ಮರೆಮಾಚುವಿಕೆಯೊಂದಿಗೆ ಮತ್ತೆ ಪರೀಕ್ಷೆ ನಡೆಸುವಾಗ ಮತ್ತೆ ಪತ್ತೆಯಾದ 5-door Mahindra Thar, ಹಿಂಭಾಗದ ಪ್ರೊಫೈಲ್‌ನ ವಿವರಗಳು ಬಹಿರಂಗ
ಮಹೀಂದ್ರ ಥಾರ್ ರಾಕ್ಸ್ ಗಾಗಿ ansh ಮೂಲಕ ಫೆಬ್ರವಾರಿ 08, 2024 07:55 pm ರಂದು ಪ್ರಕಟಿಸಲಾಗಿದೆ
- 30 Views
- ಕಾಮೆಂಟ್ ಅನ್ನು ಬರೆಯಿರಿ
ಈ ಉದ್ದನೆಯ ಥಾರ್ ಹೊಸ ಕ್ಯಾಬಿನ್ ಥೀಮ್, ಹೆಚ್ಚಿನ ವೈಶಿಷ್ಟ್ಯಗಳು ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಬರುತ್ತದೆ.
- ಪ್ರಸ್ತುತವಿರುವ 3-ಡೋರ್ ಮಹೀಂದ್ರಾ ಥಾರ್‌ಗೆ ಹೋಲಿಸಿದರೆ ಇದು ವಿನ್ಯಾಸದಲ್ಲಿ ಸಣ್ಣ ಬದಲಾವಣೆಗಳನ್ನು ಪಡೆಯುತ್ತದೆ.
- ಹೊಸ ಕ್ಯಾಬಿನ್ ಥೀಮ್‌ನೊಂದಿಗೆ ಬರುವ ಸಾಧ್ಯತೆಯಿದೆ.
- ಹೊಸ ವೈಶಿಷ್ಟ್ಯಗಳಲ್ಲಿ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ಸಿಂಗಲ್ ಪೇನ್ ಸನ್‌ರೂಫ್ ಸೇರಿವೆ.
- 15 ಲಕ್ಷದಿಂದ ಎಕ್ಸ್ ಶೋರೂಂ ಬೆಲೆಗಳು ಪ್ರಾರಂಭವಾಗಬಹುದೆಂದು ನಿರೀಕ್ಷಿಸಲಾಗಿದೆ.
5-ಬಾಗಿಲಿನ ಮಹೀಂದ್ರಾ ಥಾರ್ ಖಂಡಿತವಾಗಿಯೂ 2024 ರ ಅತ್ಯಂತ ನಿರೀಕ್ಷಿತ ಮೊಡೆಲ್‌ಗಳಲ್ಲಿ ಒಂದಾಗಿದೆ, ಆದರೆ ಈಗ ಅದು ಕೆಲ ಸಮಯದವರೆಗೆ ಪರೀಕ್ಷಾ ಹಂತದಲ್ಲಿದೆ. ಅದರ ವಿಡುಗಡೆಯ ದಿನಾಂಕವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲವಾದರೂ, ಅದರ ಉತ್ಪಾದನೆಗೆ ಸಿದ್ಧವಾಗಿರುವ ಪರೀಕ್ಷಾ ಆವೃತ್ತಿಗಳ ದೃಶ್ಯಗಳು ಹೆಚ್ಚಾಗಿ ಕಂಡುಬರುವುದರಿಂದ ಅದರ ಬಿಡುಗಡೆ ಶೀಘ್ರದಲ್ಲೇ ನಡೆಯಲಿದೆ ಎಂದು ಸುಳಿವು ನೀಡುತ್ತದೆ. ಇತ್ತೀಚೆಗಷ್ಟೇ ರಹಸ್ಯವಾಗಿ ಸೆರೆಹಿಡಿಯಲಾದ ಆವೃತ್ತಿಯಲ್ಲಿ, ದೊಡ್ಡದಾದ ಥಾರ್‌ನ ಹಿಂದಿನ ಪ್ರೊಫೈಲ್ ಅನ್ನು ಕಾಣಬಹುದು ಮತ್ತು ಅದರ ಎಲ್ಲಾ ವಿವರಗಳು ಇಲ್ಲಿವೆ.
ಹೊರಗಿನ ಭಾಗ
ಪ್ರಸ್ತುತ ಹಿಂದಿನಿಂದ ಸೆರೆಹಿಡಿಯಲಾದ ಫೋಟೊವನ್ನು ಗಮನಿಸುವಾಗ ಇದು 3-ಬಾಗಿಲಿನ ಥಾರ್ ಅನ್ನು ಹೋಲುವ ಹಿಂಭಾಗವನ್ನೇ ಹೊಂದಿದೆ. ಇದು ಒಂದೇ ರೀತಿಯ ಟೈಲ್‌ಗೇಟ್-ಮೌಂಟೆಡ್ ಸ್ಪೇರ್ ವೀಲ್, ಲಂಬವಾಗಿ ಇರಿಸಲಾದ ಆಯತಾಕಾರದ ಎಲ್‌ಇಡಿ ಟೈಲ್ ಲೈಟ್‌ಗಳು ಮತ್ತು ಅದೇ ಬಂಪರ್ ವಿನ್ಯಾಸವನ್ನು ಪಡೆಯುತ್ತದೆ.
ಇದನ್ನೂ ಓದಿ: ಮಾರುತಿ ಜಿಮ್ನಿ Vs ಮಹೀಂದ್ರಾ ಥಾರ್: ನಿಮ್ಮ ದೈನಂದಿನ ಆಫ್ರೋಡರ್
ಮುಂಭಾಗದ ಪ್ರೊಫೈಲ್ ಕೂಡ ವೃತ್ತಾಕಾರದ ಹೆಡ್‌ಲೈಟ್ ಮತ್ತು ಬಂಪರ್ ವಿನ್ಯಾಸಗಳೊಂದಿಗೆ 3-ಬಾಗಿಲಿನ ಆವೃತ್ತಿಯಂತೆಯೇ ಇರುತ್ತದೆ (ಈಗ ರಿಂಗ್ ತರಹದ ಎಲ್‌ಇಡಿ ಡಿಆರ್‌ಎಲ್ ಗಳೊಂದಿಗೆ ಎಲ್‌ಇಡಿ ಯುನಿಟ್‌ಗಳು). ಮುಂಭಾಗದ ಗ್ರಿಲ್ ಅನ್ನು ಸ್ವಲ್ಪ ಬದಲಾವಣೆ ಮಾಡಲಾಗಿದೆ. ಆದಾಗಿಯೂ, ಫಾಗ್ ಲ್ಯಾಂಪ್‌ಗಳು ದೀಪಗಳು ಇನ್ನೂ ಹ್ಯಾಲೊಜೆನ್ ಯುನಿಟ್‌ಗಳಾಗಿವೆ.
ಅದರ ಬದಿಯಲ್ಲಿ, ಹಿಂಭಾಗದ ಪ್ರಯಾಣಿಕರ ಅನುಕೂಲಕ್ಕಾಗಿ 2 ಹೆಚ್ಚುವರಿ ಬಾಗಿಲುಗಳು ಮತ್ತು ಅದೇ ಅಲಾಯ್ ವೀಲ್ ವಿನ್ಯಾಸವನ್ನು ಪಡೆಯುತ್ತದೆ. ಈ ಆಂಗಲ್‌ನಿಂದ ನೀವು ಎಸ್‌ಯುವಿಯ ಉದ್ದವಾದ ವೀಲ್‌ಬೇಸ್ ಅನ್ನು ಗಮನಿಸಬಹುದು ಎಂದು ಅದು ಹೇಳಿದೆ.
ವೈಶಿಷ್ಟ್ಯಗಳು ಮತ್ತು ಸುರಕ್ಷತೆ
5-ಬಾಗಿಲಿನ ಥಾರ್‌ನ ಕ್ಯಾಬಿನ್ ಅನ್ನು ಇತ್ತೀಚೆಗೆ ವಿವರವಾಗಿ ಬೇಹುಗಾರಿಕೆ ಮಾಡಲಾಯಿತು, ಇದು ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯನ್ನು ತೋರಿಸುತ್ತದೆ (ಎರಡೂ 10.25-ಇಂಚಿನ ಯುನಿಟ್ ಆಗಿರಬಹುದು). ಈ ಸ್ಕ್ರೀನ್‌ಗಳ ಹೊರತಾಗಿ, ಇದು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಸಿಂಗಲ್-ಪೇನ್ ಸನ್‌ರೂಫ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಟೈಪ್-ಸಿ ಚಾರ್ಜಿಂಗ್ ಪೋರ್ಟ್‌ಗಳು ಮತ್ತು ಆಟೋ-ಡಿಮ್ಮಿಂಗ್ ಐಆರ್‌ವಿಎಂ ಅನ್ನು ಸಹ ಪಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ: ಉತ್ಪಾದನೆಯಲ್ಲಿ 1 ಲಕ್ಷ ಯುನಿಟ್‌ಗಳನ್ನು ದಾಟಿದ ಮಹೀಂದ್ರ ಸ್ಕಾರ್ಪಿಯೊ ಎನ್
ಸುರಕ್ಷತೆಯ ದೃಷ್ಟಿಯಿಂದ, ಮಹೀಂದ್ರಾ ಎಸ್‌ಯುವಿಯು ಇದನ್ನು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್‌ಸಿ), ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, ISOFIX ಚೈಲ್ಡ್ ಸೀಟ್ ಆಂಕರ್‌ಗಳು ಮತ್ತು ರಿಯರ್ ವ್ಯೂ ಕ್ಯಾಮೆರಾದೊಂದಿಗೆ ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ. 5-ಬಾಗಿಲಿನ ಥಾರ್‌ನ ಟಾಪ್ ವೇರಿಯೆಂಟ್‌ಗಳು 360-ಡಿಗ್ರಿ ಕ್ಯಾಮೆರಾವನ್ನು ಸಹ ಒಳಗೊಂಡಿರುತ್ತವೆ.
ಪವರ್‌ಟ್ರೇನ್
5-ಬಾಗಿಲಿನ ಮಹೀಂದ್ರ ಥಾರ್ ಅದರ 3-ಬಾಗಿಲಿನ ಪ್ರತಿರೂಪದಂತೆಯೇ ಅದೇ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬರಲಿದೆ: 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್. ಈ ಎಂಜಿನ್‌ಗಳು 3-ಡೋರ್ ಆವೃತ್ತಿಯಲ್ಲಿ 152 ಪಿಎಸ್ (ಪೆಟ್ರೋಲ್) ಮತ್ತು 132 ಪಿಎಸ್ (ಡೀಸೆಲ್) ನೀಡುತ್ತವೆ. ಆದಾಗಿಯೂ, 5-ಬಾಗಿಲಿನ ಥಾರ್‌ನಲ್ಲಿ, ಇವುಗಳು ಹೆಚ್ಚಾಗಿ ಉನ್ನತ ಹಂತದ ಪವರ್‌ನಲ್ಲಿ ಬರುವ ಸಾಧ್ಯತೆ ಇದೆ. ಈ ಉದ್ದನೆಯ ಥಾರ್, ಹೆಚ್ಚಾಗಿ ಹಿಂಬದಿ-ಚಕ್ರ-ಡ್ರೈವ್ (RWD) ಮತ್ತು 4-ಚಕ್ರ-ಡ್ರೈವ್ (4WD) ಸೆಟಪ್‌ಗಳೆರಡರೊಂದಿಗೂ ಬರಬಹುದು.
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
5-ಬಾಗಿಲಿನ ಮಹೀಂದ್ರ ಥಾರ್ ಅನ್ನು ಈ ವರ್ಷದ ಕೊನೆಯಲ್ಲಿ 15 ಲಕ್ಷ ರೂ.ವಿನ ಆರಂಭಿಕ ಬೆಲೆಯಲ್ಲಿ (ಎಕ್ಸ್ ಶೋ ರೂಂ) ಬಿಡುಗಡೆ ಮಾಡಲಾಗುವುದು ಎಂದು ನಾವು ನಿರೀಕ್ಷಿಸುತ್ತೇವೆ. ಇದು ಮಾರುತಿ ಜಿಮ್ನಿಗೆ ಪ್ರೀಮಿಯಂ ಪರ್ಯಾಯವಾಗಲಿದೆ ಮತ್ತು ಮುಂಬರುವ 5-ಡೋರ್ ಫೋರ್ಸ್ ಗೂರ್ಖಾಗೆ ನೇರ ಪ್ರತಿಸ್ಪರ್ಧಿಯಾಗಿದೆ.
ಇನ್ನಷ್ಟು ಓದಿ: ಥಾರ್ ಆಟೋಮ್ಯಾಟಿಕ್