ಆಸ್ಟ್ರೇಲಿಯಾದಲ್ಲಿ 3-ಡೋರ್ ಜಿಮ್ನಿಯ ಹೊಸ ಹೆರಿಟೇಜ್ ಎಡಿಷನ್ ಪರಿಚಯಿಸಿದ ಸುಝುಕಿ
ಸ್ಟಾಂಡರ್ಡ್ ಜಿಮ್ನಿಗೆ ಹೋಲಿಸಿದರೆ ಈ ಸೀಮಿತ ಎಡಿಷನ್ SUV ಕೆಲವು ರೆಡ್ ಮಡ್ ಫ್ಲ್ಯಾಪ್‌ಗಳು ಮತ್ತು ವಿಶೇಷ ಡೀಕಾಲ್‌ಗಳನ್ನು ಒಳಗೊಂಡಂತೆ ಕೆಲವು ಕಾಸ್ಮೆಟಿಕ್ ವ್ಯತ್ಯಾಸಗಳನ್ನು ಹೊಂದಿದೆ.
- ಈ ಸುಝುಕಿ ಜಿಮ್ನಿ ಹೆರಿಟೇಜ್ ಎಡಿಷನ್ ಕೇವಲ 300 ಯೂನಿಟ್‌ಗಳಿಗೆ ಸೀಮಿತವಾಗಿದೆ.
- ಇದು 1970 ರಿಂದ 1990ರ ತನಕದ SUV’s 4x4 ಪರಂಪರೆಯನ್ನು ಸಂಭ್ರಮಿಸುತ್ತಿದೆ.
- ನಾಲ್ಕು ಬಣ್ಣಗಳಲ್ಲಿ ಇದನ್ನು ನೀಡಲಾಗುತ್ತಿದೆ, ಅವುಗಳೆಂದರೆ ವೈಟ್, ಬ್ಲೂಯಿಷ್ ಬ್ಲ್ಯಾಕ್ ಪರ್ಲ್, ಜಂಗಲ್ ಗ್ರೀನ್ ಮತ್ತು ಮೀಡಿಯಂ ಗ್ರೇ.
- ಫೀಚರ್‌ಗಳ ವಿಷಯಕ್ಕೆ ಬಂದರೆ, ಇದು ಏಳು ಇಂಚಿನ ಟಚ್‌ಸ್ಕ್ರೀನ್ ಮತ್ತು ಫ್ರಂಟ್ ಪವರ್ ವಿಂಡೋಗಳನ್ನು ಹೊಂದಿದೆ. ಕ್ರ್ಯೂಸ್ ಕಂಟ್ರೋಲ್ ಅನ್ನು ನೀಡಲಾಗಿಲ್ಲ.
- ಅದೇ 1.5-ಲೀಟರ್ ಪೆಟ್ರೋಲ್ ಇಂಜಿನ್ (102PS/130Nm) ಅನ್ನು ಸ್ಟಾಂಡರ್ಡ್ ಮಾಡೆಲ್ ಆಗಿ ನೀಡಲಾಗಿದ್ದು, ಫೈವ್-ಸ್ಪೀಡ್ MT ಮಾತ್ರ ಹೊಂದಿದೆ.
- ಮಾರುತಿಯು ಶೀಘ್ರದಲ್ಲೇ ಭಾರತದಲ್ಲಿ ಫೈವ್-ಡೋರ್ ಜಿಮ್ನಿ ಅನ್ನು ಬಿಡುಗಡೆ ಮಾಡಲಿದ್ದು, ಇದು ಕೂಡ ವಿಶೇಷ ಎಡಿಷನ್ ಹೊಂದಿರಬಹುದೆಂಬ ನಿರೀಕ್ಷೆ ಇದೆ.
ಸುಝುಕಿಯು ಆಸ್ಟ್ರೇಲಿಯಾದಲ್ಲಿ “ಹೆರಿಟೇಜ್” ಎಡಿಷನ್ ಎಂಬ ಹೊಸ ಸೀಮಿತ ಎಡಿಷನ್‌ನ ಥ್ರೀ-ಡೋರ್ ಜಿಮ್ನಿಯನ್ನು ಬಿಡುಗಡೆಗೊಳಿಸಿದೆ. ಈ ಕಾರುತಯಾರಕರು ಹೇಳುವಂತೆ, ಈ ಆಫ್-ರೋಡರ್‌ನ ಹೊಸ ವಿಶೇಷ ಎಡಿಷನ್ ಕೇವಲ 300 ಯೂನಿಟ್‌ಗಳಿಗೆ ಸೀಮಿತವಾಗಿದ್ದು, 1970 ರಿಂದ 1990ರ ತನಕದ SUV’s 4x4 ಹೆರಿಟೇಜ್ ಅನ್ನು ಆಚರಿಸುತ್ತದೆ.
“ಹೆರಿಟೇಜ್” ಎಡಿಷನ್‌ನ ವಿಶೇಷ ವಿವರಗಳು
ಸುಝುಕಿ ತನ್ನ ಹೆರಿಟೇಜ್ ಎಡಿಷನ್‌ಗೆ ವೈಟ್, ಬ್ಲೂಯಿಷ್ ಬ್ಲ್ಯಾಕ್ ಪರ್ಲ್, ಜಂಗಲ್ ಗ್ರೀನ್ ಮತ್ತು ಮೀಡಿಯಂ ಗ್ರೇ ಎಂಬ ನಾಲ್ಕು ಎಕ್ಸ್‌ಟೀರಿಯರ್ ಶೇಡ್‌ಗಳನ್ನು ನೀಡುತ್ತಿದೆ.
ಜಿಮ್ನಿ ಹೆರಿಟೇಜ್ ಎಡಿಷನ್‌ನ ಇಂಟೀರಿಯರ್ ಬಗ್ಗೆ ಯಾವುದೇ ವಿವರಗಳಿಲ್ಲದಿದ್ದರೂ, ಸುಝುಕಿ ಇದನ್ನು ಟಿಂಕರ್ ಮಾಡಿದಂತೆ ಕಾಣುವುದಿಲ್ಲ. ಈ ಸೀಮಿತ ಎಡಿಷನ್ SUV ಅದೇ ಫ್ಯಾಬ್ರಿಕ್ ಸೀಟ್‌ಗಳನ್ನು ಸ್ಟಾಂಡರ್ಡ್ ಮಾಡೆಲ್ ಆಗಿ ಪಡೆದಿದೆ.
ಸಂಬಂಧಿತ: ಈ 3-ಡೋರ್ ಜಿಮ್ನಿ ಟಿಶ್ಯೂ ಬಾಕ್ಸ್ ನಿಮ್ಮ ಮಾರುತಿ ಜಿಮ್ನಿಗೆ ಒಂದು ಅತ್ಯುತ್ತಮ ಪರಿಕರ
ಇದು ಯಾವ ಫೀಚರ್‌ಗಳನ್ನು ಹೊಂದಿದೆ?
ಈ ರೆಟ್ರೋ-ಪ್ರೇರಿತ, ಸೀಮಿತ-ಎಡಿಷನ್ ಜಿಮ್ನಿಯು ಆಧುನಿಕ ಕಂಫರ್ಟ್‌ಗಳನ್ನು ಹೊಂದಿದೆ. ಇದು ಹೆಚ್ಚುಕಮ್ಮಿ ಸಾಮಾನ್ಯ ಜಿಮ್ನಿಯಂತೆ ಏಳು ಇಂಚಿನ ಟಚ್ ಸ್ಕ್ರೀನ್ ಸಿಸ್ಟಮ್, ಟಿಲ್ಟ್-ಮಾಡಬಹುದಾದ ಸ್ಟೀರಿಂಗ್ ವ್ಹೀಲ್, LED ಪ್ರಾಜೆಕ್ಟರ್ ಹೆಡ್‌ಲೈಟ್‌ಗಳು, ಫ್ರಂಟ್ ಪವರ್ ವಿಂಡೋಗಳು ಮತ್ತು ಕ್ಲೈಮೇಟ್ ಕಂಟ್ರೋಲ್ ಅನ್ನು ಹೊಂದಿದೆ.
ಇದರ ಸುರಕ್ಷತಾ ಕಿಟ್‌ಗಳು ರಿವರ್ಸಿಂಗ್ ಕ್ಯಾಮರಾ, ಆರು ಏರ್ ಬ್ಯಾಗ್‌ಗಳು, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಮತ್ತು ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ಒಳಗೊಂಡಿದೆ. ಅಲ್ಲದೇ ಇದು ಹೈ-ಬೀಮ್ ಅಸಿಸ್ಟ್, ಆಟೋ ಎಮರ್ಜನ್ಸಿ ಬ್ರೇಕಿಂಗ್ ಮತ್ತು ಲೇನ್ ಡಿಪರ್ಚರ್ ವಾರ್ನಿಂಗ್ ಅನ್ನು ಒಳಗೊಂಡ ಕೆಲವು ಡ್ರೈವರ್ ಅಸಿಸ್ಟ್ ಅನ್ನೂ ಪಡೆದಿದೆ.
ಇದನ್ನೂ ಓದಿ: ನಿಮ್ಮ ಮಾರುತಿ ಜಿಮ್ನಿಯನ್ನು ಒಂದು ಮಿನಿ ಜಿ-ವಾಗೆನ್ ಆಗಿ ಪರಿವರ್ತಿಸಲು ಇಲ್ಲಿವೆ ಟಾಪ್ 5 ಕಿಟ್‌ಗಳು
ಬಾನೆಟ್ ಅಡಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ
ಈ ಜಿಮ್ನಿಯ ಹೆರಿಟೇಜ್ ಮಾಡೆಲ್ ಸಾಮಾನ್ಯ ಮಾಡೆಲ್‌ನಂತೆಯೇ 1.5-ಲೀಟರ್ ಪೆಟ್ರೋಲ್ ಇಂಜಿನ್ (102PS/130Nm) ಮತ್ತು 4WD ಅನ್ನು ಹೊಂದಿದೆ, ಆದರೆ ಇದು ಫೈವ್-ಸ್ಪೀಡ್ ಗೇರ್ ಬಾಕ್ಸ್ ಅನ್ನು ಮಾತ್ರ ಹೊಂದಿದ್ದು ಸ್ಟಾಂಡರ್ಡ್ ಜಿಮ್ನಿಗೆ ಸುಝುಕಿಯು ಐಚ್ಛಿಕ ಫೋರ್-ಸ್ಪೀಡ್ ಆಟೋಮ್ಯಾಟಿಕ್ ಅನ್ನೂ ನೀಡಿದೆ.
ಭಾರತದಲ್ಲಿ ಜಿಮ್ನಿ
ಮಾರುತಿ ಸುಝುಕಿಯು ಶೀಘ್ರದಲ್ಲೇ 2023 ಆಟೋ ಎಕ್ಸ್‌ಪೋನಲ್ಲಿ ಅನಾವರಣಗೊಳಿಸಿದ ಫೈವ್-ಡೋರ್ ಜಿಮ್ನಿಯನ್ನು ಬಿಡುಗಡೆಗೊಳಿಸಲಿದ್ದು, ಇದರ ಆರಂಭಿಕ ಬೆಲೆಯು ರೂ 10 ಲಕ್ಷ (ಎಕ್ಸ್-ಶೋರೂಂ) ಇರಬಹುದೆಂದು ನಿರೀಕ್ಷಿಸಲಾಗಿದೆ. ಇದು ಜನಪ್ರಿಯ ಆಫ್-ರೋಡರ್‌ನ ಹೆಚ್ಚು ಪ್ರಾಯೋಗಿಕ ಆವೃತ್ತಿಯಾಗಿದ್ದು, ಉದ್ದದ ವ್ಹೀಲ್‌ಬೇಸ್‌ನೊಂದಿಗೆ ಹಿಂದೆ ಹೆಚ್ಚಿನ ಲೆಗ್‌ಸ್ಪೇಸ್‌ಗೆ ಅವಕಾಶ ಸೃಷ್ಟಿಸಿದೆ. ಇದಕ್ಕೆ ಕೇವಲ 1.5-ಲೀಟರ್ ಪೆಟ್ರೋಲ್ ಇಂಜಿನ್ (105PS/134Nm) ನೀಡಲಾಗಿದ್ದು, ಫೈವ್-ಸ್ಪೀಡ್ ಮ್ಯಾನುವಲ್ ಅಥವಾ ಫೋರ್-ಸ್ಪೀಡ್ ಆಟೋಮ್ಯಾಟಿಕ್‌ನೊಂದಿಗೆ ಜೋಡಿಸಲಾಗಿದೆ. ಭಾರತದ ಜಿಮ್ನಿ ಕೂಡಾ 4WD ಅನ್ನು ಸ್ಟಾಂಡರ್ಡ್ ಆಗಿ ಪಡೆದಿದೆ. ಈ ಕಾರುತಯಾರಕರು SUV ಯ ಕೆಲವು ಮಾರುಕಟ್ಟೆ ನಿರ್ದಿಷ್ಟ ಸೀಮಿತ ಎಡಿಷನ್ ಅನ್ನು ನೀಡುವ ನಿರೀಕ್ಷೆಯನ್ನು ನಾವು ಹೊಂದಿದ್ದೇವೆ.