20 ಲಕ್ಷ ಎಸ್‌ಯುವಿ ಮಾರಾಟದ ಮೈಲಿಗಲ್ಲು ಆಚರಿಸುತ್ತಿರುವ Tata Motors; ಪಂಚ್ ಇವಿ, ನೆಕ್ಸಾನ್ ಇವಿ, ಹ್ಯಾರಿಯರ್ ಮತ್ತು ಸಫಾರಿಗಾಗಿ ಸ್ಪೇಷಲ್ ಡಿಸ್ಕೌಂಟ್
ಟಾಟಾ ನೆಕ್ಸಾನ್ ಗಾಗಿ samarth ಮೂಲಕ ಜುಲೈ 10, 2024 04:29 pm ರಂದು ಪ್ರಕಟಿಸಲಾಗಿದೆ
- 37 Views
- ಕಾಮೆಂಟ್ ಅನ್ನು ಬರೆಯಿರಿ
7 ಲಕ್ಷ ನೆಕ್ಸಾನ್‌ಗಳ ಮಾರಾಟವನ್ನು ಆಚರಿಸಲು ಪರಿಚಯಿಸಲಾದ ನೆಕ್ಸಾನ್ ಆಫರ್‌ಗಳ ಅವಧಿಯನ್ನು ಸಹ ಟಾಟಾ ವಿಸ್ತರಿಸಲಿದೆ
-
ಟಾಟಾ ಮೋಟಾರ್ಸ್ ಭಾರತದಲ್ಲಿ 20 ಲಕ್ಷ ಎಸ್‌ಯುವಿ ಮಾರಾಟವನ್ನು ದಾಟಿದೆ ಮತ್ತು ಮೈಲಿಗಲ್ಲನ್ನು ಆಚರಿಸಲು ವಿಶೇಷ ರಿಯಾಯಿತಿಗಳನ್ನು ನೀಡುತ್ತಿದೆ.
-
ಹ್ಯಾರಿಯರ್ ಮತ್ತು ಸಫಾರಿ ಬೆಲೆಗಳನ್ನು ಕಡಿಮೆ ಮಾಡಲಾಗಿದೆ ಮತ್ತು ಈಗ ಅವುಗಳು ಕ್ರಮವಾಗಿ 14.99 ಲಕ್ಷ ಮತ್ತು 15.49 ಲಕ್ಷ ರೂ.ನಿಂದ (ಎಕ್ಸ್ ಶೋರೂಂ)ನಿಂದ ಪ್ರಾರಂಭವಾಗುತ್ತದೆ.
-
ಈ ಸಂದರ್ಭದಲ್ಲಿ, ಟಾಟಾ ತನ್ನ ಅತಿ ದೊಡ್ಡ ಎಸ್‌ಯುವಿಗಳ ಮೇಲೆ 1.4 ಲಕ್ಷ ರೂ.ವರೆಗೆ ಪ್ರಯೋಜನಗಳನ್ನು ನೀಡುತ್ತಿದೆ.
-
ನೆಕ್ಸಾನ್ ಇವಿ ಮತ್ತು ಪಂಚ್ ಇವಿ ಕ್ರಮವಾಗಿ 1.3 ಲಕ್ಷ ರೂ. ಮತ್ತು 30,000 ರೂ.ವರೆಗೆ ಪ್ರಯೋಜನಗಳನ್ನು ಪಡೆಯುತ್ತವೆ.
-
ಕಳೆದ ತಿಂಗಳು ಟಾಟಾ ನೆಕ್ಸಾನ್‌ನಲ್ಲಿ ಲಭ್ಯವಿರುವ ಕೊಡುಗೆಗಳನ್ನು ಈ ತಿಂಗಳಿಗೂ ಮುಂದುವರಿಸಲಾಗುತ್ತದೆ.
-
ಈ ಆಪರ್‌ಗಳು ಜುಲೈ 31 ರವರೆಗೆ ಮಾನ್ಯವಾಗಿರುತ್ತವೆ.
2010ರ ದಶಕದ ಮಧ್ಯಭಾಗದಲ್ಲಿ ಎಸ್‌ಯುವಿಯ ಕ್ರೇಜ್ ಒಂದು ಟ್ರೆಂಡ್ ಅನ್ನು ಸೆಟ್ ಮಾಡಿತ್ತು. ಟಾಟಾ ಮೋಟಾರ್ಸ್ ತನ್ನ ಐಕಾನಿಕ್ ಟಾಟಾ ಸಿಯೆರಾದಿಂದ ಪ್ರಾರಂಭವಾಗಿ, 1991ರಿಂದ ಭಾರತದಲ್ಲಿ ಎಸ್‌ಯುವಿಗಳನ್ನು ತಯಾರಿಸುತ್ತಿದೆ. ಆದರೆ ಇದೀಗ, ಕಂಪನಿಯು ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ಪವರ್‌ಟ್ರೇನ್ ಆಯ್ಕೆಗಳನ್ನು ಒಳಗೊಂಡಿರುವ ಇಂದಿನ ಲೈನ್-ಅಪ್‌ನೊಂದಿಗೆ ಒಟ್ಟು 20 ಲಕ್ಷ ಎಸ್‌ಯುವಿ ಮಾರಾಟದ ದಾಖಲೆಯನ್ನು ಸಾಧಿಸಿದೆ. ಈ ಮೈಲಿಗಲ್ಲನ್ನು ಸಂಭ್ರಮಿಸಲು, ಟಾಟಾ ತನ್ನ ಎಸ್‌ಯುವಿ ಕಾರುಗಳ ಮೇಲೆ ಹಲವಾರು ಆಫರ್‌ಗಳನ್ನು ಘೋಷಿಸಿದೆ. ಈ ಆಫರ್‌ಗಳನ್ನು ವಿವರವಾಗಿ ತಿಳಿಯೋಣ.
1.4 ಲಕ್ಷ ರೂ.ವರೆಗೆ ರಿಯಾಯಿತಿಗಳು
ಟಾಟಾ ಮೋಟಾರ್ಸ್ "ಕಿಂಗ್ ಆಫ್ ಎಸ್‌ಯುವಿ" ಅಭಿಯಾನವನ್ನು ಪ್ರಾರಂಭಿಸಿದೆ, ಈ ಅಭಿಯಾನದಡಿಯಲ್ಲಿ ತನ್ನ ಪ್ರಮುಖ ಎಸ್‌ಯುವಿಗಳಾದ ಸಫಾರಿ ಮತ್ತು ಹ್ಯಾರಿಯರ್‌ಗಳ ಬೆಲೆಗಳನ್ನು ಕಡಿಮೆ ಮಾಡಿದೆ. ಪರಿಷ್ಕೃತ ಬೆಲೆಗಳು ಈಗ ಸಫಾರಿಗೆ 15.49 ಲಕ್ಷ ರೂ. (ಎಕ್ಸ್-ಶೋರೂಂ) ಮತ್ತು ಹ್ಯಾರಿಯರ್‌ಗೆ ರೂ 14.99 ಲಕ್ಷ ರೂ.ನಿಂದ(ಎಕ್ಸ್-ಶೋರೂಮ್) ಪ್ರಾರಂಭವಾಗುತ್ತವೆ. ಈ ಅಭಿಯಾನದ ಸಮಯದಲ್ಲಿ, ಗ್ರಾಹಕರು ಈ ಎಸ್‌ಯುವಿಗಳ ಆಯ್ದ ಆವೃತ್ತಿಗಳಲ್ಲಿ 1.4 ಲಕ್ಷ ರೂಪಾಯಿಗಳ ಪ್ರಯೋಜನಗಳನ್ನು ಪಡೆಯಬಹುದು.
ಇದಲ್ಲದೆ, ಟಾಟಾ ನೆಕ್ಸಾನ್ (7 ರಲ್ಲಿ 7 ಆಚರಣೆಯ ಆಫರ್) ಪ್ರಯೋಜನಗಳನ್ನು ಈ ತಿಂಗಳಿನಲ್ಲಿಯೂ ನೀಡಲಾಗುತ್ತದೆ, ಇದು 1 ಲಕ್ಷ ರೂ.ವರೆಗೆ ಮೌಲ್ಯದ್ದಾಗಿದೆ.
ಇದನ್ನೂ ಓದಿ: Tata Curvv EV ಮೊದಲ ಟೀಸರ್ ಡ್ರಾಪ್, ಬಿಡುಗಡೆಗೆ ಮುಂಚೆಯೆ ಹೆಚ್ಚಿದ ಉತ್ಸಾಹ
ಟಾಟಾ EVಗಳಲ್ಲಿನ ಆಫರ್‌ಗಳು
ಇವಿ ರೇಂಜ್‌ನಲ್ಲಿ ಸಹ ಸಹ ನೆಕ್ಸಾನ್ ಇವಿಯು 1.3 ಲಕ್ಷ ರೂ.ವರೆಗೆ ಮತ್ತು ಪಂಚ್ ಇವಿಯಲ್ಲಿ 30,000 ರೂ. ವರೆಗೆ ಪ್ರಯೋಜನಗಳನ್ನು ಪಡೆಯುತ್ತದೆ, ಆದರೆ ಅಂತಿಮ ರಿಯಾಯಿತಿಗಳು ಆವೃತ್ತಿಗಳ ಮೇಲೆ ಅವಲಂಬಿತವಾಗಿರುತ್ತದೆ. ನೀವು ಟಾಟಾ ಎಸ್‌ಯುವಿಯನ್ನು ಜುಲೈ 31ರ ಒಳಗೆ ಬುಕ್ ಮಾಡಿದರೆ ಮಾತ್ರ ಈ ಆಫರ್‌ಗಳು ಮಾನ್ಯವಾಗಿರುತ್ತವೆ.
ಟಾಟಾ ಎಸ್‌ಯುವಿ ಕಾರುಗಳ ಪಟ್ಟಿ
ಈ ಭಾರತೀಯ ವಾಹನ ತಯಾರಕರು ಪ್ರಸ್ತುತ ನಾಲ್ಕು ICE (ಇಂಧನ ಚಾಲಿತ) ಎಸ್‌ಯುವಿಗಳನ್ನು ನೀಡುತ್ತಿದ್ದಾರೆ, ಅವುಗಳೆಂದರೆ, ಟಾಟಾ ಪಂಚ್ (6.13 ಲಕ್ಷ ರೂ.ನಿಂದ), ನೆಕ್ಸಾನ್ (8 ಲಕ್ಷ ರೂ.ನಿಂದ ಆರಂಭ), ಹ್ಯಾರಿಯರ್ (ಈಗ 14.99 ಲಕ್ಷ ರೂ.ನಿಂದ ಪ್ರಾರಂಭ), ಮತ್ತು ದೊಡ್ದ ಎಸ್‌ಯುವಿಯಾದ ಸಫಾರಿ (ಈಗ 15.49 ಲಕ್ಷ ರೂ. ನಿಂದ ಪ್ರಾರಂಭ). ಅದರ ಇವಿ ರೇಂಜ್‌ನಲ್ಲಿ ಟಾಟಾ ಎರಡು ಎಸ್‌ಯುವಿಗಳನ್ನು ನೀಡುತ್ತದೆ, ಅವುಗಳೆಂದರೆ ಪಂಚ್ ಇವಿ (10.99 ಲಕ್ಷ ರೂ.ನಿಂದ ಪ್ರಾರಂಭ) ಮತ್ತು ನೆಕ್ಸಾನ್ ಇವಿ (14.49 ಲಕ್ಷ ರೂ.ದಿಂದ ಪ್ರಾರಂಭ).
ಟಾಟಾ ಕರ್ವ್, ಟಾಟಾ ಕರ್ವ್ ಇವಿ, ಟಾಟಾ ಹ್ಯಾಟಿಯರ್ ಇವಿ, ಟಾಟಾ ಸಿಯೆರ್ರಾ ಮತ್ತು ಟಾಟಾ ನೆಕ್ಸಾನ್ ಸಿಎನ್‌ಜಿಯಂತಹ ಮುಂಬರುವ ಮೊಡೆಲ್‌ಗಳೊಂದಿಗೆ ಈ ಪಟ್ಟಿಯನ್ನು ಇನ್ನಷ್ಟು ವಿಸ್ತರಿಸಲು ಟಾಟಾ ಸಜ್ಜಾಗಿದೆ.
ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಆಗಿದೆ
ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸಾಪ್ ಚಾನೆಲ್‌ಅನ್ನು ಫಾಲೋ ಮಾಡಿ
ಹೆಚ್ಚು ಓದಿ : ನೆಕ್ಸಾನ್ ಎಎಮ್‌ಟಿ