ಸ್ಕೋಡಾ ಕೈಲಾಕ್ ಎಲ್ಲಾ ವೇರಿಯಂಟ್‌ಗಳ ಬೆಲೆಯಗಳನ್ನು ಬಹಿರಂಗಪಡಿಸಲು ದಿನಾಂಕ ಫಿಕ್ಸ್
ಸ್ಕೋಡಾ kylaq ಗಾಗಿ ansh ಮೂಲಕ ನವೆಂಬರ್ 08, 2024 06:24 pm ರಂದು ಪ್ರಕಟಿಸಲಾಗಿದ ೆ
- 197 Views
- ಕಾಮೆಂಟ್ ಅನ್ನು ಬರೆಯಿರಿ
ಇದರ ಬೆಲೆಯು ರೂ. 7.89 ಲಕ್ಷದಿಂದ ಪ್ರಾರಂಭವಾಗುತ್ತದೆ (ಪರಿಚಯಾತ್ಮಕ, ಎಕ್ಸ್ ಶೋರೂಂ), ಮತ್ತು ಕ್ಲಾಸಿಕ್, ಸಿಗ್ನೇಚರ್, ಸಿಗ್ನೇಚರ್ ಪ್ಲಸ್ ಮತ್ತು ಪ್ರೆಸ್ಟೀಜ್ ಎಂಬ ನಾಲ್ಕು ವೇರಿಯಂಟ್‌ಗಳಲ್ಲಿ ನೀಡಲಾಗುತ್ತಿದೆ
-
ಎಲ್ಲಾ ವೇರಿಯಂಟ್‌ಗಳ ಬೆಲೆಯನ್ನು ಬಹಿರಂಗಪಡಿಸುವುದರ ಜೊತೆಗೆ ಡಿಸೆಂಬರ್ 2 ರಂದು ಬುಕಿಂಗ್‌ಗಳನ್ನು ತೆರೆಯಲಾಗುತ್ತದೆ.
-
ಕೈಲಾಕ್ 1-ಲೀಟರ್ 3-ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, 115 PS ಮತ್ತು 178 Nm ಅನ್ನು ಉತ್ಪಾದಿಸುತ್ತದೆ.
-
ಫೀಚರ್‌ಗಳಲ್ಲಿ 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 6-ವೇ ಪವರ್ಡ್ ಡ್ರೈವರ್ ಮತ್ತು ಕೋ-ಡ್ರೈವರ್ ಸೀಟುಗಳು, ಸಿಂಗಲ್-ಪೇನ್ ಸನ್‌ರೂಫ್ ಮತ್ತು 6 ಸ್ಟ್ಯಾಂಡರ್ಡ್ ಆಗಿರುವ ಏರ್‌ಬ್ಯಾಗ್‌ಗಳು ಸೇರಿವೆ.
-
ರೂ 7.89 ಲಕ್ಷಕ್ಕೆ ಲಭ್ಯವಿರುವ ಬೇಸ್-ಸ್ಪೆಕ್ ವೇರಿಯಂಟ್‌ನ ಬೆಲೆಯನ್ನು ಮಾತ್ರ ಬಹಿರಂಗಪಡಿಸಲಾಗಿದೆ (ಪರಿಚಯಾತ್ಮಕ ಎಕ್ಸ್-ಶೋರೂಮ್ ಪ್ಯಾನ್-ಇಂಡಿಯಾ).
ಸ್ಕೋಡಾ ಕೈಲಾಕ್ ಅನ್ನು ಇದೀಗ ಅನಾವರಣಗೊಳಿಸಲಾಗಿದೆ ಮತ್ತು ಕಾರು ತಯಾರಕರು ಅದರ ಆರಂಭಿಕ ಬೆಲೆ ರೂ 7.89 ಲಕ್ಷ (ಪರಿಚಯಾತ್ಮಕ, ಎಕ್ಸ್-ಶೋರೂಮ್ ಪ್ಯಾನ್-ಇಂಡಿಯಾ) ಎಂದು ಘೋಷಿಸಿದ್ದಾರೆ. ಇತರ ವೇರಿಯಂಟ್‌ಗಳ ಬೆಲೆಗಳು ಇನ್ನೂ ತಿಳಿದಿಲ್ಲ ಮತ್ತು ಸ್ಕೋಡಾ ಈ ಸಬ್-4m ಎಸ್‌ಯುವಿಗಾಗಿ ಬುಕಿಂಗ್‌ಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದಾಗ, ಅಂದರೆ ಡಿಸೆಂಬರ್ 2 ರಂದು ಬೆಲೆಗಳನ್ನು ಪ್ರಕಟಿಸಲಾಗುವುದು. ಬನ್ನಿ, ಕೈಲಾಕ್ ನಲ್ಲಿ ಏನೇನಿದೆ ಎಂಬುದನ್ನು ನೋಡೋಣ.
ಇಂಟೀರಿಯರ್ ಮತ್ತು ಫೀಚರ್‌ಗಳು
ಕೈಲಾಕ್‌ನ ಕ್ಯಾಬಿನ್ ಕುಶಾಕ್ ಮತ್ತು ಸ್ಲಾವಿಯಾದಂತಹ ಭಾರತದಲ್ಲಿರುವ ಇತರ ಸ್ಕೋಡಾ ಮಾಡೆಲ್‌ಗಳಂತೆಯೇ ಇದೆ. ಇದು ಈ ಮಾಡೆಲ್‌ಗಳಲ್ಲಿರುವ ಟೂ-ಸ್ಪೋಕ್ ಸ್ಟೀರಿಂಗ್ ವೀಲ್, ಟಚ್-ಆಧಾರಿತ ಕ್ಲೈಮೇಟ್ ಕಂಟ್ರೋಲ್ ಮತ್ತು ಡ್ಯಾಶ್‌ಬೋರ್ಡ್ ಡಿಸೈನ್‌ನಂತಹ ಫೀಚರ್‌ಗಳನ್ನು ಕೂಡ ಪಡೆಯುತ್ತದೆ.
ಫೀಚರ್‌ಗಳ ವಿಷಯದಲ್ಲಿ, ಇದು 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 8-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ಪಡೆಯುತ್ತದೆ. ಇದು 6-ವೇ ಪವರ್ಡ್ ಡ್ರೈವರ್ ಮತ್ತು ಕೋ-ಡ್ರೈವರ್ ಸೀಟುಗಳು, ವೆಂಟಿಲೇಟೆಡ್ ಫ್ರಂಟ್ ಸೀಟುಗಳು ಮತ್ತು ಸಿಂಗಲ್-ಪೇನ್ ಸನ್‌ರೂಫ್‌ನೊಂದಿಗೆ ಕೂಡ ಬರುತ್ತದೆ.
ಇದನ್ನು ಕೂಡ ನೋಡಿ: ಸ್ಕೋಡಾ ಕೈಲಾಕ್ ವರ್ಸಸ್ ಸ್ಕೋಡಾ ಕುಶಾಕ್: ಚಿತ್ರಗಳ ಮೂಲಕ ನೋಡಿ ಒಳಭಾಗ ಮತ್ತು ಹೊರಭಾಗದ ಡಿಸೈನ್ ಹೋಲಿಕೆ
ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ, ಇದು 6 ಸ್ಟ್ಯಾಂಡರ್ಡ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಮಲ್ಟಿ ಡಿಕ್ಕಿ ಬ್ರೇಕಿಂಗ್ ಮತ್ತು ರಿಯರ್‌ವ್ಯೂ ಕ್ಯಾಮೆರಾದೊಂದಿಗೆ ಬರುತ್ತದೆ.
ಪವರ್‌ಟ್ರೇನ್
ಕೈಲಾಕ್ ತನ್ನ 1-ಲೀಟರ್ 3-ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಕುಶಾಕ್ ಮತ್ತು ಸ್ಲಾವಿಯಾದ ಕೆಲ ಮಟ್ಟದ ವೇರಿಯಂಟ್‌ಗಳಿಂದ ಪಡೆಯುತ್ತದೆ. ಈ ಯೂನಿಟ್ 115 PS ಮತ್ತು 178 Nm ಅನ್ನು ಉತ್ಪಾದಿಸುತ್ತದೆ ಮತ್ತು ಇದನ್ನು 6-ಸ್ಪೀಡ್ ಮ್ಯಾನ್ಯುವಲ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ. ಕುಶಾಕ್‌ನಲ್ಲಿರುವ ಹೆಚ್ಚು ಬಲಶಾಲಿಯಾದ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಕೈಲಾಕ್‌ನಲ್ಲಿ ನೀಡಲಾಗಿಲ್ಲ.
ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಸ್ಕೋಡಾ ಕೈಲಾಕ್ ಬೆಲೆಯು ರೂ 7.89 ಲಕ್ಷದಿಂದ ಪ್ರಾರಂಭವಾಗುತ್ತದೆ (ಪರಿಚಯಾತ್ಮಕ, ಎಕ್ಸ್-ಶೋ ರೂಂ ಪ್ಯಾನ್-ಇಂಡಿಯಾ), ಮತ್ತು ಅದರ ಟಾಪ್-ಸ್ಪೆಕ್ ವೇರಿಯಂಟ್ ಬೆಲೆಯು ಸುಮಾರು ರೂ. 14 ಲಕ್ಷದ ಹತ್ತಿರ ಇರಬಹುದು. ಇದು ಟಾಟಾ ನೆಕ್ಸಾನ್, ಮಹೀಂದ್ರಾ XUV 3XO, ಕಿಯಾ ಸೋನೆಟ್, ಹ್ಯುಂಡೈ ವೆನ್ಯೂ ಮತ್ತು ಮಾರುತಿ ಬ್ರೆಝಾಗಳಂತಹ ಇತರ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಪ್ರತಿಸ್ಪರ್ಧಿಯಾಗಿದೆ. ಇದು ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಟೈಸರ್‌ನಂತಹ ಕ್ರಾಸ್‌ಒವರ್‌ಗಳಿಗೆ ಕೂಡ ಪ್ರತಿಸ್ಪರ್ಧಿಯಾಗಿದೆ.
ವಾಹನ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.
ಇನ್ನಷ್ಟು ಓದಿ: ಕೈಲಾಕ್ ಆನ್ ರೋಡ್ ಬೆಲೆ