Login or Register ಅತ್ಯುತ್ತಮ CarDekho experience ಗೆ
Login

ಬಿಡುಗಡೆಯಾದಾಗಿನಿಂದ 5 ಲಕ್ಷ ಕಾರುಗಳ ಮಾರಾಟದ ಮೈಲಿಗಲ್ಲು ದಾಟಿದ Tata Punch

ಟಾಟಾ ಪಂಚ್‌ ಗಾಗಿ yashika ಮೂಲಕ ಜನವರಿ 27, 2025 04:01 pm ರಂದು ಪ್ರಕಟಿಸಲಾಗಿದೆ

ಟಾಟಾ ಪಂಚ್ ತನ್ನ ಸುಸಜ್ಜಿತ ಪ್ಯಾಕೇಜ್ ಮತ್ತು ವೈವಿಧ್ಯಮಯ ಪವರ್‌ಟ್ರೇನ್‌ಗಳಿಂದಾಗಿ, ಎಲೆಕ್ಟ್ರಿಕ್‌ ಆಯ್ಕೆಯೂ ಸೇರಿದಂತೆ, ನಿರಂತರವಾಗಿ ಅತ್ಯಂತ ಜನಪ್ರಿಯ ಮೊಡೆಲ್‌ಗಳಲ್ಲಿ ಒಂದಾಗಿದೆ

  • ಟಾಟಾ ಪಂಚ್ ICEಯು ಪ್ಯೂರ್, ಅಡ್ವೆಂಚರ್, ಅಕಂಪ್ಲಿಶ್ಡ್ ಮತ್ತು ಕ್ರಿಯೇಟಿವ್ ಎಂಬ ನಾಲ್ಕು ವಿಶಾಲ ವೇರಿಯೆಂಟ್‌ಗಳನ್ನು ಹೊಂದಿದೆ.

  • EV ಆಗಿಯೂ ಲಭ್ಯವಿದ್ದು, ಇದರಲ್ಲಿ ಸ್ಮಾರ್ಟ್, ಸ್ಮಾರ್ಟ್ ಪ್ಲಸ್, ಅಡ್ವೆಂಚರ್, ಎಂಪವರ್ಡ್ ಮತ್ತು ಎಂಪವರ್ಡ್ ಪ್ಲಸ್ ಎಂಬ ಐದು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.

  • ಇದರ 4 ಲಕ್ಷ ಉತ್ಪಾದನಾ ಮೈಲಿಗಲ್ಲನ್ನು ಕೇವಲ 5 ತಿಂಗಳ ಹಿಂದೆ ಸಾಧಿಸಲಾಯಿತು.

  • ಇದರ ICE ಆವೃತ್ತಿಯು 1.2-ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು, 5-ಸ್ಪೀಡ್ ಮ್ಯಾನ್ಯುವಲ್‌ ಅಥವಾ ಎಎಮ್‌ಟಿಗೆ ಜೋಡಿಸಲಾಗಿದೆ.

  • ಪಂಚ್ ಇವಿಯು 25ಕಿ.ವ್ಯಾಟ್‌ ಮತ್ತು 35 ಕಿ.ವ್ಯಾಟ್‌ ಎಂಬ ಎರಡು ಬ್ಯಾಟರಿ ಪ್ಯಾಕ್‌ಗಳೊಂದಿಗೆ ಲಭ್ಯವಿದೆ. ಹಾಗು MIDC- ಕ್ಲೈಮ್ ಮಾಡಿದ 365 ಕಿ.ಮೀ.ವರೆಗಿನ ಗರಿಷ್ಠ ರೇಂಜ್‌ ಅನ್ನು ಹೊಂದಿದೆ.

  • ಪಂಚ್ ICE ಬೆಲೆಯು 6.13 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗಳವರೆಗೆ ಇದ್ದರೆ, EV ಬೆಲೆಯು 10 ಲಕ್ಷ ರೂ.ಗಳಿಂದ 14.44 ಲಕ್ಷ ರೂ.ಗಳವರೆಗೆ (ಎಕ್ಸ್ ಶೋ ರೂಂ) ಇದೆ.

2021ರ ಅಕ್ಟೋಬರ್‌ನಲ್ಲಿ ಬಿಡುಗಡೆಯಾದಾಗಿನಿಂದ ಟಾಟಾ ಪಂಚ್ ತನ್ನ 5 ಲಕ್ಷ ಕಾರು ಮಾರಾಟದ ಮೈಲಿಗಲ್ಲನ್ನು ಸಾಧಿಸಿದೆ. ಈ ವಾಹನ ತಯಾರಕ ಕಂಪನಿಯು 3 ಲಕ್ಷ ಯುನಿಟ್ ಮಾರಾಟವನ್ನು ದಾಟಿದ ಕೇವಲ ಒಂದು ವರ್ಷದ ನಂತರ ಈ ಸಾಧನೆಯನ್ನು ಮಾಡಿದೆ. ಇದು ಸಬ್-4ಎಮ್‌ ಎಸ್‌ಯುವಿಗಳಿಗೆ ಕೈಗೆಟುಕುವ ಪರ್ಯಾಯವಾಗಿ ಸ್ಥಾನ ಪಡೆದಿದ್ದು, ಪಂಚ್ ಸಂಭಾವ್ಯ ಖರೀದಿದಾರರಲ್ಲಿ ಹೆಚ್ಚಿನ ಗಮನ ಸೆಳೆದಿದೆ. ಈ ಆರಂಭಿಕ ಹಂತದ ಟಾಟಾ ಎಸ್‌ಯುವಿಯು ಏನನ್ನು ನೀಡುತ್ತದೆ ಎಂಬುದನ್ನು ತಿಳಿಯೋಣ.

ವರ್ಷ

ಮಾರಾಟ

2021ರ ಅಕ್ಟೋಬರ್

ಬಿಡುಗಡೆ

2022ರ ಆಗಸ್ಟ್‌

1 ಲಕ್ಷ

2023ರ ಮೇ

2 ಲಕ್ಷ

2023ರ ಡಿಸೆಂಬರ್‌

3 ಲಕ್ಷ

2024ರ ಜುಲೈ

4 ಲಕ್ಷ

2025ರ ಜನವರಿ

5 ಲಕ್ಷ

ಟಾಟಾ ಪಂಚ್ 10 ತಿಂಗಳಲ್ಲಿ ಮೊದಲ 1 ಲಕ್ಷ ಮಾರಾಟದ ಮೈಲಿಗಲ್ಲನ್ನು ತಲುಪಿತು ಮತ್ತು ಅದರ ನಂತರ ಸರಿಸುಮಾರು 9 ತಿಂಗಳಲ್ಲಿ ಮುಂದಿನ 1 ಲಕ್ಷ ಕಾರುಗಳನ್ನು ಮಾರಾಟ ಮಾಡಿತ್ತು. 2023ರ ಮೇ ನಂತರ ಮಾರಾಟದ ವೇಗ ಗಮನಾರ್ಹವಾಗಿ ಹೆಚ್ಚಾಯಿತು, ಪಂಚ್ ಮುಂದಿನ ಕೇವಲ 7 ತಿಂಗಳಲ್ಲಿ ಇನ್ನೂ 1 ಲಕ್ಷ ಕಾರುಗಳ ಮಾರಾಟವನ್ನು ಕಂಡಿತು ಮತ್ತು 2023ರ ಡಿಸೆಂಬರ್ ವೇಳೆಗೆ ಇದರ ಒಟ್ಟು ಮಾರಾಟ 3 ಲಕ್ಷ ಕಾರುಗಳನ್ನು ತಲುಪಿತು. 7 ತಿಂಗಳಲ್ಲಿ, ಇದು ಒಟ್ಟು 4 ಲಕ್ಷ ಕಾರುಗಳ ಮಾರಾಟವನ್ನು ದಾಟಿತು. 4 ಲಕ್ಷ ಕಾರುಗಳ ಮಾರಾಟವಾದ ನಂತರ ಕೇವಲ 5 ತಿಂಗಳಲ್ಲಿ ತೀರಾ ಇತ್ತೀಚಿನ 5 ಲಕ್ಷ ಮಾರಾಟವನ್ನು ಸಾಧಿಸಲಾಗಿದೆ.

ಲಭ್ಯವಿರುವ ಪವರ್‌ಟ್ರೇನ್/ಬ್ಯಾಟರಿ ಆಯ್ಕೆಗಳು

ಟಾಟಾ ಪಂಚ್ ICE (ಇಂಧನ ಚಾಲಿತ ಎಂಜಿನ್) ಪೆಟ್ರೋಲ್ ಮತ್ತು ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಸಜ್ಜುಗೊಂಡಿದೆ. ವಿಶೇಷಣಗಳು ಇಲ್ಲಿವೆ:

ಎಂಜಿನ್‌

1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್

1.2-ಲೀಟರ್ ಪೆಟ್ರೋಲ್-ಸಿಎನ್‌ಜಿ

ಪವರ್‌

88 ಪಿಎಸ್‌

73.5 ಪಿಎಸ್‌

ಟಾರ್ಕ್‌

115 ಎನ್‌ಎಮ್‌

103 ಎನ್‌ಎಮ್‌

ಗೇರ್‌ಬಾಕ್ಸ್‌

5-ಸ್ಪೀಡ್ ಮ್ಯಾನ್ಯುವಲ್‌, 5-ಸ್ಪೀಡ್ ಎಎಮ್‌ಟಿ*

5-ಸ್ಪೀಡ್ ಎಎಮ್‌ಟಿ*

*ಆಟೋಮೆಟೆಡ್‌ ಮ್ಯಾನ್ಯುವಲ್‌ ಟ್ರಾನ್ಸ್‌ಮಿಷನ್‌

ಪಂಚ್ ಇವಿ ಯಲ್ಲಿ ಲಭ್ಯವಿರುವ ಬ್ಯಾಟರಿ ಪ್ಯಾಕ್‌ಗಳು ಮತ್ತು ಮೋಟಾರ್ ವಿಶೇಷಣಗಳು ಈ ಕೆಳಗಿನಂತಿವೆ:

ವೇರಿಯಂಟ್‌

ಮಿಡಿಯಮ್‌ ರೇಂಜ್‌

ಲಾಂಗ್‌ ರೇಂಜ್‌

ಬ್ಯಾಟರಿ ಪ್ಯಾಕ್‌

25 ಕಿ.ವ್ಯಾಟ್‌

35 ಕಿ.ವ್ಯಾಟ್‌

ಪವರ್‌

82 ಪಿಎಸ್‌

122 ಪಿಎಸ್‌

ಟಾರ್ಕ್‌

114 ಎನ್‌ಎಮ್‌

190 ಎನ್‌ಎಮ್‌

ಕ್ಲೈಮ್‌ ಮಾಡಲಾದ ರೇಂಜ್‌(MIDC P1 + P2)

265 ಕಿ.ಮೀ.

365 ಕಿ.ಮೀ.

ಆಫರ್‌ನಲ್ಲಿರುವ ಫೀಚರ್‌ಗಳು

ಪಂಚ್ ICE ಫೀಚರ್‌ಗಳಲ್ಲಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ 10.25-ಇಂಚಿನ ಟಚ್‌ಸ್ಕ್ರೀನ್, ಸೆಮಿ-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಟೋಮೆಟಿಕ್‌ ಎಸಿ, ಸಿಂಗಲ್-ಪೇನ್ ಸನ್‌ರೂಫ್ ಮತ್ತು ಕೂಲ್ಡ್ ಗ್ಲೋವ್ ಬಾಕ್ಸ್ ಸೇರಿವೆ. ಪಂಚ್‌ನಲ್ಲಿರುವ ಸುರಕ್ಷತಾ ಫೀಚರ್‌ಗಳಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್‌ಗಳು (TPMS) ಮತ್ತು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಸೇರಿವೆ.

ಪಂಚ್ ICE ಗಿಂತ ಪಂಚ್ ಇವಿಯು ಹಲವಾರು ಪ್ರೀಮಿಯಂ ಫೀಚರ್‌ಗಳನ್ನು ಹೊಂದಿದೆ. ಇವುಗಳಲ್ಲಿ 10.25-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಮುಂಭಾಗದ ಸೀಟುಗಳಲ್ಲಿ ವೆಂಟಿಲೇಶನ್‌ ಮತ್ತು ಏರ್ ಪ್ಯೂರಿಫೈಯರ್ ಸೇರಿವೆ. ಪ್ರಯಾಣಿಕರ ಸುರಕ್ಷತೆಯನ್ನು 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಬ್ಲೈಂಡ್ ವ್ಯೂ ಮಾನಿಟರಿಂಗ್‌ನೊಂದಿಗೆ 360-ಡಿಗ್ರಿ ಕ್ಯಾಮೆರಾ ನೋಡಿಕೊಳ್ಳುತ್ತದೆ.

ಬೆಲೆಗಳು ಮತ್ತು ಪ್ರತಿಸ್ಪರ್ಧಿಗಳು

ಪಂಚ್ ಬೆಲೆ 6 ಲಕ್ಷ ರೂ.ಗಳಿಂದ 10.32 ಲಕ್ಷ ರೂ.ಗಳವರೆಗೆ ಇದೆ. ಪಂಚ್ ಇವಿ ಬೆಲೆ 10 ಲಕ್ಷ ರೂ.ಗಳಿಂದ 14.44 ಲಕ್ಷ ರೂ.ಗಳವರೆಗೆ ಇದೆ (ಎಲ್ಲಾ ಬೆಲೆಗಳು ಎಕ್ಸ್-ಶೋರೂಂ, ನವದೆಹಲಿ)

ಪಂಚ್ ಮಾರುಕಟ್ಟೆಯಲ್ಲಿ ಹುಂಡೈ ಎಕ್ಸ್‌ಟರ್ ಮತ್ತು ಸಿಟ್ರೊಯೆನ್ ಸಿ3ಗಳಿಗೆ ಪ್ರತಿಸ್ಪರ್ಧಿಯಾಗಿದೆ. ಇದರ ಬೆಲೆಯನ್ನು ಪರಿಗಣಿಸಿ, ಇದು ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಟೈಸರ್‌ನ ಕೆಲವು ವೇರಿಯೆಂಟ್‌ಗಳೊಂದಿಗೆ ಸ್ಪರ್ಧಿಸುತ್ತದೆ. ಹಾಗೆಯೇ, ಪಂಚ್ ಇವಿ ಸಿಟ್ರೊಯೆನ್ ಇಸಿ3 ನೊಂದಿಗೆ ಸ್ಪರ್ಧಿಸುತ್ತದೆ, ಮತ್ತು ಟಾಟಾ ಟಿಯಾಗೊ ಇವಿ ಮತ್ತು ಟಾಟಾ ಟಿಗೋರ್ ಇವಿಗಳಿಗೆ ಪ್ರೀಮಿಯಂ ಪರ್ಯಾಯವಾಗಿದೆ.

Share via

Write your Comment on Tata ಪಂಚ್‌

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.15.50 - 27.25 ಲಕ್ಷ*
ಹೊಸ ವೇರಿಯೆಂಟ್
Rs.15 - 26.50 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.6.20 - 10.51 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ