Login or Register ಅತ್ಯುತ್ತಮ CarDekho experience ಗೆ
Login

Tata Altroz Racer R1 ವರ್ಸಸ್‌ Hyundai i20 N Line N6: ಯಾವುದು ಬೆಸ್ಟ್‌ ? ಇಲ್ಲಿದೆ ಹೋಲಿಕೆ..

published on ಜೂನ್ 13, 2024 07:11 pm by ansh for ಟಾಟಾ ಆಲ್ಟ್ರೋಜ್ ರೇಸರ್

ಈ ಎರಡರಲ್ಲಿ , Altroz ​​ರೇಸರ್ ಹೆಚ್ಚು ಕೈಗೆಟುಕುವ ಬೆಲೆಯಲ್ಲಿದೆ, ಆದರೆ ಇದು ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ ಅನ್ನು ನೀಡುವುದಿಲ್ಲ

ಟಾಟಾ ಆಲ್ಟ್ರೋಜ್‌ ರೇಸರ್‌ ಅನ್ನು ಇತ್ತೀಚೆಗೆ ಆಲ್ಟ್ರೋಜ್ ​​ಹ್ಯಾಚ್‌ಬ್ಯಾಕ್‌ನ ಸ್ಪೋರ್ಟಿಯರ್ ಆವೃತ್ತಿಯಾಗಿ ಬಿಡುಗಡೆ ಮಾಡಲಾಗಿದೆ ಮತ್ತು ಮಾರುಕಟ್ಟೆಯಲ್ಲಿ ಅದರ ನೇರ ಪ್ರತಿಸ್ಪರ್ಧಿ ಎಂದರೆ ಹ್ಯುಂಡೈ ಐ20 ಎನ್‌ ಲೈನ್ ಆಗಿದೆ. ಅವುಗಳ ಬೇಸ್‌ ಆವೃತ್ತಿಗಳ ಬೆಲೆಗಳು ಹೆಚ್ಚುಕಮ್ಮಿ ಒಂದೇ ರೀತಿ ಇರುವುದರಿಂದ, ಯಾವುದು ಉತ್ತಮ ಎಂದು ಲೆಕ್ಕಾಚಾರ ಮಾಡಲು ನಾವು ಒಂದು ಕಿರುನೋಟವನ್ನು ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ.

ಬೆಲೆ

ಎಕ್ಸ್-ಶೋರೂಂ ಬೆಲೆ

ವೇರಿಯೆಂಟ್‌

ಟಾಟಾ ಆಲ್ಟ್ರೋಜ್‌ ರೇಸರ್‌ ಆರ್‌1

ಹ್ಯುಂಡೈ ಐ20 ಎನ್‌ ಲೈನ್‌ ಎನ್‌6

ಮ್ಯಾನುಯಲ್‌

9.49 ಲಕ್ಷ ರೂ.*

9.99 ಲಕ್ಷ ರೂ.

ಆಟೋಮ್ಯಾಟಿಕ್‌

ಅನ್ವಯವಾಗುವುದಿಲ್ಲ

11.15 ಲಕ್ಷ ರೂ.

*ಆಲ್ಟ್ರೋಜ್‌ ​​ರೇಸರ್‌ನ ಬೆಲೆಗಳು ಪರಿಚಯಾತ್ಮಕವಾಗಿವೆ

ಎರಡು ಹ್ಯಾಚ್‌ಬ್ಯಾಕ್‌ಗಳ ಎಂಟ್ರಿ-ಲೆವೆಲ್‌ನ ಆವೃತ್ತಿಗಳನ್ನು ಪರಿಗಣಿಸಿದಾಗ, ಇದು ಟಾಟಾದ ಸ್ಪೋರ್ಟಿ ಹ್ಯಾಚ್‌ಬ್ಯಾಕ್ ಹುಂಡೈಗಿಂತ 50,000 ರೂ.ವರೆಗೆ ಕಡಿಮೆ ಬೆಲೆಯನ್ನು ಹೊಂದಿದೆ. ಅಲ್ಲದೆ, ಐ20 ಎನ್‌ ಲೈನ್‌ನಲ್ಲಿ, ನೀವು ಬೇಸ್‌ ಮೊಡೆಲ್‌ಗಿಂತ ಹೆಚ್ಚುವರಿ 1.16 ಲಕ್ಷ ರೂ.ಗೆ ಆಟೋಮ್ಯಾಟಿಕ್‌ನ ಬೇಸ್‌ ವೇರಿಯೆಂಟ್‌ ಅನ್ನು ಪಡೆಯುತ್ತೀರಿ.

ಪವರ್‌ಟ್ರೈನ್‌

ಟಾಟಾ ಆಲ್ಟ್ರೋಜ್‌ ರೇಸರ್‌

ಹ್ಯುಂಡೈ ಐ20 ಎನ್‌ಲೈನ್‌

ಎಂಜಿನ್‌

1.2-ಲೀಟರ್ ಟರ್ಬೊ-ಪೆಟ್ರೋಲ್

1-ಲೀಟರ್ ಟರ್ಬೊ-ಪೆಟ್ರೋಲ್

ಪವರ್‌

120 ಪಿಎಸ್‌

120 ಪಿಎಸ್‌

ಟಾರ್ಕ್‌

170 ಎನ್‌ಎಮ್‌

172 ಎನ್‌ಎಮ್‌

ಟ್ರಾನ್ಸ್‌ಮಿಷನ್‌

6-ಸ್ಪೀಡ್‌ ಮ್ಯಾನುಯಲ್‌

6-ಸ್ಪೀಡ್‌ ಮ್ಯಾನುಯಲ್‌, 7-ಸ್ಪೀಡ್‌ ಡಿಸಿಟಿ

ಎರಡೂ ಮೊಡೆಲ್‌ಗಳು ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ಗಳನ್ನು ಬಹುತೇಕ ಒಂದೇ ರೀತಿಯ ಔಟ್‌ಪುಟ್ ಅಂಕಿಅಂಶಗಳೊಂದಿಗೆ ಪಡೆಯುತ್ತವೆ ಮತ್ತು ಎರಡೂ 6-ಸ್ಪೀಡ್ ಮ್ಯಾನ್ಯುವಲ್ ಅನ್ನು ಸ್ಟ್ಯಾಂಡರ್ಡ್‌ ಆಗಿ ಪಡೆಯುತ್ತವೆ. ಪರ್ಫಾರ್ಮೆನೆನ್ಸ್‌ಗೆ ಸಂಬಂಧಿಸಿದಂತೆ, ಸಂಖ್ಯೆಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ, ಆದರೆ i20 N ಲೈನ್ 7-ಸ್ಪೀಡ್ DCT (ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌) ಆಯ್ಕೆಯನ್ನು ಪಡೆಯುತ್ತದೆ, ಇದು ಅದನ್ನು ಹೆಚ್ಚು ಅನುಕೂಲಕರವಾಗಿಸುತ್ತದೆ, ಹಾಗೆಯೇ ಪ್ಯಾಡಲ್ ಶಿಫ್ಟರ್‌ಗಳು ಹೆಚ್ಚು ಮೋಜುಭರಿತ ಡ್ರೈವ್‌ನ ಆನುಭವವನ್ನು ನೀಡುತ್ತದೆ. ಆದರೆ ಆಲ್ಟ್ರೋಜ್ ರೇಸರ್‌ನಲ್ಲಿ ಪ್ಯಾಡಲ್ ಶಿಫ್ಟರ್‌ಗಳು ಲಭ್ಯವಿಲ್ಲ.

ಇದನ್ನು ಸಹ ಓದಿ: Hyundai Creta CVT ವರ್ಸಸ್ Honda Elevate CVT: ಆನ್ ರೋಡ್ ಪರ್ಫಾರ್ಮೆನ್ಸ್ ನ ಹೋಲಿಕೆ

ಫೀಚರ್‌ಗಳು

ಫೀಚರ್‌ಗಳು

ಟಾಟಾ ಆಲ್ಟ್ರೋಜ್‌ ರೇಸರ್‌ ಆರ್‌1

ಹ್ಯುಂಡೈ ಐ20 ಎನ್‌ ಲೈನ್‌ ಎನ್‌6

ಎಕ್ಸ್‌ಟಿರೀಯರ್‌

ಆಟೋ-ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು

ಎಲ್ಇಡಿ ಡಿಆರ್‌ಎಲ್‌ಗಳು

ಮುಂಭಾಗದ ಫಾಗ್‌ಲ್ಯಾಂಪ್‌ಗಳು

ಬಾನೆಟ್ ಮತ್ತು ರೂಫ್‌ನ ಮೇಲೆ ಬಿಳಿ ಪಿನ್‌ಸ್ಟ್ರೈಪ್‌ಗಳು

ಮುಂಭಾಗದ ಫೆಂಡರ್‌ಗಳ ಮೇಲೆ ರೇಸರ್ ಬ್ಯಾಡ್ಜ್‌ಗಳು

16-ಇಂಚಿನ ಸಂಪೂರ್ಣ ಕಪ್ಪಿನ ಅಲಾಯ್‌ ವೀಲ್‌ಗಳು

ಡ್ಯುಯಲ್-ಟಿಪ್ ಎಕ್ಸಾಸ್ಟ್

ಹಿಂದಿನ ಸ್ಪಾಯ್ಲರ್

ಹ್ಯಾಲೊಜೆನ್ ಹೆಡ್‌ಲೈಟ್‌ಗಳು

ಎಲ್ಇಡಿ ಟೈಲ್ ಲೈಟ್ಸ್

ಫ್ರಂಟ್ ಪ್ರೊಜೆಕ್ಟರ್ ಫಾಗ್ ಲ್ಯಾಂಪ್ಸ್

ಸುತ್ತಲೂ ಕೆಂಪು ಬಣ್ಣ

ಗ್ರಿಲ್, ಮುಂಭಾಗದ ಫೆಂಡರ್‌ಗಳು ಮತ್ತು ಚಕ್ರಗಳಲ್ಲಿ ಎನ್‌ ಲೈನ್ ಬ್ಯಾಡ್ಜ್‌ಗಳು

ಡ್ಯುಯಲ್-ಟಿಪ್ ಎಕ್ಸಾಸ್ಟ್

16-ಇಂಚಿನ ಡ್ಯುಯಲ್ ಟೋನ್ ಅಲಾಯ್ ವೀಲ್‌ಗಳು

ಹಿಂದಿನ ಸ್ಪಾಯ್ಲರ್

ಇಂಟಿರೀಯರ್‌

ಲೆಥೆರೆಟ್ ಸೀಟ್‌ಗಳು

ಲೆದರ್ ಸುತ್ತಿದ ಸ್ಟೀರಿಂಗ್ ವೀಲ್‌ ಮತ್ತು ಗೇರ್ ನಾಬ್

ಲೆದರ್ ಸುತ್ತಿದ ಮುಂಭಾಗದ ಸ್ಲೈಡಿಂಗ್ ಆರ್ಮ್‌ರೆಸ್ಟ್

ಕಿತ್ತಳೆ ಬಣ್ಣದ ಹೈಲೈಟ್ಸ್‌ನೊಂದಿಗೆ ಕಪ್ಪು ಕ್ಯಾಬಿನ್ ಥೀಮ್

"ಎನ್‌" ಲೋಗೋದೊಂದಿಗೆ ಲೆಥೆರೆಟ್ ಸೀಟ್‌ಗಳು

ಲೆದರ್ ಸುತ್ತಿದ ಸ್ಟೀರಿಂಗ್ ವೀಲ್‌ ಮತ್ತು ಗೇರ್ ನಾಬ್

ಕೆಂಪು ಹೈಲೈಟ್‌ಗಳೊಂದಿಗೆ ಸಂಪೂರ್ಣ ಕಪ್ಪು ಕ್ಯಾಬಿನ್ ಥೀಮ್

ಪ್ಯಾಡಲ್ ಶಿಫ್ಟರ್‌ಗಳು (ಡಿಸಿಟಿ)

ಮೆಟಲ್ ಪೆಡಲ್

ಹಗಲು/ರಾತ್ರಿ ಐಆರ್‌ವಿಎಂ

ಇಂಫೋಟೈನ್‌ಮೆಂಟ್‌

10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್

ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ

8-ಸ್ಪೀಕರ್ ಸೌಂಡ್ ಸಿಸ್ಟಮ್

8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್

ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ

6-ಸ್ಪೀಕರ್ ಸೌಂಡ್ ಸಿಸ್ಟಮ್

ಸೌಕರ್ಯ ಮತ್ತು ಅನುಕೂಲತೆ

ಸೆಮಿ-ಡಿಜಿಟಲ್ ಇನ್ಸ್‌ಟ್ರುಮೆಂಟ್‌ ಕ್ಲಸ್ಟರ್

ಹಿಂಭಾಗದ ವೆಂಟ್‌ಗಳೊಂದಿಗೆ ಆಟೋಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್‌

ಪುಶ್ ಬಟನ್ ಸ್ಟಾರ್ಟ್/ಸ್ಟಾಪ್

ಎಲೆಕ್ಟ್ರಿಕಲಿ ಎಡ್ಜಸ್ಟ್‌ ಮಾಡಬಹುದಾದ ಮತ್ತು ಆಟೋ ಫೊಲ್ಡಿಂಗ್‌ ಒಆರ್‌ವಿಎಮ್‌ಗಳು

ಎತ್ತರ ಎಡ್ಜಸ್ಟ್‌ ಮಾಡಬಹುದಾದ ಡ್ರೈವರ್ ಸೀಟ್

ಟಿಲ್ಟ್ ಎಡ್ಜಸ್ಟ್‌ ಮಾಡಬಹುದಾದ ಸ್ಟೀರಿಂಗ್ ವೀಲ್

ಕ್ರೂಸ್ ಕಂಟ್ರೋಲ್

ಆಂಬಿಯೆಂಟ್ ಲೈಟಿಂಗ್

ಸೆಮಿ-ಡಿಜಿಟಲ್ ಇನ್ಸ್‌ಟ್ರುಮೆಂಟ್‌ ಕ್ಲಸ್ಟರ್

ಹಿಂಭಾಗದ ವೆಂಟ್‌ಗಳೊಂದಿಗೆ ಆಟೋಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್‌

ಸನ್‌ರೂಫ್

ಎಲೆಕ್ಟ್ರಿಕಲಿ ಎಡ್ಜಸ್ಟ್‌ ಮಾಡಬಹುದಾದ ಮತ್ತು ಆಟೋ ಫೊಲ್ಡಿಂಗ್‌ ಒಆರ್‌ವಿಎಮ್‌ಗಳು

ಸ್ಟೀರಿಂಗ್ ವೀಲ್‌ಗೆ ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಎಡ್ಜಸ್ಟ್‌ಮೆಂಟ್‌

ಎತ್ತರ ಎಡ್ಜಸ್ಟ್‌ ಮಾಡಬಹುದಾದ ಡ್ರೈವರ್ ಸೀಟ್

ಕ್ರೂಸ್ ಕಂಟ್ರೋಲ್

ಸುರಕ್ಷತೆ

6 ಏರ್‌ಬ್ಯಾಗ್‌ಗಳು

ಇಬಿಡಿ ಜೊತೆಗೆ ಎಬಿಎಸ್

ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ

ISOFIX ಚೈಲ್ಡ್ ಸೀಟ್ ಆಂಕರ್‌ಗಳು

ಹಿಂಭಾಗದ ಡಿಫಾಗರ್

ಹಿಂದಿನ ಪಾರ್ಕಿಂಗ್ ಸೆನ್ಸರ್‌ಗಳು

ರಿಯರ್ ವ್ಯೂ ಕ್ಯಾಮೆರಾ

ಹಿಂದಿನ ವೈಪರ್ ಮತ್ತು ವಾಷರ್

6 ಏರ್‌ಬ್ಯಾಗ್‌ಗಳು

ಇಬಿಡಿ ಜೊತೆಗೆ ಎಬಿಎಸ್

ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ

ಟೈರ್ ಪ್ರೆಶರ್‌ ಮಾನಿಟರಿಂಗ್ ಸಿಸ್ಟಮ್

ಹಿಲ್ ಸ್ಟಾರ್ಟ್ ಅಸಿಸ್ಟ್

ವೆಹಿಕಲ್‌ ಸ್ಟೇಬಿಲಿಟಿ ಮ್ಯಾನೆಜ್‌ಮೆಂಟ್

ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು

ಹಿಂದಿನ ಪಾರ್ಕಿಂಗ್ ಸೆನ್ಸರ್‌ಗಳು

ಹಿಂಭಾಗದ ಡಿಫಾಗರ್

ರಿಯರ್ ವ್ಯೂ ಕ್ಯಾಮೆರಾ

ಹಿಂದಿನ ವೈಪರ್ ಮತ್ತು ವಾಷರ್

ಫೀಚರ್‌ಗಳ ವಿಷಯಕ್ಕೆ ಬಂದರೆ, ಆಲ್ಟ್ರೋಜ್‌ ರೇಸರ್‌ ​ಆರ್‌1 ಉತ್ತಮವಾದ ಇನ್ಫೋಟೈನ್‌ಮೆಂಟ್ ಪ್ಯಾಕೇಜ್ ಮತ್ತು ಕೆಲವು ಹೆಚ್ಚುವರಿ ಸೌಕರ್ಯಗಳೊಂದಿಗೆ ಮುಂದಿದೆ. ಎರಡೂ ಮೊಡೆಲ್‌ಗಳು ಒಂದೇ ರೀತಿಯ ಸೌಕರ್ಯ ಮತ್ತು ಅನುಕೂಲತೆಯ ಫೀಚರ್‌ಗಳನ್ನು ಪಡೆಯುತ್ತವೆ, ಆದರೆ ಸುರಕ್ಷತೆಯನ್ನು ಗಮನಿಸುವಾಗ i20 N ಲೈನ್ N6 ಒಂದು ಹಂತ ಮೇಲಿದೆ.

ಅಂತಿಮ ಮಾತು

ಈ ಎರಡರ ನಡುವೆ ಆಯ್ಕೆ ಮಾಡುವುದು ಕಷ್ಟ, ಆದರೆ ಇದು ನಿಮ್ಮ ಅಗತ್ಯಗಳನ್ನು ಅವಲಂಬಿಸಿರುತ್ತದೆ. 10 ಲಕ್ಷ ರೂ.ಗೆ(ಎಕ್ಸ್ ಶೋರೂಂ), i20 ಎನ್‌ ಲೈನ್ ಎನ್‌6 ಸ್ಪೋರ್ಟಿ ವಿನ್ಯಾಸ, ಪ್ರೀಮಿಯಂ ಇಂಟಿರೀಯರ್‌ಗಳು, ಯೋಗ್ಯವಾದ ಇನ್ಫೋಟೈನ್‌ಮೆಂಟ್ ಪ್ಯಾಕೇಜ್ ಮತ್ತು ಉತ್ತಮ ಫೀಚರ್‌ಗಳ ಪಟ್ಟಿಯನ್ನು ನೀಡುತ್ತದೆ. ಅಲ್ಲದೆ, ನೀವು ಇನ್ನೊಂದು ಲಕ್ಷವನ್ನು ಹಾಕಲು ಸಿದ್ಧರಿದ್ದರೆ, ನಿಮಗೆ ಆಟೋಮ್ಯಟಿಕ್‌ ಗೇರ್‌ಬಾಕ್ಸ್‌ನ ಅನುಕೂಲವನ್ನು ಪಡೆಯಬಹುದು.

ಮತ್ತೊಂದೆಡೆ, ಆಲ್ಟ್ರೋಜ್‌ ರೇಸರ್‌ ಆರ್‌1 ಇದೇ ರೀತಿಯ ಸ್ಪೋರ್ಟಿ ಬಾಹ್ಯ ಮತ್ತು ಇಂಟಿರೀಯರ್‌ಗಳೊಂದಿಗೆ ಬರುತ್ತದೆ ಮತ್ತು ಮಿಶ್ರಣಕ್ಕೆ ಉತ್ತಮವಾದ ಇನ್ಫೋಟೈನ್‌ಮೆಂಟ್ ಪ್ಯಾಕೇಜ್ ಅನ್ನು ಸಹ ತರುತ್ತದೆ. ಫೀಚರ್‌ಗಳು ನಿಮಗೆ ಆದ್ಯತೆಯಾಗಿದ್ದರೆ ಮತ್ತು ನೀವು ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ಅನ್ನು ಬಯಸಿದರೆ, ಆಲ್ಟ್ರೋಜ್‌ ರೇಸರ್‌ ಅನ್ನು ಆರಿಸಿಕೊಳ್ಳುವುದು ಉತ್ತಮವಾಗಿರುತ್ತದೆ, ಇದು ಹೆಚ್ಚು ಕಡಿಮೆ ವೆಚ್ಚದ ಖರೀದಿಯಾಗಲಿದೆ.

ಇದನ್ನೂ ಓದಿ: Tata Altroz Racer ವರ್ಸಸ್‌ Tata Altroz: 5 ಪ್ರಮುಖ ವ್ಯತ್ಯಾಸಗಳ ವಿವರಗಳು

ಆದರೆ ನೀವು ಪ್ಯಾಡಲ್ ಶಿಫ್ಟರ್‌ಗಳೊಂದಿಗೆ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಶನ್‌ ಅನುಕೂಲತೆಯನ್ನು ಬಯಸಿದರೆ, ಉತ್ತಮ ಫೀಚರ್‌ಗಳ ಮಿಶ್ರಣದೊಂದಿಗೆ, ಐ20 ಎನ್‌ಲೈನ್ ಎನ್‌6 ನಿಮಗಾಗಿ ಒಂದಾಗಿದೆ.

ಇನ್ನಷ್ಟು ಓದಿ: ಆಲ್ಟ್ರೋಜ್ ರೇಸರ್ ಆನ್‌ರೋಡ್‌ ಬೆಲೆ

a
ಅವರಿಂದ ಪ್ರಕಟಿಸಲಾಗಿದೆ

ansh

  • 21 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment on Tata ಆಲ್ಟ್ರೋಝ್ Racer

Read Full News

Enable notifications to stay updated with exclusive offers, car news, and more from CarDekho!

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ