2024ರ ಜೂನ್‌ನಲ್ಲಿ Hyundai Exterಗಿಂತ ಹೆಚ್ಚು ಸುಲಭವಾಗಿ ಲಭ್ಯವಿರುವ Tata Punch
ಹುಂಡೈ ಎಕ್ಸ್‌ಟರ್ ಗಾಗಿ yashika ಮೂಲಕ ಜೂನ್ 21, 2024 01:44 pm ರಂದು ಪ್ರಕಟಿಸಲಾಗಿದೆ
- 93 Views
- ಕಾಮೆಂಟ್ ಅನ್ನು ಬರೆಯಿರಿ
ಹೆಚ್ಚಿನ ಭಾರತೀಯ ನಗರಗಳಲ್ಲಿ ಹ್ಯುಂಡೈ ಎಕ್ಸ್‌ಟರ್ ಡೆಲಿವೆರಿಗಾಗಿ 4 ತಿಂಗಳವರೆಗೆ ಕಾಯಬೇಕು
ಕೈಗೆಟುಕುವ ಮತ್ತು ಎಂಟ್ರಿ ಲೆವೆಲ್‌ನ ಎಸ್‌ಯುವಿಯನ್ನು ಖರೀದಿಸಲು ನೀವು ಆಲೋಚಿಸುತ್ತಿದ್ದರೆ, ನಿಮಗೆ ಸೂಕ್ತವಾದ ಆಯ್ಕೆಗಳು ಸಿಗುವುದು ಹೊಸದಾಗಿ ಹೊರಹೊಮ್ಮಿದ ಮೈಕ್ರೋ ಎಸ್‌ಯುವಿ ಸೆಗ್ಮೆಂಟ್‌ನಿಂದ ಮಾತ್ರ. ಸದ್ಯಕ್ಕೆ ಹ್ಯುಂಡೈ ಎಕ್ಸ್‌ಟರ್ ಮತ್ತು ಟಾಟಾ ಪಂಚ್ ಎಂಬ ಎರಡು ಮೊಡೆಲ್‌ಗಳನ್ನು ಒಳಗೊಂಡಿರುವ ಈ ಸೆಗ್ಮೆಂಟ್‌ನಲ್ಲಿ, ಎರಡರ ನಡುವೆ ಯಾವುದನ್ನು ಬೇಗ ಮನೆಗೆ ತೆಗೆದುಕೊಂಡು ಹೋಗಬಹುದು ಎಂಬುದನ್ನು ಪರಿಶೀಲಿಸಲು ನಾವು ನಿಮಗೆ ಸಹಕರಿಸಲಿದ್ದೇವೆ. ಈ ಸುದ್ದಿಯಲ್ಲಿ, 2024ರ ಜೂನ್‌ನಲ್ಲಿ ಭಾರತದ ಟಾಪ್ 20 ನಗರಗಳಲ್ಲಿ ಈ ಎರಡೂ ಮೊಡೆಲ್‌ಗಳಿಗೆ ಇರುವ ವೈಟಿಂಗ್ ಪಿರೇಡ್‌ಅನ್ನು ನಾವು ವಿವರಿಸಿದ್ದೇವೆ.
ನಗರ |
ಹ್ಯುಂಡೈ ಎಕ್ಸ್‌ಟರ್ |
ಟಾಟಾ ಪಂಚ್ |
ನವದೆಹಲಿ |
4 ತಿಂಗಳುಗಳು |
2 ತಿಂಗಳುಗಳು |
ಬೆಂಗಳೂರು |
2-4 ತಿಂಗಳುಗಳು |
2 ತಿಂಗಳುಗಳು |
ಮುಂಬೈ |
3 ತಿಂಗಳುಗಳು |
1.5-2.5 ತಿಂಗಳುಗಳು |
ಹೈದರಾಬಾದ್ |
4 ತಿಂಗಳುಗಳು |
3 ತಿಂಗಳುಗಳು |
ಪುಣೆ |
2-4 ತಿಂಗಳುಗಳು |
1-2 ತಿಂಗಳುಗಳು |
ಚೆನ್ನೈ |
2-4 ತಿಂಗಳುಗಳು |
1.5 to 2 ತಿಂಗಳುಗಳು |
ಜೈಪುರ |
4 ತಿಂಗಳುಗಳು |
2 ತಿಂಗಳುಗಳು |
ಅಹಮದಾಬಾದ್ |
2-4 ತಿಂಗಳುಗಳು |
2 ತಿಂಗಳುಗಳು |
ಗುರುಗ್ರಾಮ್ |
4 ತಿಂಗಳುಗಳು |
1-1.5 ತಿಂಗಳುಗಳು |
ಲಕ್ನೋ |
4 ತಿಂಗಳುಗಳು |
2 ತಿಂಗಳುಗಳು |
ಕೋಲ್ಕತ್ತಾ |
4 ತಿಂಗಳುಗಳು |
2 ತಿಂಗಳುಗಳು |
ಥಾಣೆ |
3 ತಿಂಗಳುಗಳು |
3 ತಿಂಗಳುಗಳು |
ಸೂರತ್ |
2-4 ತಿಂಗಳುಗಳು |
1-1.5 ತಿಂಗಳುಗಳು |
ಗಾಜಿಯಾಬಾದ್ |
4 ತಿಂಗಳುಗಳು |
1-2 ತಿಂಗಳುಗಳು |
ಚಂಡೀಗಢ |
4 ತಿಂಗಳುಗಳು |
2 ತಿಂಗಳುಗಳು |
ಕೊಯಮತ್ತೂರು |
2-4 ತಿಂಗಳುಗಳು |
2 ತಿಂಗಳುಗಳು |
ಪಾಟ್ನಾ |
3 ತಿಂಗಳುಗಳು |
2 ತಿಂಗಳುಗಳು |
ಫರಿದಾಬಾದ್ |
2-4 ತಿಂಗಳುಗಳು |
2 ತಿಂಗಳುಗಳು |
ಇಂದೋರ್ |
4 ತಿಂಗಳುಗಳು |
1.5-2.5 ತಿಂಗಳುಗಳು |
ನೋಯ್ಡಾ |
4 ತಿಂಗಳುಗಳು |
2 ತಿಂಗಳುಗಳು |
ಗಮನಿಸಿದ ಪ್ರಮುಖ ಅಂಶಗಳು
ನವದೆಹಲಿ, ಹೈದರಾಬಾದ್, ಜೈಪುರ, ಗುರುಗ್ರಾಮ್, ಲಕ್ನೋ, ಕೋಲ್ಕತ್ತಾ, ಗಾಜಿಯಾಬಾದ್, ಚಂಡೀಗಢ, ಇಂದೋರ್ ಮತ್ತು ನೋಯ್ಡಾ ಸೇರಿದಂತೆ ಹೆಚ್ಚಿನ ನಗರಗಳಲ್ಲಿ ಹ್ಯುಂಡೈ ಎಕ್ಸ್‌ಟರ್ ಸರಾಸರಿ ನಾಲ್ಕು ತಿಂಗಳ ವೈಟಿಂಗ್ ಪಿರೇಡ್‌ಅನ್ನು ಹೊಂದಿದೆ. ಬೆಂಗಳೂರು, ಪುಣೆ, ಚೆನ್ನೈ, ಮತ್ತು ಅಹಮದಾಬಾದ್ ಸೇರಿದಂತೆ ಕೆಲವು ನಗರಗಳಲ್ಲಿ ಖರೀದಿದಾರರು 2 ತಿಂಗಳ ಕಡಿಮೆ ಅವಧಿಯಲ್ಲೇ ಎಕ್ಸ್‌ಟರ್‌ಅನ್ನು ಮನೆಗೆ ಕೊಂಡೊಯ್ಯಬಹುದು.
-
ಟಾಟಾ ಪಂಚ್ ಹೈದರಾಬಾದ್ ಮತ್ತು ಥಾಣೆಯಂತಹ ನಗರಗಳಲ್ಲಿ ಗರಿಷ್ಠ ಮೂರು ತಿಂಗಳವರೆಗೆ ವೈಟಿಂಗ್ ಪಿರೇಡ್‌ಅನ್ನು ಹೊಂದಿದೆ.
ಇನ್ನಷ್ಟು ಓದಿ: ಹುಂಡೈ ಎಕ್ಸ್‌ಟರ್ ಎಎಮ್‌ಟಿ