Login or Register ಅತ್ಯುತ್ತಮ CarDekho experience ಗೆ
Login

Tata Nexon AMT ಈಗ ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಹಾಗು ಸ್ಮಾರ್ಟ್ ಮತ್ತು ಪ್ಯೂರ್ ವೇರಿಯೆಂಟ್‌ಗಳಲ್ಲಿ ಲಭ್ಯ

ಟಾಟಾ ನೆಕ್ಸಾನ್‌ ಗಾಗಿ shreyash ಮೂಲಕ ಏಪ್ರಿಲ್ 02, 2024 02:59 pm ರಂದು ಮಾರ್ಪಡಿಸಲಾಗಿದೆ

ನೆಕ್ಸಾನ್ ಪೆಟ್ರೋಲ್-ಎಎಮ್‌ಟಿ ಆಯ್ಕೆಯು ಈಗ 10 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ, ಹಿಂದಿನ ಆರಂಭಿಕ ಬೆಲೆಯು11.7 ಲಕ್ಷ ರೂ.ನಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತಿತ್ತು.

2023ರ ಸೆಪ್ಟೆಂಬರ್ ನಲ್ಲಿ ಟಾಟಾ ನೆಕ್ಸಾನ್ ಗಮನಾರ್ಹವಾದ ಮಿಡ್‌ಲೈಫ್ ನವೀಕರಣವನ್ನು ಪಡೆದುಕೊಂಡಿದೆ, ಇದು ತಾಜಾ ವಿನ್ಯಾಸ ಮತ್ತು ಹೊಸ ವೈಶಿಷ್ಟ್ಯಗಳನ್ನು ಮಾತ್ರವಲ್ಲದೆ ವ್ಯಾಪಕ ಶ್ರೇಣಿಯ ಗೇರ್‌ಬಾಕ್ಸ್‌ ಆಯ್ಕೆಗಳನ್ನು ಒಳಗೊಂಡಿದೆ: 5-ಸ್ಪೀಡ್ ಮ್ಯಾನುಯಲ್‌ (ಪೆಟ್ರೋಲ್-ಮಾತ್ರ), 6-ಸ್ಪೀಡ್ ಮ್ಯಾನುಯಲ್‌ (ಪೆಟ್ರೋಲ್ ಮತ್ತು ಡೀಸೆಲ್) , 6-ಸ್ಪೀಡ್ AMT (ಪೆಟ್ರೋಲ್ ಮತ್ತು ಡೀಸೆಲ್), ಮತ್ತು 7-ವೇಗದ DCA (ಪೆಟ್ರೋಲ್ ಮಾತ್ರ). ನೆಕ್ಸಾನ್ ಫೇಸ್‌ಲಿಫ್ಟ್ ಬಿಡುಗಡೆಯ ಸಮಯದಲ್ಲಿ, 6-ಸ್ಪೀಡ್ ಎಎಮ್‌ಟಿ ಟ್ರಾನ್ಸ್‌ಮಿಷನ್ ಮಿಡ್-ಸ್ಪೆಕ್ ಕ್ರಿಯೇಟಿವ್ ಆವೃತ್ತಿಯಿಂದ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆವೃತ್ತಿಗಳೊಂದಿಗೆ ಪ್ರಾರಂಭವಾಗುತ್ತಿತ್ತು, ಆದರೆ ಈಗ, ಈ ಟ್ರಾನ್ಸ್‌ಮಿಷನ್ ಆಯ್ಕೆಯು ಲೋವರ್‌-ಸ್ಪೆಕ್ ಆವೃತ್ತಿಗಳಾದ ಸ್ಮಾರ್ಟ್ ಮತ್ತು ಪ್ಯೂರ್‌ನಿಂದ ಪ್ರಾರಂಭವಾಗುತ್ತದೆ. ಟಾಟಾ ನೆಕ್ಸಾನ್‌ನ AMT ಆವೃತ್ತಿಗಳ ನವೀಕರಿಸಿದ ಬೆಲೆಗಳನ್ನು ನೋಡೋಣ.

ವೇರಿಯೆಂಟ್‌ಗಳು

ಪೆಟ್ರೋಲ್-ಎಎಮ್‌ಟಿ

ಡೀಸೆಲ್-ಎಎಮ್‌ಟಿ

ಸ್ಮಾರ್ಟ್ ಪ್ಲಸ್ ಎಎಮ್‌ಟಿ

10 ಲಕ್ಷ ರೂ

N.A.

ಪ್ಯೂರ್ ಎಎಮ್‌ಟಿ

10.50 ಲಕ್ಷ ರೂ

11.80 ಲಕ್ಷ ರೂ.

ಪ್ಯೂರ್ ಎಸ್ ಮ್ಯಾನುಯಲ್‌

11 ಲಕ್ಷ ರೂ

12.30 ಲಕ್ಷ ರೂ.

ಕ್ರಿಯೇಟಿವ್ ಎಎಮ್‌ಟಿ

11.80 ಲಕ್ಷ ರೂ

13.10 ಲಕ್ಷ ರೂ.

ಕ್ರಿಯೇಟಿವ್ ಎಎಮ್‌ಟಿ ಡಾರ್ಕ್

12.15 ಲಕ್ಷ ರೂ

13.45 ಲಕ್ಷ ರೂ.

ಕ್ರಿಯೇಟಿವ್ ಪ್ಲಸ್ ಎಎಮ್‌ಟಿ

12.50 ಲಕ್ಷ ರೂ.

13.90 ಲಕ್ಷ ರೂ.

ಕ್ರಿಯೇಟಿವ್ ಪ್ಲಸ್ ಎಎಮ್‌ಟಿ ಡಾರ್ಕ್

12.85 ಲಕ್ಷ ರೂ.

14.25 ಲಕ್ಷ ರೂ

ಕ್ರಿಯೇಟಿವ್ ಪ್ಲಸ್ ಎಸ್‌ ಎಎಮ್‌ಟಿ

13 ಲಕ್ಷ ರೂ.

14.40 ಲಕ್ಷ ರೂ.

ಕ್ರಿಯೇಟಿವ್ ಪ್ಲಸ್ ಎಸ್‌ ಎಎಮ್‌ಟಿ ಡಾರ್ಕ್

13.35 ಲಕ್ಷ ರೂ.

14.75 ಲಕ್ಷ ರೂ.

ಫಿಯರ್‌ಲೆಸ್‌ ಎಎಮ್‌ಟಿ

N.A. (ಬದಲಿಗೆ ಪೆಟ್ರೋಲ್-DCA ಪಡೆಯುತ್ತದೆ)

14.70 ಲಕ್ಷ ರೂ

ಫಿಯರ್‌ಲೆಸ್‌ ಎಎಮ್‌ಟಿ ಡಾರ್ಕ್

N.A. (ಬದಲಿಗೆ ಪೆಟ್ರೋಲ್-DCA ಪಡೆಯುತ್ತದೆ)

15.05 ಲಕ್ಷ ರೂ.

ಫಿಯರ್‌ಲೆಸ್‌ ಎಸ್‌ ಎಎಮ್‌ಟಿ

N.A. (ಬದಲಿಗೆ ಪೆಟ್ರೋಲ್-DCA ಪಡೆಯುತ್ತದೆ)

15.10 ಲಕ್ಷ ರೂ.

ಫಿಯರ್‌ಲೆಸ್‌ ಪ್ಲಸ್ ಎಸ್‌ ಎಎಮ್‌ಟಿ

N.A. (ಬದಲಿಗೆ ಪೆಟ್ರೋಲ್-DCA ಪಡೆಯುತ್ತದೆ)

15.60 ಲಕ್ಷ ರೂ.

ಫಿಯರ್‌ಲೆಸ್‌ ಪ್ಲಸ್ ಎಸ್‌ ಎಎಮ್‌ಟಿ ಡಾರ್ಕ್

N.A. (ಬದಲಿಗೆ ಪೆಟ್ರೋಲ್-DCA ಪಡೆಯುತ್ತದೆ)

15.80 ಲಕ್ಷ ರೂ.

ಈ ಹೊಸ AMT ಆವೃತ್ತಿಗಳ ಪರಿಚಯದೊಂದಿಗೆ, Nexon ಪೆಟ್ರೋಲ್ AMTಯ ಆರಂಭಿಕ ಬೆಲೆಯು ಈಗ 1.8 ಲಕ್ಷ ರೂ.ನಷ್ಟು ಕಡಿತ ಕಂಡಿದೆ. ಅದೇ ರೀತಿ, ಹೊಸ Nexon ಡೀಸೆಲ್ AMT ಅದರ ಹಿಂದಿನ ಆರಂಭಿಕ ಬೆಲೆಗಿಂತ 1.4 ಲಕ್ಷ ರೂಪಾಯಿಗಳ ಇಳಿಕೆಯನ್ನು ಪಡೆದಿದೆ. ಎರಡೂ ಎಂಜಿನ್ ಆಯ್ಕೆಗಳಲ್ಲಿ, 6-ಸ್ಪೀಡ್ AMTಯು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗಿಂತ 70,000 ರೂ ನಷ್ಟು ಹೆಚ್ಚುವರಿ ಬೆಲೆಯನ್ನು ಹೊಂದಿದೆ.

ಇದನ್ನು ಸಹ ಪರಿಶೀಲಿಸಿ: 2024ರ ಸ್ವಾತಂತ್ರ್ಯ ದಿನದಂದು Mahindra Thar 5-door ಅನಾವರಣ

ವೈಶಿಷ್ಟ್ಯಗಳು ಸುರಕ್ಷತೆ

ಟಾಟಾ ನೆಕ್ಸಾನ್‌ನ ಸ್ಮಾರ್ಟ್ ಪ್ಲಸ್ ಆವೃತ್ತಿಯು 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಜೊತೆಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ (ವಯರ್ಡ್‌) , 4-ಸ್ಪೀಕರ್ ಸೌಂಡ್ ಸಿಸ್ಟಂ, ಎಲೆಕ್ಟ್ರಿಕ್ ಆಗಿ ಅಡ್ಜೆಸ್ಟ್ ಮಾಡಬಹುದಾದ ಔಟ್‌ಸೈಡ್‌ ರಿಯರ್ ವ್ಯೂ ಮಿರರ್‌ಗಳು (ORVMs) ಮತ್ತು ಎಲ್ಲಾ ನಾಲ್ಕು ಪವರ್‌ ವಿಂಡೋಗಳಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಪ್ಯೂರ್ ವೆರಿಯಂಟ್ ಹೆಚ್ಚುವರಿಯಾಗಿ ಹಿಂಭಾಗದ ಎಸಿ ವೆಂಟ್‌ಗಳು ಮತ್ತು ಟಚ್-ಆಧಾರಿತ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಅನ್ನು ಪಡೆಯುತ್ತದೆ, ಆದರೆ ಪ್ಯೂರ್ ಎಸ್ ಸಹ ಹಗಲು/ರಾತ್ರಿಯ ಒಳಗಿನ ರಿಯರ್ ವ್ಯೂ ಮಿರರ್ (ಐಆರ್‌ವಿಎಂ) ಮತ್ತು ಸನ್‌ರೂಫ್‌ನೊಂದಿಗೆ ಬರುತ್ತದೆ. ಸುರಕ್ಷತೆಯ ದೃಷ್ಟಿಯಿಂದ, ಎರಡೂ ಆವೃತ್ತಿಗಳು 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಹಿಲ್ ಹೋಲ್ಡ್ ಅಸಿಸ್ಟ್ ಅನ್ನು ಪಡೆಯುತ್ತವೆ.

ನೆಕ್ಸಾನ್‌ನ ಟಾಪ್-ಸ್ಪೆಕ್ ಆವೃತ್ತಿಗಳು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್, 10.25-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್‌ಸ್ ಡಿಸ್‌ಪ್ಲೇ, 9-ಸ್ಪೀಕರ್ JBL ಸೌಂಡ್ ಸಿಸ್ಟಮ್, ಆಟೋಮ್ಯಾಟಿಕ್‌ ಎಸಿ, ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಮತ್ತು ಎತ್ತರ-ಹೊಂದಾಣಿಕೆ ಮಾಡಬಹುದಾದ ಸೀಟ್‌ಗಳು ಮತ್ತು ಕ್ರೂಸ್ ಕಂಟ್ರೋಲ್‌ನಂತಹ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ. ಇದರ ಸುರಕ್ಷತಾ ಕಿಟ್ ಬ್ಲೈಂಡ್ ವ್ಯೂ ಮಾನಿಟರ್‌ನೊಂದಿಗೆ 360-ಡಿಗ್ರಿ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಒಳಗೊಂಡಿದೆ.

ಇದನ್ನು ಸಹ ಓದಿ: Volkswagen Virtus ಜಿಟಿ ಪ್ಲಸ್ ಸ್ಪೋರ್ಟ್ ವರ್ಸಸ್‌ Hyundai Verna ಟರ್ಬೊ: ಚಿತ್ರಗಳಲ್ಲಿ ಹೋಲಿಕೆ

ಪವರ್‌ಟ್ರೇನ್‌ ಆಯ್ಕೆಗಳು

ಟಾಟಾ ನೆಕ್ಸಾನ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಎರಡರ ವಿಶೇಷಣಗಳನ್ನು ಕೆಳಗೆ ವಿವರಿಸಲಾಗಿದೆ:

ಇಂಜಿನ್

1.2-ಲೀಟರ್ ಟರ್ಬೊ-ಪೆಟ್ರೋಲ್

1.5-ಲೀಟರ್ ಡೀಸೆಲ್

ಪವರ್‌

120 ಪಿಎಸ್

115 ಪಿಎಸ್

ಟಾರ್ಕ್

170 ಎನ್ಎಂ

260 ಎನ್ಎಂ

ಟ್ರಾನ್ಸ್‌ಮಿಷನ್‌

5-ಸ್ಪೀಡ್‌ ಮ್ಯಾನುಯಲ್‌, 6-ಸ್ಪೀಡ್‌ ಮ್ಯಾನುಯಲ್‌, 6-ಸ್ಪೀಡ್‌ AMT, 7-ಸ್ಪೀಡ್‌ DCA

6-ಸ್ಪೀಡ್‌ ಮ್ಯಾನುಯಲ್‌, 6-ಸ್ಪೀಡ್‌ AMT

*DCA- ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌

ಬೆಲೆ ರೇಂಜ್‌ ಮತ್ತು ಪ್ರತಿಸ್ಪರ್ಧಿಗಳು

ದೆಹಲಿಯಲ್ಲಿ ಟಾಟಾ ನೆಕ್ಸಾನ್‌ನ ಎಕ್ಸ್ ಶೋರೂಂ ಬೆಲೆ 8.15 ಲಕ್ಷ ರೂ.ನಿಂದ 15.80 ಲಕ್ಷ ರೂ.ವರೆಗೆ ಇದೆ. ಟಾಟಾ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯು ಮಾರುಕಟ್ಟೆಯಲ್ಲಿ ಹ್ಯುಂಡೈ ವೆನ್ಯೂ, ಕಿಯಾ ಸೋನೆಟ್, ಮಾರುತಿ ಬ್ರೆಝಾ, ಮಹೀಂದ್ರಾ ಎಕ್ಸ್‌ಯುವಿ300, ರೆನಾಲ್ಟ್ ಕೈಗರ್ ಮತ್ತು ನಿಸ್ಸಾನ್ ಮ್ಯಾಗ್ನೈಟ್‌ಗಳಿಗೆ ಸ್ಪರ್ಧೆಯನ್ನು ನೀಡಲಿದೆ.

ಇನ್ನಷ್ಟು ಓದಿ: ನೆಕ್ಸಾನ್ AMT

Share via

Write your Comment on Tata ನೆಕ್ಸಾನ್‌

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
Rs.15.50 - 27.25 ಲಕ್ಷ*
ಹೊಸ ವೇರಿಯೆಂಟ್
Rs.15 - 26.50 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.6.20 - 10.51 ಲಕ್ಷ*
ಎಲೆಕ್ಟ್ರಿಕ್
Rs.48.90 - 54.90 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ