Curvv ವರ್ಸಸ್ Nexon: Tata ಮಾಡಿರುವ 5 ಡಿಸೈನ್ ವ್ಯತ್ಯಾಸಗಳ ವಿವರ
ಟಾಟಾ ನೆಕ್ಸಾನ್ ಗಾಗಿ dipan ಮೂಲಕ ಜುಲೈ 24, 2024 06:21 pm ರಂದು ಪ್ರಕಟಿಸಲಾಗಿದೆ
- 82 Views
- ಕಾಮೆಂಟ್ ಅನ್ನು ಬರೆಯಿರಿ
ಟಾಟಾ ಕರ್ವ್ ಕೂಪ್ ಡಿಸೈನ್ ಹೊಂದಿರುವ SUV ಆಗಿದ್ದು, ಟಾಟಾ ನೆಕ್ಸಾನ್ ಸಾಂಪ್ರದಾಯಿಕ SUV ಬಾಡಿಯನ್ನು ಹೊಂದಿದೆ
ಇತ್ತೀಚೆಗೆ ಲಾಂಚ್ ಆಗಿರುವ ಟಾಟಾ ಕರ್ವ್ SUVಯು ಅದರ ಸ್ಲೀಕ್ ಆಗಿರುವ SUV-ಕೂಪ್ ಡಿಸೈನ್ ನೊಂದಿಗೆ ಟಾಟಾ ಮೋಟಾರ್ಸ್‌ನ ಲೈನ್ ಅಪ್ ನಲ್ಲಿ ಎದ್ದು ಕಾಣುತ್ತದೆ. ಮೊದಲ ನೋಟದಲ್ಲಿ, ಅದು ನಿಮಗೆ ಟಾಟಾ ನೆಕ್ಸಾನ್ ಮತ್ತು ಟಾಟಾ ಹ್ಯಾರಿಯರ್ ಅನ್ನು ನೆನಪಿಸಬಹುದು. ಆದರೆ, ಕರ್ವ್ ಅದನ್ನು ಎದ್ದು ಕಾಣುವಂತೆ ಮಾಡುವ ಹಲವಾರು ವಿಶಿಷ್ಟ ಫೀಚರ್ ಗಳನ್ನು ಮತ್ತು ಅಪ್ಡೇಟ್ ಗಳನ್ನು ಪರಿಚಯಿಸುತ್ತದೆ. ಈ ಲೇಖನದಲ್ಲಿ, ನೆಕ್ಸಾನ್ SUV ಯಿಂದ ಕರ್ವ್ ಅನ್ನು ಪ್ರತ್ಯೇಕಿಸುವ ಆರು ಡಿಸೈನ್ ವ್ಯತ್ಯಾಸಗಳನ್ನು ನೋಡೋಣ:
ಸ್ಲೋಪಿಂಗ್ ರೂಫ್‌ಲೈನ್
ಟಾಟಾ ಕರ್ವ್ ಸಾಮಾನ್ಯವಾಗಿ ಕೂಪ್ ಕಾರುಗಳಲ್ಲಿ ಕಂಡುಬರುವ ಸ್ಲೋಪಿಂಗ್ ರೂಫ್‌ಲೈನ್ ನೊಂದಿಗೆ ಬರುತ್ತದೆ. ಟಾಟಾ ನೆಕ್ಸಾನ್ ನಲ್ಲಿ ಹೆಚ್ಚು ಸಾಂಪ್ರದಾಯಿಕ ಶೈಲಿಯ SUV ಯಲ್ಲಿ ಕಂಡುಬರುವ ರೂಫ್‌ಲೈನ್ ಅನ್ನು ನೀಡಲಾಗಿದೆ.
ವಿಭಿನ್ನವಾದ ಮುಂಭಾಗದ ಗ್ರಿಲ್ ಮತ್ತು LED DRL ಗಳು
ಟಾಟಾ ಕರ್ವ್ ಮುಂಭಾಗದಲ್ಲಿ ನೆಕ್ಸಾನ್ EV ಯಿಂದ ಪಡೆದ ಕನೆಕ್ಟೆಡ್ LED DRL ಸ್ಟ್ರಿಪ್ ಅನ್ನು ಹೊಂದಿದೆ. ಮತ್ತೊಂದೆಡೆ, ನೆಕ್ಸಾನ್ ಕನೆಕ್ಟೆಡ್ LED ಸೆಟಪ್ ಅನ್ನು ಪಡೆಯುವುದಿಲ್ಲ. DRL ಗಳು ಕರ್ವ್ ನಲ್ಲಿರುವಂತೆಯೇ ಇರುತ್ತದೆ, ಆದರೆ ಮಧ್ಯದಲ್ಲಿ ಲೈಟ್‌ಬಾರ್ ಅನ್ನು ನೀಡಲಾಗಿಲ್ಲ. ಎರಡೂ SUVಗಳಲ್ಲಿನ ಹೆಡ್‌ಲೈಟ್ ಡಿಸೈನ್ ಮಾತ್ರ ಒಂದೇ ರೀತಿ ಇದೆ.
ಕರ್ವ್ ಟಾಟಾ ಹ್ಯಾರಿಯರ್‌ನಲ್ಲಿ ಕಾಣುವ ಗ್ರಿಲ್ ಅನ್ನು ಹೊಂದಿದೆ, ಆದರೆ ಇದನ್ನು ಬಾಡಿ ಕಲರ್ ನಲ್ಲಿ ನೀಡಲಾಗಿದೆ. ನೆಕ್ಸಾನ್ ಗ್ರಿಲ್ ಬದಲಿಗೆ ಕ್ರೋಮ್ ಎಲಿಮೆಂಟ್ ಗಳನ್ನು ಹೊಂದಿದೆ.
ವಿಭಿನ್ನ LED ಟೈಲ್ ಲೈಟ್ ಸೆಟಪ್
ಎರಡೂ ಟಾಟಾ SUVಗಳು ಕನೆಕ್ಟೆಡ್ LED ಟೈಲ್ ಲೈಟ್ ಸೆಟಪ್ ಅನ್ನು ಹೊಂದಿವೆ, ಆದರೆ ಅವುಗಳ ಡಿಸೈನ್ ವಿಭಿನ್ನವಾಗಿವೆ. ನೆಕ್ಸಾನ್‌ನಲ್ಲಿನ ಟೈಲ್‌ಲೈಟ್‌ಗಳು ಬದಿಗಳಲ್ಲಿ Y-ಆಕಾರಕ್ಕೆ ಬೇರ್ಪಡುತ್ತವೆ, ಆದರೆ ಕರ್ವ್ ನ ಟೈಲ್‌ಲೈಟ್‌ಗಳು ತಲೆಕೆಳಗಾದ C-ಆಕಾರದೊಂದಿಗೆ ಒಂದೇ ಲೈಟ್‌ಬಾರ್ ಅನ್ನು ಹೊಂದಿವೆ. ಈ ವ್ಯತ್ಯಾಸಗಳ ಹೊರತಾಗಿಯೂ, ಎರಡೂ SUV ಗಳ ರಿವರ್ಸಿಂಗ್ ಲೈಟ್ ಮತ್ತು ರಿಫ್ಲೆಕ್ಟರ್ ಅನ್ನು ಒಂದೇ ರೀತಿಯ ತ್ರಿಕೋನ-ಆಕಾರದ ಹೌಸಿಂಗ್ ನಲ್ಲಿ ಇರಿಸಲಾಗಿದೆ.
ವಿಭಿನ್ನ ಡೋರ್ ಹ್ಯಾಂಡಲ್ ಗಳು
ಕಾಂಪ್ಯಾಕ್ಟ್ SUV ಸೆಗ್ಮೆಂಟ್ ನಲ್ಲಿ ಮೊದಲ ಬಾರಿಗೆ ಫ್ಲಶ್ ಮಾದರಿಯ ಡೋರ್ ಹ್ಯಾಂಡಲ್‌ಗಳನ್ನು ಇಲ್ಲಿ ನೀಡಲಾಗಿದೆ. ಟಾಟಾ ಕರ್ವ್ ಹೆಚ್ಚು ಪ್ರೀಮಿಯಂ ಆಗಿ ಕಾಣುವ ಫ್ಲಶ್-ಟೈಪ್ ಡೋರ್ ಹ್ಯಾಂಡಲ್‌ಗಳನ್ನು ಹೊಂದಿದೆ.
ಬೇರೆ ಬೇರೆ ಅಲೊಯ್ ವೀಲ್ಸ್ ಗಾತ್ರಗಳು ಮತ್ತು ಡಿಸೈನ್ ಗಳು
ಟಾಟಾ ಕರ್ವ್ ಮತ್ತು ನೆಕ್ಸಾನ್ ನಲ್ಲಿ ಅಲಾಯ್ ವೀಲ್ ಡಿಸೈನ್ ಗಳು ಭಿನ್ನವಾಗಿವೆ. ಕರ್ವ್ ಎರಡು-ಟೋನ್ ವೀಲ್ ಗಳೊಂದಿಗೆ ಸ್ಟೈಲಿಶ್ ಪೆಟಲ್ ಡಿಸೈನ್ ಅನ್ನು ಹೊಂದಿದೆ. ಆದರೆ ನೆಕ್ಸಾನ್ ನಲ್ಲಿ ನೆಕ್ಸಾನ್ EV ಯಲ್ಲಿರುವ ಡಿಸೈನ್ ಅನ್ನು ನೀಡಲಾಗಿದೆ, ಮತ್ತು ಇದು ನೋಡುವಾಗ ಹೆಚ್ಚು ಏರೋಡೈನಾಮಿಕ್ ಮತ್ತು ಸ್ಪೋರ್ಟಿ ಆಗಿ ಕಾಣುತ್ತದೆ. ಇದರ ಜೊತೆಗೆ, ಕರ್ವ್ ಒಂದು ದೊಡ್ಡ ಕಾರು ಆಗಿರುವ ಕಾರಣ 18-ಇಂಚಿನ ವೀಲ್ ಗಳನ್ನು ಹೊಂದಿದೆ, ಆದರೆ ನೆಕ್ಸಾನ್ ಗೆ ಕೇವಲ 16-ಇಂಚಿನ ವೀಲ್ ಗಳನ್ನು ನೀಡಲಾಗಿದೆ.
ಟಾಟಾದ ಎರಡು ಕಾರುಗಳ ನಡುವಿನ ಕೆಲವು ಡಿಸೈನ್ ವ್ಯತ್ಯಾಸಗಳನ್ನು ನೀವು ಓದಿದ್ದೀರಿ. ನಿಮಗೆ ಟಾಟಾ ಕರ್ವ್ ಮತ್ತು ಟಾಟಾ ನೆಕ್ಸಾನ್ ಡಿಸೈನ್ ಗಳ ನಡುವೆ ಯಾವುದು ಹೆಚ್ಚು ಇಷ್ಟವಾಗಿದೆ? ಕೆಳಗೆ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.
ಆಟೋಮೋಟಿವ್ ಪ್ರಪಂಚದ ನಿರಂತರ ಅಪ್ಡೇಟ್ ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.
ಇನ್ನಷ್ಟು ಓದಿ: ಟಾಟಾ ನೆಕ್ಸಾನ್ AMT
0 out of 0 found this helpful