Login or Register ಅತ್ಯುತ್ತಮ CarDekho experience ಗೆ
Login

ಟಾಟಾ ನೆಕ್ಸಾನ್ ಪೆಟ್ರೋಲ್ ಅಥವಾ ಡೀಸೆಲ್: ಯಾವುದು ಕೊಳ್ಳುವುದು?

published on ಮೇ 20, 2019 11:37 am by cardekho for ಟಾಟಾ ನೆಕ್ಸ್ಂನ್‌ 2017-2020

ಇತರ ಎಲ್ಲ ಟಾಟಾ ಕಾರ್ ಗಳಂತೆ, ನೆಕ್ಸಾನ್ ಸಹ ಸ್ಪರ್ಧಾತ್ಮಕ ಬೆಲೆ ಹೊಂದಿದೆ., ಮತ್ತು ಪ್ರಮುಖ ಪ್ರತಿಸ್ಪರ್ದಿಗಳಾದ ಮಾರುತಿ ವಿಟಾರಾ ಬ್ರೆಝ ಮತ್ತು ಫೋರ್ಡ್ ಎಕೋಸ್ಪೋರ್ಟ್ ಗೆ ತೀವ್ರ ಸ್ಪರ್ಧೆ ಕೊಟ್ಟಿದೆ. ಬೆಲೆಗಳನ್ನು ಹತೋಟಿಯಲ್ಲಿ ಇರಿಸಿದ್ದರೂ ಸಹಟಾಟಾ ನೆಕ್ಸಾನ್ ನಲ್ಲಿ ಅವಶ್ಯಕವಾಗಿರುವ ಎಲ್ಲ ಫೀಚರ್ ಗಳನ್ನೂ ಕೊಡಲಾಗಿದೆ, ಮತ್ತು ಹಲವು ವಿಷಯಗಳಾದ ಆಕರ್ಷಕ ಹೊರಗಿನ ಶೈಲಿ ಆಗಿರಲಿ ಅಥವಾ 6.5-ಇಂಚು ಫ್ಲೋಟಿಂಗ್ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಆಗಲಿ, ನೆಕ್ಸಾನ್ ನಲ್ಲಿ ಇವನ್ನೆಲ್ಲ ಕೊಟ್ಟು ಒಂದು ಆಧುನಿಕ ಕಾಂಪ್ಯಾಕ್ಟ್ SUV ಆಗಿ ಮಾಡಲಾಗಿದೆ.

ಹಾಗಾಗಿ ಟಾಟಾ ನೆಕ್ಸಾನ್ ಗ್ರಾಹಕರ ಕೊಳ್ಳಬಹುದಾದ ಕೋಪ್ಮ್ಪ್ಯಾಕ್ಟ್ SUV ಗಳ ರೂ 6-9 ಲಕ್ಷ ಬೆಲೆ ಪಟ್ಟಿಯಲ್ಲಿ ಒಂದು ಸ್ಥಾನ ಪಡೆದಿದೆ. ಆದರೆ ನೀವು ಯಾವ ನ ನೆಕ್ಸಾನ್ ಕೊಳ್ಳಬೇಕು? ಪೆಟ್ರೋಲ್ ಅಥವಾ ಡೀಸೆಲ್? ಯಾವುದನ್ನೂ ಹೆಚ್ಚು ಚೆನ್ನಾಗಿ ಡ್ರೈವ್ ಮಾಡಬಹುದು ಮತ್ತು ಮೈಲೇಜ್ ವಿಷಯದಲ್ಲಿ ನಿರಾಶೆಯುಂಟುಮಾಡಿವುದುದಿಲ್ಲ? ನಾವು ಎರೆಡನ್ನು ಹೋಲಿಕೆ ಮಾಡಿ ನಿಮಗ ಸಿರ್ದಾರ ತೆಗೆದುಕೊಳ್ಳಲು ಸಹಾಯವಾಗುವಂತೆ ಮಾಡೋಣ.

ಒಂದು ಸಾಮಾನ್ಯ ನಿಯಮದಂತೆ ನಿಮ್ಮ ವರ್ಷದ ಉಪಯೋಗ 20000km ಗಿಂತ ಕಡಿಮೆ ಇದ್ದರೆ, ಮತ್ತು 4-5 ವರ್ಷ ಸಮಯದಲ್ಲಿ ಹೊಸ ಮಾಡೆಲ್ ಕೊಳ್ಳುವ ಹಾಗಿದ್ದರೆ ಪೆಟ್ರೋಲ್ ಮಾಡೆಲ್ ನಿಮಗೆ ಸರಿಹೊಂದಬಹುದಾದ ಆಯ್ಕೆ ಆಗಿರಬಹುದು ಹಣದ ವಿಚಾರದಲ್ಲಿ. ಪೆಟ್ರೋಲ್ ಹಾಗು ಡೀಸೆಲ್ ನ ಬೆಲೆಯಲ್ಲಿನ ವೆತ್ಯಾಸ ಸುಮಾರು ರೂ 8-10. ಈ ಅಂತರ ಐದು ವರ್ಷಗಳ ನಂತರವೂ ಹಾಗೆ ಇರುತ್ತದೆ ಎಂದು ಭಾವಿಸಿದರೆ, ನಿಮಗೆ ಡೀಸೆಲ್ ನೆಕ್ಸಾನ್ ಕೊಳ್ಳಲು ಮಾಡುವ ಹೆಚ್ಚು ಖರ್ಚು ನ ಹಣವನ್ನು ಶೇಖರಿಸಲು 3.5-4 ವರ್ಷಗಳು ಬೇಕಾಗಬಹುದು.

ಟಾಟಾ ನೆಕ್ಸಾನ್ ಪೆಟ್ರೋಲ್

Variants

Prices (ex-showroom, Delhi)

XE

Rs. 5.99 lakh

XM

Rs. 6.72 lakh

XT

Rs. 7.32 lakh

XZ

Rs. 7.99 lakh

XZ+

Rs. 8.57 lakh

XZ+ (dual-tone)

Rs. 8.77 lakh

ಟಾಟಾ ನೆಕ್ಸಾನ್ ಪೆಟ್ರೋಲ್ ನಲ್ಲಿ 1.2-ಲೀಟರ್ , 3- ಸಿಲಿಂಡರ್ ರೆವೊಟ್ರಾನ್ ಟರ್ಬೋಚಾರ್ಜ್ ಎಂಜಿನ್ ಇದ್ದು ಅದಕ್ಕೆ 6-ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಅಳವಡಿಸಲಾಗಿದೆ. ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಸಹ ಕೊಡಲಾಗುತ್ತದೆ . ಪೆಟ್ರೋಲ್ ಎಂಜಿನ್ ಅನ್ನು ಟಿಯಾಗೋ ಮತ್ತು ಟಿಗೋರ್ ವೇದಿಕೆ ಮೇಲೆ ನಿರ್ಮಾಣ ಮಾಡಲಾಗಿದೆ., ಆದರೆ ನೆಕ್ಸಾನ್ ನಲ್ಲಿ 110PS @ 5,000rpm ಮತ್ತು 170Nm ಗರಿಷ್ಟ ಟಾರ್ಕ್ @ 1,750-4,000 rpm ಸಿಗುತ್ತದೆ. ಇದರಲ್ಲಿ ವಿವಿಧ ಡ್ರೈವ್ ಮೋಡ್ ಗಳು ಸಹ ಇವೆ ಸಿಟಿ, ಏಕೋ, ಮತ್ತು ಸ್ಪೋರ್ಟ್, ಮತ್ತು ಇವು ಎಂಜಿನ್ ನ ತ್ರೋಟಲ್ ಅನ್ನು ಡ್ರೈವಿಂಗ್ ಅವಶ್ಯಕತೆಗಳಿಗೆ ತಕ್ಕಂತೆ ಸಂಯೋಜಿಸುತ್ತದೆ. ಉದಾಹರಣೆಗೆ ಏಕೋ ಮೋಡ್ ನಲ್ಲಿ ಮೈಲೇಜ್ ವಿಷಯಗಳಿಗೆ ಹೆಚ್ಚು ಪ್ರಯೋಜನವಾಗುತ್ತದೆ, ಹಾಗಾಗಿ ಪವರ್ ನಲ್ಲಿ ಗಮನಿಸಬಹುದಾದ ಬದಲಾವಣೆ ಕಾಣಿಸಿಕೊಳ್ಳುತ್ತದೆ. ಸ್ಪೋರ್ಟ್ಸ್ ಮೋಡ್ ನಲ್ಲಿ ತ್ರೋಟಲ್ ಎಳೆಯುವಿಕೆ ಹೆಚ್ಚು ಪವರ್ ಕೊಡುತ್ತದೆ.

Related: Tata Nexon AMT First Drive Review

ಮೇಲೆ ಹೇಳಿರುವ 3- ಸಿಲಿಂಡರ್ ನ ಎಂಜಿನ್ ನಲ್ಲಿ ಚಿರಪರಿಚಿತವಾದ ಝಳಪಿಸುವ ಶಬ್ದ ಇದೆ. ಒಂದು ಸಿಲಿಂಡರ್ ಇಲ್ಲದಿರುವುದರಿಂದ ಉಂಟಾಗುವ ಅಸಮತೋಲನ ಸಾಮಾನ್ಯವಾಗಿದೆ ಈ ಕಾರ್ ಸ್ಟಾರ್ಟ್ ಮಾಡಿದಾಗ ಎಂಜಿನ್ ನ ಕಂಪನಗಳು ಬಾನೆಟ್ ಒಳಗೆ ಮತ್ತು ಕ್ಯಾಬಿನ್ ನಲ್ಲಿ ಸಹ ಅನುಭವವಾಗುತ್ತದೆ. ಆದರೆ ಎಂಜಿನ್ ನ rpm ಸಮಕ್ಕೆ ಬಂದಾಗ ಆ ಶಬ್ದ ಕಡಿಮೆ ಆಗುತ್ತದೆ. ನೆಕ್ಸಾನ್ ಪೆಟ್ರೋಲ್ ನಲ್ಲಿ ಕ್ಯಾಬಿನ್ ನಲ್ಲಿ ಬಹಳಷ್ಟು ನಿಶಬ್ದ ಇದೆ ಮತ್ತು ಒಪ್ಪುವಂತಹ NVH ಮಟ್ಟ ಕೂಡ ಇದೆ.

ನೆಕ್ಸಾನ್ ಪೆಟ್ರೋಲ್ ನಲ್ಲಿ ಒಂದು ಚೆನ್ನಾಗಿರುವ ಎಂಜಿನ್ ಇದೆ. ಅದು ಪವರ್ ಅನ್ನು ನೇರವಾದ ಶೈಲಿಯಲ್ಲಿ ಕೊಡುತ್ತದೆ. ನಿಂತಲ್ಲಿನಿಂದ ಬಾರವಾದ ನೆಕ್ಸಾನ್ ಹೆಚ್ಚು ವೇಗಗತಿ ಪಡೆಯಲು ಸ್ವಲ್ಪ ತಡವರಿಸುತ್ತದೆ. ಹಾಗಾಗಿ ಸಿಟಿ ಟ್ರಾಫಿಕ್ ನ ಬಂಪರ್ ನಿಂದ ಬಂಪರ್ ವರೆಗೂ ಇರುವ ಟ್ರಾಫಿಕ್ ನಲ್ಲಿ ಡ್ರೈವ್ ಮಾಡಲು ಸ್ವಲ್ಪ ಚಾಕಚಕ್ಯತೆ ಪ್ರದರ್ಶಿಸಬೇಕಾಗುತ್ತದೆ. ಆದರೆ ಎಂಜಿನ್ ಒಮ್ಮೆ 2,000rpm ದಾಟಿದರೆ ನೈಜಸ್ಥಿತಿಗೆ ಬರುತ್ತದೆ. ಇದರಲ್ಲಿ ಟರ್ಬೊ "ಕಿಕ್" ಇಲ್ಲ ಆದರೆ ಪ್ರತಿಬಾರಿ ತ್ರೋಟಲ್ ಒತ್ತಿದಾಗ ನಿಮಗೆ ನಿಮ್ಮ ಉತ್ಸಾಹಕ್ಕೆ ಒಪ್ಪುವಂತಹ ಪವರ್ ಹೊರಹೊಮ್ಮುತ್ತದೆ. ಸಿಟಿಯಲ್ಲಿನ ಡ್ರೈವ್ ಅಷ್ಟೇನು ಉಪ್ಪುವಂತಿಲ್ಲದಿದ್ದರೂ ಮತ್ತು ಆಗಾಗ ಗೇರ್ ಶಿಫ್ಟ್ ಮಾಡುವಂತಿದ್ದರೂ, ನೆಕ್ಸಾನ್ ಹೈವೇ ಗಳಲ್ಲಿ ಹೆಚ್ಚು ಶಕ್ತಿಯುತವಾಗಿಯೂ ಮತ್ತು ಅದರ ನಿಜ ಗುಣಗಳಿಂದಲೂ ಕಾರ್ಯ ನಿರ್ವಹಿಸುತ್ತದೆ.

ಇವೆರೆಡರಲ್ಲಿ ನೆಕ್ಸಾನ್ ಹೆಚ್ಚು ವೇಗವಾಗಿದೆ, ಇದು 0-100kmph ಅನ್ನು 11.64 ಸೆಕೆಂಡ್ ಗಳಲ್ಲಿ ಪಡೆಯಿತು ನಮ್ಮ ಟೆಸ್ಟ್ ಗಳಲ್ಲಿ. ARAI ಪ್ರಕಾರ, ಟಾಟಾ ನೆಕ್ಸಾನ್ ಪೆಟ್ರೋಲ್ ನಲ್ಲಿ ನಮಗೆ 17.88kmpl ಹೈವೇ ಯಲ್ಲಿ ಸಿಗುತ್ತದೆ ಹಾಗು 14.02kmpl ಸಿಟಿಯಲ್ಲಿ ಸಿಗುತ್ತದೆ.

ಪರ

  • ಮೆಚ್ಚುವಂತಹ NVH ನ ನಿರೋಧನ ಮಟ್ಟ ಕ್ಯಾಬಿನ್ ಒಳಗೆ
  • ಹೈವೇ ಗಳಲ್ಲಿ ಡ್ರೈವ್ ಮಾಡುವುದು ಮನೋರಂಜಕವಾಗಿರುತ್ತದೆ
  • ಸ್ಥಿರವಾದ ರೋಡ್ ನಲ್ಲಿನ ನಡವಳಿಕೆ

ವಿರೋಧ

  • ನಗರಗಳಲ್ಲಿ ಡ್ರೈವ್ ಮಾಡಲು ಅಷ್ಟೇನು ಅನುಕೂಲವಾಗಿಲ್ಲ
  • 3-ಸಿಲಿಂಡರ್ ಎಂಜಿನ್ 4-ಸಿಲಿಂಡರ್ ಎಂಜಿನ್ ಗಳ ಪರಿಷ್ಕರಣಕ್ಕೆ ಹೊಂದುವಷ್ಟು ಇಲ್ಲ.

Related: Tata Nexon Variants Explained

Tata Nexon Diesel

Variants

Prices (ex-showroom, Delhi)

XE

Rs. 6.99 lakh

XM

Rs. 7.62 lakh

XT

Rs. 8.17 lakh

XZ

Rs. 8.99 lakh

XZ+

Rs. 9.42 lakh

XZ+ (dual-tone)

Rs. 9.62 lakh

ಡೀಸೆಲ್ ಮಾಡೆಲ್ 1.5-ಲೀಟರ್ ನಾಲ್ಕು ಸಿಲಿಂಡರ್ ರೆವೊಟಾರ್ಕ್ ಟರ್ಬೊಚಾರ್ಜ್ಡ್ ಎಂಜಿನ್ ನಿಂದ ಪವರ್ ಪಡೆಯುತ್ತದೆ ಮತ್ತು ಎಂಜಿನ್ ಗೆ 6-ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಅಳವಡಿಸಲಾಗಿದೆ. ಈ ಎಂಜಿನ್ 110PS @ 3,750rpm ಪವರ್ ಹಾಗು 260Nm @ 1,500-2,750rpm ಟಾರ್ಕ್ ಕೊಡುತ್ತದೆ. ಈ ಸಂಖ್ಯೆಗಳು ವಿಭಾಗದಲ್ಲಿ ಅತ್ಯುತ್ತಮವಾಗಿದೆ. ನೆಕ್ಸಾನ್ 1,305kg ಇದ್ದು ಇದು ಪ್ರತಿಸ್ಪರ್ದಿಗಳಲ್ಲಿ ಹೆಚ್ಚು ಬಾರವಾದ ಕಾರ್ ಆಗಿದೆ. ಹಾಗಾಗಿ ಇದರಲ್ಲಿ ಹೆಚ್ಚಿನ ಶಕ್ತಿ ಹಾಗು ಬಾರದ ಹೊಂದಾಣಿಕೆಯ ಅನುಕೂಲತೆ ಇಲ್ಲ, ಮಾರ್ಕೆಟ್ ನಲ್ಲಿರುವ ಇತರ SUV ಗಳಿಗೆ ಹೋಲಿಸಿದರೆ. ಟಾಟಾ ನೆಕ್ಸಾನ್ ನ ARAI ಆಧಾರಿತ ಮೈಲೇಜ್ ಸಂಖ್ಯೆ 21.5kmpl ಆಗಿದೆ. ಪೆಟ್ರೋಲ್ ನದರಂತೆ

ನೆಕ್ಸಾನ್ ಡೀಸೆಲ್ ನಲ್ಲಿ ಸಹ ಮಲ್ಟಿ ಡ್ರೈವ್ ಮೋಡ್ ಇದೆ - ಸಿಟಿ, ಏಕೋ, ಮತ್ತು ಸ್ಪೋರ್ಟ್ .

ನೆಕ್ಸಾನ್ ಡೀಸೆಲ್ ನಲ್ಲಿ ಹೆಚ್ಚು ಶಬ್ದ ಮಾಡುವ ಎಂಜಿನ್ ಇದೆ. ಅದರಲ್ಲೂ ನೀವು ಕಾರ್ ನ ಹೊರಗಡೆಯಿಂದ ಗಮನಿಸಿದಾಗ ತಿಳಿಯುತ್ತದೆ. ಕ್ಯಾಬಿನ್ ಒಳಗೆ ಕುಳಿತಾಗಲೂ ಸಹ ಗಮನಿಸಬಹುದಾದ ಕಂಪನಗಳು ಇರುತ್ತವೆ. ಆದರೆ ಇವೆಲ್ಲವೂ ಕಾರ್ ಮುಂದೆ ಹೋಗುತ್ತಿದ್ದಂತೆ ಕಡಿಮೆಯಾಗುತ್ತ ಹೋಗುತ್ತದೆ. ಹಾಗು ನೆಕ್ಸಾನ್ ಡೀಸೆಲ್ ನಲ್ಲಿರುವ ಕಂಪನಗಳು ಪೆಟ್ರೋಲ್ ವೇರಿಯೆಂಟ್ ಗಳಿಗಿಂತ ಕಡಿಮೆ ಇದೆ, ಅದರಲ್ಲೂ ಕಾರ್ ಮುಂದೆ ಹೋಗುತ್ತಿರುವಾಗ. ನೀವು ಹೆಚ್ಚು ಗಟ್ಟಿಯಾಗಿ ಆಕ್ಸಿಲರೇಟರ್ ಪೆಡಲ್ ಒತ್ತಿದಾಗ ಕ್ಯಾಬಿನ್ ನಲ್ಲಿ ಬರುವ ಇದರ ಶಬ್ದ ಸಹ ಹೆಚ್ಚುತ್ತದೆ.

ನೆಕ್ಸಾನ್ ನಲ್ಲಿ 1.5-ಲೀಟರ್ ಡೀಸೆಲ್ ಎಂಜಿನ್ ಇರುವುದರಿಂದ ಮತ್ತು ನೇರವಾಗಿ ಪವರ್ ಹೊರಹೊಮ್ಮುವುವೂರಿನ ಡ್ರೈವಬಿಲಿಟಿ ಅಷ್ಟೇನು ಕಷ್ಟಕರವಾಗಿರುವುದಿಲ್ಲ. ಗೇರ್ ಅನುಪಾತ ಸಹ ಸರಿಯಾಗಿದ್ದು ಸಿಟಿ ಡ್ರೈವ್ ಗಳಲ್ಲಿ ಹೆಚ್ಚಾಗಿ ಗೇರ್ ಬದಲಾವಣೆಯ ಅವಶ್ಯಕತೆಯನ್ನು ಕಡಿಮೆಗೊಳಿಸುತ್ತದೆ. ಇವೆಲ್ಲವೂ ಸಹ ನೆಕ್ಸಾನ್ ಡೀಸೆಲ್ ಅನ್ನು ಉತ್ತಮ ಸಿಟಿ ಕಾರ್ ಆಗಿ ಮಾಡುತ್ತದೆ. ಇದರಲ್ಲಿ ಬಹಳಷ್ಟು ಟರ್ಬೊಲ್ಯಾಗ್ ಇದೆ ಕೆಳ ಹಂತದ rpm ಗಳಲ್ಲಿ., ಮತ್ತು ಇದರಿಂದಾಗಿ ಹೆಚ್ಚು ಶಬ್ದ ಹಾಗು ಕಂಪನಗಳು ಹೊಮ್ಮುವಂತಾಗಬಹುದು ನೀವು 2,000rpm ಗಿಂತಲೂ ಕಡಿಮೆ ಯಲ್ಲಿ ವೇಗಹೆಚ್ಚಿಸಿದಾಗ. ಆದರೂ ಒಮ್ಮೆ ಎಂಜಿನ್ ನ ವೇಗ ಈ ವ್ಯಾಪ್ತಿ ದಾಟಿದಾಗ, ನೆಕ್ಸಾನ್ ಹೆಚ್ಚು ಪರಿಶ್ರಮವಿಲ್ಲದೆ ಚಲಿಸುತ್ತದೆ. ಇದರಲ್ಲಿರುವ 6ನೇ ಗೇರ್ ನಿಮಗೆ ಹೈವೇ ಗಳಲ್ಲಿ ಕಡಿಮೆ rpm ನಲ್ಲಿ ಹೆಚ್ಚು ವೇಗಗತಿ ಪಡೆಯಲು ಸಹಕರಿಸುತ್ತದೆ, ಇದು ಹೆಚ್ಚು ಮೈಲೇಜ್ ಪಡೆಯುವುದಲ್ಲದೆ ಇಂಜಿನ್ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಮೈಲೇಜ್ ಟೆಸ್ಟ್ ನಲ್ಲಿ, ನೆಕ್ಸಾನ್ ಡೀಸೆಲ್ ಹೈವೇ ಗಳಲ್ಲಿ 23.97kmpl ಕೊಟ್ಟಿತು, ಆದರೆ ನಗರಗಳಲ್ಲಿ ಇದು 16.8kmpl ಗೆ ಕಡಿಮೆಯಾಗುತ್ತದೆ ಕಡಿಮೆ ಮಟ್ಟದ ಗೇರ್ ಬಳಸುವುದರಿಂದ.

ಪರ

  • ನಗರಗಳಲ್ಲಿ ಡ್ರೈವ್ ಮಾಡಲು ಸಹಕಾರಿಯಾಗಿದೆ
  • ಸ್ಥಿರವಾದ ಹೈವೇ ನಡವಳಿಕೆ
  • ಸರಳವಾದ ಕ್ಲಚ್ ಮತ್ತು ಸ್ಟಿಯರಿಂಗ್

ವಿರೋಧ

  • ಎಂಜಿನ್ ಹೆಚ್ಚು rpm ಗಳಲ್ಲಿ ಹೆಚ್ಚು ಶಬ್ದ ಹೊರಸೂಸುತ್ತದೆ
  • ಕಡಿಮೆ rpm ಗಳಲ್ಲಿ ಟರ್ಬ ಲ್ಯಾಗ್ ಇದೆ.

ಅಂತಿಮ ಅನಿಸಿಕೆ

ಟಾಟಾ ನೆಕ್ಸಾನ್ ನ ಪಟ್ರೋಲ್ ಹಾಗುಡೀಸೆಲ್ ಎಂಜಿನ್ ಎರೆಡೂ ನಿರ್ದಿಷ್ಟವಾದ ಉದ್ವೇಗದೊಂದಿಗೆ ಬರುತ್ತದೆ. ಆದರೆ 1.5-ಲೀಟರ್ ಡೀಸೆಲ್ ನಲ್ಲಿ ಚೆನ್ನಾಗಿದೆ, ಇದರಲ್ಲಿ ಡ್ರೈವಿಂಗ್ ಸರಳವಾಗಿದ್ದು ಸಿಟಿ ಹಾಗು ಹೈವೇ ಗಳಲ್ಲಿನ ಸ್ಥಿರವಾದ ನಡವಳಿಕೆ ಅನುಕೂಲಕರವಾಗಿದೆ. ಮೈಲೇಜ್ ಸಂಖ್ಯೆಗಳೂ ಸಹ ಆಕರ್ಷಕವಾಗಿದೆ.

ಇದರಲ್ಲಿರುವ 1.2-ಲೀಟರ್ ಪೆಟ್ರೋಲ್ ಸಹ ಅಷ್ಟೇನು ಹಿದುಳಿದಿಲ್ಲ, ಇದು ಡ್ರೈವ್ ಮಾಡಲು ಹೆಚ್ಚು ಸಮಂಜಸವಾಗಿ ಹಾಗು ಇದರಲ್ಲಿ ಕಡಿಮೆ NVH ಮಟ್ಟ ಇದೆ, ಐಡಲಿಂಗ್ ನಾಲ್ಲುವು ಸಹ. ಆದರೆ, ನಗರಗಳಲ್ಲಿ ಡ್ರೈವ್ ಮಾಡಲು ಸ್ವಲ್ಪ ಚಚಕ್ಯತೆ ಪ್ರಯೋಗಿಸಬೇಕಾಗುತ್ತದೆ, ಇಂಜಿನ್ ಕಡಿಮೆ ಸಮಯದಲ್ಲಿ ಹೆಚ್ಚು ವೇಗ ಪಡೆಯದಿರುವುದು ಇದಕ್ಕೆ ಕಾರಣವಾಗಿದೆ, ಮತ್ತು ಕಡಿಮೆ ವೇಗಗಳಲ್ಲಿ ಹೆಚ್ಚಾಗಿ ಗೇರ್ ಬದಲಾವಣೆ ಮಾಡಬೇಕಾಗುತ್ತದೆ.

ಟಾಟಾ ನೆಕ್ಸಾನ್ ಪೆಟ್ರೋಲ್ ಏಕೆ ಕೊಳ್ಳಬೇಕು

  • ಹೈವೇ ಗಳಲ್ಲಿ ಡ್ರೈವ್ ಮಾಡಲು ಚೆನ್ನಾಗಿದೆ
  • ಐಡಲಿಂಗ್ ನಲ್ಲಿ ಉತ್ತಮ ಬದಲಾವಣೆಗಳಿವೆ
  • ಇದು ಡೀಸೆಲ್ ನದಕ್ಕಿಂತ ಸುಮಾರು 1 ಲಕ್ಷ ಕಡಿಮೆ ಬೆಲೆ ಹೊಂದಿದೆ ( ವೇರಿಯೆಂಟ್ ನಿಂದ ವೇರಿಯೆಂಟ್ ಗಳ ಹೋಲಿಕೆ )

ಟಾಟಾ ನೆಕ್ಸಾನ್ ಡೀಸೆಲ್ ಏಕೆ ಕೊಳ್ಳಬೇಕು?

  • ಸಿಟಿ ಯಲ್ಲಿ ಡ್ರೈವ್ ಮಾಡುವುದು ಸುಲಭ
  • ಸರಳವಾದ ಕ್ಲಚ್, ಗೇರ್ ಹಾಗು ಸ್ಟಿಯರಿಂಗ್ ಕಂಟ್ರೋಲ್
  • ಕಡಿಮೆ ಕಂಪನಗಳು ಡ್ರೈವ್ ಮಾಡುವಾಗ
  • ಉತ್ತಮ ARAI ಆಧಾರಿತ ಮೈಲೇಜ್

ಓದಿ

Read More on : Nexon on road price

c
ಅವರಿಂದ ಪ್ರಕಟಿಸಲಾಗಿದೆ

cardekho

  • 24 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಟಾಟಾ ನೆಕ್ಸ್ಂನ್‌ 2017-2020

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ