Skoda Kushaq ಮತ್ತು Skoda Slavia Elegance ಆವೃತ್ತಿಗಳ ಬಿಡುಗಡೆ, ಬೆಲೆಗಳು 18.31 ಲಕ್ಷ ರೂ.ನಿಂದ ಪ್ರಾರಂಭ
ಸ್ಕೋಡಾ ಸ್ಲಾವಿಯಾ ಗಾಗಿ shreyash ಮೂಲಕ ನವೆಂಬರ್ 27, 2023 06:27 pm ರಂದು ಪ್ರಕಟಿಸಲಾಗಿದೆ
- 33 Views
- ಕಾಮೆಂಟ್ ಅನ್ನು ಬರೆಯಿರಿ
ಈ ಹೊಸ ಲಿಮಿಟೆಡ್ ಆವೃತ್ತಿಯು ಸ್ಕೋಡಾ ಕುಶಾಕ್ ಮತ್ತು ಸ್ಕೋಡಾ ಸ್ಲಾವಿಯಾ ಎರಡರ 1.5-ಲೀಟರ್ ಟರ್ಬೊ-ಪೆಟ್ರೋಲ್ ವೇರಿಯೆಂಟ್‌ನೊಂದಿಗೆ ಮಾತ್ರ ಲಭ್ಯವಿದೆ.
- ಹೊಸ 'ಎಲಿಗೆನ್ಸ್' ಆವೃತ್ತಿಯು ಎರಡೂ ಕಾರುಗಳ ಟಾಪ್-ಎಂಡ್ ಮೊಡೆಲ್ ಸ್ಟೈಲ್ ಅವೃತ್ತಿಗಳನ್ನು ಆಧರಿಸಿದೆ.
- ಇದು ಸಾಮಾನ್ಯ ಸ್ಟೈಲ್ ಅವೃತ್ತಿಗಿಂತ 20,000 ರೂ ವರೆಗಿನ ಹೆಚ್ಚಿನ ಬೆಲೆಯನ್ನು ಹೊಂದಿದೆ.
- ಡೀಪ್ ಬ್ಲ್ಯಾಕ್ ಎಂಬ ಬಾಡಿ ಕಲರ್ ಮತ್ತು ಬಿ-ಪಿಲ್ಲರ್‌ನಲ್ಲಿ 'ಎಲಿಗೆನ್ಸ್' ಬ್ಯಾಡ್ಜ್‌ನೊಂದಿಗೆ ಬರುತ್ತದೆ.
- ಒಳಗೆ ಗಮನಿಸುವಾಗ, ಈ ಎರಡೂ ಸ್ಕೋಡಾ ಮೊಡೆಲ್‌ಗಳ ಎಲಿಗೆನ್ಸ್ ಆವೃತ್ತಿಗಳು ಅಲ್ಯೂಮಿನಿಯಂ ಪೆಡಲ್‌ಗಳನ್ನು ಪಡೆಯುತ್ತವೆ ಮತ್ತು ಸ್ಟೀರಿಂಗ್ ವೀಲ್, ಸೀಟ್‌ಬೆಲ್ಟ್ ಕವರ್‌ಗಳು ಮತ್ತು ನೆಕ್ ರೆಸ್ಟ್‌ಗಳಲ್ಲಿ 'ಎಲಿಗೆನ್ಸ್' ನ ಬ್ಯಾಡ್ಜ್ ಅನ್ನು ಪಡೆಯುತ್ತವೆ.
- 1.5-ಲೀಟರ್ ಎಂಜಿನ್ (150 PS/250 Nm) ಅನ್ನು 6-ಸ್ಪೀಡ್ ಮ್ಯಾನುಯಲ್ ಮತ್ತು 7-ಸ್ಪೀಡ್ ಡಿಎಸ್‌ಜಿ ಆಯ್ಕೆಗಳೊಂದಿಗೆ ನೀಡಲಾಗುತ್ತದೆ.
- ಭಾರತದಾದ್ಯಂತ ಸ್ಕೋಡಾ ತನ್ನ ಕುಶಾಕ್ ಮತ್ತು ಸ್ಲಾವಿಯಾವನ್ನು 10.89 ಲಕ್ಷ ರೂ.ನಿಂದ ಎಕ್ಸ್ ಶೋರೂಂ ಬೆಲೆಯಲ್ಲಿ ಮಾರಾಟ ಮಾಡುತ್ತದೆ.
ಸ್ಕೋಡಾ ಕುಶಾಕ್ ಮತ್ತು ಸ್ಕೋಡಾ ಸ್ಲಾವಿಯಾವನ್ನು ಎಲ್ಲಾ-ಹೊಸ ಲಿಮಿಟೆಡ್ ಆವೃತ್ತಿಯಲ್ಲಿ ಬಿಡುಗಡೆ ಮಾಡಲಾಗಿದೆ, ಅವುಗಳೆಂದರೆ 'ಎಲಿಗೆನ್ಸ್' ಆವೃತ್ತಿ. ಎರಡೂ ಕಾರುಗಳ ಈ ಹೊಸ ಆವೃತ್ತಿಗಳು ಅವುಗಳ ಟಾಪ್-ಎಂಡ್ ಸ್ಟೈಲ್ ವೇರಿಯೆಂಟ್‌ಗಳನ್ನು ಆಧರಿಸಿವೆ, ಇದು ಕೇವಲ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಮಾತ್ರ ಬರುತ್ತದೆ. ನಾವು ಹೆಚ್ಚಿನ ವಿವರಗಳನ್ನು ತಿಳಿಯುವ ಮೊದಲು, ಅವುಗಳ ಬೆಲೆಗಳನ್ನು ಪರಿಶೀಲಿಸೋಣ.
ಮಾಡೆಲ್ |
ಸಾಮಾನ್ಯ ಸ್ಟೈಲ್ |
ಎಲೆಗೆನ್ಸ್ ಆವೃತ್ತಿ |
ವ್ಯತ್ಯಾಸ |
ಸ್ಕೋಡಾ ಕುಶಾಕ್ 1.5 ಮ್ಯಾನುಯಲ್ |
18.11 ಲಕ್ಷ ರೂ |
18.31 ಲಕ್ಷ ರೂ |
+20,000 ರೂ |
ಸ್ಕೋಡಾ ಕುಶಾಕ್ 1.5 ಡಿಎಸ್‌ಜಿ |
19.31 ಲಕ್ಷ ರೂ |
19.51 ಲಕ್ಷ ರೂ |
+20,000 ರೂ |
ಸ್ಕೋಡಾ ಸ್ಲಾವಿಯಾ 1.5 ಮ್ಯಾನುಯಲ್ |
17.32 ಲಕ್ಷ ರೂ |
17.52 ಲಕ್ಷ ರೂ |
+20,000 ರೂ |
ಸ್ಕೋಡಾ ಸ್ಲಾವಿಯಾ 1.5 ಡಿಎಸ್‌ಜಿ |
18.72 ಲಕ್ಷ ರೂ |
18.92 ಲಕ್ಷ ರೂ |
+20,000 ರೂ |
ಎಲ್ಲಾ ಬೆಲೆಗಳು ಭಾರತದಾದ್ಯಂತದ ಎಕ್ಸ್ ಶೋರೂಂ ಬೆಲೆಗಳಾಗಿವೆ.
ಗ್ರಾಹಕರು ಎಲಿಗನ್ಸ್ ಆವೃತ್ತಿಗಾಗಿ ಕುಶಾಕ್ ಮತ್ತು ಸ್ಲಾವಿಯಾದ ಸಾಮಾನ್ಯ ಸ್ಟೈಲ್ ವೇರಿಯೆಂಟ್‌ಗಿಂತ 20,000 ರೂ. ವರೆಗೆ ಹೆಚ್ಚಿನ ಹಣವನ್ನು ನೀಡಬೇಕಾಗುತ್ತದೆ.
ಹೊರಗಿನ ಮತ್ತು ಇಂಟಿರೀಯರ್ ಕುರಿತ ಆಪ್‌ಡೇಟ್‌ಗಳು
ಎರಡೂ ಸ್ಕೋಡಾ ಮಾದರಿಗಳ ಎಲಿಗೆನ್ಸ್ ಆವೃತ್ತಿಯು ಡೀಪ್ ಬ್ಲ್ಯಾಕ್ ಎಂಬ ಬಾಡಿ ಕಲರ್‌ನ್ನು ಪಡೆಯುತ್ತದೆ. ಕುಶಾಕ್ ಮತ್ತು ಸ್ಲಾವಿಯಾ ಎರಡರಲ್ಲೂ ಹೊರಗಿನ ಭಾಗದ ಹೊಸದಾದ ಸೇರ್ಪಡೆಯಲ್ಲಿ ಕ್ರೋಮ್ ನಿಂದ ಸುತ್ತುವರಿದ ಮುಂಭಾಗದ ಗ್ರಿಲ್ (ಕುಶಾಕ್‌ನ ಮುಂಭಾಗದ ಗ್ರಿಲ್ ಅನ್ನು ಸಂಪೂರ್ಣವಾಗಿ ಕ್ರೋಮ್‌ನಲ್ಲಿ ಪೂರ್ಣಗೊಳಿಸಲಾಗಿದೆ), ಕ್ರೋಮ್‌ನಲ್ಲಿ ಬಾಡಿಯ ಬದಿಯ ಮೋಲ್ಡಿಂಗ್ ಮತ್ತು ಬಿ-ಪಿಲ್ಲರ್‌ನಲ್ಲಿನ 'ಎಲಿಗನ್ಸ್' ಬ್ಯಾಡ್ಜ್ ಸೇರಿವೆ. ಇದು 'ಸ್ಕೋಡಾ' ದ ವಿನ್ಯಾಸದ ಪಡಲ್ ಲ್ಯಾಂಪ್‌ಗಳನ್ನು (ಸೈಡ್ ಮಿರರ್‌ನ ಕೆಳಗೆ ನೀಡಿರುವ ಲೈಟ್) ಸಹ ಪಡೆಯುತ್ತಾರೆ. ಕುಶಾಕ್‌ನ ಈ ವಿಶೇಷ ಆವೃತ್ತಿಯು 17-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳನ್ನು ಹೊಂದಿದೆ, ಆದರೆ ಸ್ಲಾವಿಯಾ 16-ಇಂಚಿನ ಅಲಾಯ್ ವೀಲ್‌ಗಳನ್ನು ಪಡೆಯುತ್ತದೆ.
ಇದನ್ನೂ ಪರಿಶೀಲಿಸಿ: ಸ್ಕೋಡಾ ಸೂಪರ್ಬ್ ಹೊಸತು Vs ಹಳೆಯದು: ಚಿತ್ರಗಳಲ್ಲಿ ಹೋಲಿಕೆ
ಇಂಟೀರಿಯರ್ ಬಗ್ಗೆ ಹೇಳುವುದಾದರೆ, ಎರಡೂ ಸ್ಕೋಡಾ ಕಾರುಗಳು ಅಲ್ಯೂಮಿನಿಯಂನಿಂದ ಫಿನಿಶ್ ಆಗಿರುವ ಪೆಡಲ್‌ಗಳು, ಸ್ಟೀರಿಂಗ್ ವೀಲ್‌ನಲ್ಲಿ 'ಎಲಿಗೆನ್ಸ್' ಬ್ರ್ಯಾಂಡಿಂಗ್, ಸೀಟ್‌ಬೆಲ್ಟ್ ಮತ್ತು ನೆಕ್ ರೆಸ್ಟ್‌ಗಳು ಮತ್ತು ಹಿಂಭಾಗದ ಸೀಟ್‌ಗಳಲ್ಲಿ ಎಲಿಗೆನ್ಸ್-ಬ್ರಾಂಡ್ ಕುಶನ್‌ಗಳನ್ನು ಪಡೆಯುತ್ತವೆ.
ಇದನ್ನೂ ಪರಿಶೀಲಿಸಿ: Volkswagen Taigun, Virtus Sound Editionನ ಬಿಡುಗಡೆ: ಬೆಲೆಗಳು ರೂ 15.52 ಲಕ್ಷದಿಂದ ಪ್ರಾರಂಭ
ನಿಮ್ಮ ಬಾಕಿ ಇರುವ ಚಲನ್‌ನ್ನು ಪರಿಶೀಲಿಸಿ
ವೈಶಿಷ್ಟ್ಯಗಳು ಮತ್ತು ಸುರಕ್ಷತೆ
ಎರಡೂ ಕಾರುಗಳ ಎಲಿಗೆನ್ಸ್ ಆವೃತ್ತಿಗಳು ತಮ್ಮ ಟಾಪ್-ಸ್ಪೆಕ್ ಸ್ಟೈಲ್ ಟ್ರಿಮ್‌ಗಳನ್ನು ಆಧರಿಸಿರುವುದರಿಂದ, ಅವುಗಳು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 8-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೆಂಟಿಲೇಟೆಡ್ ಮತ್ತು ಪವರ್‌ಡ್ ಆಗಿರುವ ಮುಂಭಾಗದ ಆಸನಗಳು ಮತ್ತು ಫುಟ್‌ವೆಲ್‌ನಲ್ಲಿ (ಮುಂಭಾಗದ ಸೀಟ್‌ನ ಎದುರು ಕಾಲು ಇಡುವ ಜಾಗದಲ್ಲಿ) ಲೈಟ್‌ನ್ನು ಪಡೆಯುತ್ತದೆ. ಸುರಕ್ಷತೆಯನ್ನು 6 ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್-ಹೋಲ್ಡ್ ಅಸಿಸ್ಟ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮೂಲಕ ಕಾಳಜಿ ವಹಿಸಲಾಗುತ್ತದೆ.
ಇದನ್ನೂ ಪರಿಶೀಲಿಸಿ: ಕ್ಯಾಲೆಂಡರ್ ವರ್ಷದ ಕೊನೆಯಲ್ಲಿ ಹೊಸ ಕಾರನ್ನು ಖರೀದಿಸಿದರೆ ಆಗುವ ಅನುಕೂಲಗಳು ಮತ್ತು ಅನಾನುಕೂಲಗಳು
ಕೊಡುಗೆಯಲ್ಲಿರುವ ಪವರ್‌ಟ್ರೇನ್‌ಗಳು
ಸ್ಕೋಡಾ ಕುಶಾಕ್ ಮತ್ತು ಸ್ಲಾವಿಯಾದ ಎಲಿಗೆನ್ಸ್ ಆವೃತ್ತಿಗಳು 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ಲಭ್ಯವಿವೆ, ಇದು 150 PS ಮತ್ತು 250 Nm ನಷ್ಟು ಶಕ್ತಿಯನ್ನು ಹೊರಹಾಕುತ್ತದೆ. 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 7-ಸ್ಪೀಡ್ DSG (ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್)ಯನ್ನು ಇದಕ್ಕೆ ಜೋಡಿಸಲಾಗಿದೆ.
ಆದರೆ ಈ ಎರಡೂ ಮೊಡೆಲ್‌ಗಳ ಸಾಮಾನ್ಯ ವೇರಿಯೆಂಟ್‌ಗಳನ್ನು 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (115 PS ಮತ್ತು 178 Nm) ಜೊತೆಗೆ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್‌ನೊಂದಿಗೆ ಜೋಡಿಸಲಾಗಿದೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಸ್ಕೋಡಾ ಕುಶಾಕ್‌ನ ಬೆಲೆ 10.89 ಲಕ್ಷದಿಂದ 20 ಲಕ್ಷ ರೂಪಾಯಿಗಳಷ್ಟಿದ್ದರೆ, ಸ್ಲಾವಿಯಾದ ಬೆಲೆಗಳು 10.89 ಲಕ್ಷದಿಂದ 19.12 ಲಕ್ಷ ರೂಪಾಯಿಗಳವರೆಗೆ ಇರುತ್ತದೆ. ವೋಕ್ಸ್‌ವ್ಯಾಗನ್ ಟೈಗನ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೋಟಾ ಹೈರ್ಡರ್, ಕಿಯಾ ಸೆಲ್ಟೋಸ್, ಹ್ಯುಂಡೈ ಕ್ರೆಟಾ, ಸಿಟ್ರೊಯೆನ್ C3 ಏರ್‌ಕ್ರಾಸ್, ಹೋಂಡಾ ಎಲಿವೇಟ್ ಮತ್ತು ಎಮ್‌ಜಿ ಆಸ್ಟರ್ ನ ವಿರುದ್ಧ ಮಾರುಕಟ್ಟೆಯಲ್ಲಿ ಸ್ಕೋಡಾ ಕುಶಾಕ್ ಸ್ಪರ್ಧಿಸುತ್ತದೆ. ಮತ್ತೊಂದೆಡೆ ಸ್ಲಾವಿಯಾ ವೋಕ್ಸ್‌ವ್ಯಾಗನ್ ವರ್ಟಸ್, ಹುಂಡೈ ವೆರ್ನಾ, ಹೋಂಡಾ ಸಿಟಿ ಮತ್ತು ಮಾರುತಿ ಸಿಯಾಜ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.
ಎಲ್ಲಾ ಬೆಲೆಗಳು ಭಾರತದಾದ್ಯಂತದ ಎಕ್ಸ್ ಶೋರೂಂ ಬೆಲೆಗಳಾಗಿವೆ.
ಇನ್ನಷ್ಟು ಓದಿ : ಸ್ಕೋಡಾ ಸ್ಲಾವಿಯಾ ಆನ್ ರೋಡ್ ಬೆಲೆ