Tata Punch Pure ವರ್ಸಸ್ Hyundai Exter EX: ನೀವು ಯಾವ ಬೇಸ್ ಆವೃತ್ತಿಯನ್ನು ಖರೀದಿಸಬೇಕು?
ಎರಡು ಕಾರುಗಳಲ್ಲಿ, ಒಂದು ಸಿಎನ್‌ಜಿ ಆಯ್ಕೆಯನ್ನು ಬೇಸ್ ಆವೃತ್ತಿಯಲ್ಲಿ ನೀಡುತ್ತಿದೆ, ಆದರೆ ಇನ್ನೊಂದು ಪೆಟ್ರೋಲ್ ಎಂಜಿನ್‌ಗೆ ಸೀಮಿತವಾಗಿದೆ
ಭಾರತದಲ್ಲಿ, ಎಂಟ್ರಿ-ಲೆವೆಲ್ ಎಸ್‌ಯುವಿ ಸೆಗ್ಮೆಂಟ್ ಮೈಕ್ರೋ-ಎಸ್‌ಯುವಿಗಳಿಂದ ಪ್ರಾಬಲ್ಯವನ್ನು ಹೊಂದಿದೆ, ಅವುಗಳ ಎಸ್‌ಯುವಿ-ತರಹದ ವಿನ್ಯಾಸ ಮತ್ತು ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್‌ಗೆ ಹೆಸರುವಾಸಿಯಾಗಿದೆ. ಹಾಗೆಯೇ ಇದು ದೊಡ್ಡ ಎಸ್‌ಯುವಿಗಳಿಗಿಂತ ತುಲನಾತ್ಮಕವಾಗಿ ಕಡಿಮೆ ಬೆಲೆಯನ್ನು ಹೊಂದಿದೆ. ಈ ಕಾರಣದಿಂದಾಗಿ, ಅನೇಕ ಜನರು ಹ್ಯಾಚ್‌ಬ್ಯಾಕ್‌ಗಳ ಬದಲಿಗೆ ಟಾಟಾ ಪಂಚ್ ಮತ್ತು ಹ್ಯುಂಡೈ ಎಕ್ಸ್‌ಟರ್‌ನಂತಹ ಮೈಕ್ರೋ-ಎಸ್‌ಯುವಿಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ಎರಡೂ ಎಸ್‌ಯುವಿಗಳ ಬೆಲೆಗಳು ಸುಮಾರು 6 ಲಕ್ಷ ರೂ.ನಿಂದ (ಎಕ್ಸ್ ಶೋರೂಂ, ದೆಹಲಿ) ಪ್ರಾರಂಭವಾಗುತ್ತವೆ. ಆದ್ದರಿಂದ ನೀವು ನೀಡುವ ಹಣಕ್ಕೆ ಯಾವುದು ಉತ್ತಮ ಮೌಲ್ಯವನ್ನು ನೀಡುತ್ತದೆ ಎಂಬುದನ್ನು ನಿರ್ಧರಿಸಲು ಅವುಗಳ ಬೇಸ್ ಮೊಡೆಲ್‌ಗಳನ್ನು ಹೋಲಿಕೆ ಮಾಡೋಣ.
ಬೆಲೆ
|
ಟಾಟಾ ಪಂಚ್ ಪ್ಯೂರ್ |
ಹ್ಯುಂಡೈ ಎಕ್ಷ್‌ಟರ್ ಇಎಕ್ಸ್ |
ಬೆಲೆ |
6.13 ಲಕ್ಷ ರೂ. |
6.13 ಲಕ್ಷ ರೂ. |
ಎಲ್ಲಾ ಬೆಲೆಗಳು ದೆಹಲಿ ಎಕ್ಸ್ ಶೋರೂಂ
ಟಾಟಾ ಪಂಚ್‌ನ ಬೇಸ್ ವೇರಿಯೆಂಟ್‌ನ (ಪ್ಯೂರ್) ಬೆಲೆ 6.13 ಲಕ್ಷ ರೂ.ಆಗಿದ್ದು, ಹಾಗೆಯೇ ಹುಂಡೈ ಎಕ್ಸ್‌ಟರ್‌ನ ಎಂಟ್ರಿ ಲೆವೆಲ್ ಇಎಕ್ಷ್ ಟ್ರಿಮ್‌ನ ನಿಖರವಾದ ಬೆಲೆಯು ಆದೇ ಆಗಿದೆ.
ಗಾತ್ರಗಳು
ಮೊಡೆಲ್ |
ಟಾಟಾ ಪಂಚ್ |
ಹ್ಯುಂಡೈ ಎಕ್ಷ್‌ಟರ್ |
ಉದ್ದ |
3827 ಮಿ.ಮೀ |
3815 ಮಿ.ಮೀ |
ಅಗಲ |
1742 ಮಿ.ಮೀ |
1710 ಮಿ.ಮೀ |
ಎತ್ತರ |
1615 ಮಿ.ಮೀ |
1631 ಮಿ.ಮೀ (ರೂಫ್ ರೇಲ್ಸ್ ಸೇರಿ) |
ವೀಲ್‌ಬೇಸ್ |
2445 ಮಿ.ಮೀ |
2450 ಮಿ.ಮೀ |
ಗ್ರೌಂಡ್ ಕ್ಲೀಯರೆನ್ಸ್ |
187 ಮಿ.ಮೀ |
185 ಮಿ.ಮೀ |
ಬೂಟ್ ಸ್ಪೇಸ್ |
366 ಲೀಟರ್‌ಗಳು |
391 ಲೀಟರ್‌ಗಳು |
-
ಎಕ್ಸ್‌ಟರ್ ಪಂಚ್‌ಗಿಂತ 16 ಮಿಮೀ ಎತ್ತರವಾಗಿದೆ, ಆದರೆ ಪಂಚ್ 32 ಮಿಮೀ ನಷ್ಟು ಹೆಚ್ಚು ಅಗಲ ಮತ್ತು 12 ಮಿಮೀ ಉದ್ದವಾಗಿದೆ.
-
ಎರಡೂ ಮೈಕ್ರೊ ಎಸ್‌ಯುವಿಗಳು ಒಂದೇ ಒಂದೇ ಪ್ರಮಾಣದ ಗ್ರೌಂಡ್ ಕ್ಲಿಯರೆನ್ಸ್ ಅನ್ನು ನೀಡುತ್ತವೆ, ಟಾಟಾ ಪಂಚ್ ಸ್ವಲ್ಪ ಹೆಚ್ಚು ಮಿಮೀ ಅನ್ನು ಹೊಂದಿದೆ.
-
ಎಕ್ಸ್‌ಟರ್‌ನ ವೀಲ್‌ಬೇಸ್ ಪಂಚ್‌ಗಿಂತ 5 ಮಿಮೀ ಉದ್ದವಾಗಿದೆ.
-
ಬೂಟ್ ಸ್ಪೇಸ್‌ಗೆ ಸಂಬಂಧಿಸಿದಂತೆ, ಎಕ್ಸ್‌ಟರ್ ಪಂಚ್‌ಗಿಂತ 25 ಲೀಟರ್ ಹೆಚ್ಚುವರಿ ಲಗೇಜ್ ಜಾಗವನ್ನು ಪಡೆಯುತ್ತದೆ.
ಪವರ್‌ಟ್ರೈನ್
|
ಟಾಟಾ ಪಂಚ್ |
ಹ್ಯುಂಡೈ ಎಕ್ಷ್‌ಟರ್ ಇಎಕ್ಸ್ |
|
ಎಂಜಿನ್ |
1.2-ಲೀಟರ್ ಎನ್ಎ ಪೆಟ್ರೋಲ್ ಎಂಜಿನ್ |
1.2-ಲೀಟರ್ ಎನ್ಎ ಪೆಟ್ರೋಲ್+ಸಿಎನ್‌ಜಿ |
1.2-ಲೀಟರ್ ಎನ್ಎ ಪೆಟ್ರೋಲ್ |
ಪವರ್ |
88 ಪಿಎಸ್ |
73.5 ಪಿಎಸ್ |
83ಪಿಎಸ್ |
ಟಾರ್ಕ್ |
115 ಎನ್‌ಎಮ್ |
103 ಎನ್‌ಎಮ್ |
114 ಎನ್‌ಎಮ್ |
ಸಿಲಿಂಡರ್ |
3 |
4 |
|
ಟ್ರಾನ್ಸ್‌ಮಿಷನ್ |
5-ಸ್ಪೀಡ್ ಮ್ಯಾನುಯಲ್ |
5-ಸ್ಪೀಡ್ ಮ್ಯಾನುಯಲ್ |
5-ಸ್ಪೀಡ್ ಮ್ಯಾನುಯಲ್ |
-
ಪಂಚ್‌ನ 1.2-ಲೀಟರ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಎಕ್ಸ್‌ಟರ್‌ನ 1.2-ಲೀಟರ್, 4-ಸಿಲಿಂಡರ್ ಪೆಟ್ರೋಲ್ ಎಂಜಿನ್‌ಗಿಂತ ಸ್ವಲ್ಪ ಹೆಚ್ಚು ಶಕ್ತಿಶಾಲಿಯಾಗಿದೆ.
-
ಟಾಟಾ ಪಂಚ್‌ನ ಪ್ಯೂರ್ ಆವೃತ್ತಿಯು ಪೆಟ್ರೋಲ್ ಮತ್ತು ಸಿಎನ್‌ಜಿ ಎರಡರಲ್ಲೂ ಲಭ್ಯವಿದೆ, ಆದರೆ ಎಕ್ಸ್‌ಟರ್ ಇಎಕ್ಸ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಮಾತ್ರ ಲಭ್ಯವಿದೆ.
-
ಎರಡು ಎಸ್‌ಯುವಿಗಳ ಬೇಸ್-ಸ್ಪೆಕ್ ಆವೃತ್ತಿಗಳು ಮ್ಯಾನುವಲ್ ಗೇರ್‌ಬಾಕ್ಸ್‌ನಲ್ಲಿ ಮಾತ್ರ ಲಭ್ಯವಿವೆ.
-
ಎರಡೂ ಮೊಡೆಲ್‌ಗಳಲ್ಲಿನ ಅದೇ ಎಂಜಿನ್‌ಗಳು ಟಾಪ್ ವೇರಿಯೆಂಟ್‌ಗಳಲ್ಲಿ 5-ಸ್ಪೀಡ್ ಎಎಮ್‌ಟಿ ಆಯ್ಕೆಯನ್ನು ಸಹ ಪಡೆಯುತ್ತವೆ.
ಫೀಚರ್‌ಗಳು
ಫೀಚರ್‌ಗಳ ಹೈಲೈಟ್ಸ್‌ಗಳು |
||
ಫೀಚರ್‌ಗಳು |
ಟಾಟಾ ಪಂಚ್ ಪ್ಯೂರ್ |
ಹ್ಯುಂಡೈ ಎಕ್ಸ್‌ಟರ್ ಇಎಕ್ಸ್ |
ಎಕ್ಸ್‌ಟಿರೀಯರ್ |
ಹ್ಯಾಲೊಜೆನ್ ಹೆಡ್‌ಲೈಟ್‌ಗಳು ಎಲ್ಇಡಿ ಇಂಡಿಕೇಟರ್‌ಗಳು 15-ಇಂಚಿನ ಸ್ಟೀಲ್ ಚಕ್ರಗಳು ORVMs ನಲ್ಲಿ ಟರ್ನ್ ಇಂಡಿಕೇಟರ್‌ಗಳು |
ಹ್ಯಾಲೊಜೆನ್ ಹೆಡ್‌ಲೈಟ್‌ಗಳು 14 ಇಂಚಿನ ಸ್ಟೀಲ್ ಚಕ್ರಗಳು ಎಲ್ಇಡಿ ಟೈಲ್ ಲೈಟ್ಸ್ |
ಇಂಟಿರೀಯರ್ |
ಸಂಪೂರ್ಣ ಕಪ್ಪು ಕ್ಯಾಬಿನ್ ಥೀಮ್ ಮುಂಭಾಗದ ಸೀಟ್‌ಗಳಲ್ಲಿ ಎಡ್ಜಸ್ಟ್ ಮಾಡಬಹುದಾದ ಹೆಡ್‌ರೆಸ್ಟ್‌ಗಳು |
ಫ್ಯಾಬ್ರಿಕ್ ಸೀಟ್ ಕವರ್ ಸಂಪೂರ್ಣ ಕಪ್ಪು ಕ್ಯಾಬಿನ್ ಥೀಮ್ ಹಿಂಬದಿಯ ಪ್ರಯಾಣಿಕರಿಗೆ ಎಡ್ಜಸ್ಟ್ ಮಾಡಬಹುದಾದ ಹೆಡ್‌ರೆಸ್ಟ್‌ಗಳು 12V ಪವರ್ ಸಾಕೆಟ್ |
ಸೌಕರ್ಯ ಮತ್ತು ಸೌಲಭ್ಯಗಳು |
ಸೆಂಟ್ರಲ್ ಲಾಕಿಂಗ್ ಮುಂಭಾಗದ ಪವರ್ ವಿಂಡೋಗಳು ಮ್ಯಾನುಯಲ್ ಎಸಿ ಟಿಲ್ಟ್ ಸ್ಟೀರಿಂಗ್ ವೀಲ್ |
ಸೆಮಿ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್ ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು ಸೆಂಟ್ರಲ್ ಲಾಕಿಂಗ್ ಮುಂಭಾಗದ ಪವರ್ ವಿಂಡೋಗಳು ಮ್ಯಾನುಯಲ್ ಎಸಿ ಕೀಲಿ ರಹಿತ ಪ್ರವೇಶ |
ಇನ್ಫೋಟೈನ್ಮೆಂಟ್ |
ಅನ್ವಯಿಸುವುದಿಲ್ಲ |
ಅನ್ವಯಿಸುವುದಿಲ್ಲ |
ಸುರಕ್ಷತೆ |
ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಇಬಿಡಿ ಜೊತೆಗೆ ಎಬಿಎಸ್ ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ISOFIX ಚೈಲ್ಡ್ ಸೀಟ್ ಆಂಕಾರೇಜ್‌ಗಳು
|
6 ಏರ್‌ಬ್ಯಾಗ್‌ಗಳು (ಸ್ಟ್ಯಾಂಡರ್ಡ್) ಇಬಿಡಿ ಜೊತೆಗೆ ಎಬಿಎಸ್ ಎಲ್ಲಾ ಆಸನಗಳಿಗೆ ಸೀಟ್‌ಬೆಲ್ಟ್ ರಿಮೈಂಡರ್ ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್ ಬೆಲ್ಟ್ ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ISOFIX ಚೈಲ್ಡ್ ಸೀಟ್ ಆಂಕಾರೇಜ್‌ಗಳು |
ಇದನ್ನೂ ಓದಿ: Tata Altroz Racer ವರ್ಸಸ್ Tata Altroz: 5 ಪ್ರಮುಖ ವ್ಯತ್ಯಾಸಗಳ ವಿವರಗಳು
ಗಮನಿಸಿದ ಪ್ರಮುಖ ಅಂಶಗಳು
-
ಎರಡೂ ಮೊಡೆಲ್‌ಗಳು ಹ್ಯಾಲೊಜೆನ್ ಹೆಡ್‌ಲೈಟ್‌ಗಳನ್ನು ಹೊಂದಿವೆ, ಆದರೆ ಪಂಚ್ ಒಆರ್‌ವಿಎಮ್‌ಗಳಲ್ಲಿ ಟರ್ನ್ ಇಂಡಿಕೇಟರ್‌ಗಳನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ, ಎಕ್ಸ್‌ಟರ್ 14-ಇಂಚಿನ ಚಕ್ರಗಳನ್ನು ಹೊಂದಿದೆ, ಆದರೆ ಪಂಚ್ ದೊಡ್ಡ 15-ಇಂಚಿನ ಚಕ್ರಗಳನ್ನು ಹೊಂದಿದೆ.
-
ಒಳಗೆ, ಎರಡೂ ಕಪ್ಪು ಕ್ಯಾಬಿನ್ ಥೀಮ್ ಅನ್ನು ಪಡೆಯುತ್ತವೆ. ಚಾಲಕ ಮತ್ತು ಮುಂಭಾಗದ ಪ್ರಯಾಣಿಕರ ಸೌಕರ್ಯಕ್ಕಾಗಿ, ಪಂಚ್ ಎಡ್ಜಸ್ಟ್ ಮಾಡಬಹುದಾದ ಹೆಡ್‌ರೆಸ್ಟ್ ಅನ್ನು ನೀಡುತ್ತದೆ, ಹಿಂದಿನ ಸೀಟುಗಳ ಮೂಲಕ ಹೆಡ್‌ರೆಸ್ಟ್ ಅನ್ನು ಮಾತ್ರ ಸಂಯೋಜಿಸಲಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಎಕ್ಸ್‌ಟರ್ ಮುಂಭಾಗದಲ್ಲಿ ಸಂಯೋಜಿತ ಹೆಡ್‌ರೆಸ್ಟ್‌ಗಳೊಂದಿಗೆ ಮತ್ತು ಹಿಂಭಾಗದಲ್ಲಿ ಎಡ್ಜಸ್ಟ್ ಮಾಡಬಹುದಾದವುಗಳೊಂದಿಗೆ ಬರುತ್ತದೆ.
-
ಸೌಕರ್ಯ ಮತ್ತು ಅನುಕೂಲತೆಯ ವಿಷಯದಲ್ಲಿ, ಎರಡೂ ಒಂದೇ ರೀತಿಯ ವೈಶಿಷ್ಟ್ಯಗಳನ್ನು ಪಡೆಯುತ್ತವೆ, ಆದರೆ ಇಲ್ಲಿ ಎಕ್ಷ್‌ಟರ್ ಎತ್ತರ-ಹೊಂದಾಣಿಕೆ ಮಾಡಬಹುದಾದ ಚಾಲಕ ಸೀಟ್ ಮತ್ತು MIDಗಾಗಿ (ಮಲ್ಟಿ ಇನ್ಫೋರ್ಮೆಶನ್ ಡಿಸ್‌ಪ್ಲೇ)) ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳನ್ನು ಒಳಗೊಂಡಂತೆ ಒಂದೆರಡು ಹೆಚ್ಚುವರಿ ಸೌಕರ್ಯಗಳನ್ನು ಪಡೆಯುತ್ತದೆ.
-
ಎರಡೂ ಕಾರುಗಳು ಬೇಸ್ ವೇರಿಯೆಂಟ್‌ಗಳು ಯಾವುದೇ ಇನ್ಫೋಟೈನ್‌ಮೆಂಟ್ ಅಥವಾ ಮ್ಯೂಸಿಕ್ ಸಿಸ್ಟಮ್ ಅನ್ನು ಒದಗಿಸುವುದಿಲ್ಲ.
-
ಎಕ್ಸ್‌ಟರ್ ಎಲ್ಲಾ ಆವೃತ್ತಿಗಳಲ್ಲಿ 6 ಏರ್‌ಬ್ಯಾಗ್‌ಗಳನ್ನು ಪಡೆಯುತ್ತದೆ ಆದರೆ ಪಂಚ್ ಡ್ಯುಯಲ್ ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತದೆ. ಎಕ್ಸ್‌ಟರ್ ಉತ್ತಮ ಸುರಕ್ಷತಾ ಪ್ಯಾಕೇಜ್ ಅನ್ನು ಹೊಂದಿದ್ದು, ಎಲ್ಲಾ ಆಸನಗಳಿಗೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು ಮತ್ತು ಸೀಟ್‌ಬೆಲ್ಟ್ ರಿಮೈಂಡರ್‌ಗಳನ್ನು ಒಳಗೊಂಡಿದೆ.
ಅಂತಿಮ ಮಾತು
ಬೇಸ್-ಸ್ಪೆಕ್‌ಗಳಾದ ಎಕ್ಸ್‌ಟರ್ ಇಎಕ್ಸ್ ಮತ್ತು ಪಂಚ್ ಪ್ಯೂರ್ ಒಟ್ಟಾರೆ ಫೀಚರ್‌ಗಳ ವಿಷಯದಲ್ಲಿ ಒಂದೇ ರೀತಿಯಾಗಿ ಹೊಂದಾಣಿಕೆಯಾಗುತ್ತದೆ. ನೀವು ಸಿಎನ್‌ಜಿ ಆಯ್ಕೆಯನ್ನು ಮತ್ತು ಸ್ವಲ್ಪ ಹೆಚ್ಚು ವಿಶಾಲವಾದ ಕ್ಯಾಬಿನ್ ಅನ್ನು ಬಯಸಿದರೆ, ಪಂಚ್ ಪ್ಯೂರ್ ಒಂದು ಉತ್ತಮ ಆಯ್ಕೆಯಾಗಿದೆ. ಆದಾಗಿಯೂ, ನೀವು ಹೆಚ್ಚು ಸಂಸ್ಕರಿಸಿದ 4-ಸಿಲಿಂಡರ್ ಎಂಜಿನ್, ದೊಡ್ಡ ಬೂಟ್ ಮತ್ತು ಉತ್ತಮ ಸುರಕ್ಷತಾ ಪ್ಯಾಕೇಜ್ ಅನ್ನು ಗೌರವಿಸುವುದಾದರೆ, ಎಕ್ಷ್‌ಟರ್ ಇಎಕ್ಸ್ ಆ ನಿಮಗೆ ಉತ್ತಮ ಆಯ್ಕೆಯಾಗಿರಬಹುದು. ಸುಮಾರು 6 ಲಕ್ಷ ರೂಪಾಯಿಗಳ (ಎಕ್ಸ್ ಶೋ ರೂಂ) ಬಜೆಟ್‌ಗೆ ನೀವು ಯಾವ ಬೇಸ್ ಆವೃತ್ತಿಯನ್ನು ಆಯ್ಕೆ ಮಾಡುತ್ತೀರಿ ಎಂಬುದನ್ನು ಕಾಮೆಂಟ್‌ಗಳಲ್ಲಿ ನಮಗೆ ತಿಳಿಸಿ.
ಇನ್ನಷ್ಟು ಓದಿ: ಪಂಚ್ ಎಎಮ್‌ಟಿ