Tata Curvv ವರ್ಸಸ್ Tata Curvv EV: ಡಿಸೈನ್‌ನಲ್ಲಿನ ವ್ಯತ್ಯಾಸಗಳ ವಿವರ
ಟಾಟಾ ಕರ್ವ್ ಇವಿ ಗಾಗಿ ansh ಮೂಲಕ ಫೆಬ್ರವಾರಿ 22, 2024 11:18 am ರಂದು ಪ್ರಕಟಿಸಲಾಗಿದೆ
- 22 Views
- ಕಾಮೆಂಟ್ ಅನ್ನು ಬರೆಯಿರಿ
EV-ನಿರ್ದಿಷ್ಟ ಡಿಸೈನ್ ವ್ಯತ್ಯಾಸದ ಜೊತೆಗೆ, ಕರ್ವ್ EV ಕಾನ್ಸೆಪ್ಟ್ ಹೆಚ್ಚು ದೊಡ್ಡದಾಗಿ ಮತ್ತು ಒರಟಾಗಿ ಕಾಣುತ್ತದೆ
ಟಾಟಾ ಕರ್ವ್ ಅನ್ನು ಇತ್ತೀಚೆಗೆ 2024 ರ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಬಹುತೇಕ ಪ್ರೊಡಕ್ಷನ್ ರೆಡಿ ಅವತಾರದಲ್ಲಿ ಪ್ರದರ್ಶಿಸಲಾಯಿತು. ಇದನ್ನು ಕೊನೆಯ ಬಾರಿ ಅಧಿಕೃತವಾಗಿ ನೋಡಿದಾಗಿಂದ ಕೆಲವು ಡಿಸೈನ್ ಬದಲಾವಣೆಗಳನ್ನು ಮಾಡಲಾಗಿದೆ. ಆದರೆ, ಟಾಟಾ ತನ್ನ ಕರ್ವ್ ಅನ್ನು 2022 ರಲ್ಲಿ ಅದರ EV ಕಾನ್ಸೆಪ್ಟ್ ನಲ್ಲಿ ಬಹಿರಂಗಪಡಿಸಿದಾಗ ನಾವು ಮೊದಲ ಬಾರಿಗೆ ಅದರ ಎಲೆಕ್ಟ್ರಿಕ್ ವರ್ಷನ್ ನಲ್ಲಿ SUV ಯ ವರ್ಷನ್ ಅನ್ನು ನೋಡಿದ್ದೇವೆ. ಇತ್ತೀಚೆಗೆ ನೋಡಿದ ICE (ಇಂಟರ್ನಲ್ ಕಮ್ಬಾಷನ್ ಎಂಜಿನ್) ವರ್ಷನ್ ನ ಒಟ್ಟಾರೆ ಆಕಾರ ಮತ್ತು ಗಾತ್ರ ಒರಿಜಿನಲ್ EV ವರ್ಷನ್ ಗೆ ಹೋಲುತ್ತದೆ, ಆದರೆ ಕೆಲವು ಗಮನಾರ್ಹವಾದ ಡಿಸೈನ್ ಬದಲಾವಣೆಗಳನ್ನು ಮಾಡಲಾಗಿದೆ. ಅವುಗಳು ಯಾವುವು ಎಂಬುದು ನೀವು ಇಲ್ಲಿ ನೋಡಬಹುದು.
ಮುಂಭಾಗ
ಇಲ್ಲಿ ಮೊದಲ ಮತ್ತು ಅತ್ಯಂತ ಗಮನಾರ್ಹ ವ್ಯತ್ಯಾಸವೆಂದರೆ ಗ್ರಿಲ್. ಕರ್ವ್‌ನ ICE ವರ್ಷನ್ ಅಡ್ಡವಾಗಿರುವ ಕ್ರೋಮ್ ಎಲಿಮೆಂಟ್ ಗಳೊಂದಿಗೆ ಬ್ಲಾಕ್ ಗ್ರಿಲ್ ಅನ್ನು ಪಡೆಯುತ್ತದೆ - ಇದು ಹೊಸ ಹ್ಯಾರಿಯರ್ ಮತ್ತು ಸಫಾರಿಯಲ್ಲಿ ಇರುವಂತೆಯೇ ಇದೆ - EV ಕಾನ್ಸೆಪ್ಟ್ ಕ್ಲೋಸ್ಡ್-ಆಫ್ ಗ್ರಿಲ್ ಅನ್ನು ಹೊಂದಿದ್ದು ಅದನ್ನು ಬಾಡಿ ಕಲರ್ ನಲ್ಲಿ ನೀಡಲಾಗಿದೆ.
ಇಲ್ಲಿ, ಕರ್ವ್ ಇತರ ಅಪ್ಡೇಟ್ ಆಗಿರುವ ಟಾಟಾ ಮಾಡೆಲ್‌ಗಳಂತೆ ಲಂಬವಾಗಿ ಇರಿಸಲಾದ ಹೆಡ್‌ಲೈಟ್‌ಗಳನ್ನು ಪಡೆದಿರುವುದನ್ನು ನೀವು ನೋಡಬಹುದು, ಆದರೆ ಕರ್ವ್ವ್ EVಯಲ್ಲಿ ಇರುವ ಹೆಡ್‌ಲೈಟ್‌ಗಳು ತ್ರಿಕೋನ ಆಕಾರದಲ್ಲಿ ಮಲ್ಟಿಪಲ್ ಲೈಟಿಂಗ್ ಎಲಿಮೆಂಟ್ ಗಳನ್ನು ಹೊಂದಿವೆ.
ಇದನ್ನು ಕೂಡ ಓದಿ: ಟಾಟಾ ನೆಕ್ಸಾನ್ ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್ ಹೋಲಿಕೆ: ಮುಂಚೆ ಮತ್ತು ಈಗ
ಅಗಲವಾಗಿರುವ DRL ಗಳು ಎರಡೂ ವರ್ಷನ್ ಗಳಲ್ಲಿ ಬಹುತೇಕ ಒಂದೇ ರೀತಿ ಇವೆ, ಆದರೆ ಬಂಪರ್ ಡಿಸೈನ್ ವಿಭಿನ್ನವಾಗಿದೆ. ಎರಡೂ SUV ಗಳು ಬ್ಲಾಕ್ ಫ್ರಂಟ್ ಬಂಪರ್ ಅನ್ನು ಪಡೆದರೂ ಕೂಡ, ಕರ್ವ್ ICE ಅದರ ಗ್ರಿಲ್‌ನಲ್ಲಿರುವಂತೆಯೇ ಅಡ್ಡವಾದ ಕ್ರೋಮ್ ಎಲಿಮೆಂಟ್ ಗಳನ್ನು ಹೊಂದಿದೆ.
ಸೈಡ್
ಕರ್ವ್ EV ಮತ್ತು ICE ಎರಡರ ಒಟ್ಟಾರೆ ಡಿಸೈನ್ ಮತ್ತು ಸಿಲೂಯೆಟ್ ಒಂದೇ ಆಗಿರುತ್ತದೆ, ಆದರೆ ಇಲ್ಲಿ ಕೂಡ ಕೆಲವು ವ್ಯತ್ಯಾಸಗಳನ್ನು ನೀವು ಗುರುತಿಸಬಹುದು. ಮೊದಲ ವ್ಯತ್ಯಾಸವೆಂದರೆ ರಿಯರ್ ಸ್ಪಾಯ್ಲರ್, ಇದನ್ನು EV ಗೆ ಹೋಲಿಸಿದರೆ ಕರ್ವ್ ICE ನಲ್ಲಿ ಸ್ವಲ್ಪ ಕೆಳಗೆ ಇರಿಸಲಾಗಿದೆ. ಎರಡನೆಯ ವ್ಯತ್ಯಾಸವೆಂದರೆ ಡೋರ್ ಕ್ಲಾಡಿಂಗ್ ಡಿಸೈನ್.
ಇದನ್ನು ಕೂಡ ಓದಿ: Tata Curvv ಮತ್ತು ಹೊಸ Nexonನಲ್ಲಿ ಹೋಲಿಕೆಯಾಗುವ 3 ಅಂಶಗಳು
ಆದರೆ, ಅತ್ಯಂತ ದೊಡ್ಡ ವ್ಯತ್ಯಾಸವೆಂದರೆ ಅಲೊಯ್ ವೀಲ್ಸ್ ಡಿಸೈನ್. ಕರ್ವ್ ICE ಪೆಟಲ್ ಆಕಾರದ ಡ್ಯುಯಲ್-ಟೋನ್ 18-ಇಂಚಿನ ಅಲೊಯ್ ವೀಲ್ಸ್ ಅನ್ನು ಪಡೆಯುತ್ತದೆ ಆದರೆ ಕರ್ವ್ EV ಹೆಚ್ಚು ಏರೋಡೈನಾಮಿಕ್ ಡಿಸೈನ್ ನೊಂದಿಗೆ ದೊಡ್ಡ ಡ್ಯುಯಲ್-ಟೋನ್ ಅಲೊಯ್ ಅನ್ನು ಪಡೆಯುತ್ತದೆ.
ಹಿಂಭಾಗ
ಇಲ್ಲಿ, ಅವುಗಳ ನಡುವಿನ ಡಿಸೈನ್ ವ್ಯತ್ಯಾಸವು ಹೆಚ್ಚು ಸ್ಪಷ್ಟವಾಗಿದೆ. ಎರಡೂ ವರ್ಷನ್ ಗಳು ಒಂದೇ ರೀತಿಯ LED ಕನೆಕ್ಟೆಡ್ ಟೈಲ್ ಲೈಟ್ ಸೆಟಪ್ ಅನ್ನು ಪಡೆಯುತ್ತವೆ, ಆದರೆ ಕರ್ವ್ EV ಕಾನ್ಸೆಪ್ಟ್ ಹಿಂಭಾಗದ ವಿಂಡ್‌ಶೀಲ್ಡ್ ಮತ್ತು ಬಂಪರ್‌ನಲ್ಲಿ ಲೈಟಿಂಗ್ ಎಲಿಮೆಂಟ್ ಗಳನ್ನು ಕೂಡ ಹೊಂದಿದೆ.
ಮುಂಭಾಗದಲ್ಲಿ ಇರುವಂತೆಯೇ, ಬ್ರೇಕ್ ಲೈಟ್ ಗಳು ವಿಭಿನ್ನ ಡಿಸೈನ್ ಅನ್ನು ಹೊಂದಿವೆ. ಹಿಂಭಾಗದ ಬಂಪರ್ ಸಹ ವಿಭಿನ್ನವಾಗಿದೆ, ಇಲ್ಲಿ ಕರ್ವ್ ICE ಸ್ಕಿಡ್ ಪ್ಲೇಟ್ ಅನ್ನು ಪಡೆಯುತ್ತದೆ, ಇದು ಕರ್ವ್ EV ಕಾನ್ಸೆಪ್ಟ್ ನಲ್ಲಿ ಲಭ್ಯವಿಲ್ಲ.
ಕ್ಯಾಬಿನ್
ಕರ್ವ್ ಮತ್ತು ಕರ್ವ್ EV ಎರಡರ ಒಳಭಾಗದಲ್ಲಿ, ಡ್ಯಾಶ್‌ಬೋರ್ಡ್ ಡಿಸೈನ್ ಮತ್ತು ಇಕ್ವಿಪಿಮೆಂಟ್ ಸಾಕಷ್ಟು ಹೋಲುತ್ತವೆ. ಎರಡೂ SUV ಗಳು ಇನ್ಫೋಟೈನ್‌ಮೆಂಟ್ ಮತ್ತು ಡ್ರೈವರ್ ಡಿಸ್‌ಪ್ಲೇಗಾಗಿ ದೊಡ್ಡ ಸ್ಕ್ರೀನ್, ಬ್ಯಾಕ್‌ಲಿಟ್ ಟಾಟಾ ಲೋಗೋದೊಂದಿಗೆ ಟಾಟಾದ ಹೊಸ ಸ್ಟೀರಿಂಗ್ ವೀಲ್ ಮತ್ತು ಟಚ್-ಆಧಾರಿತ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಅನ್ನು ಪಡೆಯುತ್ತವೆ. ಟಾಟಾ ತನ್ನ ಹೊಸ ಕ್ಯಾಬಿನ್ ಡಿಸೈನ್ ಅನ್ನು ಒಂದು ವರ್ಷದ ನಂತರ ಪಡೆದುಕೊಂಡರೂ ಕೂಡ ತನ್ನ ಕಾರುಗಳಿಗೆ ಅಳವಡಿಸಲು ಹೇಗೆ ಸಿದ್ಧವಾಗಿದೆ ಎಂಬುದನ್ನು ಇದು ತೋರಿಸುತ್ತದೆ.
ಆದರೆ, ಕರ್ವ್ EV ಯ ಕ್ಯಾಬಿನ್ ಆದಷ್ಟು ಕನಿಷ್ಠ ಡಿಸೈನ್ ಅನ್ನು ಹೊಂದಿದ್ದು, ಇದು ಅದಕ್ಕೆ ಕ್ಲೀನ್ ಲುಕ್ ಅನ್ನು ನೀಡುತ್ತದೆ. ಮತ್ತೊಂದೆಡೆ, ICE ಕರ್ವ್, ವಿಭಿನ್ನ ಥೀಮ್, 2-ಸ್ಪೋಕ್ ಬದಲಿಗೆ 4-ಸ್ಪೋಕ್ ಸ್ಟೀರಿಂಗ್ ವೀಲ್, ಡ್ಯಾಶ್‌ಬೋರ್ಡ್‌ನಲ್ಲಿ ಗ್ಲಾಸ್ ಬ್ಲ್ಯಾಕ್ ಸ್ಟ್ರಿಪ್ ಮತ್ತು ಡಿಜಿಟಲ್ ಡ್ರೈವರ್ ಡಿಸ್ಪ್ಲೇಗಾಗಿ ಬೇರೆ ಹೌಸಿಂಗ್ ಸೇರಿದಂತೆ ಕೆಲವು ಡಿಸೈನ್ ಬದಲಾವಣೆಗಳನ್ನು ಪಡೆಯುತ್ತದೆ.
ಸದ್ಯಕ್ಕೆ, ಟಾಟಾ ಇತ್ತೀಚೆಗೆ ಪ್ರದರ್ಶಿಸಲಾದ ಕರ್ವ್ ನ ಕ್ಯಾಬಿನ್ ಅನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲ. 2024 ರ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಯೂನಿಟ್ ಇನ್ನೂ ಪ್ರೊಡಕ್ಷನ್ ರೆಡಿ ಹಂತದಲ್ಲಿದ್ದು, ಒಳಗೆ ಮತ್ತು ಹೊರಗೆ ಇನ್ನಷ್ಟು ಕೆಲವು ಡಿಸೈನ್ ಬದಲಾವಣೆಗಳನ್ನು ನೀಡಬಹುದು ಎಂದು ನಾವು ಊಹಿಸುತ್ತಿದ್ದೇವೆ.
ನಿರೀಕ್ಷಿಸಲಾಗಿರುವ ಲಾಂಚ್ ದಿನಾಂಕ ಮತ್ತು ಬೆಲೆ
ಟಾಟಾ ತನ್ನ ಕರ್ವ್ EV ಅನ್ನು ಮೊದಲು ಬಿಡುಗಡೆ ಮಾಡಲಿದೆ, ಇದು ಜುಲೈ ಮತ್ತು ಸೆಪ್ಟೆಂಬರ್ 2024 ರ ನಡುವೆ ಇರಬಹುದು, ಮತ್ತು ನಿರೀಕ್ಷಿತ ಬೆಲೆ ರೂ 20 ಲಕ್ಷದಿಂದ (ಎಕ್ಸ್ ಶೋ ರೂಂ) ಶುರುವಾಗಬಹುದು. ಪೆಟ್ರೋಲ್ ಮತ್ತು ಡೀಸೆಲ್-ಚಾಲಿತ ಕರ್ವ್ ಅನ್ನು EV ಬಂದ 3 ರಿಂದ 4 ತಿಂಗಳ ನಂತರ ಬಿಡುಗಡೆ ಮಾಡಲಾಗುವುದು ಮತ್ತು ಇದರ ಬೆಲೆ ರೂ 10.50 ಲಕ್ಷದಿಂದ (ಎಕ್ಸ್ ಶೋ ರೂಂ) ಶುರುವಾಗುವ ನಿರೀಕ್ಷೆಯಿದೆ.
ಕರ್ವ್ EVಯು MG ZS EV ಮತ್ತು ಹ್ಯುಂಡೈ ಕೋನಾ ಎಲೆಕ್ಟ್ರಿಕ್‌ಗೆ ಪ್ರತಿಸ್ಪರ್ಧಿಯಾಗಲಿದೆ. ಆದರೆ, ಕಿಯಾ ಸೆಲ್ಟೋಸ್, ಹ್ಯುಂಡೈ ಕ್ರೆಟಾ, ಫೋಕ್ಸ್‌ವ್ಯಾಗನ್ ಟೈಗನ್, ಸ್ಕೋಡಾ ಕುಶಾಕ್, ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ವಿರುದ್ಧ ಸ್ಪರ್ಧಿಸಲು ಕಾಂಪ್ಯಾಕ್ಟ್ SUV ಸೆಗ್ಮೆಂಟ್ ಗೆ ಪ್ರವೇಶಿಸುವುದರಿಂದ ICE ಕರ್ವ್ ಹೆಚ್ಚು ಸವಾಲನ್ನು ಎದುರಿಸಲಿದೆ.