ಕನ್ನಡಿಗರ ದಿಲ್‌ಖುಷ್: Tata Harrierನ ಬಂಡೀಪುರ್ ಎಡಿಷನ್ ಅನಾವರಣ
ಟಾಟಾ ಹ್ಯಾರಿಯರ್ ಗಾಗಿ rohit ಮೂಲಕ ಜನವರಿ 17, 2025 07:50 pm ರಂದು ಪ್ರಕಟಿಸಲಾಗಿದೆ
- 39 Views
- ಕಾಮೆಂಟ್ ಅನ್ನು ಬರೆಯಿರಿ
ಹ್ಯಾರಿಯರ್ ಬಂಡೀಪುರ ಎಡಿಷನ್ ಒಳಗೆ ಮತ್ತು ಹೊರಗೆ ಕೆಲವು ಸೌಂದರ್ಯವರ್ಧಕ ಬದಲಾವಣೆಗಳನ್ನು ಪಡೆಯುತ್ತದೆ, ಅವುಗಳಲ್ಲಿ ಕಪ್ಪು ಬಣ್ಣದ ORVM ಗಳು, ಅಲಾಯ್ ವೀಲ್‌ಗಳು ಮತ್ತು 'ಹ್ಯಾರಿಯರ್' ಮಾನಿಕರ್ ಸೇರಿವೆ
-
ಹ್ಯಾರಿಯರ್ ಕಾಜಿರಂಗ ಎಡಿಷನ್‌ನ ಪರಿಚಯದ ನಂತರ ಇದು ಭಾರತದ ಮತ್ತೊಂದು ರಾಷ್ಟ್ರೀಯ ಉದ್ಯಾನವನಕ್ಕೆ ನೀಡುವ ಗೌರವವಾಗಿದೆ.
-
ಎಕ್ಸ್‌ಟೀರಿಯರ್‌ನ ಪರಿಷ್ಕರಣೆಗಳಲ್ಲಿ ಹೊಸ ಬಾಡಿ ಕಲರ್ ಮತ್ತು ಮುಂಭಾಗದ ಫೆಂಡರ್‌ಗಳ ಮೇಲಿನ ಲಾಂಛನಗಳು ಸೇರಿವೆ.
-
ಇದರ ಕ್ಯಾಬಿನ್ ಡ್ಯುಯಲ್-ಟೋನ್ ಥೀಮ್ ಮತ್ತು ಕವರ್‌ಗಳನ್ನು ಹೊಂದಿದೆ.
ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ರಲ್ಲಿ ಟಾಟಾ ಮೋಟಾರ್ಸ್‌ನ ಸ್ಟಾಲ್‌ನಲ್ಲಿ ಹಲವು ಮೊಡೆಲ್‌ಗಳನ್ನು ಪ್ರದರ್ಶಿಸಲಾಗಿದ್ದರೂ, ಹ್ಯಾರಿಯರ್ ಸೇರಿದಂತೆ ಅದರ ಟಾಪ್ ಎಸ್‌ಯುವಿಗಳ ಬಂಡೀಪುರ ಎಡಿಷನ್‌ಗಳು ಅತ್ಯಂತ ಆಕರ್ಷಕವಾಗಿ ಕಾಣುತ್ತವೆ. ಕೆಲವು ವರ್ಷಗಳ ಹಿಂದೆ ಕಾಜಿರಂಗ ಎಡಿಷನ್‌ನ ಪರಿಚಯಿಸಿದಂತೆಯೇ, ರಾಷ್ಟ್ರೀಯ ಉದ್ಯಾನವನಕ್ಕೆ ಗೌರವ ಸಲ್ಲಿಸಲು ಹೊಸ ವಿಶೇಷ ಆವೃತ್ತಿಯನ್ನು ಪರಿಚಯಿಸಲಾಗಿದೆ. ಈ ಸುದ್ದಿಯಲ್ಲಿ ಹ್ಯಾರಿಯರ್ ಬಂಡೀಪುರ ಎಡಿಷನ್‌ನ ಮೊಡೆಲ್‌ಅನ್ನು ವಿವರವಾಗಿ ಪರಿಶೀಲಿಸೋಣ. ಆದರೆ ಅದಕ್ಕೂ ಮೊದಲು, ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವಿಶೇಷತೆಯೇನು ಎಂಬುದರ ಕುರಿತು ಒಂದು ಸಣ್ಣ ನೋಟ ಇಲ್ಲಿದೆ:
ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಬಗ್ಗೆ ಸಂಕ್ಷಿಪ್ತ ಮಾಹಿತಿ
ಬಂಡೀಪುರ ರಾಷ್ಟ್ರೀಯ ಉದ್ಯಾನವನವು ಕರ್ನಾಟಕದ ದಕ್ಷಿಣ ಭಾಗದಲ್ಲಿದ್ದು, ದಕ್ಷಿಣ ಏಷ್ಯಾದಲ್ಲಿಯೇ ಅತಿ ದೊಡ್ಡ ಕಾಡು ಆನೆಗಳ ಆವಾಸಸ್ಥಾನವನ್ನು ಹೊಂದಿದೆ. ಇದು ಭಾರತದಲ್ಲಿ ಎರಡನೇ ಅತಿ ಹೆಚ್ಚು ಹುಲಿಗಳ ಸಂಖ್ಯೆಯನ್ನು ಹೊಂದಿರುವ ಉದ್ಯಾನವನವಾಗಿದೆ. ಹಾಗೆಯೇ, ಇದು ಚಿರತೆಗಳು, ಸಾಂಬಾರ್ ಮತ್ತು ಕರಡಿಗಳು ಸೇರಿದಂತೆ ಇತರ ಪ್ರಾಣಿಗಳನ್ನು ಸಹ ಒಳಗೊಂಡಿದೆ.
ಎಕ್ಸ್‌ಟೀರಿಯರ್ ಮತ್ತು ಇಂಟೀರಿಯರ್ ಬದಲಾವಣೆಗಳ ವಿವರಗಳು
ಕಾಜಿರಂಗ ಎಡಿಷನ್‌ನಲ್ಲಿ ಕಂಡುಬರುವಂತೆ, ಟಾಟಾ ಹ್ಯಾರಿಯರ್ ಬಂಡೀಪುರ ಎಡಿಷನ್‌ಗೆ ಹೊಸ ಚಿನ್ನದ ಬಣ್ಣದ ಬಾಡಿ ಕಲರ್‌ನ ಆಯ್ಕೆಯನ್ನು ನೀಡಿದೆ. ಇದು ಮುಂಭಾಗದ ಫೆಂಡರ್‌ಗಳಲ್ಲಿ ಹೊಸ 'ಎಲಿಫೆಂಟ್' ಲಾಂಛನಗಳನ್ನು ಮತ್ತು ಅಲಾಯ್ ವೀಲ್‌ಗಳಿಗೆ ಬಾಡಿ-ಕಲರ್‌ನ ಫಿನಿಶ್‌ಅನ್ನು ಪಡೆಯುತ್ತದೆ, ಆದರೆ ORVM ಗಳು ಮತ್ತು ರೂಫ್ ಅನ್ನು ಕಪ್ಪು ಬಣ್ಣದಲ್ಲಿ ಫಿನಿಶ್ ಮಾಡಲಾಗಿದೆ. ಹಿಂಭಾಗದಲ್ಲಿರುವ 'ಹ್ಯಾರಿಯರ್' ಹೆಸರಿನ ನೇಮ್‌ಪ್ಲೇಟ್ ಕೂಡ ಕಪ್ಪು ಬಣ್ಣದಲ್ಲಿದೆ.