• English
  • Login / Register

ಬಹುನಿರೀಕ್ಷಿತ Tata Curvv EV ನಾಳೆ ಬಿಡುಗಡೆ, ಹೇಗಿದೆ ಇದರ ಮೈಲೇಜ್‌ ?

modified on ಆಗಸ್ಟ್‌ 06, 2024 01:01 pm by samarth for ಟಾಟಾ ಕರ್ವ್‌ ಇವಿ

  • 32 Views
  • ಕಾಮೆಂಟ್‌ ಅನ್ನು ಬರೆಯಿರಿ

ಕರ್ವ್‌ ಇವಿಯು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುವ ನಿರೀಕ್ಷೆಯಿದೆ ಮತ್ತು 500 ಕಿ.ಮೀ.ವರೆಗೆ ಕ್ಲೈಮ್ ಮಾಡಲಾದ ರೇಂಜ್‌ ಅನ್ನು ಹೊಂದಿರುವ ಸಾಧ್ಯತೆಯಿದೆ

Tata Curvv EV Launch Tomorrow

  •  ಟಾಟಾದ ಇವಿ ಕಾರುಗಳ ಪಟ್ಟಿಯಲ್ಲಿ ನೆಕ್ಸಾನ್‌ ಇವಿ ಮತ್ತು ಮತ್ತು ಮುಂಬರುವ ಹ್ಯಾರಿಯರ್ ಇವಿಗಳ ನಡುವೆ ಕರ್ವ್‌ ಇವಿಯನ್ನು ಇರಿಸಲಾಗುತ್ತದೆ.

  • ಇದರ ವಿನ್ಯಾಸದ ಹೈಲೈಟ್ಸ್‌ಗಳು ಕೂಪ್ ರೂಫ್‌ಲೈನ್, ಕನೆಕ್ಟೆಡ್‌ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಫ್ಲಶ್-ಟೈಪ್ ಡೋರ್ ಹ್ಯಾಂಡಲ್‌ಗಳನ್ನು ಒಳಗೊಂಡಿವೆ.

  • ಕ್ಯಾಬಿನ್ ಡ್ಯುಯಲ್-ಡಿಜಿಟಲ್ ಡಿಸ್‌ಪ್ಲೇಗಳು ಮತ್ತು 4-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಒಳಗೊಂಡಿರುವುದರಿಂದ ಹ್ಯಾರಿಯರ್-ಸಫಾರಿ ಎಸ್‌ಯುವಿಗಳ ಹೋಲಿಕೆಯನ್ನು ಹೊಂದಿದೆ.

  • ಕರ್ವ್‌ ಇವಿಯು 12.3-ಇಂಚಿನ ಟಚ್‌ಸ್ಕ್ರೀನ್, ಫ್ರಂಟ್ ವೆಂಟಿಲೇಟೆಡ್ ಸೀಟ್‌ಗಳು ಮತ್ತು ಪನೋರಮಿಕ್ ಸನ್‌ರೂಫ್ ಅನ್ನು ಪಡೆಯುತ್ತದೆ.

  • ಸುರಕ್ಷತೆಯ ದೃಷ್ಟಿಯಿಂದ, ಇದು ಆರು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ADAS ಅನ್ನು ಪಡೆಯುವ ಸಾಧ್ಯತೆಯಿದೆ.

  • ಟಾಟಾ ಕರ್ವ್‌ ಇವಿಯ ಆರಂಭಿಕ ಬೆಲೆಯು 20 ಲಕ್ಷ ರೂ.(ಎಕ್ಸ್ ಶೋರೂಂ) ಇರಬಹುದೆಂದು ನಿರೀಕ್ಷಿಸಲಾಗಿದೆ.

ಹಲವಾರು ಸ್ಪೈ ಶಾಟ್‌ಗಳು, ಟೀಸರ್‌ಗಳು ಮತ್ತು ಫೋಟೋಗಳ ಲೀಕ್‌ನ ನಂತರ, ಟಾಟಾ ಕರ್ವ್‌ ಇವಿ ಅಂತಿಮವಾಗಿ ನಾಳೆ ಬಿಡುಗಡೆಯಾಗಲಿದೆ. ಕರ್ವ್‌  ಮಾಸ್‌-ಮಾರ್ಕೆಟ್‌ಅನ್ನು ಗುರಿಯಾಗಿಟ್ಟುಕೊಂಡು ಟಾಟಾದ ಮೊದಲ ಎಸ್‌ಯುವಿ-ಕೂಪ್ ಆಗಿರುತ್ತದೆ ಮತ್ತು ಇಂಧನದಿಂದ ಚಾಲಿತ ಎಂಜಿನ್ (ICE) ಮತ್ತು ಇವಿ ಆವೃತ್ತಿಗಳಲ್ಲಿ ಬರಲಿದೆ. ಆದಾಗ್ಯೂ, ನೀವು ICE ಮೊಡೆಲ್‌ನ ಕುರಿತು ಆಸಕ್ತಿ ಹೊಂದಿದ್ದರೆ, ನೀವು ಸ್ವಲ್ಪ ಹೆಚ್ಚು ಕಾಯಬೇಕಾಗುತ್ತದೆ, ಏಕೆಂದರೆ ಇದು ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಸದ್ಯಕ್ಕೆ, ಟಾಟಾದ ಹೊಸ ಎಲೆಕ್ಟ್ರಿಕ್ ಎಸ್‌ಯುವಿ-ಕೂಪ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ನೋಡೋಣ:

ಹೊರಭಾಗದ ವಿನ್ಯಾಸ

tata Curvv EV

ಟಾಟಾ ಮೋಟಾರ್ಸ್ ಈಗಾಗಲೇ ಕರ್ವ್‌ ಇವಿಯ ಹೊರಭಾಗದ ವಿನ್ಯಾಸವನ್ನು ಅನಾವರಣಗೊಳಿಸಿದೆ, ಇದು ನೆಕ್ಸಾನ್‌ ಇವಿಯಂತೆಯೇ ಅದೇ ವಿನ್ಯಾಸದ ಅಂಶಗಳೊಂದಿಗೆ ಕಂಡುಬರುತ್ತದೆ. ಕರ್ವ್‌ ಇವಿ ಮುಂಭಾಗವು ಮುಚ್ಚಿದ ಗ್ರಿಲ್ ಮತ್ತು ಕನೆಕ್ಟೆಡ್‌ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ವೆಲ್‌ಕಮ್‌ ಮತ್ತು ಗುಡ್‌ಬೈ ಆನಿಮೇಷನ್‌ಗಳನ್ನು ಹೊಂದಿದೆ.

tata Curvv EV front

ನೆಕ್ಸಾನ್ ಇವಿನಲ್ಲಿ ಗಮನಿಸಿದಂತೆ, ಇದರ ಮುಂಭಾಗದ ಬಂಪರ್ ಲಂಬವಾದ ಸ್ಲ್ಯಾಟ್‌ಗಳನ್ನು ಹೊಂದಿದೆ. ಸೈಡ್‌ನಿಂದ ಗಮನಿಸುವಾಗ, ಕರ್ವ್‌ ಫ್ಲಶ್-ಟೈಪ್ ಡೋರ್ ಹ್ಯಾಂಡಲ್‌ಗಳನ್ನು ಹೊಂದಿದ್ದು, ಇದನ್ನು ಟಾಟಾ ಕಾರುಗಳಿಗೆ ಮೊದಲ-ಬಾರಿಗೆ ನೀಡಲಾಗುತ್ತಿದೆ. ಹಾಗೆಯೇ ಏರೋಡೈನಾಮಿಕ್‌ ಆಗಿ ವಿನ್ಯಾಸಗೊಳಿಸಲಾದ ಅಲಾಯ್‌ ವೀಲ್‌ಗಳು ಮತ್ತು ಅದರ ಎಸ್‌ಯುವಿ-ಕೂಪ್ ಅಂಶವನ್ನು ಎತ್ತಿ ತೋರಿಸುವ ಇಳಿಜಾರಾದ ರೂಫ್‌ಲೈನ್ ಅನ್ನು ಹೊಂದಿದೆ. 

ಹಿಂಭಾಗವು ಕನೆಕ್ಟೆಡ್‌ ಟೈಲ್‌ ಲೈಟ್ ಸೆಟಪ್‌ನೊಂದಿಗೆ ಕಂಡುಬರುತ್ತದೆ, ವೆಲ್‌ಕಮ್‌ ಮತ್ತು ಗುಡ್‌ಬೈ ಆನಿಮೇಷನ್‌ಗಳನ್ನು ಸಹ ಒಳಗೊಂಡಿದೆ.

 ಇಂಟಿರೀಯರ್‌, ಫೀಚರ್‌ಗಳು ಮತ್ತು ಸುರಕ್ಷತೆ

Tata Curvv EV Dashboard

ಇತ್ತೀಚೆಗೆ ಭಾರತೀಯ ವಾಹನ ತಯಾರಕ ಕಂಪೆನಿಯಾದ ಟಾಟಾವು ತನ್ನ ಟಾಟಾ ಕರ್ವ್‌ ಇವಿಯ ಒಳಭಾಗದ ಟೀಸರ್‌ ಅನ್ನು ಬಿಡುಗಡೆಗೊಳಿಸಿದ್ದು, ಇದರಲ್ಲಿ ಡ್ಯುಯಲ್-ಟೋನ್ ಡ್ಯಾಶ್‌ಬೋರ್ಡ್, 4-ಸ್ಪೋಕ್ ಸ್ಟೀರಿಂಗ್ ವೀಲ್ (ಹ್ಯಾರಿಯರ್-ಸಫಾರಿ ಜೋಡಿಯಿಂದ ಎರವಲು ಪಡೆಯಲಾಗಿದೆ) ಮತ್ತು ಟಚ್‌-ಸಕ್ರಿಯಗೊಳಿಸಿದ ಹವಾಮಾನ ಕಂಟ್ರೋಲ್‌ ಪ್ಯಾನಲ್‌ನಂತಹ ಅಂಶಗಳ ಮಾಹಿತಿ ನೀಡಿದ್ದಾರೆ. ಇದು ಪನೋರಮಿಕ್ ಸನ್‌ರೂಫ್, 12.3-ಇಂಚಿನ ಫ್ರೀ-ಫ್ಲೋಟಿಂಗ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್‌ಸ್ ಡಿಸ್ಪ್ಲೇ ಮತ್ತು ಫ್ರಂಟ್ ವೆಂಟಿಲೇಟೆಡ್ ಸೀಟ್‌ಗಳನ್ನು ಸಹ ಒಳಗೊಂಡಿರುತ್ತದೆ. ಇದು ನೆಕ್ಸಾನ್‌ನಂತೆಯೇ ಅದೇ ಡ್ರೈವ್ ಮೋಡ್ ಸೆಲೆಕ್ಟರ್ ಮತ್ತು ಆಟೋಮ್ಯಾಟಿಕ್‌ ಗೇರ್ ಶಿಫ್ಟರ್ ಅನ್ನು ಪಡೆಯುತ್ತದೆ.

ಸುರಕ್ಷತೆಯ ದೃಷ್ಟಿಯಿಂದ ಇದು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), 360-ಡಿಗ್ರಿ ಕ್ಯಾಮೆರಾ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್-ಕೀಪ್ ಅಸಿಸ್ಟ್ ಮತ್ತು ಮುಂಭಾಗದ ಘರ್ಷಣೆಯ ಎಚ್ಚರಿಕೆ ಸೇರಿದಂತೆ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಸೂಟ್ ಅನ್ನು ಪಡೆಯುವ ನಿರೀಕ್ಷೆಯಿದೆ.

ಇದನ್ನೂ ಓದಿ: ಭಾರತದಲ್ಲಿ Citroen Basalt ಅನಾವರಣ, ಟಾಟಾ ಕರ್ವ್‌ಗೆ ಟಕ್ಕರ್‌ ಕೊಡಲು ಸಿದ್ಧ..!

ನಿರೀಕ್ಷಿತ ಪವರ್‌ಟ್ರೈನ್‌ ಆಯ್ಕೆಗಳು

ಎಲೆಕ್ಟ್ರಿಕ್ ಪವರ್‌ಟ್ರೇನ್ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲವಾದರೂ, ಇದು ಟಾಟಾದ ಇತ್ತೀಚಿನ Acti.ev ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರುವುದರಿಂದ ಇದು ಸುಮಾರು 500 ಕಿಮೀ ವ್ಯಾಪ್ತಿಯನ್ನು ಹೊಂದಿರುವ ಎರಡು ಬ್ಯಾಟರಿ ಪ್ಯಾಕ್‌ಗಳ ಆಯ್ಕೆಯನ್ನು ಪಡೆಯುವ ನಿರೀಕ್ಷೆಯಿದೆ. ಟಾಟಾ ಕರ್ವ್‌ ಇವಿಯು ಸಹ V2L (ವಾಹನದಿಂದ ಬೇರೆ ಡಿವೈಸ್‌ಗಳಿಗೆ) ಮತ್ತು V2V (ವಾಹನದಿಂದ ಬೇರೆ ವಾಹನಕ್ಕೆ ಚಾರ್ಜ್‌) ಫಂಕ್ಷನ್‌ ಅನ್ನು ಹೊಂದಿರುವ ಸಾಧ್ಯತೆಯಿದೆ.

ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

 ಟಾಟಾ ಕರ್ವ್‌ ಇವಿಯ ಬೆಲೆಯು 20 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಬಹುದೆಂದು ಅಂದಾಜಿಸಲಾಗಿದೆ ಮತ್ತು ಎಮ್‌ಜಿ ಜೆಡ್‌ಎಸ್‌ ಇವಿ ಮತ್ತು ಮುಂಬರುವ ಹ್ಯುಂಡೈ ಕ್ರೆಟಾ ಇವಿ ಮತ್ತು ಮಾರುತಿ ಇವಿಎಕ್ಸ್‌ಗಳೊಂದಿಗೆ ಸ್ಪರ್ಧಿಸಲಿದೆ.

ಟಾಟಾ ಕಾರುಗಳ ಕುರಿತ ಇತ್ತೀಚಿನ ಎಲ್ಲಾ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸಾಪ್‌ ಚಾನೆಲ್‌ ಆನ್ನು ಫಾಲೋ ಮಾಡಿ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Tata ಕರ್ವ್‌ EV

Read Full News

explore ಇನ್ನಷ್ಟು on ಟಾಟಾ ಕರ್ವ್‌ ಇವಿ

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
  • ಕಿಯಾ ಇವಿ9
    ಕಿಯಾ ಇವಿ9
    Rs.80 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಅಕ್ೋಬರ್, 2024
  • ಬಿವೈಡಿ emax 7
    ಬಿವೈಡಿ emax 7
    Rs.30 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಅಕ್ೋಬರ್, 2024
  • ಬಿವೈಡಿ seagull
    ಬಿವೈಡಿ seagull
    Rs.10 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಅಕ್ೋಬರ್, 2024
  • ಸ್ಕೋಡಾ enyaq iv
    ಸ್ಕೋಡಾ enyaq iv
    Rs.65 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಡಿಸಂಬರ್, 2024
  • ವೋಕ್ಸ್ವ್ಯಾಗನ್ id.4
    ವೋಕ್ಸ್ವ್ಯಾಗನ್ id.4
    Rs.65 ಲಕ್ಷಅಂದಾಜು ದಾರ
    ನಿರೀಕ್ಷಿತ ಲಾಂಚ್‌: ಡಿಸಂಬರ್, 2024
×
We need your ನಗರ to customize your experience