• English
    • Login / Register

    ಇಂದು ಪ್ರಕಟವಾಗಲಿವೆ Tata Nexon Faceliftನ ಬೆಲೆಗಳು

    ಟಾಟಾ ನೆಕ್ಸಾನ್‌ ಗಾಗಿ ansh ಮೂಲಕ ಸೆಪ್ಟೆಂಬರ್ 14, 2023 12:19 pm ರಂದು ಪ್ರಕಟಿಸಲಾಗಿದೆ

    • 23 Views
    • ಕಾಮೆಂಟ್‌ ಅನ್ನು ಬರೆಯಿರಿ

    2023 ನೆಕ್ಸಾನ್ ಹೊಚ್ಚ ಹೊಸ ಡಿಸೈನ್ ಪಡೆದಿದ್ದು ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್‌ ಆಯ್ಕೆಗಳನ್ನು ಹೊಂದಿರುತ್ತವೆ.

    Tata Nexon Facelift

    • ಚೂಪು ನೋಟದ ಮುಂಭಾಗ, ಹೊಸ ಅಲಾಯ್ ವ್ಹೀಲ್‌ಗಳು ಮತ್ತು ಸಂಪರ್ಕಿತ ಟೇಲ್‌ಲ್ಯಾಂಪ್‌ಗಳನ್ನು ಪಡೆದಿವೆ.
    •  ಅಧಿಕ ವರ್ಟಿಕಲ್ ಎಲಿಮೆಂಟ್‌ಗಳೊಂದಿಗೆ ಸಂಪೂರ್ಣ ಪರಿಷ್ಕೃತ ಕ್ಯಾಬಿನ್ ಅನ್ನು ಹೊಂದಿದೆ.
    •  10.25-ಇಂಚು ಟಚ್‌ಸ್ಕ್ರೀನ್ ಇನ್ಫೊಟೇನ್‌ಮೆಂಟ್ ಡಿಸ್‌ಪ್ಲೇ, 10.25-ಇಂಚು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ವೆಂಟಿಲೇಟಡ್ ಫ್ರಂಟ್ ಸೀಟುಗಳನ್ನು ಪಡೆದಿದೆ.
    •  ಇದು ಎರಡು ಇಂಜಿನ್ ಆಯ್ಕೆಗಳನ್ನು ಪಡೆದಿದೆ: 115PS ಉತ್ಪಾದಿಸುವ1.5-ಡೀಸೆಲ್ ಇಂಜಿನ್ ಮತ್ತು 120PS ಉತ್ಪಾದಿಸುವ, 1.2-ಟರ್ಬೋ ಪೆಟ್ರೋಲ್ ಇಂಜಿನ್
    •  ಬೆಲೆಗಳು ರೂ 8 ಲಕ್ಷದಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುವ ನಿರೀಕ್ಷೆ ಇದೆ.

    2023 ಟಾಟಾ ನೆಕ್ಸಾನ್ ಅನ್ನು ಅನಾವರಣಗೊಳಿಸಲಾಗಿದ್ದು, ಈ ಫೇಸ್‌ಲಿಫ್ಟ್ ಇಂದು ಬಿಡುಗಡೆಯಾಗಲಿದೆ. ಈ ನವೀಕೃತ SUV  ಹೊಚ್ಚ ಹೊಸ ನೋಟವನ್ನು ಪಡೆದಿದ್ದು, ಮರುವಿನ್ಯಾಸಗೊಳಿಸಲಾದ ಇಂಟೀರಿಯರ್‌ಗಳು ಮತ್ತು ಸಾಕಷ್ಟು ಸಾಧನಗಳನ್ನು ತನ್ನ ಫೀಚರ್‌ಗಳ ಪಟ್ಟಿಯಲ್ಲಿ ಒಳಗೊಂಡಿದೆ. ಇದರ ಬುಕಿಂಗಳು ಸ್ವಲ್ಪ ಸಮಯದ ತನಕ ತೆರದಿದ್ದು, ಬಿಡುಗಡೆಗೆ ಮುನ್ನ ಇದರ ವಿವರವಾದ ಮಾಹಿತಿಯ ಬಗ್ಗೆ ತಿಳಿಯೋಣ.

     

    ಆಧುನಿಕ ಡಿಸೈನ್

    Tata Nexon Facelift Front

    ಈ ಫೇಸ್‌ಲಿಫ್ಟ್ ಅನ್ನು ಪ್ರಸ್ತುತ ಪೀಳಿಗೆಗೆ ತಕ್ಕಂತೆ ನವೀಕೃತಗೊಳಿಸಲು ಟಾಟಾ ಸಾಕಷ್ಟು ಶ್ರಮಿಸಿದೆ. ಚೂಪಾದ ಬೋನೆಟ್‌ನೊಂದಿಗೆ ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾದ ಮುಂಭಾಗ, ಅನುಕ್ರಮವಾಗಿ ಜೋಡಿಸಿದ LED DRLಗಳು, ಹ್ಯಾರಿಯರ್ EV ಪರಿಕಲ್ಪನೆಯಿಂದ ಪಡೆದುಕೊಂಡ ಲಂಬವಾಗಿ ಅಳವಡಿಸಲಾದ LED ಹೆಡ್‌ಲೈಟ್‌ಗಳು, ಮತ್ತು  ನಯವಾದ ಹೊಳಪಿನ ಬಂಪರ್ ಅನ್ನು ಹೊಂದಿರುತ್ತದೆ.

    Tata Nexon Facelift Rear 3/4th

    ಏರೋಡೈನಾಮಿಕ್ ವಿನ್ಯಾಸದ 16-ಇಂಚು ಅಲಾಯ್ ವ್ಹೀಲ್‌ಗಳನ್ನು ಹೊರತುಪಡಿಸಿದರೆ ಇದರ ಸೈಡ್ ಪ್ರೊಫೈಲ್ ಹೆಚ್ಚು ಕಡಿಮೆ ಒಂದೇ ರೀತಿಯಾಗಿ ಇದೆ. ಆದಾಗ್ಯೂ, ಹಿಂಭಾಗವು ಅನೇಕ ಬದಲಾವಣೆಗಳನ್ನು ಪಡೆದಿದ್ದು, ಮುಂಭಾಗದಂತೆ ಇರುವುದಿಲ್ಲ. ಇಲ್ಲಿ ಪ್ರಮುಖವಾದ ಫೀಚರ್ ಎಂದರೆ ಸಂಪರ್ಕಿತ ಟೇಲ್ ಲ್ಯಾಂಪ್ ಮತ್ತು ಚಪ್ಪಟೆಯಾಕಾರದ ಮತ್ತು ಮರುವಿನ್ಯಾಸಗೊಳಿಸಿದ ಬಂಪರ್.

     

    ನವೀಕೃತ ಕ್ಯಾಬಿನ್

    Tata Nexon Facelift Cabin

    ಎಕ್ಸ್‌ಟೀರಿಯರ್‌ನಂತೆ, ಇಂಟೀರಿಯರ್‌ ಕೂಡಾ ಸಂಪೂರ್ಣವಾಗಿ ಮರುವಿನ್ಯಾಸಗೊಂಡಿದ್ದು, ಇದರ ಡ್ಯಾಶ್‌ಬೋರ್ಡ್ ಮೊದಲಿನ ಕರ್ವ್ ವಿನ್ಯಾಸಕ್ಕಿಂತ ಭಿನ್ನವಾಗಿ  ಹೆಚ್ಚು ನೇರವಾಗಿದೆ. ಈ ನವೀನ ಕ್ಯಾಬಿನ್‌ನ ಪ್ರಮುಖ ಆಕರ್ಷಣೆಗಳೆಂದರೆ, ದೊಡ್ಡದಾದ ಸೆಂಟ್ರಲ್ ಡಿಸ್‌ಪ್ಲೇ, ಸೆಂಟರ್ ಕನ್‌ಸೋಲ್‌ನಲ್ಲಿ ಭೌತಿಕ ಕಂಟ್ರೋಲ್‌ಗಳು ಮತ್ತು ಹೊಸ ಎರಡ್-ಸ್ಪೋಕ್‌ನ ಸ್ಟೀರಿಂಗ್ ವ್ಹೀಲ್ ಹಾಗೂ ಇದರೊಂದಿಗೆ ಬ್ಯಾಕ್‌ಲಿಟ್ ಟಾಟಾ ಲೋಗೋ ಅನ್ನೂ ಕಾಣಬಹುದು. ಇದು ಹೊಸ ಕ್ಯಾಬಿನ್ ಥೀಮ್ ಕಲರ್‌ಗಳನ್ನು(ಹೊಸ ಪೈಂಟ್ ಆಯ್ಕೆಗಳೊಂದಿಗೆ ಮ್ಯಾಚ್ ಮಾಡಬಹುದಾದ) ಪಡೆದಿದ್ದು ಅಪ್‌ಹೋಲ್ಸ್‌ಟ್ರಿಯಲ್ಲೂ ಇದನ್ನು ಕಾಣಬಹುದು.

     

    ಹೊಸ ಫೀಚರ್‌ಗಳು

    Tata Nexon Facelift 10.25-inch Touchscreen Infotainment System

    ನೆಕ್ಸಾನ್ ಈಗ 10.25-ಇಂಚು ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್‌ ಸಿಸ್ಟಮ್, ವೈರ್‌ಲೆಸ್ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ, 10.25-ಇಂಚು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಪ್ಯಾಡಲ್ ಶಿಫ್ಟರ್‌ಗಳು ಮತ್ತು ಸ್ಪರ್ಶ-ನಿಯಂತ್ರಿತ ಕಂಟ್ರೋಲ್ ಪ್ಯಾನೆಲ್ ಅನ್ನು ಪಡೆದಿದೆ. ಇತರ ಫೀಚರ್‌ಗಳೆಂದರೆ, ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟಡ್ ಫ್ರಂಟ್ ಸೀಟುಗಳು, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಕ್ರೂಸ್‌ ಕಂಟ್ರೋಲ್, ಇದನ್ನು ನಿರ್ಗಮಿತ ನೆಕ್ಸಾನ್‌ನಿಂತ ಉಳಿಸಿಕೊಳ್ಳಲಾಗಿದೆ.

    ಇದನ್ನೂ ಓದಿ:  ಹ್ಯುಂಡೈ ವೆನ್ಯೂನಲ್ಲಿ ಇಲ್ಲದ, ಈ 7 ಫೀಚರ್‌ಗಳು ಟಾಟಾ ನೆಕ್ಸಾನ್‌ ಫೇಸ್‌ಲಿಫ್ಟ್‌ನಲ್ಲಿದೆ 

    ಸುರಕ್ಷತೆಯ ವಿಷಯದಲ್ಲಿ, ಇದು 6 ಏರ್‌ಬ್ಯಾಗ್‌ಗಳನ್ನು ಸ್ಟಾಂಡರ್ಡ್ ಆಗಿ ಪಡೆದಿದ್ದು, ABS ಜೊತೆಗಿನ EBD, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಹಿಲ್ ಹೋಲ್ಡ್ ಅಸಿಸ್ಟ್, ಮತ್ತು ಬ್ಲೈಂಡ್ ವ್ಯೂ ಮಾನಿಟರ್ ಹೊಂದಿದ 360-ಕ್ಯಾಮರಾವನ್ನು ಹೊಂದಿದೆ.

     

    ಅದೇ ಇಂಜಿನ್

    Tata Nexon Facelift

    ನೆಕ್ಸಾನ್‌ನ ಡಿಸೈನ್ ಮತ್ತು ಫೀಚರ್ ಪಟ್ಟಿಯನ್ನು ನವೀಕರಣಗೊಳಿಸಿರುವ ಟಾಟಾ, ಇಂಜಿನ್ ಆಯ್ಕೆಗಳಿಗೆ ಯಾವುದೇ ಬದವಾವಣೆ ನೀಡಿಲ್ಲ. ಹಿಂದಿನ 1.5-ಲೀಟರ್ ಡೀಸೆಲ್ ಇಂಜಿನ್ (115PS ಮತ್ತು 260Nm) ಹಾಗೂ 1.2-ಲೀಟರ್ ಟರ್ಬೋ ಪೆಟ್ರೋಲ್ ಇಂಜಿನ್ (120PS ಮತ್ತು 170Nm) ಅನ್ನು ಹಾಗೆಯೇ ಉಳಿಸಲಾಗಿದೆ.

    ಇದನ್ನೂ ಓದಿ: ಪರಿಶೀಲಿಸಿ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್‌ನ ವೇರಿಯೆಂಟ್‌ವಾರು ಪವರ್‌ಟ್ರೇನ್‌ಗಳು ಮತ್ತು ಕಲರ್ ಆಯ್ಕೆಗಳು

    ಡೀಸೆಲ್ ಇಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಅಥವಾ AMTನೊಂದಿಗೆ ಜೋಡಿಸಲಾಗಿದ್ದು, ಟರ್ಬೋ ಪೆಟ್ರೋಲ್ ಯೂನಿಟ್ ಈಗ –5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್, 6-ಸ್ಪೀಡ್ AMT ಮತ್ತು 7-ಸ್ಪೀಡ್ DCT ಎಂಬ ನಾಲ್ಕು ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಪಡೆದಿದೆ.

     

    ಬೆಲೆಗಳು ಮತ್ತು ಪ್ರತಿಸ್ಪರ್ಧಿಗಳು

    Tata Nexon Facelift

    ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ಅನ್ನು ರೂ 8 ಲಕ್ಷ  (ಎಕ್ಸ್-ಶೋರೂಂ) ಆರಂಭಿಕ ಬೆಲೆಯೊಂದಿಗೆ ಬಿಡುಗಡೆಗೊಳಿಸುವ ನಿರೀಕ್ಷೆ ಇದೆ. ಇದು ತನ್ನ ಪ್ರತಿಸ್ಪರ್ಧಿಗಳಾದ ಕಿಯಾ ಸೋನೆಟ್, ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ, ಮಹೀಂದ್ರಾ XUV300, ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕೈಗರ್‌ನೊಂದಿಗೆ ಪೈಪೋಟಿಯನ್ನು ಮುಂದುವರೆಸಲಿದೆ.

    ಇನ್ನಷ್ಟು ಓದಿ: ನೆಕ್ಸಾನ್ ಆಟೋಮ್ಯಾಟಿಕ್ 

    was this article helpful ?

    Write your Comment on Tata ನೆಕ್ಸಾನ್‌

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience