ರೆನಾಲ್ಟ್ ತನ್ನ ಎಲ್ಲಾ ಕಾರುಗಳ ಶ್ರೇಣಿಯನ್ನು 2024 ಕ್ಕಾಗಿ ಅಪ್ಡೇಟ್ ಮಾಡಿದೆ: ಹೊಸ ಫೀಚರ್ ಗಳು ಮತ್ತು ಬೆಲೆ ಕಡಿತ ಕೂಡ ಸಿಗಲಿದೆ!

published on ಜನವರಿ 10, 2024 05:07 pm by rohit for ರೆನಾಲ್ಟ್ ಕ್ವಿಡ್

 • 46 Views
 • ಕಾಮೆಂಟ್‌ ಅನ್ನು ಬರೆಯಿರಿ

 ಕ್ವಿಡ್ ಮತ್ತು ಟ್ರೈಬರ್ ಹೊಸ ಸ್ಕ್ರೀನ್ ಗಳನ್ನು ಪಡೆಯುತ್ತಿವೆ ಮತ್ತು ಕ್ಯಾಬಿನ್ ಅನ್ನು ಇನ್ನಷ್ಟು ಪ್ರೀಮಿಯಂ ಮಾಡಲು ಕಿಗರ್ ಕೂಡ ಅಪ್ಡೇಟ್ ಗಳನ್ನು ಪಡೆಯುತ್ತಿದೆ.     

Renault Kwid, Triber and Kiger get MY24 updates

 • ಕ್ವಿಡ್ ಈಗ ಆಟೋಮ್ಯಾಟಿಕ್ ಗೇರ್ಬಾಕ್ಸ್ ಮತ್ತು ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ನೀಡುವ ಮೂಲಕ ಅತ್ಯಂತ ಕೈಗೆಟುಕುವ ಬೆಲೆಯ ವೇರಿಯಂಟ್ ಆಗಿದೆ.

 • ಟ್ರೈಬರ್ನಲ್ಲಿನ ಹೊಸ ಫೀಚರ್ ಗಳಲ್ಲಿ ವೈರ್ಲೆಸ್ ಫೋನ್ ಚಾರ್ಜಿಂಗ್ ಮತ್ತು ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಸೇರಿವೆ.

 • ಕಿಗರ್ ತನ್ನ ಕೆಳಮಟ್ಟದ ವೇರಿಯಂಟ್ ನಲ್ಲಿ ಸೆಮಿ-ಲೆಥೆರೆಟ್ ಸೀಟ್ಗಳು, ಡ್ಯುಯಲ್-ಟೋನ್ ಕ್ಯಾಬಿನ್ ಥೀಮ್ ಮತ್ತು ಆಟೋ ಎಸಿ ಲಭ್ಯವಿದೆ.

 • ಕ್ವಿಡ್ ಬೆಲೆಯು ಈಗ ರೂ 4.70 ಲಕ್ಷದಿಂದ ರೂ 6.12 ಲಕ್ಷದವರೆಗೆ ಇದೆ.

 • ರೆನಾಲ್ಟ್ ಈಗ ಟ್ರೈಬರ್ ಅನ್ನು 6 ಲಕ್ಷದಿಂದ 8.75 ಲಕ್ಷದವರೆಗೆ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ.

 • ಕಿಗರ್ ಬೆಲೆಯು ಈಗ 6 ಲಕ್ಷದಿಂದ 11 ಲಕ್ಷದವರೆಗೆ ಇದೆ.

ಹೊಸ ವರ್ಷದ ಮೊದಲ ಭಾಗದಲ್ಲಿ ನಾವು ಸಾಮಾನ್ಯವಾಗಿ ನೋಡಿದಂತೆ, ಅನೇಕ ಕಾರು ತಯಾರಕರು ತಮ್ಮ ಶ್ರೇಣಿಯ ಕೆಲವು ಅಥವಾ ಎಲ್ಲಾ ಮಾಡೆಲ್ ಗಳಿಗೆ ಸ್ಪರ್ಧೆಯ ಕಾರಣದಿಂದ ಮತ್ತು ಮಾರುಕಟ್ಟೆಯಲ್ಲಿರುವ ಬೇಡಿಕೆಯನ್ನು ಉಳಿಸಿಕೊಳ್ಳಲು MY (ಮಾಡೆಲ್ ಇಯರ್) ಅಪ್ಡೇಟ್ ಅನ್ನು ನೀಡುತ್ತಾರೆ. ಈಗ, ರೆನಾಲ್ಟ್ ಇಂಡಿಯಾ ತನ್ನ ಶ್ರೇಣಿಯಲ್ಲಿನ ಎಲ್ಲಾ ಮೂರು ಮಾಡೆಲ್ ಗಳಿಗೆ ಅಪ್ಡೇಟ್ ಅನ್ನು ನೀಡಿದೆ ಮತ್ತು ಕೆಲವು ವೇರಿಯಂಟ್ ಗಳ ಮಾರಾಟ ಬೆಲೆಯನ್ನು ಕೂಡ ಕಡಿಮೆ ಮಾಡಿದೆ.

ಬನ್ನಿ, ಇದರ ವಿವರಗಳನ್ನು ನೋಡೋಣ:

ಕ್ವಿಡ್

2024 Renault Kwid

 

ವೇರಿಯಂಟ್

 

ಹಳೆ ಬೆಲೆ

 

ಹೊಸ ಬೆಲೆ

 

ವ್ಯತ್ಯಾಸ

RXE

ರೂ 4.70 ಲಕ್ಷ

ರೂ 4.70 ಲಕ್ಷ

 

ಯಾವುದೇ ಬದಲಾವಣೆ ಇಲ್ಲ

RXL

ರೂ 5 ಲಕ್ಷ

 

ನಿಲ್ಲಿಸಲಾಗಿದೆ

RXL (O)

ರೂ 5.21 ಲಕ್ಷ

ರೂ 5 ಲಕ್ಷ

(ರೂ 21,000)

 

RXL (O) AMT [ಹೊಸ]

ರೂ 5.45 ಲಕ್ಷ

RXT

ರೂ 5.67 ಲಕ್ಷ

ರೂ 5.50 ಲಕ್ಷ

(ರೂ 17,000)

RXT AMT

ರೂ 6.12 ಲಕ್ಷ

ರೂ 5.95 ಲಕ್ಷ

(ರೂ 17,000)

 

ಕ್ಲೈಂಬರ್

ರೂ 5.88 ಲಕ್ಷ

ರೂ 5.88 ಲಕ್ಷ

 

ಯಾವುದೇ ಬದಲಾವಣೆ ಇಲ್ಲ

 

ಕ್ಲೈಂಬರ್ AMT

ರೂ 6.33 ಲಕ್ಷ

ರೂ 6.12 ಲಕ್ಷ

(ರೂ 21,000)

ರೆನಾಲ್ಟ್ ಕ್ವಿಡ್ ಅಪ್ಡೇಟ್ಗಳು ಸೂಕ್ಷ್ಮವಾಗಿದ್ದರೂ ಕೂಡ ಗಮನಾರ್ಹವಾಗಿವೆ. ಅಂತಹ ಒಂದು ಅಪ್ಡೇಟ್ ಗಳಲ್ಲಿ, ಈ ಫ್ರೆಂಚ್ ಬ್ರ್ಯಾಂಡ್ ಎಲ್ಲಾ ವೇರಿಯಂಟ್ ಗಳಲ್ಲಿ ಹಿಂಭಾಗದ ಸೀಟ್ಬೆಲ್ಟ್ ಗೆ ರಿಮೈಂಡರ್ಗಳನ್ನು ಅಳವಡಿಸಿದೆ. ಅದರ ಜೊತೆಗೆ, RXT ಮತ್ತು ಕ್ಲೈಂಬರ್ ಟಾಪ್ ಟ್ರಿಮ್ಗಳಿಗೆ ಮಾತ್ರ ಸೀಮಿತವಾಗಿದ್ದ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಈಗ ಕೆಳಮಟ್ಟದ RXL (O) ವೇರಿಯಂಟ್ ಗಳಿಂದ ಕೂಡ ನೀಡಲು ಶುರುಮಾಡಿದೆ. ಅಪ್ಡೇಟ್ ನೊಂದಿಗೆ, ಟಚ್ಸ್ಕ್ರೀನ್ ಯೂನಿಟ್ ಅನ್ನು ಪಡೆದಿರುವ ಮಾರುಕಟ್ಟೆಯಲ್ಲಿ ಸಿಗುವ ಅತ್ಯಂತ ಕೈಗೆಟುಕುವ ಬೆಲೆಯ ಕಾರುಗಳಲ್ಲಿ ಕ್ವಿಡ್ ಒಂದಾಗಿದೆ.

ಮಿಡ್-ಸ್ಪೆಕ್ RXL (O) ವೇರಿಯಂಟ್ ಮತ್ತು ಅದರ ಮೇಲಿನ ವೇರಿಯಂಟ್ ಗಳಿಗೆ 5-ಸ್ಪೀಡ್ AMT ಅನ್ನು ನೀಡಲು ರೆನಾಲ್ಟ್ ನಿರ್ಧರಿಸಿದೆ, ಇದು ಬಜೆಟ್ಬೆಲೆಯಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆಯನ್ನು ಬಯಸುವವರಿಗೆ ಉತ್ತಮ ಆಯ್ಕೆಯಾಗಿದೆ.

ಟ್ರೈಬರ್

2024 Renault Triber

 

ವೇರಿಯಂಟ್

 

ಹಳೆ ಬೆಲೆ

 

ಹೊಸ ಬೆಲೆ

 

ವ್ಯತ್ಯಾಸ

RXE

ರೂ 6.34 ಲಕ್ಷ

ರೂ 6 ಲಕ್ಷ

(ರೂ 34,000)

RXL

ರೂ 7.05 ಲಕ್ಷ

ರೂ 6.80 ಲಕ್ಷ

(ರೂ 25,000)

RXT

ರೂ 7.61 ಲಕ್ಷ

ರೂ 7.61 ಲಕ್ಷ

 

ಯಾವುದೇ ಬದಲಾವಣೆ ಇಲ್ಲ

RXT AMT

ರೂ 8.13 ಲಕ್ಷ

ರೂ 8.13 ಲಕ್ಷ

 

ಯಾವುದೇ ಬದಲಾವಣೆ ಇಲ್ಲ

RXZ

ರೂ 8.23 ಲಕ್ಷ

ರೂ 8.23 ಲಕ್ಷ

 

ಯಾವುದೇ ಬದಲಾವಣೆ ಇಲ್ಲ

RXZ AMT

ರೂ 8.75 ಲಕ್ಷ

ರೂ 8.75 ಲಕ್ಷ

 

ಯಾವುದೇ ಬದಲಾವಣೆ ಇಲ್ಲ

ರೆನಾಲ್ಟ್ ಟ್ರೈಬರ್ ಈಗ ಹೊಸದಾದ ಸ್ಟೆಲ್ತ್ ಬ್ಲ್ಯಾಕ್ ಬಣ್ಣದಲ್ಲಿ ಕೂಡ ಲಭ್ಯವಿದೆ. ಅಷ್ಟೇ ಅಲ್ಲ, ರೆನಾಲ್ಟ್ ಟ್ರೈಬರ್ ಪ್ರತಿಯೊಂದು ವೇರಿಯಂಟ್ ಗಳಲ್ಲಿ ಕೂಡ ಕೆಲವು ಹೊಸ ಫೀಚರ್ ಗಳನ್ನು ನೀಡಲಾಗಿದೆ:

 • RXE- ಟಿಲ್ಟ್-ಅಡ್ಜಸ್ಟ್ ಮಾಡಬಹುದಾದ ಸ್ಟೀರಿಂಗ್ ವೀಲ್ ಮತ್ತು ಮಾನ್ಯುಯಲ್ ಆಗಿ ಅಡ್ಜಸ್ಟ್ ಮಾಡಬಹುದಾದ ORVM ಗಳು

 • RXL- ರಿಯರ್ AC ವೆಂಟ್ ಗಳು

 • RXT- ರಿವರ್ಸಿಂಗ್ ಕ್ಯಾಮೆರಾ, ರಿಯರ್ ವೈಪರ್, 12V ಪವರ್ ಸಾಕೆಟ್ ಮತ್ತು PM2.5 ಏರ್ ಫಿಲ್ಟರ್

 • RXZ- 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ವೈರ್ಲೆಸ್ ಫೋನ್ ಚಾರ್ಜಿಂಗ್, ಡ್ರೈವರ್-ಸೀಟ್ ಆರ್ಮ್ ರೆಸ್ಟ್, ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ORVM ಗಳು ಮತ್ತು PM2.5 ಏರ್ ಫಿಲ್ಟರ್

ಇದರ ಜೊತೆಗೆ, ಸಬ್-4m ಕ್ರಾಸ್ಒವರ್ MPV ಎಲ್ಲಾ ವೇರಿಯಂಟ್ ಗಳು ಈಗ ರಿಯರ್ ಸೀಟ್ಬೆಲ್ಟ್ ರಿಮೈಂಡರ್ ಮತ್ತು LED ಕ್ಯಾಬಿನ್ ಲ್ಯಾಂಪ್ನೊಂದಿಗೆ ಬರುತ್ತವೆ.

ಇದನ್ನು ಕೂಡ ಓದಿ: ಡಿಸೆಂಬರ್ 2023 ರಲ್ಲಿ ಅತಿ ಹೆಚ್ಚು ಮಾರಾಟವಾಗಿರುವ ಟಾಪ್ 15 ಕಾರುಗಳನ್ನು ನೋಡೋಣ

ಕಿಗರ್

2024 Renault Kiger

 

ವೇರಿಯಂಟ್

 

ಹಳೆ ಬೆಲೆ

 

ಹೊಸ ಬೆಲೆ

 

ವ್ಯತ್ಯಾಸ

RXE

ರೂ 6.50 ಲಕ್ಷ

ರೂ 6 ಲಕ್ಷ

(ರೂ 50,000)

 

RXL (ಹೊಸ)

ರೂ 6.60 ಲಕ್ಷ

 

RXL AMT (ಹೊಸ)

ರೂ 7.10 ಲಕ್ಷ

RXT

ರೂ 7.92 ಲಕ್ಷ

ರೂ 7.50 ಲಕ್ಷ

(ರೂ 42,000)

RXT (O)

ರೂ 8.25 ಲಕ್ಷ

ರೂ 8 ಲಕ್ಷ

(ರೂ 25,000)

RXT AMT

ರೂ 8.47 ಲಕ್ಷ

ರೂ 8 ಲಕ್ಷ

(ರೂ 47,000)

RXT AMT (O)

ರೂ 8.80 ಲಕ್ಷ

ರೂ 8.50 ಲಕ್ಷ

(ರೂ 30,000)

RXZ

ರೂ 8.80 ಲಕ್ಷ

ರೂ 8.80 ಲಕ್ಷ

 

ಯಾವುದೇ ಬದಲಾವಣೆ ಇಲ್ಲ

RXZ AMT

ರೂ 9.35 ಲಕ್ಷ

ರೂ 9.30 ಲಕ್ಷ

(ರೂ 5,000)

 

RXT (O) ಟರ್ಬೊ [ಹೊಸ]

ರೂ 9.30 ಲಕ್ಷ

 

RXT (O) ಟರ್ಬೊ AMT [ಹೊಸ]

ರೂ 10.30 ಲಕ್ಷ

 

RXZ ಟರ್ಬೊ

ರೂ 10 ಲಕ್ಷ

ರೂ 10 ಲಕ್ಷ

 

ಯಾವುದೇ ಬದಲಾವಣೆ ಇಲ್ಲ

 

RXZ ಟರ್ಬೊ CVT

ರೂ 11 ಲಕ್ಷ

ರೂ 11 ಲಕ್ಷ

 

ಯಾವುದೇ ಬದಲಾವಣೆ ಇಲ್ಲ

ರೆನಾಲ್ಟ್ ಕಿಗರ್ ಮೂರು ಕಾರುಗಳ ಪೈಕಿ ಅತ್ಯಂತ ಸಮಗ್ರವಾದ ಅಪ್ಡೇಟ್ ಗಳೊಂದಿಗೆ ಎದ್ದು ಕಾಣುತ್ತದೆ. ಇದರ ಕಾಸ್ಮೆಟಿಕ್ ಅಪ್ಡೇಟ್ ಗಳಲ್ಲಿ ರೆಡ್ ಬ್ರೇಕ್ ಕ್ಯಾಲಿಪರ್ಗಳು ಮತ್ತು ಕಪ್ಪು ಮತ್ತು ಕೆಂಪು ಬಣ್ಣದ ಅಪ್ಹೋಲಿಸ್ಟ್ರೀ ಗಳು ಸೇರಿವೆ, ಇದು ಕಾರಿಗೆ ಒಂದು ಹೊಚ್ಚಹೊಸ ಲುಕ್ ಅನ್ನು ನೀಡುತ್ತದೆ. ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ಗಾಗಿ ರೆನಾಲ್ಟ್ ಹೊಸ ಮಿಡ್-ಸ್ಪೆಕ್ RXL ವೇರಿಯಂಟ್ ಅನ್ನು ಮತ್ತು ಟರ್ಬೊ-ಪೆಟ್ರೋಲ್ ಎಂಜಿನ್ಗಾಗಿ RXT (O) ವೇರಿಯಂಟ್ ಅನ್ನು ಪರಿಚಯಿಸಿದೆ, ಎರಡರಲ್ಲೂ ಮಾನ್ಯುಯಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಗಳನ್ನು ನೀಡಲಾಗುತ್ತದೆ. ಇದರ ಜೊತೆಗೆ, ರೆನಾಲ್ಟ್ ಕಿಗರ್ ಎಲ್ಲಾ ವೇರಿಯಂಟ್ ಗಳು ಈಗ ಕೆಳಗೆ ತಿಳಿಸಲಾದ ಹೊಸ ಫೀಚರ್ ಗಳ ಶ್ರೇಣಿಯೊಂದಿಗೆ ಬರುತ್ತವೆ

 • RXT (O) - ಆಟೋ AC, ಎಲೆಕ್ಟ್ರಿಕಲ್ ಆಗಿ ಫೋಲ್ಡ್ ಮಾಡಬಹುದಾದ ORVMಗಳು, ಸೆಮಿ-ಲೆಥೆರೆಟ್ ಅಪ್ಹೋಲಿಸ್ಟ್ರೀ

 • RXZ - ಆಟೋಮ್ಯಾಟಿಕ್ ಆಗಿ ಫೋಲ್ಡ್ ಮಾಡಬಹುದಾದ ORVM ಗಳು, ಆಟೋ-ಡಿಮ್ ಆಗುವ IRVM, ಸೆಮಿ-ಲೆಥೆರೆಟ್ ಅಪ್ಹೋಲಿಸ್ಟ್ರೀ, ಲೆಥೆರೆಟ್ ಸ್ಟೀರಿಂಗ್ ವೀಲ್ ಕವರ್, ಕ್ರೂಸ್ ಕಂಟ್ರೋಲ್ (N.A. ಎಂಜಿನ್ನೊಂದಿಗೆ), ಮತ್ತು ರೆಡ್ ಬ್ರೇಕ್ ಕ್ಯಾಲಿಪರ್ಗಳು (ಟರ್ಬೊ ವೇರಿಯಂಟ್ ಗಳಲ್ಲಿ ಮಾತ್ರ)

ಫೀಚರ್ ಗಳ ಜೊತೆಗೆ, ಸಬ್-4m SUV ರಿಯರ್ ಸೀಟ್ಬೆಲ್ಟ್ ರಿಮೈಂಡರ್ಗಳನ್ನು ಮತ್ತು LED ಕ್ಯಾಬಿನ್ ಲ್ಯಾಂಪ್ ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ.

ರೆನಾಲ್ಟ್ ಇಂಡಿಯಾ ಲೈನ್ಅಪ್ಗೆ ಮಾಡಲಾದ ಅಪ್ಡೇಟ್ ಗಳ ಬಗ್ಗೆ ನಿಮ್ಮ ಅನಿಸಿಕೆ ಏನು ಮತ್ತು ನೀವು ಮೂರು ಕಾರುಗಳಲ್ಲಿ ಯಾವುದನ್ನು ಆಯ್ಕೆ ಮಾಡಲು ಬಯಸುತ್ತೀರಿ? ಕಾಮೆಂಟ್ಗಳಲ್ಲಿ ನಮಗೆ ತಿಳಿಸಿ.

ಎಲ್ಲಾ ಬೆಲೆಗಳು, ಎಕ್ಸ್ ಶೋರೂಂ ದೆಹಲಿ ಬೆಲೆಯಾಗಿದೆ

ಇನ್ನಷ್ಟು ಓದಿ: ಕ್ವಿಡ್ AMT      

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ರೆನಾಲ್ಟ್ ಕ್ವಿಡ್

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

 • ಟ್ರೆಂಡಿಂಗ್ ಸುದ್ದಿ
 • ಇತ್ತಿಚ್ಚಿನ ಸುದ್ದಿ

trendingಹ್ಯಾಚ್ಬ್ಯಾಕ್ ಕಾರುಗಳು

 • ಲೇಟೆಸ್ಟ್
 • ಉಪಕಮಿಂಗ್
 • ಪಾಪ್ಯುಲರ್
×
We need your ನಗರ to customize your experience