Login or Register ಅತ್ಯುತ್ತಮ CarDekho experience ಗೆ
Login

Tata Nexon ಉತ್ಪಾದನೆಯಲ್ಲಿ ಹೊಸ ಮೈಲುಗಲ್ಲು; ಈ ಕಾರು ಅಂದ್ರೆ ಜನರಿಗೆ ಅಷ್ಟೇಕೆ ಇಷ್ಟ? ಇಲ್ಲಿದೆ ವಿವರ

ಟಾಟಾ ನೆಕ್ಸಾನ್‌ ಗಾಗಿ rohit ಮೂಲಕ ಜನವರಿ 31, 2024 03:32 pm ರಂದು ಪ್ರಕಟಿಸಲಾಗಿದೆ

2017 ರಲ್ಲಿ ಮೊಟ್ಟ ಮೊದಲ ಬಾರಿಗೆ ಮಾರುಕಟ್ಟೆಗೆ ಬಂದ ನೆಕ್ಸಾನ್, ಟಾಟಾ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿದೆ ಮತ್ತು ಅದರ ಸೆಗ್ಮೆಂಟ್ ನಲ್ಲಿ EV ವರ್ಷನ್ ಅನ್ನು ಹೊಂದಿರುವ ಏಕೈಕ SUV ಆಗಿದೆ

  • ಟಾಟಾ ನೆಕ್ಸಾನ್ ಅನ್ನು ಮೊದಲ ಬಾರಿಗೆ 2017ರಲ್ಲಿ ಪರಿಚಯಿಸಲಾಯಿತು ಮತ್ತು 2020 ರಲ್ಲಿ ಅದಕ್ಕೆ ಮೊದಲ ಪ್ರಮುಖ ರಿಫ್ರೆಶ್ ನೀಡಲಾಯಿತು.
  • ನೆಕ್ಸಾನ್ 2020ರಲ್ಲಿ ತನ್ನ ಮೊದಲ ರಿಫ್ರೆಶ್‌ನೊಂದಿಗೆ EV ವರ್ಷನ್ ಅನ್ನು ಕೂಡ ಪಡೆದುಕೊಂಡಿದೆ.
  • ಇದು 2019ರ ನಡುವಿನಲ್ಲಿ 1-ಲಕ್ಷ ಯೂನಿಟ್ ಗಳ ಪ್ರೊಡಕ್ಷನ್ ಮೈಲಿಗಲ್ಲನ್ನು ಸಾಧಿಸಿತು.
  • SUVಯು 2-ಲಕ್ಷ ಯುನಿಟ್‌ಗಳ ಪ್ರೊಡಕ್ಷನ್ ನಿಂದ 5 ಲಕ್ಷ ಯುನಿಟ್‌ಗಳಿಗೆ ಹೋಗಲು ಎರಡು ವರ್ಷಗಳನ್ನು ತೆಗೆದುಕೊಂಡಿತು.
  • ನೆಕ್ಸಾನ್ ಮತ್ತು ನೆಕ್ಸಾನ್ EV ಗೆ ಸೆಪ್ಟೆಂಬರ್ 2023 ರಲ್ಲಿ ಸಮಗ್ರ ಅಪ್ಡೇಟ್ ಅನ್ನು ನೀಡಲಾಯಿತು.

ಟಾಟಾ ನೆಕ್ಸಾನ್ ಇದೀಗ ಮತ್ತೊಂದು ಪ್ರೊಡಕ್ಷನ್ ಮೈಲಿಗಲ್ಲನ್ನು ತಲುಪಿದ್ದು, ಇದೀಗ 6 ಲಕ್ಷ ಯುನಿಟ್‌ಗಳ ಅಂಕಿಯನ್ನು ದಾಟಿದೆ. ಈ ಸಂಖ್ಯೆಯು ಇಂಟರ್ನಲ್ ಕಮ್ಬಾಷನ್ ಎಂಜಿನ್ (ICE) ಸಬ್-4m SUV ಮತ್ತು ಟಾಟಾ ನೆಕ್ಸಾನ್ EV ಎರಡನ್ನೂ ಒಳಗೊಂಡಿದೆ. ಇದು 2023 ರ ಮೊದಲಾರ್ಧದಲ್ಲಿ 5-ಲಕ್ಷ ಯೂನಿಟ್‌ಗಳ ಗಡಿಯನ್ನು ದಾಟಿತ್ತು.

ನೆಕ್ಸಾನ್‌ನ ಪ್ರೊಡಕ್ಷನ್ ಇತಿಹಾಸದ ಬಗ್ಗೆ ಒಂದು ಸಂಕ್ಷಿಪ್ತ ನೋಟ

ಟಾಟಾ ತನ್ನ ಮೊದಲ ಸಬ್-4m SUV ಅನ್ನು ಸೆಪ್ಟೆಂಬರ್ 2017 ರಲ್ಲಿ ಮಾರುಕಟ್ಟೆಗೆ ಪರಿಚಯಿಸಿತು ಮತ್ತು ಬಂದ ಆರು ತಿಂಗಳೊಳಗೆ 25,000 ಬುಕಿಂಗ್‌ಗಳನ್ನು ಮಾಡಲಾಗಿತ್ತು. ನೆಕ್ಸಾನ್ 2019 ರ ಮಧ್ಯದಲ್ಲಿ 1-ಲಕ್ಷ ಯೂನಿಟ್ ಗಳ ಪ್ರೊಡಕ್ಷನ್ ಮೈಲಿಗಲ್ಲನ್ನು ಸಾಧಿಸಿದೆ.

2020 ರ ಆರಂಭದಲ್ಲಿ, ಟಾಟಾ ತನ್ನ SUVಯ ಫೇಸ್‌ಲಿಫ್ಟ್ ಅವತಾರವನ್ನು ಬಿಡುಗಡೆ ಮಾಡಿತು ಮತ್ತು ಅದರ ಆಲ್-ಎಲೆಕ್ಟ್ರಿಕ್ ವರ್ಷನ್ ಅನ್ನು ಕೂಡ ಹೊರತರಲಾಯಿತು, ಇದು ಭಾರತದಲ್ಲಿ ತಿಂಗಳಿನಿಂದ ತಿಂಗಳಿಗೆ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಕಾರ್ ಆಗಿ ಹೊರಹೊಮ್ಮಿತು. ನೆಕ್ಸಾನ್‌ ತನ್ನ 2-ಲಕ್ಷ ಯುನಿಟ್‌ಗಳ ಪ್ರೊಡಕ್ಷನ್ ಮೈಲಿಗಲ್ಲಿನಿಂದ 5-ಲಕ್ಷದವರೆಗಿನ ಪ್ರಯಾಣವನ್ನು ಕೇವಲ ಎರಡು ವರ್ಷಗಳಲ್ಲಿ ಸಾಧಿಸಿತು. ಇದು 2021 ಮತ್ತು 2023 ರ ನಡುವೆ ನಡೆಯಿತು. ಸೆಪ್ಟೆಂಬರ್ 2023 ರಲ್ಲಿ, ನೆಕ್ಸಾನ್‌ನ ICE ಮತ್ತು EV ವರ್ಷನ್ ಗಳಿಗೆ ಟಾಟಾ ಮತ್ತೊಂದು ಸಮಗ್ರ ಅಪ್ಡೇಟ್ ಅನ್ನು ನೀಡಿತು.

ನೀಡಲಾಗಿರುವ ಪವರ್‌ಟ್ರೇನ್‌ಗಳು

ಟಾಟಾ ನೆಕ್ಸಾನ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಎರಡೂ ಆಯ್ಕೆಗಳನ್ನು ಪಡೆಯುತ್ತದೆ: 1.2-ಲೀಟರ್ ಟರ್ಬೊ-ಪೆಟ್ರೋಲ್ (120 PS/170 Nm) ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ (115 PS/260 Nm). ಪೆಟ್ರೋಲ್ ಎಂಜಿನ್ ನಾಲ್ಕು ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಪಡೆಯುತ್ತದೆ - 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಮ್ಯಾನ್ಯುವಲ್, 6-ಸ್ಪೀಡ್ AMT ಮತ್ತು ಹೊಸ 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ (DCT) - ಡೀಸೆಲ್ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ AMT ಆಯ್ಕೆಯೊಂದಿಗೆ ಪಡೆಯಬಹುದು

ನೆಕ್ಸಾನ್ EV ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಲಭ್ಯವಿದೆ, ಪ್ರತಿಯೊಂದೂ ತನ್ನದೇ ಆದ ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿದೆ. ಇದನ್ನು 129 PS/215 Nm ಉತ್ಪಾದಿಸುವ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ 30 kWh ಬ್ಯಾಟರಿ ಪ್ಯಾಕ್ ಅನ್ನು ಜೋಡಿಸಲಾಗಿದೆ, ಮತ್ತು 325 ಕಿ.ಮೀವರೆಗೆ ಕ್ಲೈಮ್ ಮಾಡಲಾದ ರೇಂಜ್ ಅನ್ನು ನೀಡುತ್ತದೆ, ಮತ್ತು ಇನ್ನೊಂದು 144 PS/215 Nm ಅನ್ನು ಹೊರಹಾಕುವ ಎಲೆಕ್ಟ್ರಿಕ್ ಮೋಟರ್‌ಗೆ ಜೋಡಿಸಲಾದ ದೊಡ್ಡ 40.5kWh ಪ್ಯಾಕ್ ಅನ್ನು ಬಳಸುತ್ತದೆ ಮತ್ತು 465 ಕಿ.ಮೀವರೆಗೆ ಕ್ಲೇಮ್ ಮಾಡಲಾದ ರೇಂಜ್ ಅನ್ನು ನೀಡುತ್ತದೆ.

ಇದನ್ನು ಕೂಡ ಓದಿ: ಟಾಟಾ ಟಿಯಾಗೋ, ಟಿಯಾಗೋ NRG ಮತ್ತು ಟಿಗೋರ್ ಹೊಸ ಕಲರ್ ಆಯ್ಕೆಗಳನ್ನು ಪಡೆದಿವೆ

ಇದರಲ್ಲಿ ಏನೇನು ಫೀಚರ್ ಗಳು ಇವೆ?

ಇತ್ತೀಚಿನ ಫೇಸ್‌ಲಿಫ್ಟ್‌ನೊಂದಿಗೆ, ನೆಕ್ಸಾನ್ ತನ್ನ ಸೆಗ್ಮೆಂಟ್ ನಲ್ಲಿ ಅತಿ ಹೆಚ್ಚು ಫೀಚರ್ ಗಳನ್ನು ನೀಡುವ SUVಯಾಗಿದೆ. ಟಾಟಾ ಇದನ್ನು ಡ್ಯುಯಲ್ 10.25-ಇಂಚಿನ ಡಿಸ್ಪ್ಲೇ (ಒಂದು ಇನ್ಫೋಟೈನ್‌ಮೆಂಟ್‌ಗಾಗಿ ಮತ್ತು ಇನ್ನೊಂದು ಇನ್‌ಸ್ಟ್ರುಮೆಂಟೇಶನ್‌ಗಾಗಿ), ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜಿಂಗ್, ಸನ್‌ರೂಫ್ ಮತ್ತು 9-ಸ್ಪೀಕರ್ JBL ಸೌಂಡ್ ಸಿಸ್ಟಮ್‌ನೊಂದಿಗೆ ಸಜ್ಜುಗೊಳಿಸಿದೆ.

ಸುರಕ್ಷತಾ ತಂತ್ರಜ್ಞಾನದ ವಿಷಯದಲ್ಲಿ, ಇದು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), 360-ಡಿಗ್ರಿ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಪಡೆಯುತ್ತದೆ.

ಬೆಲೆ ಶ್ರೇಣಿ ಮತ್ತು ಪ್ರತಿಸ್ಪರ್ಧಿಗಳು

ಟಾಟಾ ನೆಕ್ಸಾನ್ ಬೆಲೆಯು 8.10 ಲಕ್ಷದಿಂದ ಶುರುವಾಗಿ 15.50 ಲಕ್ಷದವರೆಗೆ ಇದೆ (ಪರಿಚಯಾತ್ಮಕ ಎಕ್ಸ್ ಶೋರೂಂ ಪ್ಯಾನ್-ಇಂಡಿಯಾ). ಇದು ಮಾರುತಿ ಬ್ರೆಝಾ, ಕಿಯಾ ಸೋನೆಟ್, ಹ್ಯುಂಡೈ ವೆನ್ಯೂ, ಮಹೀಂದ್ರ XUV300, ರೆನಾಲ್ಟ್ ಕಿಗರ್, ನಿಸ್ಸಾನ್ ಮ್ಯಾಗ್ನೈಟ್ ಮತ್ತು ಮಾರುತಿ ಫ್ರಾಂಕ್ಸ್ ಸಬ್-4m ಕ್ರಾಸ್ಒವರ್ SUV ಜೊತೆಗೆ ಮಾರುಕಟ್ಟೆಯಲ್ಲಿ ಸ್ಪರ್ಧಿಸಲಿದೆ. ನೆಕ್ಸಾನ್ EV ಬೆಲೆಯು ರೂ 14.74 ಲಕ್ಷದಿಂದ ಶುರುವಾಗಿ ರೂ 19.94 ಲಕ್ಷದವರೆಗೆ (ಎಕ್ಸ್ ಶೋ ರೂಂ ಪ್ಯಾನ್-ಇಂಡಿಯಾ) ಇದೆ ಮತ್ತು ಇದು MG ZS EV ಮತ್ತು ಹುಂಡೈ ಕೋನಾ ಎಲೆಕ್ಟ್ರಿಕ್‌ಗಳಿಗೆ ಪರ್ಯಾಯ ಆಯ್ಕೆಯಾಗಿದೆ.

ಇನ್ನಷ್ಟು ಓದಿ: ಟಾಟಾ ನೆಕ್ಸಾನ್ AMT

Share via

Write your Comment on Tata ನೆಕ್ಸಾನ್‌

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ