Tata Punch EV ಡ್ರೈವ್ ಅನುಭವ: ಇದರ ಒಳಿತು-ಕೆಡುಕುಗಳು ಇಲ್ಲಿವೆ
ಟಾಟಾ ಪಂಚ್ ಇವಿ ಗಾಗಿ ansh ಮೂಲಕ ಜೂನ್ 03, 2024 02:41 pm ರಂದು ಪ್ರಕಟಿಸಲಾಗಿದೆ
- 20 Views
- ಕಾಮೆಂಟ್ ಅನ್ನು ಬರೆಯಿರಿ
ಪಂಚ್‌ನ ಎಲೆಕ್ಟ್ರಿಕ್ ವರ್ಷನ್ ಫೀಚರ್ ಗಳಿಂದ ತುಂಬಿದೆ, ಡ್ರೈವ್ ಮಾಡಲು ಸೂಪರ್ ಆಗಿದೆ, ಮತ್ತು ನಿಮಗೆ ಸಾಕಷ್ಟು ರೇಂಜ್ ಅನ್ನು ಕೂಡ ನೀಡುತ್ತದೆ, ಆದರೆ ಅದರ ಬೆಲೆ ಸ್ವಲ್ಪ ಹೆಚ್ಚಾಗಿದೆ ಎಂದು ನಮಗೆ ಅನಿಸುತ್ತದೆ
ಹೊಸ Acti.ev ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ ಟಾಟಾದ ಮೊದಲ EV ಆಗಿ ಟಾಟಾ ಪಂಚ್ EV ಅನ್ನು ಈ ವರ್ಷದ ಆರಂಭದಲ್ಲಿ ಮಾರುಕಟ್ಟೆಗೆ ತರಲಾಯಿತು ಮತ್ತು ಇದು ಬಹಳಷ್ಟು ಫೀಚರ್ ಗಳನ್ನು ಕೂಡ ಹೊಂದಿದೆ. ಆಲ್-ಎಲೆಕ್ಟ್ರಿಕ್ ಪಂಚ್ ಫ್ಯೂಚರಿಸ್ಟಿಕ್ ಡಿಸೈನ್, ಸಾಕಷ್ಟು ಫೀಚರ್ ಗಳು ಮತ್ತು ಎರಡು ಬ್ಯಾಟರಿ ಆಯ್ಕೆಗಳನ್ನು ನೀಡುತ್ತದೆ. ಆದರೆ, ಇದು ಕೆಲವು ವಿಷಯಗಳಲ್ಲಿ ಇನ್ನೂ ಉತ್ತಮವಾಗಿರಬಹುದಿತ್ತು. ನಾವು ಇತ್ತೀಚೆಗೆ ಎಲೆಕ್ಟ್ರಿಕ್ SUV ಅನ್ನು ಡ್ರೈವ್ ಮಾಡಿ ಟೆಸ್ಟ್ ಮಾಡಿದ್ದೇವೆ ಮತ್ತು ಅದರ ಪ್ರೊ ಮತ್ತು ಕಾನ್ ಗಳು ಇಲ್ಲಿವೆ
ಒಳಿತುಗಳು
ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳು
ಈ ಎಲೆಕ್ಟ್ರಿಕ್ SUV ನಲ್ಲಿ ಬ್ಯಾಟರಿಗಾಗಿ ಟಾಟಾ ನಿಮಗೆ ಎರಡು ಆಯ್ಕೆಗಳನ್ನು ನೀಡುತ್ತದೆ: 25 kWh ಮತ್ತು 35 kWh. ಚಿಕ್ಕ ಬ್ಯಾಟರಿ ಚಾರ್ಜ್‌ನಲ್ಲಿ ಸುಮಾರು 200 ಕಿಮೀ ದೂರ ಸಾಗುತ್ತದೆ, ಮತ್ತು ದೊಡ್ಡ ಬ್ಯಾಟರಿ ಸುಮಾರು 300 ಕಿಮೀ ಡ್ರೈವ್ ಮಾಡಬಹುದು. ಈ ಎರಡೂ ರೇಂಜ್ ಗಳು ನಿಮ್ಮ ದಿನನಿತ್ಯದ ಬಳಕೆಗೆ ಸಾಕು ಎಂದೆನಿಸುತ್ತದೆ.
ಇದನ್ನು ಕೂಡ ಓದಿ: ಟಾಟಾ ಪಂಚ್ ಇವಿ ಲಾಂಗ್ ರೇಂಜ್ ವರ್ಸಸ್ ಸಿಟ್ರೊಯೆನ್ eC 3: ಯಾವುದರ ಆನ್ ರೋಡ್ ರೇಂಜ್ ಹೆಚ್ಚು?
ನೀವು ಪಂಚ್ EV ಅನ್ನು ಸಿಟಿ ಮತ್ತು ಲಾಂಗ್ ಡ್ರೈವ್ ಗಳಿಗೆ ಬಳಸಲು ನೋಡುತ್ತಿದ್ದರೆ, ದೊಡ್ಡ ಬ್ಯಾಟರಿ ಪ್ಯಾಕ್ ಉತ್ತಮ ಆಯ್ಕೆಯಾಗಿದೆ. ಆದರೆ, ನಿಮ್ಮ ಡ್ರೈವ್ ಸಿಟಿಯಲ್ಲಿ ಮಾತ್ರ ಸೀಮಿತವಾಗಿದ್ದರೆ, ಚಿಕ್ಕ ಬ್ಯಾಟರಿ ಪ್ಯಾಕ್ ಅನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ಜೊತೆಗೆ, ಎರಡೂ ಬ್ಯಾಟರಿ ಪ್ಯಾಕ್‌ಗಳು DC ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತವೆ, ಇದರಿಂದ ಪ್ರಯಾಣ ಮಾಡುವಾಗ ಚಾರ್ಜ್ ಮಾಡಬೇಕಾದಾಗ ಅವಶ್ಯಕತೆ ಇರುವುದಿಲ್ಲ.
ಫೀಚರ್ ಗಳನ್ನು ಲೋಡ್ ಮಾಡಲಾಗಿದೆ
ಪಂಚ್ EV ಹಲವಾರು ಫೀಚರ್ ಗಳನ್ನು ನೀಡುತ್ತಿದೆ. ಎರಡು 10.25-ಇಂಚಿನ ಡಿಸ್ಪ್ಲೇಗಳು (ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಮತ್ತು ಡಿಜಿಟಲ್ ಡ್ರೈವರ್ ಡಿಸ್ಪ್ಲೇ), ವೈರ್ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, ಹಿಂಭಾಗದ AC ವೆಂಟ್ ಗಳೊಂದಿಗೆ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಸಿಂಗಲ್ ಪೇನ್ ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟುಗಳು ಮತ್ತು ಏರ್ ಪ್ಯೂರಿಫೈಯರ್ ಗಳನ್ನು ನೀಡಲಾಗಿದೆ.
ಸುರಕ್ಷತೆಯ ವಿಷಯದಲ್ಲಿ, ಇದು ಸ್ಟ್ಯಾಂಡರ್ಡ್ ಆಗಿ 6 ಏರ್‌ಬ್ಯಾಗ್‌ಗಳನ್ನು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ನೀಡುತ್ತದೆ. ಇದು ಬ್ಲೈಂಡ್ ವ್ಯೂ ಮಾನಿಟರ್‌ನೊಂದಿಗೆ 360-ಡಿಗ್ರಿ ಕ್ಯಾಮೆರಾವನ್ನು ಕೂಡ ನೀಡುತ್ತದೆ, ಇದು ಈ ಸೈಜ್ ಮತ್ತು ಸೆಗ್ಮೆಂಟ್ ನಲ್ಲಿ ನೋಡಲು ಸಾಮಾನ್ಯವಾಗಿ ಸಿಗುವುದಿಲ್ಲ.
ಉತ್ತಮ ಡ್ರೈವ್ ಮಾಡುವ ಅನುಭವ
ಎಲೆಕ್ಟ್ರಿಕ್ ಕಾರಿನ ಒಂದು ಪ್ರಯೋಜನವೆಂದರೆ ಅದು ತ್ವರಿತ ಆಕ್ಸಿಲರೇಷನ್ ಅನ್ನು ನೀಡುತ್ತದೆ, ಮತ್ತು ಪಂಚ್ EV ಇಲ್ಲಿ ಅತ್ಯುತ್ತಮವಾಗಿದೆ. ಇದು ಡ್ರೈವ್ ಮಾಡಲು ಆನಂದಕರವಾಗಿದೆ ಮತ್ತು ರಸ್ತೆಯ ಮೇಲೆ ಸ್ಥಿರವಾಗಿ ಕೂಡ ಓಡುತ್ತದೆ. ಎಲೆಕ್ಟ್ರಿಕ್ ಮೋಟಾರ್‌ಗಳು ನಿಜವಾಗಿಯೂ ಶಕ್ತಿಯುತವಾಗಿದ್ದು, ಇದು ಡ್ರೈವಿಂಗ್ ಅನುಭವನ್ನು ಉತ್ತಮಗೊಳಿಸುತ್ತದೆ. ಇದನ್ನು ನೀವು ಅದೇ ಬೆಲೆಯ ICE ಕಾರಿನಲ್ಲಿ ಕೂಡ ಪಡೆಯಲು ಸಾಧ್ಯವಿಲ್ಲ
122 PS ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಬರುವ ಪಂಚ್ EVಯ ಲಾಂಗ್ ರೇಂಜ್ ವರ್ಷನ್ ಕೇವಲ 9.5 ಸೆಕೆಂಡುಗಳಲ್ಲಿ 0-100 ಕಿಮೀ ವೇಗವನ್ನು ತಲುಪುತ್ತದೆ.
ಕೆಡುಕುಗಳು
ಹಿಂದಿನ ಸೀಟಿನ ಅನುಭವ
ಪಂಚ್ EV ಅನ್ನು ಫ್ಯಾಮಿಲಿ SUV ಎಂದು ಕರೆಯಲಾಗಿದ್ದರೂ ಕೂಡ, ಇದು ಕೇವಲ ನಾಲ್ಕು ಜನ ಇರುವ ಕುಟುಂಬಕ್ಕೆ ಮಾತ್ರ ಸೂಕ್ತವಾಗಿದೆ. ಮೂವರು ಪ್ರಯಾಣಿಕರು ಹಿಂಬದಿಯಲ್ಲಿ ಆರಾಮವಾಗಿ ಕುಳಿತುಕೊಳ್ಳಲು ಕಾರು ಸಾಕಷ್ಟು ಅಗಲವಿಲ್ಲ. ಅಲ್ಲಿ ಮೂರು ಜನರನ್ನು ಕೂರಿಸಲು ಪ್ರಯತ್ನಿಸಿದರೆ ಎಲ್ಲರಿಗೂ ಅನಾನುಕೂಲವಾಗಬಹುದು.
ಇದನ್ನು ಕೂಡ ಓದಿ: FAME III EV ಸಬ್ಸಿಡಿ ನೀತಿ ಶೀಘ್ರದಲ್ಲೇ ಬರಲಿದೆ: ನೀವು ತಿಳಿದುಕೊಳ್ಳಬೇಕಾದ 3 ವಿಷಯಗಳು
ಇಲ್ಲಿ ನಿಮಗೆ ಸಾಕಷ್ಟು ಹೆಡ್‌ರೂಮ್ ಇದೆ, ಆದರೆ ನೀವು 6 ಅಡಿ ಎತ್ತರವಿದ್ದರೆ, ನಿಮಗೆ ಸ್ವಲ್ಪ ಅನಾನೂಕೂಲತೆಯ ಅನುಭವವಾಗಬಹುದು. ನಿಮ್ಮ ತೊಡೆಯ ಕೆಳಗೆ ಸಾಕಷ್ಟು ಸಪೋರ್ಟ್ ಇದೆ, ಇದು ಹಿಂದಿನ ಸೀಟಿನ ಜಾಗವನ್ನು ಕಡಿಮೆ ಮಾಡುತ್ತದೆ.
ಬೆಲೆ ಸ್ವಲ್ಪ ಹೆಚ್ಚಾಗಿದೆ
ಎಲೆಕ್ಟ್ರಿಕ್ ಕಾರುಗಳು ಸಾಮಾನ್ಯವಾಗಿ ICE ಕಾರುಗಳಿಗಿಂತ ಹೆಚ್ಚು ಬೆಲೆಯನ್ನು ಹೊಂದಿವೆ, ಆದರೆ ಪಂಚ್ EV ಯ ಸೈಜ್ ಅನ್ನು ಹೋಲಿಸಿದರೆ ಇದು ಸ್ವಲ್ಪ ಹೆಚ್ಚು ದುಬಾರಿಯಾಗಿದೆ. ಇದರ ಟಾಪ್-ಸ್ಪೆಕ್ ಮಾಡೆಲ್ ಬೆಲೆಯು ರೂ 15 ಲಕ್ಷಕಿಂತ ಹೆಚ್ಚಿದೆ, ಹಾಗಾಗಿ ಇದು ಟಾಟಾ ನೆಕ್ಸಾನ್ ಮತ್ತು ಕಿಯಾ ಸೋನೆಟ್‌ನಂತಹ ಸಬ್‌ಕಾಂಪ್ಯಾಕ್ಟ್ SUVಗಳ ರೇಂಜ್ ನಲ್ಲಿ ಬಂದು ನಿಲ್ಲುತ್ತದೆ. ಅಲ್ಲದೆ, ಈ ಬೆಲೆಗೆ, ನೀವು ಹ್ಯುಂಡೈ ಕ್ರೆಟಾ ಅಥವಾ ಮಾರುತಿ ಗ್ರ್ಯಾಂಡ್ ವಿಟಾರಾದಂತಹ ಕಾಂಪ್ಯಾಕ್ಟ್ SUV ಯ ಕೆಲವು ಕೆಳಮಟ್ಟದ ವೇರಿಯಂಟ್ ಗಳನ್ನು ಖರೀದಿಸಬಹುದು, ಈ SUV ಗಳು ಉತ್ತಮ ಫೀಚರ್ ಗಳು, ಮೋಜಿನ ಡ್ರೈವಿಂಗ್ ಅನುಭವ ಮತ್ತು ಸಾಕಷ್ಟು ಕ್ಯಾಬಿನ್ ಜಾಗವನ್ನು ಕೂಡ ನೀಡುತ್ತದೆ.
ಇದನ್ನು ಕೂಡ ಓದಿ: ಮಹೀಂದ್ರಾ XUV700 ಎಲೆಕ್ಟ್ರಿಕ್ ಡಿಸೈನ್ ಪೇಟೆಂಟ್ ಮೂರು-ಸ್ಕ್ರೀನ್ ಲೇಔಟ್ ಮತ್ತು ಹೊಸ ಸ್ಟೀರಿಂಗ್ ವೀಲ್ ಅನ್ನು ಖಚಿತಪಡಿಸಿದೆ
ಪಂಚ್ EV ಹಲವು ಫೀಚರ್ ಗಳನ್ನು ಹೊಂದಿದ್ದರೂ ಕೂಡ, ಅದು ನೀಡುವ ಮೌಲ್ಯಕ್ಕೆ ಬೆಲೆ ಸ್ವಲ್ಪ ಜಾಸ್ತಿಯಾಯಿತು.
ಇವು ಟಾಟಾ ಪಂಚ್ EV ಯ ಪ್ರೊ ಮತ್ತು ಕಾನ್ ಗಳಾಗಿವೆ. ಇದರ ಬೆಲೆ ರೂ 10.99 ಲಕ್ಷದಿಂದ ರೂ 15.49 ಲಕ್ಷದವರೆಗೆ (ಎಕ್ಸ್ ಶೋರೂಂ) ಇದೆ, ಮತ್ತು ಇದು ಸಿಟ್ರೊಯೆನ್ eC3 ಗೆ ನೇರ ಪ್ರತಿಸ್ಪರ್ಧಿಯಾಗಿದೆ, ಹಾಗೆಯೇ ಟಾಟಾ ಟಿಯಾಗೊ EV ಮತ್ತು MG ಕಾಮೆಟ್ EV ಗೆ ಪ್ರೀಮಿಯಂ ಆಗಿರುವ ಪರ್ಯಾಯ ಆಯ್ಕೆಯಾಗಿದೆ.
ಇನ್ನಷ್ಟು ಓದಿ: ಪಂಚ್ EV ಆಟೋಮ್ಯಾಟಿಕ್