• English
    • Login / Register

    ಡೀಪ್‌ ಬ್ಲ್ಯಾಕ್‌ ಬಣ್ಣದ Volkswagen Taigun & Virtus ಕಾರುಗಳ ಬೆಲೆಯಲ್ಲಿ ಈಗ ಇಳಿಕೆ

    ವೋಕ್ಸ್ವ್ಯಾಗನ್ ವಿಟರ್ಸ್ ಗಾಗಿ shreyash ಮೂಲಕ ಡಿಸೆಂಬರ್ 06, 2023 02:59 pm ರಂದು ಪ್ರಕಟಿಸಲಾಗಿದೆ

    • 56 Views
    • ಕಾಮೆಂಟ್‌ ಅನ್ನು ಬರೆಯಿರಿ

    ಈ ಎಕ್ಸ್‌ ಟೀರಿಯರ್‌ ಶೇಡ್‌ ಇಲ್ಲಿಯತನಕ ಟೈಗುನ್‌ ಮತ್ತು ವರ್ಟೊಸ್‌ ಕಾರುಗಳ 1.5 ಲೀಟರ್‌ ಮಾದರಿಗಳಿಗೆ ಸೀಮಿತವಾಗಿತ್ತು

    Volkswagen Virtus and Volkswagen Taigun Deep Black Pearl

    • ಡೀಪ್‌ ಬ್ಲ್ಯಾಕ್‌ ಎಕ್ಸ್‌ ಟೀರಿಯರ್‌ ಶೇಡ್‌ ಈಗ ಟೈಗುನ್‌ ಮತ್ತು ವರ್ಟೊಸ್‌ ಗಳ ಟಾಪ್‌ ಲೈನ್‌ ವೇರಿಯಂಟ್‌ ಗಳಲ್ಲಿ ಲಭ್ಯ.
    • ಗ್ರಾಹಕರು ಟಾಪ್‌ ಸ್ಪೆಕ್‌ 1 ಲೀಟರ್ ಫೋಕ್ಸ್‌ ವ್ಯಾಗನ್‌ ವರ್ಟೊಸ್‌ ನ ಡೀಪ್‌ ಬ್ಲ್ಯಾಕ್‌ ಪರ್ಲ್‌ ಎಕ್ಸ್‌ ಟೀರಿಯರ್‌ ಶೇಡ್‌ ಗೆ ರೂ. 32,000 ದಷ್ಟು ಹೆಚ್ಚಿನ ಮೊತ್ತವನ್ನು ಪಾವತಿಸಬೇಕು.
    • ಡೀಪ್‌ ಬ್ಲ್ಯಾಕ್‌ ಪರ್ಲ್‌ ಶೇಡ್‌ ನಲ್ಲಿ ದೊರೆಯುವ ಟೈಗುನ್‌ ಕಾರಿನ ಟಾಪ್‌ ಸ್ಪೆಕ್‌ 1 ಲೀಟರ್‌ ವೇರಿಯಂಟ್‌ ಗೆ ನೀವು ರೂ. 25,000 ದಷ್ಟು ಹೆಚ್ಚಿನ ಬೆಲೆಯನ್ನು ನೀಡಬೇಕು.
    • ಈ ಬಣ್ಣವನ್ನು ಎರಡೂ ಮಾದರಿಗಳ ಮ್ಯಾನುವಲ್‌ ಮತ್ತು ಅಟೋಮ್ಯಾಟಿಕ್‌ ಟ್ರಾನ್ಸ್‌ ಮಿಶನ್‌ ವೇರಿಯಂಟೆ ಗಳೆರಡರಲ್ಲೂ ಪಡೆಯಬಹುದು.

     ಜೂನ್ 2023, ಫೋಕ್ಸ್‌ ವ್ಯಾಗನ್‌ ಟೈಗುನ್‌  ಮತ್ತು ಫೋಕ್ಸ್‌ ವ್ಯಾಗನ್‌ ವರ್ಟೊಸ್ ಮಾದರಿಗಳು ತಮ್ಮ GT ಲೈನ್‌ ವೇರಿಯಂಟ್‌ ಗಳಿಗೆ ಡೀಪ್‌ ಬ್ಲ್ಯಾಕ್‌ ಪರ್ಲ್‌ ಎಕ್ಸ್‌ ಟೀರಿಯರ್‌ ಗಳನ್ನು ಪಡೆದವು. ಈಗ ಈ ಕಾರು ತಯಾರಕ ಸಂಸ್ಥೆಯು ಈ ಬಣ್ಣದ ಆಯ್ಕೆಯನ್ನು ಎರಡೂ ಮಾದರಿಗಳ 1 ಲೀಟರ್‌ ಆವೃತ್ತಿಗಳಿಗೆ ವಿಸ್ತರಿಸಿದೆ. ಆದರೆ ಈ ಛಾಯೆಯು, ಕೆಲವೊಂದು ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಬರುವ ಟೈಗುನ್‌ ಮತ್ತು ವರ್ಟೊಸ್‌ ಗಳ ಟಾಪ್‌ ಲೈನ್‌ ವೇರಿಯಂಟ್‌ ಗಳಿಗೆ ಮಾತ್ರವೇ ಸೀಮಿತವಾಗಿದೆ. ಅವುಗಳ ಬೆಲೆಗಳತ್ತ ಈಗ ಗಮನ ಹರಿಸೋಣ.

    ಮಾದರಿ

    ರೆಗ್ಯುಲರ್‌ ಟಾಪ್‌ ಲೈನ್

    ಟಾಪ್‌ ಲೈನ್‌ ವಿತ್‌ ಡೀಪ್‌ ಬ್ಲ್ಯಾಕ್‌ ಪರ್ಲ್‌ (ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ)

    ವ್ಯತ್ಯಾಸ

    ಫೋಕ್ಸ್‌ ವ್ಯಾಗನ್‌ ವರ್ಟೊಸ್ 1-ಲೀಟರ್ MT

    ರೂ 14.90 ಲಕ್ಷ

    ರೂ 15.22 ಲಕ್ಷ

    + ರೂ 32,000

    ಫೋಕ್ಸ್‌ ವ್ಯಾಗನ್‌ ವರ್ಟೊಸ್ 1-ಲೀಟರ್ ‌AT

    ರೂ 16.20 ಲಕ್ಷ

    ರೂ 16.47 ಲಕ್ಷ

    + ರೂ 27,000

    ಫೋಕ್ಸ್‌ ವ್ಯಾಗನ್‌ ಟೈಗುನ್ 1-ಲೀಟರ್ MT

    ರೂ 15.84 ಲಕ್ಷ

    ರೂ 16.03 ಲಕ್ಷ

    + ರೂ 19,000

    ಫೋಕ್ಸ್‌ ವ್ಯಾಗನ್‌ ಟೈಗುನ್ 1-ಲೀಟರ್ MT

    ರೂ 17.35 ಲಕ್ಷ

    ರೂ 17.60 ಲಕ್ಷ

    + ರೂ 25,000

    ಫೋಕ್ಸ್‌ ವ್ಯಾಗನ್‌ ವರ್ಟೊಸ್‌ ಮಾದರಿಯ ಡೀಪ್‌ ಬ್ಲ್ಯಾಕ್‌ ಪರ್ಲ್‌ ವೇರಿಯಂಟ್‌ ಗೆ ಗ್ರಾಹಕರು ರೂ. 32,000ದಷ್ಟು ಹೆಚ್ಚು ಮೊತ್ತವನ್ನು ಪಾವತಿಸಬೇಕಾದರೆ, ಟೈಗುನ್‌ ಡೀಪ್‌ ಬ್ಲ್ಯಾಕ್‌ ಪರ್ಲ್‌ ಬಣ್ಣವು ರೂ. 25,000 ದಷ್ಟು ದುಬಾರಿಯಾಗಿದೆ. ನಿಮ್ಮ ಮಾಹಿತಿಗಾಗಿ, ವರ್ಟೊಸ್‌ ಮತ್ತು ಟೈಗುನ್‌ ಮಾದರಿಗಳ ಡೀಪ್‌ ಬ್ಲ್ಯಾಕ್‌ ಪರ್ಲ್‌ ವೇರಿಯಂಟ್‌ ಗಳು ತಮ್ಮ ಅನುಕ್ರಮ 1.5 ಲೀಟರ್‌ ಮಾದರಿಗಳಿಗಿಂತ ರೂ. 2.2 ಲಕ್ಷದಷ್ಟು ಕಡಿಮೆ ಬೆಲೆಯನ್ನು ಹೊಂದಿವೆ.

     ಇದನ್ನು ಸಹ ನೋಡಿರಿ: ಸ್ಕೋಡಾ ಕುಶಕ್‌ ಮತ್ತು ಸ್ಕೋಡಾ ಸ್ಲಾವಿಯಾ ಎಲೆಗೆನ್ಸ್‌ ಆವೃತ್ತಿಗಳ ಬಿಡುಗಡೆ, ಬೆಲೆಗಳು ರೂ. 17.52 ಲಕ್ಷದಿಂದ ಪ್ರಾರಂಭ

     

    ವೈಶಿಷ್ಟ್ಯಗಳು

    Volkswagen Virtus Interior

     ವರ್ಟೊಸ್‌ ಮತ್ತು ಟೈಗುನ್‌ ಮಾದರಿಗಳೆರಡರ ಟಾಪ್‌ ಲೈನ್‌ ಟ್ರಿಮ್‌ ಗಳು ವೈರ್‌ ಲೆಸ್‌ ಆಂಡ್ರಾಯ್ಡ್‌ ಅಟೋ ಮತ್ತು ಆಪಲ್‌ ಕಾರ್‌ ಪ್ಲೇ ಜೊತೆಗೆ 10.1 ಇಂಚಿನ ಟಚ್‌ ಸ್ಕ್ರೀನ್‌ ಇನ್ಫೊಟೈನ್‌ ಮೆಂಟ್‌ ಸಿಸ್ಟಂ, 8 ಇಂಚಿನ ಚಾಲಕನ ಡಿಜಿಟಲ್‌ ಡಿಸ್ಪ್ಲೇ, ಸಿಂಗಲ್‌ ಪೇನ್‌ ಸನ್‌ ರೂಫ್‌, ಪವರ್ಡ್‌ ಫ್ರಂಟ್‌ ಸೀಟ್‌ ಗಳು, ಕ್ರೂಸ್‌ ಕಂಟ್ರೋಲ್‌ ಮತ್ತು ಇಲ್ಯುಮಿನೇಟೆಡ್‌ ಫೂಟ್‌ ವೆಲ್‌ ಅನ್ನು ಹೊಂದಿವೆ. ಆರು ಏರ್‌ ಬ್ಯಾಗ್‌ ಗಳು, ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಕಂಟ್ರೋಲ್‌ (ESC), ರಿಯರ್‌ ವ್ಯೂ ಕ್ಯಾಮರಾ ಮತ್ತು ಎಲ್ಲಾ ಪ್ರಯಾಣಿಕರಿಗಾಗಿ 3 ಪಾಯಿಂಟ್‌ ಸೀಟ್‌ ಬೆಲ್ಟ್‌ ಗಳನ್ನು ಒದಗಿಸುವ ಮೂಲಕ ಈ ಮಾದರಿಗಳಲ್ಲಿ ಸುರಕ್ಷತೆಗೆ ಒತ್ತು ನೀಡಲಾಗಿದೆ.

    ಇದನ್ನು ಸಹ ನೋಡಿರಿ: ಸನ್‌ ರೂಫ್‌ ಜೊತೆಗೆ CNG ಕಾರು ಬೇಕೇ? ನಿಮಗಾಗಿ ಆಯ್ಕೆಗಳು ಇಲ್ಲಿವೆ

     

    ಪವರ್‌ ಟ್ರೇನ್‌ ವಿವರಗಳು

    Volkswagen Virtus 1-litre Engine

     ಎರಡೂ ವಾಹನಗಳು 115 PS ಮತ್ತು 178 Nm ಉಂಟು ಮಾಡುವ ಹಾಗೂ 6-ಸ್ಪೀಡ್‌ ಮ್ಯಾನುವಲ್‌ ಟ್ರಾನ್ಸ್‌ ಮಿಶನ್‌ ಅಥವಾ 6-ಸ್ಪೀಡ್‌ ಟಾರ್ಕ್‌ ಕನ್ವರ್ಟರ್ ಜೊತೆಗೂಡಿಸಲಾದ 1-ಲೀಟರ್‌‌ ಟರ್ಬೊ ಪೆಟ್ರೊಲ್‌ ಎಂಜಿನ್‌ ನೊಂದಿಗೆ ಲಭ್ಯ. ಅವು ತಮ್ಮ GT ವೇರಿಯಂಟ್‌ ಗಳ ಜೊತೆಗೆ ಅತ್ಯಂತ ಶಕ್ತಿಶಾಲಿ 1.5 ಲೀಟರ್‌ ಟರ್ಬೊ ಪೆಟ್ರೋಲ್‌ ಎಂಜಿನ್ (150 PS / 250 Nm)‌ ಆಯ್ಕೆಯನ್ನು ಸಹ ಹೊಂದಿವೆ. ಈ ಎಂಜಿನ್‌ 6 ಸ್ಪೀಡ್‌ ಮ್ಯಾನುವಲ್‌ ಟ್ರಾನ್ಸ್‌ ಮಿಶನ್‌ ಅಥವಾ 7 ಸ್ಪೀಡ್‌ ಡ್ಯುವಲ್‌ ಕ್ಲಚ್‌ ಅಟೋಮ್ಯಾಟಿಕ್‌ ಟ್ರಾನ್ಸ್‌ ಮಿಶನ್‌ ಜೊತೆಗೆ ಬರಲಿದೆ.

    ಸ್ಪರ್ಧಿಗಳು

    ಫೋಕ್ಸ್‌ ವ್ಯಾಗನ್‌ ವರ್ಟೊಸ್‌ ಕಾರು ಹೋಂಡಾ ಸಿಟಿ, ಹ್ಯುಂಡೈ ವೆರ್ನಾ, ಸ್ಕೋಡಾ ಸ್ಲಾವಿಯಾ, ಮತ್ತು ಮಾರುತಿ ಸಿಯಾಜ್‌ ಜೊತೆಗೆ ಸ್ಪರ್ಧಿಸಲಿದೆ.  ಇದೇ ವೇಳೆ ಫೋಕ್ಸ್‌ ವ್ಯಾಗನ್‌ ಟೈಗುನ್ ವಾಹನವು ಸ್ಕೋಡಾ ಕುಶಕ್, ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರಾಂಡ್‌ ವಿಟಾರ, ಟೊಯೊಟಾ ಹೈರೈಡರ್, ಹೋಂಡಾ ಎಲೆವೇಟ್, MG ಆಸ್ಟರ್, ಮತ್ತು ಸಿಟ್ರನ್‌ C3 ಏರ್‌ ಕ್ರಾಸ್‌ ಇತ್ಯಾದಿ ಕಾರುಗಳಿಗೆ ಸ್ಪರ್ಧೆ ನೀಡಲಿದೆ.

     ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ವರ್ಟೊಸ್ ಆನ್‌ ರೋಡ್‌ ಬೆಲೆ

    was this article helpful ?

    Write your Comment on Volkswagen ವಿಟರ್ಸ್

    explore similar ಕಾರುಗಳು

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಸೆಡಾನ್‌ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience