• English
  • Login / Register

ಹೇಗಿದೆ Tata Curvv EVಯ ಹೊರಭಾಗದಲ್ಲಿನ ಡಿಸೈನ್?-ಇಲ್ಲಿದೆ 5 ಫೋಟೋಗಳು

ಟಾಟಾ ಕರ್ವ್‌ ಇವಿ ಗಾಗಿ shreyash ಮೂಲಕ ಜುಲೈ 22, 2024 06:09 pm ರಂದು ಪ್ರಕಟಿಸಲಾಗಿದೆ

  • 79 Views
  • ಕಾಮೆಂಟ್‌ ಅನ್ನು ಬರೆಯಿರಿ

ಟಾಟಾ ಕರ್ವ್ ಇವಿಯು ಈಗಿರುವ ಟಾಟಾ ನೆಕ್ಸಾನ್ ಇವಿಯಿಂದ ಕನೆಕ್ಟೆಡ್ ಎಲ್‌ಇಡಿ ಡಿಆರ್‌ಎಲ್‌ಗಳು ಸೇರಿದಂತೆ ಅನೇಕ ಡಿಸೈನ್ ಕಾನ್ಸೆಪ್ಟ್ ಗಳನ್ನು ಪಡೆದುಕೊಳ್ಳುತ್ತದೆ

Tata Curvv EV Exterior Design Explained In 5 Images

ಪ್ರೊಡಕ್ಷನ್-ಸ್ಪೆಕ್ ಟಾಟಾ ಕರ್ವ್ EV ಯ ಹೊರಭಾಗವನ್ನು ಇತ್ತೀಚೆಗೆ ಅನಾವರಣಗೊಳಿಸಲಾಯಿತು. ಕರ್ವ್ EV ಭಾರತದ ಮೊದಲ ಮಾಸ್-ಮಾರ್ಕೆಟ್ ಎಲೆಕ್ಟ್ರಿಕ್ SUV-ಕೂಪ್ ಆಗಿದ್ದು, ಇದು ಈಗಾಗಲೇ ಟಾಟಾ ಪಂಚ್ EV ಯಲ್ಲಿರುವ Acti.ev ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. ಬನ್ನಿ, ಟಾಟಾ ಕರ್ವ್ EV ಯ ಹೊರಭಾಗವು ಹೇಗಿದೆ ಎಂಬುದನ್ನು ಈ 5 ಚಿತ್ರಗಳಲ್ಲಿ ನೋಡೋಣ.

 ಮುಂಭಾಗ

ಕರ್ವ್ EV ಯ ಮುಂಭಾಗದ ಡಿಸೈನ್ ಟಾಟಾ ನೆಕ್ಸಾನ್ EV ಗೆ ಹೋಲುತ್ತದೆ. ಇದು ಸಿಕ್ವೆನ್ಷಿಯಲ್ ಟರ್ನ್ ಇಂಡಿಕೇಟರ್ ಗಳು ಮತ್ತು ವೆಲ್ಕಮ್ ಮತ್ತು ಗುಡ್ ಬೈ ಅನಿಮೇಷನ್‌ಗಳೊಂದಿಗೆ ಕನೆಕ್ಟೆಡ್ LED DRL ಗಳನ್ನು ಮತ್ತು LED ಫಾಗ್ ಲ್ಯಾಂಪ್ ಗಳೊಂದಿಗೆ ಆಲ್-LED ಹೆಡ್‌ಲೈಟ್ ಸೆಟಪ್ ಅನ್ನು ಪಡೆಯುತ್ತದೆ. ಹೆಡ್‌ಲೈಟ್ ಹೌಸಿಂಗ್ ಮತ್ತು ಬಂಪರ್ ಡಿಸೈನ್ ನೆಕ್ಸಾನ್ EV ಯಂತೆಯೇ ಕಾಣುತ್ತದೆ.

 ಸೈಡ್

ಸೈಡ್ ನಲ್ಲಿ, ಕರ್ವ್ EV ಯು ಅದರ ಇಂಟರ್ನಲ್ ಕಂಬಾಷನ್ ಎಂಜಿನ್ (ICE) ವರ್ಷನ್ ನಲ್ಲಿರುವ ಕೂಪ್ ರೂಫ್‌ಲೈನ್ ಅನ್ನು ಪಡೆಯುತ್ತದೆ. ಇದು ಫ್ಲಶ್-ಶೈಲಿಯ ಡೋರ್ ಹ್ಯಾಂಡಲ್‌ಗಳನ್ನು (ಇದು ಟಾಟಾ ಕಾರಿಗೆ ಮೊದಲ ಬಾರಿ ನೀಡಲಾಗಿದೆ) ಮತ್ತು ವಿಶೇಷವಾಗಿ EVಗಾಗಿ ತಯಾರಿಸಲಾದ ಏರೋಡೈನಾಮಿಕ್ ಶೈಲಿಯ ಅಲೊಯ್ ವೀಲ್ ಗಳನ್ನು ಪಡೆಯುತ್ತದೆ. ಬದಿಗಳಲ್ಲಿ, ಇದು ಚಕ್ರದ ಆರ್ಚ್ ಗಳ ಸುತ್ತಲೂ ಹೊಳೆಯುವ ಬ್ಲಾಕ್ ಕ್ಯಾಡಿಂಗ್ ಅನ್ನು ಹೊಂದಿದೆ.

 ORVM ಗಳನ್ನು (ಹೊರಗಿನ ರಿಯರ್ ವ್ಯೂ ಮಿರರ್) ಸಂಪೂರ್ಣವಾಗಿ ಬ್ಲ್ಯಾಕ್ ಕಲರ್ ನಲ್ಲಿ ನೀಡಲಾಗಿದೆ. ORVM ನ ಕೆಳಭಾಗದಲ್ಲಿ ಉಬ್ಬು ಕೂಡ ಇದೆ, ಇದು ಕರ್ವ್ EV 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ ಎಂದು ಸೂಚಿಸುತ್ತದೆ.

 ಹಿಂಭಾಗ

Tata Curvv EV Exterior Design Explained In 5 Images

 ಹಿಂಭಾಗದಲ್ಲಿ, ಟಾಟಾ ಕರ್ವ್ EV ಗೆ ಸಿಕ್ವೆನ್ಷಿಯಲ್ ಟರ್ನ್ ಇಂಡಿಕೇಟರ್ ಗಳು ಮತ್ತು ವೆಲ್ಕಮ್ ಹಾಗೂ ಗುಡ್ ಬೈ ಅನಿಮೇಷನ್‌ಗಳನ್ನು ಒಳಗೊಂಡಿರುವ ಕನೆಕ್ಟೆಡ್ LED ಟೈಲ್ ಲೈಟ್‌ಗಳನ್ನು ನೀಡಲಾಗಿದೆ. ಬ್ಲಾಕ್ ಕಲರ್ ನ ಇಂಟಿಗ್ರೇಟೆಡ್ ರೂಫ್ ಸ್ಪಾಯ್ಲರ್ ಅನ್ನು ಕೂಡ ನೀಡಲಾಗಿದೆ. ಕರ್ವ್ EV ಯ ಹಿಂಭಾಗದ ಬಂಪರ್ ಕೂಡ ಬ್ಲಾಕ್ ಕಲರ್ ಅನ್ನು ಪಡೆಯುತ್ತದೆ ಮತ್ತು ಅದರ ಕೆಳಗೆ ಸಿಲ್ವರ್ ಸ್ಕಿಡ್ ಪ್ಲೇಟ್ ಕೂಡ ಇದೆ.

ನಿರೀಕ್ಷಿಸಲಾಗಿರುವ ಎಲೆಕ್ಟ್ರಿಕ್ ಪವರ್‌ಟ್ರೇನ್ ಮತ್ತು ಕ್ಲೈಮ್ ಮಾಡಿರುವ ರೇಂಜ್

 ಕರ್ವ್ EV ಗಾಗಿ ನೀಡಲಾಗಿರುವ ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಸ್ಪೆಸಿಫಿಕೇಷನ್ ಗಳನ್ನು ಟಾಟಾ ಇನ್ನೂ ಬಹಿರಂಗಪಡಿಸಿಲ್ಲ. ಇದು ಸುಮಾರು 500 ಕಿಮೀ ರೇಂಜ್ ಅನ್ನು ನೀಡುವ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರಬಹುದು ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ನೆಕ್ಸನ್ EV ಯಲ್ಲಿರುವ V2L (ವೆಹಿಕಲ್ ಟು ಲೋಡ್) ಮತ್ತು V2V (ವೆಹಿಕಲ್ ಟು ವೆಹಿಕಲ್) ಫಂಕ್ಷನ್ ಗಳನ್ನು ಕರ್ವ್ EV ಗೆ ಕೂಡ ನೀಡಬಹುದು.

ನಿರೀಕ್ಷಿಸಲಾಗಿರುವ ಬೆಲೆ ಮತ್ತು ಪ್ರತಿಸ್ಪರ್ಧಿಗಳು

 ಟಾಟಾ ಕರ್ವ್ EV ಬೆಲೆಯೂ ರೂ. 20 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗಬಹುದು. ಇದು MG ZS EV ಮತ್ತು ಮುಂಬರುವ ಹ್ಯುಂಡೈ ಕ್ರೆಟಾ EV ಗೆ ಪ್ರತಿಸ್ಪರ್ಧಿಯಾಗಿದೆ. ಇದನ್ನು ಟಾಟಾ ನೆಕ್ಸಾನ್ EV ಮತ್ತು ಮಹೀಂದ್ರಾ XUV400 EV ಗೆ ಪ್ರೀಮಿಯಂ ಪರ್ಯಾಯ ಆಯ್ಕೆಯಾಗಿ ಕೂಡ ನೋಡಲಾಗುತ್ತದೆ.

 ಟಾಟಾ ಕರ್ವ್ ಕುರಿತು ಹೆಚ್ಚಿನ ಅಪ್ಡೇಟ್ ಗಳಿಗಾಗಿ, ಕಾರ್ದೇಖೊ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Tata ಕರ್ವ್‌ EV

Read Full News

explore ಇನ್ನಷ್ಟು on ಟಾಟಾ ಕರ್ವ್‌ ಇವಿ

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience