Cardekho.com

Tata Curvv ಡಾರ್ಕ್‌ ಎಡಿಷನ್‌ನ ಮೊದಲ ಟೀಸರ್‌ ಔಟ್‌

ಏಪ್ರಿಲ್ 14, 2025 07:55 pm ರಂದು bikramjit ಮೂಲಕ ಪ್ರಕಟಿಸಲಾಗಿದೆ
45 Views

ಟೀಸರ್ ಅಭಿಯಾನ ಇದೀಗ ಪ್ರಾರಂಭವಾಗಿದ್ದರೂ, ಟಾಟಾ ಕರ್ವ್ ಡಾರ್ಕ್ ಎಡಿಷನ್‌ನ ಬಿಡುಗಡೆಗೂ ಮುನ್ನ ಅದರ ಎಕ್ಸ್‌ಕ್ಲೂಸಿವ್‌ ಫೋಟೋಗಳು ನಮ್ಮಲ್ಲಿವೆ, ಇದು ಏನನ್ನು ನಿರೀಕ್ಷಿಸಬಹುದು ಎಂಬುದರ ಕುರಿತು ನಮಗೆ ವಿವರವಾದ ನೋಟವನ್ನು ನೀಡುತ್ತದೆ

ಟಾಟಾದ ಎಸ್‌ಯುವಿ-ಕೂಪ್‌ ಆದ ಕರ್ವ್ ಶೀಘ್ರದಲ್ಲೇ ಡಾರ್ಕ್ ಎಡಿಷನ್ ಪಡೆಯುವ ಭಾರತೀಯ ಬ್ರಾಂಡ್‌ನ ಇತ್ತೀಚಿನ ಕಾರು ಆಗಲಿದೆ. ಈ ಸ್ಪೆಷಲ್‌ ಎಡಿಷನ್‌ಅನ್ನು ಮೊದಲ ಬಾರಿಗೆ ಮಾಹಿತಿಯನ್ನು ನೀಡುವ ಅಧಿಕೃತ ವೀಡಿಯೊವನ್ನು ಬಿಡುಗಡೆ ಮಾಡಲಾಗಿದೆ, ಇದು ಅದರ ರೆಗ್ಯುಲರ್‌ ಮೊಡೆಲ್‌ಗೆ ಪರಿಚಿತವಾಗಿ ಕಾಣುವ ಅದರ ಡಿಆರ್‌ಎಲ್‌ ಮತ್ತು ಬಾಡಿ ಆಕೃತಿಯ ಒಂದು ನೋಟವನ್ನು ನಮಗೆ ನೀಡುತ್ತದೆ. ಟಾಟಾ ಕಾರುಗಳಿಗೆ ಡಾರ್ಕ್ ಎಡಿಷನ್‌ಗಳು ಹೊಸದೇನಲ್ಲ, ಮತ್ತು ಕರ್ವ್‌, ಅದರ EV ಆವೃತ್ತಿಯೊಂದಿಗೆ, ಸಂಪೂರ್ಣ ಕಪ್ಪು ಶೈಲಿಯೊಂದಿಗೆ ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆಯುತ್ತದೆ.

ಟೀಸರ್ ಏನನ್ನು ತೋರಿಸುತ್ತದೆ?

11 ಸೆಕೆಂಡುಗಳ ವೀಡಿಯೊ ಟೀಸರ್ ಎಲ್ಇಡಿ ಡಿಆರ್‌ಎಲ್‌ ಮತ್ತು ಟಾಟಾ ಕರ್ವ್ ಡಾರ್ಕ್ ಆವೃತ್ತಿಯ ಸೈಡ್ ಪ್ರೊಫೈಲ್ ಬಾಡಿ ಆಕೃತಿಯನ್ನು ತೋರಿಸುತ್ತದೆ. ಇದಲ್ಲದೆ, ಟೀಸರ್‌ನಲ್ಲಿ ಹೆಚ್ಚಿನದನ್ನು ನೀಡಲಾಗಿಲ್ಲ. ಆದರೆ, ಈ ಸ್ಪೇಷಲ್‌ ಎಡಿಷನ್‌ ಎಸ್‌ಯುವಿ ಕೂಪ್‌ನ ಎಕ್ಸ್‌ಕ್ಲೂಸಿವ್‌ ಫೋಟೊಗಳನ್ನು ನಾವು ಈಗಾಗಲೇ ಪಡೆದುಕೊಂಡಿದ್ದೇವೆ, ಇದು ರೆಗ್ಯುಲರ್‌ ಮೊಡೆಲ್‌ಗೆ ಹೋಲುವ ವಿನ್ಯಾಸವನ್ನು ಹೊಂದಿದೆ. ಸ್ಪಷ್ಟವಾಗಿ ಕಾಣುವ ಮುಖ್ಯ ವ್ಯತ್ಯಾಸವೆಂದರೆ ಹೊಸ ಕಪ್ಪು ಬಾಡಿ ಕಲರ್‌. ಅಲ್ಲದೆ, ಇದು ಹೆಚ್ಚು ಕಪ್ಪು ಬಣ್ಣದಲ್ಲಿರುವ ಅಂಶಗಳು, ಡಾರ್ಕ್ ಕ್ರೋಮ್ ಲೋಗೋಗಳು ಮತ್ತು ವಿಶೇಷ #ಡಾರ್ಕ್ ಬ್ಯಾಡ್ಜಿಂಗ್‌ಗಳಿಂದ ತನ್ನನ್ನು ತಾನು ಗುರುತಿಸಿಕೊಳ್ಳುತ್ತದೆ.

ಡಾರ್ಕ್ ಎಡಿಷನ್‌ಗಳನ್ನು ಹೊಂದಿರುವ ಇತರ ಟಾಟಾ ಮೊಡೆಲ್‌ಗಳಂತೆ, ಕರ್ವ್ವ್ ಕೂಡ ಸಂಪೂರ್ಣ ಕಪ್ಪು ಬಣ್ಣದ ಇಂಟೀರಿಯರ್‌ನೊಂದಿಗೆ ಬರುತ್ತದೆ, ಇದು ಹೆಚ್ಚು ಸ್ಪೋರ್ಟಿಯರ್ ಆಗಿ ಕಾಣುತ್ತದೆ ಮತ್ತು ಕ್ಯಾಬಿನ್‌ನಲ್ಲಿ ಪ್ಲಶ್ ಲುಕ್‌ಗಾಗಿ ಸೆಂಟರ್ ಕನ್ಸೋಲ್‌ನಲ್ಲಿ ಗ್ಲೋಸ್ ಕಪ್ಪು ಇನ್ಸರ್ಟ್‌ಗಳಿಂದ ಮತ್ತಷ್ಟು ಎದ್ದು ಕಾಣುತ್ತದೆ. ನಾವು ಇನ್ನೊಂದು ಲೇಖನದಲ್ಲಿ ಕಾರಿನ ಬಣ್ಣದ ಚಿತ್ರಗಳನ್ನು ಬಳಸಿಕೊಂಡು ಅದರ ವಿನ್ಯಾಸವನ್ನು ವಿವರಿಸಿದ್ದೇವೆ, ಅದನ್ನು ನೀವು ಕೆಳಗೆ ಪರಿಶೀಲಿಸಬಹುದು.

(ಇದನ್ನೂ ಓದಿ:ಟಾಟಾ ಕರ್ವ್ ಡಾರ್ಕ್ ಎಡಿಷನ್‌ನ ರಿಯಲ್‌-ಲೈಫ್‌ ಚಿತ್ರಗಳತ್ತ ಗಮನ ಹರಿಸಿ)

ನಿರೀಕ್ಷಿತ ಫೀಚರ್‌ಗಳು ಮತ್ತು ಸುರಕ್ಷತೆ

ಟಾಟಾ ಕರ್ವ್ ಡಾರ್ಕ್ ಆವೃತ್ತಿಯು ರೆಗ್ಯುಲರ್‌ ಮೊಡೆಲ್‌ನ ಟಾಪ್‌-ಸ್ಪೆಕ್ ವೇರಿಯೆಂಟ್‌ಗಳನ್ನು ಆಧರಿಸಿರಬಹುದು ಮತ್ತು 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್, 10.25-ಇಂಚಿನ ಡ್ರೈವರ್ ಡಿಸ್‌ಪ್ಲೇ, 9-ಸ್ಪೀಕರ್ JBL ಸೌಂಡ್ ಸಿಸ್ಟಮ್, ಪನೋರಮಿಕ್ ಸನ್‌ರೂಫ್, 6-ವೇ ಪವರ್ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್‌ನೊಂದಿಗೆ ವೆಂಟಿಲೇಟೆಡ್ ಮುಂಭಾಗದ ಸೀಟುಗಳು, ಒರಗುವ ಹಿಂಭಾಗದ ಸೀಟುಗಳು, ಏರ್ ಪ್ಯೂರಿಫೈಯರ್, ಆಟೋಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್‌ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನಂತಹ ಒಂದೇ ರೀತಿಯ ಫೀಚರ್‌ಗಳನ್ನು ಪಡೆಯುತ್ತದೆ.

ಇದರ ಸುರಕ್ಷತಾ ತಂತ್ರಜ್ಞಾನವು ಸಹ ಒಂದೇ ಆಗಿರುತ್ತದೆ, 6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್ ಆಗಿ), 360-ಡಿಗ್ರಿ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಲೆವೆಲ್-2 ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ಸೂಟ್‌ನೊಂದಿಗೆ ಮುಂದುವರಿಯುತ್ತದೆ.

ನಿರೀಕ್ಷಿತ ಪವರ್‌ಟ್ರೇನ್

ಸ್ಟ್ಯಾಂಡರ್ಡ್ ಟಾಟಾ ಕರ್ವ್ ತನ್ನ ಪವರ್‌ಟ್ರೇನ್‌ನಲ್ಲಿ ಎರಡು ಟರ್ಬೊ-ಪೆಟ್ರೋಲ್ ಮತ್ತು ಒಂದು ಡೀಸೆಲ್ ಎಂಜಿನ್ ಆಯ್ಕೆಯ ಆಯ್ಕೆಯನ್ನು ಹೊಂದಿದ್ದು, ಮ್ಯಾನುವಲ್ ಮತ್ತು ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ಗಳನ್ನು ಹೊಂದಿದೆ. ಟಾಪ್‌ ವೇರಿಯೆಂಟ್‌ಗಳನ್ನು ಆಧರಿಸಿದ ಡಾರ್ಕ್ ಎಡಿಷನ್‌ಅನ್ನು TGDi ಟರ್ಬೊ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಮಾತ್ರ ನೀಡುವ ಸಾಧ್ಯತೆಯಿದೆ.

ಎಂಜಿನ್‌ ಆಯ್ಕೆಗಳು

1.2-ಲೀಟರ್ ಟರ್ಬೊ-ಪೆಟ್ರೋಲ್

1.2-ಲೀಟರ್ ಟಿಜಿಡಿಐ ಟರ್ಬೊ-ಪೆಟ್ರೋಲ್

1.5-ಲೀಟರ್ ಡೀಸೆಲ್

ಪವರ್‌

120 PS

125 PS

118 PS

ಟಾರ್ಕ್‌

170 Nm

225 Nm

260 Nm

ಟ್ರಾನ್ಸ್‌ಮಿಷನ್‌

6-ಸ್ಪೀಡ್ MT / 7-ಸ್ಪೀಡ್ DCT*

6-ಸ್ಪೀಡ್ MT / 7-ಸ್ಪೀಡ್ DCT*

6-ಸ್ಪೀಡ್ MT / 7-ಸ್ಪೀಡ್ DCT*

*MT - ಮ್ಯಾನುವಲ್ ಟ್ರಾನ್ಸ್‌ಮಿಷನ್, DCT - ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್

ನಿರೀಕ್ಷಿತ ಬಿಡುಗಡೆ ಮತ್ತು ಬೆಲೆಗಳು

ಟಾಟಾ ಕರ್ವ್ ಡಾರ್ಕ್ ಎಡಿಷನ್‌ನ ಅಧಿಕೃತ ಬಿಡುಗಡೆ ದಿನಾಂಕವನ್ನು ಇನ್ನೂ ದೃಢೀಕರಿಸಲಾಗಿಲ್ಲವಾದರೂ, ಟೀಸರ್ ಅನ್ನು ಬಿಡುಗಡೆ ಮಾಡಲಾಗಿದ್ದು ಮತ್ತು ಅದರ ಬಾಡಿಸ್ಟೈಲ್ ಪ್ರತಿಸ್ಪರ್ಧಿ ಸಿಟ್ರೊಯೆನ್ ಬಸಾಲ್ಟ್ ಡಾರ್ಕ್ ಎಡಿಷನ್‌ಅನ್ನು ಬಿಡುಗಡೆ ಮಾಡಲಾಗಿದೆ, ಆದುದ್ದರಿಂದ ನಾವು ಶೀಘ್ರದಲ್ಲೇ ಕರ್ವ್ ಡಾರ್ಕ್ ಅನ್ನು ನಿರೀಕ್ಷಿಸಬಹುದು. ಪ್ರಸ್ತುತ ನಡೆಯುತ್ತಿರುವ IPL 2025 ಸೀಸನ್‌ಗೆ ಕರ್ವ್‌ಅನ್ನು ಅಧಿಕೃತ ಕಾರಾಗಿ ನೇಮಕ ಮಾಡಲಾಗಿದೆ. ವಾಸ್ತವವಾಗಿ, ಕರ್ವ್ ಇವಿ ಕೂಡ ಅದರ ICE ಪ್ರತಿರೂಪದಂತೆಯೇ ಅದೇ ಎಡಿಷನ್‌ಅನ್ನು ಪಡೆಯುತ್ತದೆ.

ಹಾಗೆಯೇ, ಇದರ ಬೆಲೆಯು ರೆಗ್ಯುಲರ್‌ ಬೆಲೆಗಳಿಗಿಂತ ಸ್ವಲ್ಪ ಹೆಚ್ಚಾಗಬಹುದು, ಅಂದರೆ ಕರ್ವ್‌ಗೆ 10 ಲಕ್ಷದಿಂದ 19.20 ಲಕ್ಷ ರೂ.ಗಳವರೆಗೆ ಮತ್ತು ಕರ್ವ್‌ ಇವಿ 17.49 ಲಕ್ಷದಿಂದ 21.99 ಲಕ್ಷ ರೂ.ಗಳವರೆಗೆ ಇರುತ್ತದೆ (ಎಲ್ಲಾ ಬೆಲೆಗಳು ಭಾರತಾದ್ಯಂತದ ಎಕ್ಸ್-ಶೋರೂಂ). ಕರ್ವ್‌ ಕಾರು ಮಾರುತಿ ಗ್ರ್ಯಾಂಡ್ ವಿಟಾರಾ, ಹುಂಡೈ ಕ್ರೆಟಾ, ಸ್ಕೋಡಾ ಕುಶಾಕ್, ಕಿಯಾ ಸೆಲ್ಟೋಸ್, ವೋಕ್ಸ್‌ವ್ಯಾಗನ್ ಟೈಗುನ್ ಮತ್ತು ಸಿಟ್ರೊಯೆನ್ ಬಸಾಲ್ಟ್ ವಿರುದ್ಧ ಪೈಪೋಟಿ ಮುಂದುವರಿಸಲಿದ್ದು, ಕರ್ವ್‌ ಇವಿ ಕಾರು ಹುಂಡೈ ಕ್ರೆಟಾ ಎಲೆಕ್ಟ್ರಿಕ್, ಎಂಜಿ ಝಡ್‌ಎಸ್ ಇವಿ ಮತ್ತು ಮುಂಬರುವ ಮಾರುತಿ ಇ ವಿಟಾರಾ ವಿರುದ್ಧ ಪೈಪೋಟಿ ನಡೆಸಲಿದೆ.

ಆಟೋಮೋಟಿವ್ ಜಗತ್ತಿನಿಂದ ತ್ವರಿತ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಲು ಮಿಸ್‌ ಮಾಡ್ಬೇಡಿ

Share via

Write your Comment on Tata ಕರ್ವ್‌

explore similar ಕಾರುಗಳು

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

ಟ್ರೆಂಡಿಂಗ್ ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ