Login or Register ಅತ್ಯುತ್ತಮ CarDekho experience ಗೆ
Login

ಈ 7 ಚಿತ್ರಗಳಲ್ಲಿ Maruti Fronx Delta Plus Velocity ಆವೃತ್ತಿಯನ್ನು ನೋಡೋಣ

published on ಫೆಬ್ರವಾರಿ 09, 2024 09:06 pm by shreyash for ಮಾರುತಿ ಫ್ರಾಂಕ್ಸ್‌

ಫ್ರಾಂಕ್ಸ್‌ನ ವೆಲಾಸಿಟಿ ಎಡಿಷನ್‌ನ ಆಕ್ಸೆಸರಿ ಕಿಟ್‌ಗಾಗಿ ಗ್ರಾಹಕರು ಹೆಚ್ಚುವರಿಯಾಗಿ 34,000 ರೂ.ನಷ್ಟು ಪಾವತಿಸಬೇಕಾಗುತ್ತದೆ.

ಮಾರುತಿ ಫ್ರಾಂಕ್ಸ್ ಇತ್ತೀಚೆಗೆ ವೆಲಾಸಿಟಿ ಎಡಿಷನ್‌ ಎಂಬ ವಿಶೇಷ ಆವೃತ್ತಿಯನ್ನು ಪರಿಚಯಿಸಿದೆ. ಇದು ಅದರ ಮಿಡ್-ಸ್ಪೆಕ್ ಡೆಲ್ಟಾ ಪ್ಲಸ್ ವೇರಿಯೆಂಟ್‌ನ್ನು ಆಧರಿಸಿದ ಆಕ್ಸಸ್ಸರಿಗಳ ಆವೃತ್ತಿಯಾಗಿದೆ. ಈ ವಿಶೇಷ ಆವೃತ್ತಿಯ ಕಿಟ್ ಬಾಹ್ಯ ಮತ್ತು ಇಂಟಿರೀಯರ್‌ನ ಸ್ಟೈಲಿಂಗ್ ಅಂಶಗಳನ್ನು ಒಳಗೊಂಡಿದೆ, ಜೊತೆಗೆ ಸೀಟ್ ಕುಶನ್‌ಗಳು ಮತ್ತು ಇನ್-ಕಾರ್ ವ್ಯಾಕ್ಯೂಮ್ ಕ್ಲೀನರ್‌ನಂತಹ ಹೆಚ್ಚುವರಿ ಆಕ್ಸಸ್ಸರಿಗಳನ್ನು ಒಳಗೊಂಡಿದೆ. ಫ್ರಾಂಕ್ಸ್‌ನ ಈ ಆಕ್ಸಸ್ಸರಿ ಆಧಾರಿತ ಆವೃತ್ತಿಯು ಏಳು ರಿಯಲ್‌ ಲೈಫ್‌ ಫೋಟೋಗಳಲ್ಲಿ ಹೇಗೆ ಕಾಣುತ್ತದೆ ಎಂದು ನೋಡೋಣ.

ವೆಲಾಸಿಟಿ ಆವೃತ್ತಿಯ ಮುಂಭಾಗದಲ್ಲಿ ಬದಲಾವಣೆಯೆಂದರೆ ಹೆಡ್‌ಲೈಟ್ ಘಟಕಗಳಲ್ಲಿ ಕ್ರೋಮ್ ಗಾರ್ನಿಶ್‌ಅನ್ನು ಸೇರಿಸಲಾಗಿದೆ. ಇದನ್ನು ಹೊರತುಪಡಿಸಿದರೆ, ಫ್ರಾಂಕ್ಸ್ ಡೆಲ್ಟಾ ಪ್ಲಸ್ ವೇರಿಯೆಂಟ್‌ ಅದರ ರೆಗುಲರ್‌ ಪುನರಾವರ್ತನೆಗೆ ಹೋಲುತ್ತದೆ. ಇದು ಡೆಲ್ಟಾ ಪ್ಲಸ್ ಟ್ರಿಮ್ ಅನ್ನು ಆಧರಿಸಿರುವುದರಿಂದ, ಇದು ಎಲ್ಇಡಿ ಹೆಡ್‌ಲೈಟ್‌ಗಳು ಮತ್ತು ಎಲ್ಇಡಿ ಡಿಆರ್‌ಎಲ್‌ಗಳೊಂದಿಗೆ ಬರುತ್ತದೆ.

ಇದನ್ನು ಸಹ ಪರಿಶೀಲಿಸಿ: ಮರೆಮಾಚುವಿಕೆಯೊಂದಿಗೆ ಮತ್ತೆ ಪರೀಕ್ಷೆ ನಡೆಸುವಾಗ ಮತ್ತೆ ಪತ್ತೆಯಾದ 5-door Mahindra Thar, ಹಿಂಭಾಗದ ಪ್ರೊಫೈಲ್‌ನ ವಿವರಗಳು ಬಹಿರಂಗ

ಬದಿಯಿಂದ ಗಮನಿಸಿದಾಗ, ಡೋರ್ ವೈಸರ್‌ಗಳು, ಸೈಡ್ ಮೋಲ್ಡಿಂಗ್ ಮತ್ತು ಒಆರ್‌ವಿಎಮ್‌ ಕ್ರೋಮ್ ಗಾರ್ನಿಶ್‌ನಂತಹ ಆಕ್ಸಸ್ಸರಿಗಳನ್ನು ಫ್ರಾಂಕ್ಸ್‌ನ ವೆಲಾಸಿಟಿ ಆವೃತ್ತಿಯೊಂದಿಗೆ ಸೇರಿಸಲಾಗಿದೆ. ಇದು ಡೆಲ್ಟಾ ಪ್ಲಸ್ ಟ್ರಿಮ್ ಆಗಿರುವುದರಿಂದ, ಇದು ಕಪ್ಪು ಬಣ್ಣದಿಂದ ಕೂಡಿರುವ 16-ಇಂಚಿನ ಅಲಾಯ್‌ ವೀಲ್‌ಗಳೊಂದಿಗೆ ಬರುತ್ತದೆ. ನೀವು ಫ್ರಾಂಕ್ಸ್‌ನೊಂದಿಗೆ ವೆಲಾಸಿಟಿ ಎಡಿಷನ್ ಆಕ್ಸೆಸರಿ ಕಿಟ್‌ನ ಭಾಗವಾಗಿ ಪ್ರಕಾಶಿತ ಡೋರ್ ಸಿಲ್ ಗಾರ್ಡ್‌ಗಳನ್ನು ಸಹ ಪಡೆಯುತ್ತೀರಿ.

ಇದನ್ನೂ ಪರಿಶೀಲಿಸಿ: ಹೊಸದಾಗಿ ಪರಿಚಯಿಸಲಾದ ಹ್ಯುಂಡೈ i20 ಸ್ಪೋರ್ಟ್ಜ್ (ಒಪ್ಶನಲ್‌) ಆವೃತ್ತಿಯು ಈ 10 ರಿಯಲ್ ಲೈಫ್ ಚಿತ್ರಗಳಲ್ಲಿ ಹೇಗೆ ಕಾಣುತ್ತದೆ ಎಂಬುದು ಇಲ್ಲಿದೆ

ಹಿಂಭಾಗದಿಂದ ಗಮನಿಸುವಾಗ ಕಾಣುವ ಒಂದೇ ಬದಲಾವಣೆಯೆಂದರೆ ಇದು ಕ್ರೋಮ್ ಟೈಲ್‌ಗೇಟ್ ಗಾರ್ನಿಶ್‌ನೊಂದಿಗೆ ಬರುತ್ತದೆ. ಡೆಲ್ಟಾ ಪ್ಲಸ್ ವೇರಿಯೆಂಟ್‌ ಆಗಿರುವುದರಿಂದ, ಇದು ಹಿಂಭಾಗದಲ್ಲಿ ಎಲ್‌ಇಡಿ ಟೈಲ್‌ಲ್ಯಾಂಪ್‌ಗಳನ್ನು ಪಡೆಯುತ್ತದೆ. ಆದರೆ ಇತರ ಟಾಪ್‌ ಎಂಡ್‌ ಮೊಡೆಲ್‌ಗಳಲ್ಲಿ ಕಂಡುಬರುವಂತೆ ಸೆಂಟರ್ ಲೈಟಿಂಗ್ ಅಂಶಗಳು ಇದರಲ್ಲಿ ಲಭ್ಯವಿರುವುದಿಲ್ಲ.

ವೆಲಾಸಿಟಿ ಆವೃತ್ತಿಯೊಂದಿಗೆ ನೀಡಲಾಗುವ ಅಧಿಕೃತ ಆಕ್ಸಸ್ಸರಿಗಳ ಭಾಗವಾಗಿ ಇದು ಮಡ್‌ ಫ್ಲಾಪ್‌ಗಳನ್ನು ಸಹ ಪಡೆಯುತ್ತದೆ.

ಫ್ರಾಂಕ್ಸ್‌ನ ವೆಲಾಸಿಟಿ ಆವೃತ್ತಿಯು ಡೆಲ್ಟಾ ಪ್ಲಸ್ ವೇರಿಯೆಂಟ್‌ನಲ್ಲಿ ಕಂಡುಬರುವಂತೆ ಡ್ಯುಯಲ್-ಟೋನ್ ಡ್ಯಾಶ್‌ಬೋರ್ಡ್ ಥೀಮ್‌ನೊಂದಿಗೆ ಮುಂದುವರಿಯುತ್ತದೆ, ಆದರೆ ಇಂಟೀರಿಯರ್ ಸ್ಟೈಲಿಂಗ್ ಕಿಟ್‌ನೊಂದಿಗೆ ನೀಡಲಾಗುತ್ತದೆ. ಈ ಕಿಟ್ ಎಸಿ ವೆಂಟ್‌ಗಳ ಸುತ್ತಲೂ ಮತ್ತು ಬಾಗಿಲಿನ ಪವರ್ ವಿಂಡೋ ಟ್ರಿಮ್‌ನಲ್ಲಿ ಕಾರ್ಬನ್ ಫಿನಿಶ್ ಅನ್ನು ಸಂಯೋಜಿಸುತ್ತದೆ.

Iವೈಶಿಷ್ಟ್ಯಗಳ ಪಟ್ಟಿಯತ್ತ ಗಮನ ಹರಿಸುವಾಗ, ಇದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 7-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್‌, 6-ಸ್ಪೀಕರ್ ಸೌಂಡ್ ಸಿಸ್ಟಮ್, ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ಒಆರ್‌ವಿಎಮ್‌ಗಳು ಮತ್ತು ಆಟೋಮ್ಯಾಟಿಕ್‌ ಎಸಿಯೊಂದಿಗೆ ಬರುತ್ತದೆ. ಸುರಕ್ಷತೆಯನ್ನು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), EBD ಜೊತೆಗೆ ABS, ಹಿಂಬದಿ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಹಗಲು/ರಾತ್ರಿ ಐಆರ್‌ವಿಎಮ್‌ (ಒಳಭಾಗದಿಂದ ರಿಯರ್‌ವ್ಯೂ ಮಿರರ್) ಮೂಲಕ ಕಾಳಜಿ ವಹಿಸಲಾಗುತ್ತದೆ. ಫ್ರಾಂಕ್ಸ್‌ನ ಡೆಲ್ಟಾ ಪ್ಲಸ್ ವೇರಿಯೆಂಟ್‌ ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾವನ್ನು ಪಡೆಯದಿದ್ದರೂ, ಇದು ಫ್ರಾಂಕ್ಸ್‌ನ ವೆಲಾಸಿಟಿ ಆವೃತ್ತಿಯೊಂದಿಗೆ ಆಕ್ಸಸ್ಸರಿಯಾಗಿ ಲಭ್ಯವಿದೆ.

ಮಾರುತಿಯು ಫ್ರಾಂಕ್ಸ್‌ನ ವೆಲಾಸಿಟಿ ಆವೃತ್ತಿಯನ್ನು ಕಪ್ಪು ಸೀಟ್ ಕವರ್‌ಗಳೊಂದಿಗೆ ನೀಡುತ್ತಿದೆ. ಅಲ್ಲದೆ, ವಿಶೇಷ ಆವೃತ್ತಿಯು 3ಡಿ ಫ್ಲೋರ್ ಮ್ಯಾಟ್ಸ್ ಮತ್ತು ಬೂಟ್ ಮ್ಯಾಟ್‌ಗಳು, ಸೀಟ್ ಕುಶನ್‌ಗಳು ಮತ್ತು ಇನ್-ಕಾರ್ ವ್ಯಾಕ್ಯೂಮ್ ಕ್ಲೀನರ್ ಅನ್ನು ಒಳಗೊಂಡಿದೆ.

ಆಫರ್‌ನಲ್ಲಿರುವ ಪವರ್‌ಟ್ರೇನ್‌ಗಳು

ಫ್ರಾಂಕ್ಸ್‌ನ ಡೆಲ್ಟಾ ಪ್ಲಸ್ ವೇರಿಯೆಂಟ್‌ 1.2-ಲೀಟರ್ ನೆಚುರಲಿ ಎಸ್ಪಿರೇಟೆಡ್‌ ಪೆಟ್ರೋಲ್ (90 PS / 113 Nm) ಮತ್ತು 1-ಲೀಟರ್ ಟರ್ಬೊ-ಪೆಟ್ರೋಲ್ (100 PS / 148 Nm) ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಎರಡೂ ಎಂಜಿನ್‌ಗಳೊಂದಿಗೆ 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅನ್ನು ಸ್ಟಾಂಡರ್ಡ್‌ ಆಗಿ ನೀಡಲಾಗುತ್ತದೆ. ಆಟೋಮ್ಯಾಟಿಕ್‌ಗಾಗಿ, ಮೊದಲನೆಯದು 5-ಸ್ಪೀಡ್‌ ಎಎಮ್‌ಟಿಯೊಂದಿಗೆ ಬರುತ್ತದೆ ಮತ್ತು ಎರಡನೆಯದು 6-ಸ್ಪೀಡ್ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ನ ಆಯ್ಕೆಯನ್ನು ಪಡೆಯುತ್ತದೆ. ಫ್ರಾಂಕ್ಸ್‌ನ ವೆಲಾಸಿಟಿ ಎಡಿಷನ್‌ ಅದರ ಟರ್ಬೊ-ಪೆಟ್ರೋಲ್ ಆವೃತ್ತಿಗಳಿಗೆ ಸೀಮಿತವಾಗಿದೆ.

ಬೆಲೆ ಮತ್ತು ಪ್ರತಿಸ್ಪರ್ಧಿಗಳು

ದೆಹಲಿಯಲ್ಲಿ ಮಾರುತಿ ಫ್ರಾಂಕ್ಸ್‌ನ ಡೆಲ್ಟಾ ಪಸ್ ಆವೃತ್ತಿಯ ಎಕ್ಸ್ ಶೋರೂಂ ಬೆಲೆಯು 8.78 ಲಕ್ಷ ರೂ.ನಿಂದ ಪ್ರಾರಂಭವಾಗಿ 9.73 ಲಕ್ಷ ರೂ.ವರೆಗೆ ಇದೆ. ಆದರೆ ವೆಲಾಸಿಟಿ ಆವೃತ್ತಿಗಾಗಿ ಗ್ರಾಹಕರು 34,000 ರೂ ನಷ್ಟು ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ. ಇದು ಮಾರುಕಟ್ಟೆಯಲ್ಲಿ ರೆನಾಲ್ಟ್ ಕಿಗರ್, ನಿಸ್ಸಾನ್ ಮ್ಯಾಗ್ನೈಟ್, ಸಿಟ್ರೊಯೆನ್ C3 ಮತ್ತು ಹ್ಯುಂಡೈ ಎಕ್ಸ್‌ಟರ್‌ಗಳ ವಿರುದ್ಧ ಸ್ಪರ್ಧಿಸುತ್ತದೆ.

ಇದರ ಬಗ್ಗೆ ಇನ್ನಷ್ಟು ಓದಿ : ಫ್ರಾಂಕ್ಸ್‌ ಎಎಮ್‌ಟಿ

s
ಅವರಿಂದ ಪ್ರಕಟಿಸಲಾಗಿದೆ

shreyash

  • 30 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಾರುತಿ ಫ್ರಾಂಕ್ಸ್‌

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ