Login or Register ಅತ್ಯುತ್ತಮ CarDekho experience ಗೆ
Login

ಬಿಡುಗಡೆಗೆ ಮುಂಚಿತವಾಗಿ ಬಹಿರಂಗಗೊಂಡ Tata Nexon Faceliftನ ಬಾಹ್ಯ ವಿನ್ಯಾಸ

ಟಾಟಾ ನೆಕ್ಸಾನ್‌ ಗಾಗಿ rohit ಮೂಲಕ ಆಗಸ್ಟ್‌ 29, 2023 07:11 pm ರಂದು ಪ್ರಕಟಿಸಲಾಗಿದೆ

ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್‌ನ ಫ್ರಂಟ್ ಮತ್ತು ರಿಯರ್ ಪ್ರೊಫೈಲ್ ಅನ್ನು ಈಗ ಸ್ಲೀಕರ್ ಎಲ್‌ಇಡಿ ಲೈಟಿಂಗ್ ಸೆಟಪ್‌ನೊಂದಿಗೆ ಹೈಲೈಟ್ ಮಾಡಲಾಗಿದೆ

  • ಟಾಟಾ ಸೆಪ್ಟೆಂಬರ್ 14 ರಂದು ನವೀಕೃತ ನೆಕ್ಸಾನ್ ಅನ್ನು ಬಿಡುಗಡೆ ಮಾಡಲಿದೆ.
  • ಹೊಸ ಸ್ಪೈ ಶಾಟ್‌ಗಳಲ್ಲಿ ಈ ಎಸ್‌ಯುವಿ ಯಾವುದೇ ಮರೆಮಾಚುವಿಕೆ ಇಲ್ಲದೆಯೇ ಕಾಣಸಿಕ್ಕಿದ್ದು, ಇದು ಬಹುಶಃ TVC ಚಿತ್ರೀಕರಣದ ಸಮಯದ್ದಾಗಿದೆ.
  • ಕ್ಯಾಬಿನ್ ಅಪ್‌ಡೇಟ್‌ಗಳಲ್ಲಿ ಹೊಸ ಸ್ಟೀರಿಂಗ್ ವ್ಹೀಲ್ ಮತ್ತು ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯನ್ನು ಸೇರಿವೆ.
  • 360-ಡಿಗ್ರಿ ಕ್ಯಾಮೆರಾ, 10.25-ಇಂಚಿನ ಟಚ್‌ಸ್ಕ್ರೀನ್ ಮತ್ತು ಆರು ಏರ್‌ಬ್ಯಾಗ್‌ಗಳನ್ನು ಪಡೆಯುವ ಸಾಧ್ಯತೆಯಿದೆ.
  • ಟಾಟಾ ಇದನ್ನು ಟರ್ಬೊ-ಪೆಟ್ರೋಲ್, ಡೀಸೆಲ್ ಮತ್ತು EV ಪವರ್‌ಟ್ರೇನ್‌ಗಳೊಂದಿಗೆ ನೀಡುವುದನ್ನು ಮುಂದುವರಿಸುತ್ತದೆಯೆಂದು ನಿರೀಕ್ಷಿಸಲಾಗಿದೆ.
  • ಈ ಕಾರಿನ ಬೆಲೆ ಪ್ರಸ್ತುತ ಮಾಡೆಲ್‌ನ ಬೆಲೆಗಿಂತ ಹೆಚ್ಚಾಗಿರಬಹುದು. ಪ್ರಸ್ತುತ, ಟಾಟಾ ನೆಕ್ಸಾನ್ ಬೆಲೆಗಳು ರೂ.8 ಲಕ್ಷದಿಂದ ಪ್ರಾರಂಭವಾಗುತ್ತವೆ (ಎಕ್ಸ್ ಶೋರೂಂ ದೆಹಲಿ).

ಟಾಟಾ ನೆಕ್ಸಾನ್ ಮತ್ತು ನೆಕ್ಸಾನ್ EV ಫೇಸ್‌ಲಿಫ್ಟ್‌ಗಳ ಬಿಡುಗಡೆ ದಿನಾಂಕವನ್ನು ಇತ್ತೀಚೆಗೆ ದೃಢೀಕರಿಸಲಾಗಿದೆ. ಅದರ ಬೆಲೆ ಘೋಷಣೆಗೆ ಇನ್ನೂ ಒಂದೆರಡು ವಾರ ಬಾಕಿಯಿರುವಾಗ, ನವೀಕೃತ ಎಸ್‌ಯುವಿ ಯಾವುದೇ ಮರೆಮಾಚುವಿಕೆ ಇಲ್ಲದೆ ಕಾಣಿಸಿಕೊಂಡಿದೆ, ಇದರಿಂದಾಗಿ ಕಂಪನಿಯು ಅದರ ವೀಡಿಯೊ ಚಿತ್ರೀಕರಣವನ್ನು ನಡೆಸುತ್ತಿದೆ ಎಂದು ಊಹಿಸಲಾಗಿದೆ.

ಶಾರ್ಪ್ ಫ್ರಂಟ್ ಲುಕ್

ಹೊಸ ಟಾಟಾ ನೆಕ್ಸಾನ್‌ನ ಫ್ರಂಟ್ ಈಗ ಹೆಚ್ಚು ಶಾರ್ಪ್ ಆಗಿದೆ. ಮುಂಭಾಗದಲ್ಲಿ, ಇದು ಸ್ಲಿಮ್ ಗ್ರಿಲ್ ಅನ್ನು ಪಡೆಯುತ್ತದೆ, ಇದು ಹೊಸ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳಿಂದ (DRLs) ಸುತ್ತುವರಿದಿದೆ. ಇದು ಮರುವಿನ್ಯಾಸಗೊಳಿಸಲಾದ ಬಂಪರ್‌ನೊಂದಿಗೆ ಲಂಬ ವಿನ್ಯಾಸದಲ್ಲಿ ಎಲ್ಇಡಿ ಹೆಡ್‌ಲೈಟ್‌ಗಳನ್ನು ಎರಡೂ ಬದಿಗಳಲ್ಲಿ ಹೊಂದಿದೆ.

ರಿಯರ್ ಲುಕ್

ಎಸ್‌ಯುವಿಯ ರಿಯರ್ ಪ್ರೊಫೈಲ್‌ನಲ್ಲಿಯೂ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿದೆ. ಇದು ಸ್ಲೀಕರ್ ಎಲ್‌ಇಡಿ ಟೈಲ್‌ಲೈಟ್ ಸೆಟಪ್ ಅನ್ನು ಹೊಂದಿದೆ (ಈಗ ಲೈಟಿಂಗ್ ಸ್ಟ್ರಿಪ್‌ನಿಂದ ಸಂಪರ್ಕಗೊಂಡಿದೆ), ಮರುವಿನ್ಯಾಸಗೊಳಿಸಲಾದ ಟೈಲ್‌ಗೇಟ್ ಇನ್ನೂ 'ನೆಕ್ಸಾನ್' ಬ್ಯಾಡ್ಜಿಂಗ್ ಅನ್ನು ಹೊಂದಿದೆ. ರಿಯರ್‌ನಲ್ಲಿ, ಇದು ಫಾಕ್ಸ್ ಸ್ಕಿಡ್ ಪ್ಲೇಟ್‌ನೊಂದಿಗೆ ವಿಶಾಲವಾದ ಬಂಪರ್ ಅನ್ನು ಪಡೆಯುತ್ತದೆ. ಇದು ಕಣ್ಣುಕೋರೈಸುವ ವ್ಹೀಲ್ ಆರ್ಚ್‌ಗಳನ್ನು ಪಡೆಯುತ್ತದೆ, ಅದರ ಮೇಲೆ ರಿಯರ್ ರಿಫ್ಲೆಕ್ಟರ್‌ಗಳನ್ನು ಸ್ವಲ್ಪ ಎತ್ತರದಲ್ಲಿ ಇರಿಸಲಾಗಿದೆ.

ಸೈಡ್ ಪ್ರೊಫೈಲ್‌ನಲ್ಲಿನ ದೊಡ್ಡ ಬದಲಾವಣೆಯೆಂದರೆ ಹೊಸ ವಿನ್ಯಾಸದ ಅಲಾಯ್ ವ್ಹೀಲ್‌ಗಳಾಗಿವೆ. ಈ ಎಲ್ಲಾ ಬದಲಾವಣೆಗಳನ್ನು ಹೊಸ ನೆಕ್ಸಾನ್ EV ನಲ್ಲಿಯೂ ಕಾಣಬಹುದು ಎಂದು ಅಂದಾಜಿಸಲಾಗಿದೆ. ನೆಕ್ಸಾನ್ ಎಸ್‌ಯುವಿಯ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬ್ಲ್ಯೂ ಹೈಲೈಟ್‌ಗಳು ಮತ್ತು ಮುಚ್ಚಿದ ಪ್ಯಾನೆಲ್‌ಗಳನ್ನು ಸಹ ನೀಡಬಹುದು.

ಇದನ್ನೂ ಓದಿ: 2024 ರಿಂದ ಭಾರತ್ NCAPಗೆ ಭಾರತೀಯ ಕಾರುಗಳ ಕ್ರ್ಯಾಶ್ ಟೆಸ್ಟಿಂಗ್ ನಿಯಂತ್ರಣವನ್ನು ಹಸ್ತಾಂತರಿಸಲಿರುವ ಜಾಗತಿಕ NCAP

ಇಂಟೀರಿಯರ್‌ನಲ್ಲಿ ಬದಲಾವಣೆಗಳು

ಎಸ್‌ಯುವಿಯ ಇಂಟೀರಿಯರ್‌ಗೆ ಮಾಡಲಾದ ಎಲ್ಲಾ ವಿವಿಧ ಅಪ್‌ಡೇಟ್‌ಗಳಲ್ಲಿ, ಅತ್ಯಂತ ಗಮನಾರ್ಹವಾದವುಗಳಲ್ಲಿ ಹೊಸ ಡ್ಯಾಶ್‌ಬೋರ್ಡ್ ಲೇಔಟ್ ಮತ್ತು ಟಾಟಾ ಕರ್ವ್‌ನಲ್ಲಿರುವಂತಹ 2-ಸ್ಪೋಕ್ ಸ್ಟೀರಿಂಗ್ ವ್ಹೀಲ್ ಸೇರಿವೆ. ಎಸ್‌ಯುವಿಯ ಕಾರಿನ ಕ್ಯಾಬಿನ್‌ನಲ್ಲಿ ಏನೆಲ್ಲಾ ಬದಲಾವಣೆಗಳನ್ನು ಮಾಡಲಾಗಿದೆ ಎಂಬುದನ್ನು ನಮ್ಮ ಈ ವಿವರವಾದ ಲೇಖನದ ಮೂಲಕ ತಿಳಿದುಕೊಳ್ಳಿ.

ಫೀಚರ್‌ಗಳು

ನೆಕ್ಸಾನ್ ಫೇಸ್‌ಲಿಫ್ಟ್ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಅಡ್ವಾನ್ಸ್‌ಡ್ ಡ್ರೈವರ್ ಅಸಿಸ್ಟನ್ಸ್ ಸಿಸ್ಟಂ (ADAS), ಫ್ರಂಟ್ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾದಂತಹ ಫೀಚರ್‌ಗಳನ್ನು ಪಡೆಯುವ ಸಾಧ್ಯತೆಯಿದೆ. ಇದಲ್ಲದೆ, ಇದು 10.25-ಇಂಚಿನ ಟಚ್‌ಸ್ಕ್ರೀನ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಕ್ರೂಸ್ ಕಂಟ್ರೋಲ್‌ನಂತಹ ಫೀಚರ್‌ಗಳನ್ನು ಸಹ ಪಡೆಯುತ್ತದೆ.

ಸುರಕ್ಷತೆಗಾಗಿ, ಇದು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ISOFIX ಚೈಲ್ಡ್ ಸೀಟ್ ಆಂಕಾರೇಜ್ ಮತ್ತು ರಿವರ್ಸಿಂಗ್ ಕ್ಯಾಮೆರಾದಂತಹ ಫೀಚರ್‌ಗಳನ್ನು ಹೊಂದಿದೆ.

ಇದನ್ನೂ ಓದಿ: ವಿವಿಧ ರೀತಿಯ NCAP ಗಳ ಅನ್ವೇಷಣೆ: ಪ್ರಪಂಚದಾದ್ಯಂತ ಆಟೋಮೋಟಿವ್ ಸುರಕ್ಷತೆಯ ಪರೀಕ್ಷೆ

ಪವರ್‌ಟ್ರೇನ್ ಆಯ್ಕೆಗಳ ವಿವರಗಳು

ಟಾಟಾ ಹೊಸ ನೆಕ್ಸಾನ್ ಅಸ್ತಿತ್ವದಲ್ಲಿರುವ ಮಾಡೆಲ್‌ನ 1.5-ಲೀಟರ್ ಡೀಸೆಲ್ ಎಂಜಿನ್ (115PS/160Nm) ಜೊತೆಗೆ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 6-ಸ್ಪೀಡ್ AMT ನೊಂದಿಗೆ ಚಾಲಿತವಾಗುವ ನಿರೀಕ್ಷೆಯಿದೆ. ನವೀಕೃತ ಎಸ್‌ಯುವಿ ಟಾಟಾದ ಹೊಸ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (125PS/225Nm) ಜೊತೆಗೆ ಹೊಸ DCT (ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್) ಆಯ್ಕೆಯನ್ನು ಸಹ ಪಡೆಯಬಹುದು. ನೆಕ್ಸಾನ್ EV ಫೇಸ್‌ಲಿಫ್ಟ್ ಪವರ್‌ಟ್ರೇನ್‌ಗಳಿಗೆ ಹೆಚ್ಚಿನ ಬದಲಾವಣೆಗಳನ್ನು ಮಾಡಲಾಗಿಲ್ಲ ಮತ್ತು ಇದು ವಿವಿಧ ಬ್ಯಾಟರಿ ಗಾತ್ರಗಳೊಂದಿಗೆ ಪ್ರೈಮ್ ಮತ್ತು ಮ್ಯಾಕ್ಸ್ ಎಂಬ ಎರಡು ಆವೃತ್ತಿಗಳಲ್ಲಿ ಲಭ್ಯವಾಗುವುದು ಮುಂದುವರಿಯುತ್ತದೆ.

ಪೈಪೋಟಿ ಮತ್ತು ಬೆಲೆ

ನೆಕ್ಸಾನ್ ಫೇಸ್‌ಲಿಫ್ಟ್‌ನ ಬೆಲೆ ಪ್ರಸ್ತುತ ಮಾಡೆಲ್‌ನ ಬೆಲೆಗಿಂತ ಅಧಿಕವಾಗಿರಬಹುದು. ಪ್ರಸ್ತುತ, ಟಾಟಾ ನೆಕ್ಸಾನ್ ಬೆಲೆಗಳು ರೂ. 8 ಲಕ್ಷದಿಂದ ಪ್ರಾರಂಭವಾಗುತ್ತವೆ (ಎಕ್ಸ್ ಶೋರೂಂ ದೆಹಲಿ). ಈ ಎಸ್‌ಯುವಿ ಕಾರು ಕಿಯಾ ಸೋನೆಟ್, ಹ್ಯುಂಡೈ ವೆನ್ಯೂ, ಮಾರುತಿ ಬ್ರೆಝಾ, ರೆನಾಲ್ಟ್ ಕೈಗರ್, ನಿಸ್ಸಾನ್ ಮ್ಯಾಗ್ನೈಟ್, ಮತ್ತು ಮಹೀಂದ್ರಾ ಎಕ್ಸ್‌ಯುವಿ300 ಜೊತೆಗೆ ಮಾರುತಿ ಫ್ರಾಂಕ್ಸ್ ಮತ್ತು ಸಿಟ್ರಾನ್ C3ಯಂತಹ ಕ್ರಾಸ್ಓವರ್ ಕಾರುಗಳೊಂದಿಗೆ ಸ್ಪರ್ಧಿಸುತ್ತದೆ.

ಇನ್ನಷ್ಟು ಓದಿ: ನೆಕ್ಸಾನ್ ಆಟೋಮ್ಯಾಟಿಕ್

Share via

Write your Comment on Tata ನೆಕ್ಸಾನ್‌

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಫೇಸ್ ಲಿಫ್ಟ್
Rs.1.03 ಸಿಆರ್*
ಹೊಸ ವೇರಿಯೆಂಟ್
Rs.11.11 - 20.42 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.15.50 - 27.25 ಲಕ್ಷ*
ಹೊಸ ವೇರಿಯೆಂಟ್
Rs.15 - 26.50 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ