ಟಾಟಾ ಶೀಘ್ರದಲ್ಲೇ ನೆಕ್ಸಾನ್ ಇವಿ ಮ್ಯಾಕ್ಸ್ ಅನ್ನು ತನ್ನ “ಡಾರ್ಕ್ ” ರೇಂಜ್‌ಗೆ ಸೇರಿಸಲಿದ್ದು, ಬಿಡುಗಡೆಯಾಗಿದೆ ಮೊದಲ ಟೀಸರ್
ಏಪ್ರಿಲ್ 15, 2023 06:50 am ರಂದು rohit ಮೂಲಕ ಪ್ರಕಟಿಸಲಾಗಿದೆ
- ಕಾಮೆಂಟ್ ಅನ್ನು ಬರೆಯಿರಿ
ಈ ನೆಕ್ಸಾನ್ ಇವಿ ಮ್ಯಾಕ್ಸ್ ಡಾರ್ಕ್‌ನ ಪ್ರಮುಖ ಹೈಲೈಟ್ ಎಂದರೆ ನವೀಕೃತ ಹ್ಯಾರಿಯರ್-ಸಫಾರಿ ಜೋಡಿಯಿಂದ ಎರವಲು ಪಡೆದ ಹೊಸ 10.25-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್ ಆಗಿದೆ.
- ನೆಕ್ಸಾನ್ ಇವಿ ಮ್ಯಾಕ್ಸ್ ಎಲೆಕ್ಟ್ರಿಕ್ ಸಬ್-4m ಎಸ್‌ಯುವಿಗಾಗಿ ಡಾರ್ಕ್ ರೇಂಜ್ ಅನ್ನು ಪೂರ್ಣಗೊಳಿಸುತ್ತಿದೆ.
- ಇದರ ಟೀಸರ್ ಸಹ ಡ್ಯಾಶ್‌ಬೋರ್ಡ್‌ನಲ್ಲಿರುವ ಟೀಲ್ ಬ್ಲ್ಯೂ ಆ್ಯಕ್ಸೆಂಟ್‌ನ ಒಂದು ನೋಟವನ್ನು ನೀಡುತ್ತದೆ.
- ನೆಕ್ಸಾನ್ ಇವಿ ಪ್ರೈಮ್ ಡಾರ್ಕ್‌ನಂತೆಯೇ ಬ್ಲ್ಯಾಕ್ ಔಟ್ ಮತ್ತು ಇವಿಯ ನಿರ್ದಿಷ್ಟ ಅಂಶಗಳನ್ನು ಒಳಗೆ ಮತ್ತು ಹೊರಗೆ ಪಡೆಯುತ್ತದೆ.
- ಪ್ರಮಾಣಿತ ನೆಕ್ಸಾನ್ ಇವಿ ಮ್ಯಾಕ್ಸ್‌ನ ಫೀಚರ್ ಲಿಸ್ಟ್ ಅನ್ನು ಮುಂದುವರಿಸುವ ಸಾಧ್ಯತೆಯಿದ್ದು ವೆಂಟಿಲೇಟೆಡ್ ಮುಂಭಾಗದ ಸೀಟುಗಳು ಮತ್ತು ಸೆಮಿ-ಡಿಜಿಟಲ್ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿರುತ್ತದೆ.
- ನೆಕ್ಸಾನ್ ಇವಿ ಮ್ಯಾಕ್ಸ್ 40.5kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಇದು 453km ನಷ್ಟು ಕ್ಲೈಮ್ ಮಾಡುತ್ತದೆ.
- ಅಧಿಕ ಪ್ರೀಮಿಯಂನೊದಿಗೆ ಉನ್ನತ ಟ್ರಿಮ್‌ಗಳಲ್ಲಿ ಮಾತ್ರ ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ.
ನೀವು ಟಾಟಾ ನೆಕ್ಸಾನ್ ನ ಡಾರ್ಕ್ ಆವೃತ್ತಿಯನ್ನು ತೆಗೆದುಕೊಳ್ಳಲು ಬಯಸುತ್ತೀರಾದರೆ, ಇಲ್ಲಿಯವರೆಗಿನ ನಿಮ್ಮ ಆಯ್ಕೆಗಳು ಪ್ರಮಾಣಿತ ಆಂತರಿಕ ದಹನಕಾರಿ ಎಂಜಿನ್ (ICE) ವೇರಿಯೆಂಟ್‌ಗಳು ಅಥವಾ ನೆಕ್ಸಾನ್ ಇವಿ ಪ್ರೈಮ್‌ಗಳಾಗಿವೆ. ತನ್ನ ಪ್ರಮುಖ ಇವಿ, ನೆಕ್ಸಾನ್ ಇವಿ ಮ್ಯಾಕ್ಸ್ ಅನ್ನು ಶೀಘ್ರದಲ್ಲೇ ತನ್ನ ಡಾರ್ಕ್ ರೇಂಜ್‌ಗೆ ಸೇರಿಸಲಾಗುವುದು ಎಂದು ಸೂಚಿಸುವ ಟೀಸ್ ಅನ್ನು ಕಾರು ತಯಾರಕರು ಬಿಡುಗಡೆಗೊಳಿಸಿದೆ.
ಅತಿ ದೊಡ್ಡ ಅನಾವರಣ
ಬಹುಶಃ ಟೀಸರ್ ವೀಡಿಯೋದಲ್ಲಿನ ಅತ್ಯಂತ ಮಹತ್ವದ ಪ್ರಕಟಣೆಯು ಇತ್ತೀಚೆಗೆ ನವೀಕರಿಸಿದ ಹ್ಯಾರಿಯರ್ ಮತ್ತು ಸಫಾರಿಯಲ್ಲಿ ಪರಿಚಯಿಸಲಾದ ತಾಜಾ 10.25-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್‌ನ ಸೇರ್ಪಡೆ. ಈ ಎಸ್‌ಯುವಿ ಜೋಡಿಯಲ್ಲಿ ಕಂಡುಬರುವಂತೆ ಇನ್‌ಫೋಟೈನ್‌ಮೆಂಟ್ ಯೂನಿಟ್ ಹೆಚ್ಚು ಸುಗಮವಾದ ಬಳಕೆದಾರ ಇಂಟರ್‌ಫೇಸ್ (UI) ಮತ್ತು ಉತ್ತಮ ಗ್ರಾಫಿಕ್ಸ್ ಅನ್ನು ಹೊಂದಿದೆ. ಹೊಸ ಡಿಸ್‌ಪ್ಲೇ ಯೂನಿಟ್‌ಗಾಗಿ ಸಿದ್ಧತೆ ಮಾಡಲು ಟಾಟಾ ನೆಕ್ಸಾನ್‌ನ ಡ್ಯಾಶ್‌ಬೋರ್ಡ್‌ನ ಮೇಲಿನ ಭಾಗವನ್ನು ತಿರುಚಿರುವ ಸಾಧ್ಯತೆಯಿದೆ. ಅಸ್ತಿತ್ವದಲ್ಲಿರುವ ಮಾಡೆಲ್‌ನಂತೆ ಡ್ಯಾಶ್‌ಬೋರ್ಡ್‌ನಾದ್ಯಂತ ಟೀಲ್ ಬ್ಲ್ಯೂ ಆ್ಯಕ್ಸೆಂಟ್‌ನಲ್ಲಿ ಗೆರೆಯಂತಹ ಫ್ಲೀಟಿಂಗ್ ನೋಟವನ್ನು ಪಡೆಯುತ್ತೇವೆ.
ಇದನ್ನೂ ಓದಿ: ಲೀಥಿಯಂ ನಿಕ್ಷೇಪ ಪತ್ತೆಯಿಂದ ಭಾರತಕ್ಕೇನು ಪರಿಣಾಮ?
ನೆಕ್ಸಾನ್ ಇವಿ ಪ್ರೈಮ್ ಡಾರ್ಕ್ ಜೊತೆಗಿನ ಸಾಮಾನ್ಯ ಅಂಶಗಳು
ನೆಕ್ಸಾನ್ ಇವಿ ಪ್ರೈಮ್ ಡಾರ್ಕ್‌ನಂತೆಯೇ, ನೆಕ್ಸಾನ್ ಇವಿ ಮ್ಯಾಕ್ಸ್‌ನ ಬ್ಲ್ಯಾಕ್-ಔಟ್ ಆವೃತ್ತಿಯು “ಮಿಡ್‌ನೈಟ್ ಬ್ಲ್ಯಾಕ್” ಎಕ್ಸ್‌ಟೀರಿಯರ್ ಶೇಡ್‌ನಲ್ಲಿಯೂ ಬರುತ್ತದೆ. ಇದು ಅದೇ ಚಾರ್ಕೋಲ್ ಬ್ಲ್ಯಾಕ್ ಅಲಾಯ್ ವ್ಹೀಲ್‌ಗಳು, ಬಂಪರ್ ಸುತ್ತಲೂ ಗಾಢ ಕಪ್ಪು ಕ್ರೋಮ್ ಸ್ಟ್ರೈಪ್‌ಗಳು, ಮುಂಭಾಗದ ಫೆಂಡರ್‌ಗಳಲ್ಲಿ “ಡಾರ್ಕ್” ಮಾನಿಕರ್‌ಗಳು, ಮತ್ತು ಕಪ್ಪು ಬಣ್ಣದಲ್ಲಿ “ನೆಕ್ಸಾನ್” ಬ್ಯಾಡ್ಜ್ ಅನ್ನು ಹೊಂದಿರುತ್ತದೆ. ಹೌದು, ಖಂಡಿತವಾಗಿ ವಿದ್ಯುತ್ ಸ್ವರೂಪವನ್ನು ಸೂಚಿಸಲು ಸುತ್ತಲೂ ಬ್ಲ್ಯೂ ಆ್ಯಕ್ಸೆಂಟ್ ಅನ್ನು ಹೊಂದಿರುತ್ತದೆ.
ಟೀಸರ್‌ನಲ್ಲಿ ತೋರಿಸಿರುವಂತೆ ಕ್ಯಾಬಿನ್‌ನ ಒಳಗಿನ ಬ್ಲ್ಯೂ ಹೈಲೈಟ್‌ಗಳ ಹೊರತಾಗಿ, ಇತರ ಹೋಲಿಕೆಗಳು ಡ್ಯಾಶ್‌ಬೋರ್ಡ್‌ಗೆ ಕಪ್ಪು ಫಿನಿಶಿಂಗ್, ಲೆಡರ್ ಮೇಲ್ಗವಸು, ಮತ್ತು ಲೆದರ್‌ನಿಂದ ಮುಚ್ಚಲ್ಪಟ್ಟ ಸ್ಟಿಯರಿಂಗ್ ವ್ಹೀಲ್ ಅನ್ನು ಒಳಗೊಂಡಿರುತ್ತದೆ.
ನೆಕ್ಸಾನ್ ಇವಿ ಪ್ರೈಮ್ ಡಾರ್ಕ್‌ನ ಕ್ಯಾಬಿನ್ ಚಿತ್ರವನ್ನು ಉಲ್ಲೇಖಕ್ಕಾಗಿ ಬಳಸಲಾಗಿದೆ
ಪ್ರಸ್ತುತ ನೆಕ್ಸಾನ್ ಇವಿ ಮ್ಯಾಕ್ಸ್‌ನಂತೆಯೇ ಇದೇ ರೀತಿಯ ಫೀಚರ್‌ಗಳ ಪಟ್ಟಿಯನ್ನು ನಿರೀಕ್ಷಿಸಬಹುದು, ಇದು ಸೆಮಿ ಡಿಜಿಟಲ್ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್, ರಿಯರ್ ವೆಂಟ್‌ಗಳ ಜೊತೆಗೆ ಆಟೋ ಎಸಿ, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಒಳಗೊಂಡಿರುತ್ತದೆ.
ಬ್ಯಾಟರಿ, ರೇಂಜ್ ಮತ್ತು ಚಾರ್ಜಿಂಗ್
ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಅನ್ನು 143PS ಮತ್ತು 250Nm ಉತ್ಪಾದಿಸುವ ಎಲೆಕ್ಟ್ರಿಕ್ ಮೋಟಾರ್‌ಗೆ 40.5kWh ಬ್ಯಾಟರಿ ಪ್ಯಾಕ್‌ನೊಂದಿಗೆ ಸಜ್ಜುಗೊಳಿಸಲಾಗಿದೆ. ಇದರ ARAI-ಕ್ಲೈಮ್ ರೇಂಜ್ 453km ಆಗಿದೆ. ಕ್ರಮವಾಗಿ 15 ಗಂಟೆಗಳ ಮತ್ತು ಆರು ಗಂಟೆಗಳ ಚಾರ್ಜಿಂಗ್ ಸಮಯದೊಂದಿಗೆ, ಈ ಎಲೆಕ್ಟ್ರಿಕ್ ಎಸ್‌ಯುವಿ 3.3kW ಮತ್ತು 7.2kW ಚಾರ್ಜಿಂಗ್ ಆಯ್ಕೆಗಳನ್ನು ಬೆಂಬಲಿಸುತ್ತದೆ. ಅಲ್ಲದೆ, 50kW DC ವೇಗದ ಚಾರ್ಜರ್ ಅನ್ನು ಬಳಸುವುದರಿಂದ, ಬ್ಯಾಟರಿಯು ಕೇವಲ 56 ನಿಮಿಷಗಳಲ್ಲಿ 0-80 ಪ್ರತಿಶತ ಚಾರ್ಜ್ ಆಗುತ್ತದೆ.
ವೇರಿಯೆಂಟ್‌ಗಳು, ಬೆಲೆಗಳು ಮತ್ತು ಬಿಡುಗಡೆ
ನೆಕ್ಸಾನ್ ಇವಿ ಪ್ರೈಮ್‌ನ ಡಾರ್ಕ್ ವೇರಿಯೆಂಟ್‌ಗಳ ಪ್ರಕಾರ, ನೆಕ್ಸಾನ್ ಇವಿ ಮ್ಯಾಕ್ಸ್‌ನ ಡಾರ್ಕ್ ಆವೃತ್ತಿಯು ಹೆಚ್ಚಿನ ವಿಶೇಷತೆಯ ಟ್ರಿಮ್‌ಗಳಲ್ಲಿ ಮಾತ್ರ ನೀಡಲಾಗುವುದು ಎಂದು ನಾವು ನಂಬುತ್ತೇವೆ, ಅವುಗಳ ಅಸ್ತಿತ್ವದಲ್ಲಿರುವ ಬೆಲೆಗಳಿಗಿಂತ ಪ್ರೀಮಿಯಂ ವೆಚ್ಚವಾಗುತ್ತದೆ. ಟಾಟಾ ಮುಂದಿನ ದಿನಗಳಲ್ಲಿ ನೆಕ್ಸಾನ್ ಇವಿ ಮ್ಯಾಕ್ಸ್ ಡಾರ್ಕ್ ಅನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಈ ನೆಕ್ಸಾನ್ ಇವಿ ಮ್ಯಾಕ್ಸ್ ಮಹೀಂದ್ರಾ XUV400 ಇವಿ ಗೆ ಪ್ರತಿಸ್ಪರ್ಧಿಯಾಗಿದೆ ಮತ್ತು ಎಮ್‌ಜಿ ZS ಇವಿ ಮತ್ತು ಹ್ಯುಂಡೈ ಕೋನಾ ಎಲೆಕ್ಟ್ರಿಕ್‌ಗಳಿಗೆ ಕೈಗೆಟಕುವ ಪರ್ಯಾಯವಾಗಿದೆ.
ಇನ್ನೂ ಹೆಚ್ಚಿನದನ್ನು ಇಲ್ಲಿ ಓದಿ : ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಆಟೋಮ್ಯಾಟಿಕ್