpful ?

Write your Comment on Tata ಹ್ಯಾರಿಯರ್ 2019-2023

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience