ಪ್ರತಿ ದಿನವೂ 250ಕ್ಕೂ ಹೆಚ್ಚು ಜನ ಮಾರುತಿ ಫ್ರಾಂಕ್ಸ್ ಬುಕ್ ಮಾಡುತ್ತಿದ್ದಾರೆ: ಶಶಾಂಕ್ ಶ್ರೀವಾಸ್ತವ
ಈ ಸಬ್‌ಕಾಂಪ್ಯಾಕ್ಟ್ ಕ್ರಾಸ್ಓವರ್ ಅನ್ನು ಐದು ಟ್ರಿಮ್‌ಗಳು ಮತ್ತು ಎರಡು ಪೆಟ್ರೋಲ್ ಇಂಜಿನ್ ಆಯ್ಕೆಗಳಲ್ಲಿ ಪಡೆಯಬಹುದು.
-
ಜನವರಿಯ ಆಟೋ ಎಕ್ಸ್‌ಪೋ 2023ಯ ನಂತರ ಫ್ರಾಂಕ್ಸ್‌ನ ಬುಕಿಂಗ್‌ಗಳು ತೆರೆದಿವೆ.
-
ಪ್ರತಿ ದಿನ 250 ರಿಂದ 350ರ ತನಕ ಬುಕಿಂಗ್‌ಗಳನ್ನು ಪಡೆಯುತ್ತಿದೆ ಮತ್ತು ಈಗಾಗಲೇ 6,500ಕ್ಕೂ ಹೆಚ್ಚು ಪೂರ್ವ-ಆರ್ಡರ್‌ಗಳನ್ನು ಹೊಂದಿದೆ
-
ರೂ 11,000 ಟೋಕನ್ ಮೊತ್ತವನ್ನು ಪಾವತಿಸಿ ಬುಕ್ ಮಾಡಬಹುದು.
-
1.2-ಲೀಟರ್ ಪೆಟ್ರೋಲ್ ಮತ್ತು 1.0-ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್ ಆಯ್ಕೆಗಳನ್ನು ಹೊಂದಿದೆ.
-
ಹೊಸ ಬಲೆನೊದಲ್ಲಿರುವ ಫೀಚರ್‌ಗಳನ್ನೇ ಹೊಂದಿದ್ದು ಇಂಟೀರಿಯರ್ ಮಾತ್ರ ವಿಭಿನ್ನವಾಗಿದೆ.
-
ರೂ 8 ಲಕ್ಷದಿಂದ (ಎಕ್ಸ್-ಶೋರೂಂ) ಬೆಲೆ ಪ್ರಾರಂಭವಾಗುವ ನಿರೀಕ್ಷೆ ಇದೆ.
ಆಟೋ ಎಕ್ಸ್‌ಪೋ 2023 ರಲ್ಲಿ ಮಾರುತಿಯು ಫ್ರಾಂಕ್ಸ್ ಅನ್ನು ಅನಾವರಣಗೊಳಿಸಿತ್ತು ಹಾಗೂ ಅದೇ ದಿನ ಅದರ ಬುಕಿಂಗ್‌ಗಳನ್ನು ತೆರೆಯಲಾಗಿತ್ತು. ಮಾರುತಿ ಸುಝುಕಿಯ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಶಶಾಂಕ್ ಶ್ರೀವಾಸ್ತವ ಅವರು ಇತ್ತೀಚೆಗೆ ಫ್ರಾಂಕ್ಸ್ 6,500ಕ್ಕೂ ಹೆಚ್ಚಿನ ಬುಕಿಂಗ್‌ಗಳನ್ನು ಸ್ವೀಕರಿಸಿದೆ ಮತ್ತು ದಿನವೊಂದಕ್ಕೆ ಅದು ಸರಾಸರಿ 250 ರಿಂದ 350ರ ತನಕ ಬುಕಿಂಗ್‌ಗಳನ್ನು ಪಡೆಯುತ್ತಿದೆ ಎಂದು ಹೇಳಿದ್ದಾರೆ.
ಹುಡ್‌ನ ಒಳಗೆ ಏನಿದೆ
ಐದು ಟ್ರಿಮ್‌ಗಳಲ್ಲಿ ಲಭ್ಯವಿರುವ ಫ್ರಾಂಕ್ಸ್ ಅನ್ನು ಎರಡು ಪೆಟ್ರೋಲ್ ಇಂಜಿನ್ ಆಯ್ಕೆಗಳಲ್ಲಿ ಪಡೆಯಬಹುದಾಗಿದೆ. ಮೊದಲನೆಯದು ಪರಿಚಿತ 1.2-ಲೀಟರ್ ಯೂನಿಟ್ 90PS ಮತ್ತು 113Nm ಅನ್ನು ಫೈವ್-ಸ್ಪೀಡ್ ಮ್ಯಾನುವಲ್ ಮತ್ತು ಫೈವ್ ಸ್ಪೀಡ್ AMT ಯೊಂದಿಗೆ ಜೋಡಿಸುತ್ತದೆ. ಎರಡನೆಯದು ಹಿಂತಿರುಗುತ್ತಿರುವ ಟರ್ಬೋಚಾರ್ಜ್ ಬೂಸ್ಟರ್‌ಜೆಟ್ ಇಂಜಿನ್ ಈಗ 100PS ಮತ್ತು 148Nm ಫೈವ್-ಸ್ಪೀಡ್ ಮ್ಯಾನುವಲ್ ಮತ್ತು ಸಿಕ್ಸ್-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್‌ನೊಂದಿಗೆ ಉತ್ಪಾದಿಸುತ್ತದೆ.
ಫೀಚರ್‌ಗಳ ಪಟ್ಟಿ
ಫ್ರಾಂಕ್ಸ್‌ನ ಹೆಚ್ಚಿನ ಫೀಚರ್‌ಗಳನ್ನು ಬಲೆನೋದಿಂದ ತೆಗೆದುಕೊಳ್ಳಲಾಗಿದ್ದು, ಇದು ಒಂಭತ್ತು-ಇಂಚು ಟಚ್‌ಸ್ಕ್ರೀನ್ ಇನ್ಫೊಟೈನ್‌ಮೆಂಟ್ ಡಿಸ್‌ಪ್ಲೇ ಜೊತೆಗಿನ ವೈರ್‌ಲೆಸ್ ಆ್ಯಂಡ್ರಾಯ್ಡ್ ಆಟೋ ಮತ್ತು ಕಾರ್‌ಪ್ಲೇ, ಹೆಡ್ಸ್ ಅಪ್-ಡಿಸ್‌ಪ್ಲೇ, ಸ್ವಯಂಚಾಲಿತ ಹವಾಮಾನ ನಿಯಂತ್ರಣ, ಕ್ರೂಸ್ ಕಂಟ್ರೋಲ್, ABS ಜೊತೆಗಿನ EBD, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP) ಹಾಗೂ ಒಂದು 360-ಡಿಗ್ರಿ ಕ್ಯಾಮೆರಾ ಅನ್ನು ಒಳಗೊಂಡಿದೆ. ಹೊಸ ಫೀಚರ್‌ಗಳು ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಪ್ಯಾಡೆಲ್ ಶಿಫ್ಟರ್‌ಗಳನ್ನು ಒಳಗೊಂಡಿದೆ. ಅಲ್ಲದೇ ಇದು ಹ್ಯಾಚ್‌ಬ್ಯಾಕ್‌ನಿಂದ ವಿಶಿಷ್ಟ ಸ್ಟೈಲಿಂಗ್ ಹೊಂದಿದ್ದು, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್, ಹಾಗೂ ದೊಡ್ಡ ಗ್ರ್ಯಾಂಡ್ ವಿಟಾರಾ SUVಯಿಂದ ಪ್ರೇರಿತವಾದ ಪ್ರೀಮಿಯಂ ಡಿಸೈನ್ ಫ್ರಂಟ್ ಮತ್ತು ರಿಯರ್ ಅನ್ನು ಹೊಂದಿದೆ.
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಈ ಕಾರುತಯಾರಕರು ಫ್ರಾಂಕ್ಸ್ ಅನ್ನು ರೂ 8 ಲಕ್ಷ ಆರಂಭಿಕ ಬೆಲೆಗೆ (ಎಕ್ಸ್-ಶೋರೂಂ) ಮಾರ್ಚ್‌ನಲ್ಲಿ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಈ ಇತ್ತೀಚಿನ ಮಾರುತಿ ಸಬ್‌ಕಾಂಪ್ಯಾಕ್ಟ್ ಕಿಯಾ ಸೋನೆಟ್, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್, ಮಹೀಂದ್ರಾ XUV300, ರೆನಾಲ್ಟ್ ಕಿಗಾರ್, ನಿಸ್ಸಾನ್ ಮ್ಯಾಗ್ನೈಟ್‌ಗೆ ಪ್ರತಿಸ್ಪರ್ಧಿಯಾಗಿದ್ದು ಮಾರುತಿ ಬ್ರೆಝಾಗೆ ಬದಲಿಯಾಗಿದೆ.
ಇದನ್ನೂ ಓದಿ: ಮಾರುತಿ ಸಿಯಾಜ್ ಸುರಕ್ಷಿತ, ಈಗ ಬರುತ್ತಿದೆ 3 ಡ್ಯುಯಲ್-ಟೋನ್ ಬಣ್ಣದ ಆಯ್ಕೆಗಳಲ್ಲಿ