ಎಂಜಿ ಕಾಮೆಟ್ ಇವಿಯ ರೇಂಜ್ ಮತ್ತು ಬ್ಯಾಟರಿ ವಿಶೇಷತೆಗಳ ಮಾಹಿತಿ ಸೋರಿಕೆ!
ಎಂಜಿ ಕಾಮೆಟ್ ಇವಿ ಗಾಗಿ tarun ಮೂಲಕ ಏಪ್ರಿಲ್ 21, 2023 10:33 am ರಂದು ಪ್ರಕಟಿಸಲಾಗಿದೆ
- 19 Views
- ಕಾಮೆಂಟ್ ಅನ್ನು ಬರೆಯಿರಿ
ಈ ವಿಶೇಷತೆಗಳೊಂದಿಗೆ, ಇದು ಟಾಟಾ ಟಿಯಾಗೊ ಇವಿಯ ಆರಂಭಿಕ ಮಟ್ಟದ ವೇರಿಯೆಂಟ್‌ಗಳಿಗೆ ಪ್ರತಿಸ್ಪರ್ಧಿಯಾಗಬಹುದು.
- ಕಾಮೆಟ್ ಇವಿ 230 ಕಿಲೋಮೀಟರ್‌ಗಳವರೆಗೆ ಕ್ಲೈಮ್ ಮಾಡಿದ 17.3kWh ಬ್ಯಾಟರಿ ಪ್ಯಾಕ್ ಅನ್ನು ಮಾತ್ರ ಪಡೆಯಲಿದೆ.
- ಈ ಎಲೆಕ್ಟ್ರಿಕ್ ಮೋಟಾರ್ 42PS ಮತ್ತು 110Nm ಕಾರ್ಯಕ್ಷಮತೆಯನ್ನು ಕ್ಲೈಮ್ ಮಾಡುತ್ತದೆ.
- 3.3kW ಚಾರ್ಜರ್‌ನಿಂದ ಸಂಪೂರ್ಣ ಚಾರ್ಜ್ ಮಾಡಲು ಈ ಕಾಮೆಟ್ ಇವಿ ಏಳು ಗಂಟೆಗಳವರೆಗೆ ತೆಗೆದುಕೊಳ್ಳುತ್ತದೆ.
- ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಡ್ಯುಯಲ್ 10.25-ಇಂಚಿನ ಡಿಸ್‌ಪ್ಲೇ ಸ್ಕ್ರೀನ್‌ಗಳು, ಇಎಸ್‌ಸಿ, ಹಿಲ್ ಸ್ಟಾರ್ಟ್ ಅಸಿಸ್ಟ್ ಮತ್ತು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳನ್ನು ಫೀಚರ್‌ಗಳಾಗಿ ಹೊಂದಿದೆ.
- ಇದರ ನಿರೀಕ್ಷಿತ ಬೆಲೆಯು ರೂ. 10 ಲಕ್ಷದಿಂದ ರೂ. 15 ಲಕ್ಷವಾಗಿದೆ (ಎಕ್ಸ್-ಶೋರೂಮ್).
ಎಂಜಿ ಕಾಮೆಟ್ ಇವಿಯು ಅನಾವರಣಕ್ಕೆ ಮುಂಚಿತವಾಗಿ, ಆನ್‌ಲೈನ್ ಅಲ್ಲಿ ಅದರ ವಿವರವಾದ ಬ್ರೋಷರ್ ಇಂಡಿಯಾ-ಸ್ಪೆಕ್ ಬ್ಯಾಟರಿ ಮತ್ತು ರೇಂಜ್ ಅಂಕಿಅಂಶಗಳನ್ನು ಒಳಗೊಂಡಂತೆ ಸೋರಿಕೆಯಾಗಿದೆ. ಈ ಎಲೆಕ್ಟ್ರಿಕ್ ಕಾಂಪ್ಯಾಕ್ಟ್‌ಗಾಗಿ ಆಫ್‌ಲೈನ್ ಬುಕಿಂಗ್‌ಗಳು ಈಗ ತೆರಿದಿವೆ ಎಂದು ನಮ್ಮ ಡೀಲರ್ ಮೂಲಗಳು ತಿಳಿಸಿವೆ. ಈ 2-ಬಾಗಿಲಿನ ಇವಿಯನ್ನು, ವಿಶೇಷವಾಗಿ ಈ ಅಂಕಿಅಂಶಗಳೊಂದಿಗೆ ಸಮೂಹ- ಮಾರುಕಟ್ಟೆಯ ನಗರ ಪ್ರದೇಶದ ಖರೀದಿದಾರರಿಗಾಗಿ ತಯಾರಿಸಲಾಗಿದೆ.
ಈ ಕಾಮೆಟ್ ಇವಿ 17.3kWh ಬ್ಯಾಟರಿ ಪ್ಯಾಕ್ ಅನ್ನು ಪಡೆಯಲಿದೆ ಮತ್ತು 230 ಕಿಲೋಮೀಟರ್ ರೇಂಜ್ ಅನ್ನು ಕ್ಲೈಮ್ ಮಾಡಿದೆ. ಈ ರಿಯರ್ ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್ 42PS ಮತ್ತು 110Nm ಪೀಕ್ ಟಾರ್ಕ್ ಅನ್ನು ನೀಡುತ್ತದೆ. 3.3kW ಚಾರ್ಜರ್‌ನೊಂದಿಗೆ, ಈ ಕಾಮೆಟ್ ಇವಿ EV ಸಂಪೂರ್ಣ ಚಾರ್ಜ್ ಆಗಲು ಏಳು ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಶೇಕಡಾ 10-80 ರಷ್ಟು ಚಾರ್ಜ್ ಆಗಲು ಐದು ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಇದು ವೇಗದ ಚಾರ್ಜಿಂಗ್ ಸಾಮರ್ಥ್ಯಗಳನ್ನು ಪಡೆಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.
ಇದನ್ನೂ ಓದಿ: ಭಾರತದಲ್ಲಿ ಮುಂಬರುವ ಎಲೆಕ್ಟ್ರಿಕ್ ಕಾರುಗಳು
ಈ ಕಾಮೆಟ್ ಇವಿ ಮಾರಾಟದಲ್ಲಿರುವ ಅತ್ಯಂತ ಚಿಕ್ಕ ಕಾರುಗಳಲ್ಲಿ ಒಂದಾಗಿದ್ದು, ಒಮ್ಮೆ ಬಿಡುಗಡೆಯಾದ ನಂತರ ಮೂರು ಮೀಟರ್‌ಗಿಂತಲೂ ಕಡಿಮೆ ಉದ್ದವನ್ನು ಹೊಂದಿರುತ್ತದೆ. ಆದಾಗ್ಯೂ ಇದರ ಒಳಗಡೆ ನಾಲ್ಕು ಜನರು ಕುಳಿತುಕೊಳ್ಳಬಹುದಾಗಿದ್ದು, ಇದು ಯಾವುದೇ ಬೂಟ್ ಸ್ಪೇಸ್ ಅನ್ನು ಹೊಂದಿಲ್ಲ. ಆಫರ್‌ನಲ್ಲಿ ಹಲವಾರು ಪ್ರೀಮಿಯಂ ಫೀಚರ್‌ಗಳೊಂದಿಗೆ ಪ್ರೀಮಿಯಂ ನೋಟವನ್ನು ನೀಡುವ ವಿನ್ಯಾಸವನ್ನು ನಮಗೆ ತೋರಿಸಲು ಇಂಟೀರಿಯರ್ ಅನ್ನು ಈಗಾಗಲೇ ಬಹಿರಂಗಪಡಿಸಲಾಗಿದೆ.
ಈ ಎಮ್‌ಜಿ ಕಾಮೆಟ್ ಇವಿ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್ ಲ್ಯಾಂಪ್‌ಗಳು, ಟಚ್‌ಸ್ಕ್ರೀನ್ ಇನ್‌ಫೋಟೈನ್‌ಮೆಂಟ್ ಮತ್ತು ಡ್ರೈವರ್ ಡಿಸ್‌ಪ್ಲೇಗಾಗಿ ಡ್ಯುಯಲ್ 10.25-ಇಂಚಿನ ಡಿಸ್‌ಪ್ಲೇಗಳು, ಮ್ಯಾನ್ಯುವಲ್ ಎಸಿ, ಸ್ಟಿಯರಿಂಗ್-ಮೌಂಟೆಡ್ ಕಂಟ್ರೋಲ್‌ಗಳು, ಸ್ಟಿಯರಿಂಗ್ ವ್ಹೀಲ್‌ಗೆ ಟೆಲಿಸ್ಕೋಪಿಕ್ ಹೊಂದಾಣಿಕೆ, ಕೀಲೆಸ್ ಎಂಟ್ರಿ, ಮತ್ತು ಡ್ರೈವ್ ಮೋಡ್‌ಗಳನ್ನು ಒಳಗೊಂಡಿರುತ್ತದೆ. ಪ್ರಯಾಣಿಕರ ಸುರಕ್ಷಿತಗಾಗಿ, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್, ಇಎಸ್‌ಸಿ, ಹಿಲ್ ಸ್ಟಾರ್ಟ್ ಅಸಿಸ್ಟ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾವನ್ನು ನೀಡಲಾಗಿದೆ ಎಂದು ನಿರೀಕ್ಷಿಸಲಾಗಿದೆ.
ಕಾಮೆಟ್ ಇವಿಯ ಬೆಲೆಗಳನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದ್ದು ಅದು ರೂ. 10 ಲಕ್ಷದಿಂದ ರೂ. 15 ಲಕ್ಷದವರೆಗೆ (ಎಕ್ಸ್-ಶೋರೂಮ್) ಇರಬಹುದೆಂದು ಊಹಿಸಲಾಗಿದೆ. 19.2kWh ಪ್ಯಾಕ್ ಮತ್ತು 250 ಕಿಲೋಮೀಟರ್ ವ್ಯಾಪ್ತಿಯೊಂದಿಗೆ ಟಾಟಾ ಟಿಯಾಗೊ ಇವಿ ಆರಂಭಿಕ ಹಂತದ ವೇರಿಯೆಂಟ್‌ಗಳು ಎಂಜಿ ಮೈಕ್ರೋ-ಹ್ಯಾಚ್‌ಗೆ ಮಾದರಿ ಪ್ರತಿಸ್ಪರ್ಧಿಯಾಗಿರುತ್ತದೆ.
0 out of 0 found this helpful