Login or Register ಅತ್ಯುತ್ತಮ CarDekho experience ಗೆ
Login

ಟೊಯೋಟಾ ಇನ್ನೋವಾ ಕ್ರಿಸ್ಟಾ ಈಗ ಇನ್ನೋವಾ ಹೈಕ್ರಾಸ್‌ಗಿಂತ ಅಗ್ಗ

ಮಾರ್ಚ್‌ 15, 2023 04:52 pm ರಂದು ansh ಮೂಲಕ ಪ್ರಕಟಿಸಲಾಗಿದೆ
37 Views

ಈ ಡೀಸೆಲ್ ಮಾತ್ರ MPVಯ ಆರಂಭಿಕ ವೇರಿಯೆಂಟ್‌ಗಳ ಬೆಲೆಗಳನ್ನು ಬಹಿರಂಗಪಡಿಸಲಾಗಿದೆ.

  • 2023 ಇನ್ನೋವಾ ಕ್ರಿಸ್ಟಾದ ಬೆಲೆಗಳು ರೂ 19.13 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುತ್ತದೆ.
  • RDE-ಅನುಸರಣೆಯ 2.4-ಲೀಟರ್ ಡೀಸೆಲ್ ಇಂಜಿನ್ 150PS ಮತ್ತು 343Nm ನಷ್ಟು ರೇಟ್/ ಮಾಡಲಾಗಿದೆ.
  • G, GX, VX ಮತ್ತು ZX ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಬರುತ್ತದೆ. VX ಮತ್ತು ZXನ ಬೆಲೆಗಳು ಪ್ರಕಟಿಸಲು ಬಾಕಿ ಇವೆ.
  • ಏಳು ಏರ್‌ಬ್ಯಾಗ್‌ಗಳು, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಎಂಟು ವಿಧದಲ್ಲಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟುಗಳನ್ನು ಹೊಂದಿದೆ.
  • ಇನ್ನೋವಾ ಕ್ರಿಸ್ಟಾಗೆ ಬುಕಿಂಗ್‌ಗಳು ತೆರೆದಿವೆ.

ನವೀಕೃತ ಇನ್ನೋವಾ ಕ್ರಿಸ್ಟಾವನ್ನು ಇತ್ತೀಚೆಗಷ್ಟೆ ಅನಾವರಣಗೊಳಿಸಿದ ಟೊಯೋಟಾ ಈ MPV ಗೆ ಬುಕಿಂಗ್ ಪ್ರಾರಂಭಿಸಿದೆ. ಅಧಿಕೃತ ಬಿಡುಗಡೆಗೆ ಕಾಯುತ್ತಿರುವ ಈ MPV ಭಾರತದಾದ್ಯಂತ ಡೀಲರ್‌ಶಿಪ್‌ಗಳನ್ನು ತಲುಪಲಾರಂಭಿಸಿದೆ ಮತ್ತು ನಾವೀಗ ಅದರ ಲೋವರ್-ಸ್ಪೆಕ್ ವೇರಿಯೆಂಟ್‌ಗಳ ಬೆಲೆಗಳನ್ನು ಹೊಂದಿದ್ದೇವೆ.

ಬೆಲೆಗಳು

ಡೀಸೆಲ್ ಮಾತ್ರದ ಇನ್ನೋವಾ ಕ್ರಿಸ್ಟಾದ G ಮತ್ತು GX ವೇರಿಯೆಂಟ್‌ಗಳ ಬೆಲೆಗಳನ್ನು ಇಲ್ಲಿ ಪರಿಶೀಲಿಸಿ:

ವೇರಿಯೆಂಟ್‌ಗಳು

ಇನ್ನೋವಾ ಕ್ರಿಸ್ಟಾ (ಡೀಸೆಲ್ MT)

ಇನ್ನೋವಾ ಹೈಕ್ರಾಸ್ (ಪೆಟ್ರೋಲ್ CVT)

ವ್ಯತ್ಯಾಸ

ಬೆಲೆ (ಎಕ್ಸ್-ಶೋರೂಂ)

ಬೆಲೆ (ಎಕ್ಸ್-ಶೋರೂಂ)

G 7S

ರೂ 19.13 ಲಕ್ಷ

ರೂ 18.55 ಲಕ್ಷ

+ ರೂ 58,000

G 8S

ರೂ 19.18 ಲಕ್ಷ

ರೂ 18.60 ಲಕ್ಷ

+ ರೂ 58,000

GX 7S

ರೂ 19.99 ಲಕ್ಷ

ರೂ 19.40 ಲಕ್ಷ

+ ರೂ 59,000

GX 8S

ರೂ 19.99 ಲಕ್ಷ

ರೂ 19.45 ಲಕ್ಷ

+ ರೂ 54,000

ಇನ್ನೋವಾ ಕ್ರಿಸ್ಟಾದ ಈ ಬೇಸ್-ಸ್ಪೆಕ್ G ವೇರಿಯೆಂಟ್ ಬೇಸ್-ಸ್ಪೆಕ್ ಇನ್ನೋವಾ ಹೈಕ್ರಾಸ್‌ಗಿಂತ ರೂ 58,000ಗಳಷ್ಟು ಹೆಚ್ಚು ದುಬಾರಿಯಾಗಿದೆ. ಇನ್ನೋವಾ ಕ್ರಿಸ್ಟಾದ GX ವೇರಿಯೆಂಟ್‌ಗಳು ಅನುಗುಣವಾದ ಹೈಕ್ರಾಸ್ ಪೆಟ್ರೋಲ್ ವೇರಿಯೆಂಟ್‌ಗಳಿಗಿಂತ ರೂ 59,000 ಹೆಚ್ಚು ಬೆಲೆ ಹೊಂದಿದೆ.

ಇದನ್ನೂ ಓದಿ: ಹೊಸ ಹೈಬ್ರಿಡ್ ವೇರಿಯೆಂಟ್‌ ಆಗಮನದೊಂದಿಗೆ ಟೋಯೋಟಾ ಹೈಕ್ರಾಸ್ ಬೆಲೆ ಏರಿಕೆಯನ್ನು ಪಡೆದಿದೆ

ಹೈಕ್ರಾಸ್‌ನ ಹೆಚ್ಚು ಕೈಗೆಟುಕುವ ವೇರಿಯೆಂಟ್‌ಗಳು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಮತ್ತು 2-ಲೀಟರ್‌ನ ಸಾಮಾನ್ಯ ಪೆಟ್ರೋಲ್ ಇಂಜಿನ್ ಹೊಂದಿದ್ದು ಇದಕ್ಕೆ ಹೋಲಿಸಿದರೆ ಕ್ರಿಸ್ಟಾದಲ್ಲಿ ಕೇವಲ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮಾತ್ರ ಇದೆ ಎಂಬದು ಗಮನಾರ್ಹವಾಗಿದೆ.

ಪವರ್‌ಟ್ರೇನ್

ನಿರ್ದಿಷ್ಟತೆಗಳು

ಇಂಜಿನ್

2.4-ಲೀಟರ್ ಡೀಸೆಲ್ ಇಂಜಿನ್

ಟ್ರಾನ್ಸ್‌ಮಿಷನ್

ಫೈವ್-ಸ್ಪೀಡ್ ಮ್ಯಾನುವಲ್

ಪವರ್

150PS

ಟಾರ್ಕ್

343Nm

ನವೀಕೃತ ಕ್ರಿಸ್ಟಾ ಡೀಸೆಲ್-ಮ್ಯಾನುವಲ್ ಪವರ್‌ಟ್ರೇನ್ ಅನ್ನು ಮಾತ್ರ ಹೊಂದಿದೆ. ಇದು BS6 ಫೇಸ್ 2 ಮತ್ತು RDE ಎಮಿಷನ್ ಮಾನದಂಡಗಳ ಅನುಸರಣೆಗಾಗಿ ತನ್ನ 2.4-ಲೀಟರ್ ಡೀಸೆಲ್ ಯೂನಿಟ್ ಅನ್ನು ಉಳಿಸಿಕೊಂಡಿದೆ, ಅಲ್ಲದೇ E20 ಅನುಸರಣೆಯನ್ನೂ ಹೊಂದಿದೆ. ಇಲ್ಲಿ ಆಟೋಮ್ಯಾಟಿಕ್ ಆಯ್ಕೆ ಇರುವುದಿಲ್ಲ ಆದರೆ ನೀವು ರಿಯರ್-ವ್ಹೀಲ್-ಡ್ರೈವ್ ಸೆಟಪ್ ಅನ್ನು ಪಡೆಯುತ್ತೀರಿ.

ಫೀಚರ್‌ಗಳು

  • ಈ ನವೀಕೃತ ಇನ್ನೋವಾ ಕ್ರಿಸ್ಟಾ ಅನ್ನು ತುಸು ನವೀಕರಿಸಿದ ಫ್ರಂಟ್ ಫೇಸಿಯ ಮತ್ತು ಹೊಸ ಗ್ರಿಲ್‌ನೊಂದಿಗೆ ಗುರುತಿಸಬಹುದು. ಅಷ್ಟಲ್ಲದೇ ಇದು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸಿಕ್ಸ್-ಸ್ಪೀಕರ್ ಸೌಂಡ್ ಸಿಸ್ಟಮ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಎಂಟು ವಿಧದಲ್ಲಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟುಗಳಂತಹ ಅನೇಕ ಫೀಚರ್‌ಗಳನ್ನು ಹೊಂದಿದೆ. ಪ್ರಯಾಣಿಕ ಸುರಕ್ಷತೆಯ ವಿಷಯಕ್ಕೆ ಬಂದರೆ, ಈ ನವೀಕೃತ ಕ್ರಿಸ್ಟಾ ಏಳು ಏರ್‌ಬ್ಯಾಗ್‌ಗಳು, ABS ಜತೆಗಿನ EBD, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ (VSC), ರಿಯರ್‌ವ್ಯೂ ಕ್ಯಾಮರಾ ಮತ್ತು ಎಲ್ಲಾ ಪ್ರಯಾಣಿಕರಿಗೆ ಥ್ರೀ-ಪಾಯಿಂಟ್ ಸೀಟ್‌ಬೆಲ್ಟ್‌ಗಳನ್ನು ಪಡೆದಿದೆ. ಈ ಲೋವರ್-ಸ್ಪೆಕ್ G ಮತ್ತು GX ವೇರಿಯೆಂಟ್‌ಗಳು ಹ್ಯಾಲೋಜೆನ್ ಹೆಡ್‌ಲ್ಯಾಂಪ್‌ಗಳು, ಕೀರಹಿತ ಎಂಟ್ರಿ, ಮ್ಯಾನುವಲ್ AC, ಮೂರು ಏರ್‌ಬ್ಯಾಗ್‌ಗಳು, ಹಿಲ್ ಸ್ಟಾರ್ಟ್ ಅಸಿಸ್ಟ್ ಮತ್ತು ಬ್ರೇಕ್ ಅಸಿಸ್ಟ್‌ಗಳೊಂದಿಗೆ ಬರುತ್ತದೆ.

ಪ್ರತಿಸ್ಪರ್ಧಿಗಳು

ಹೆಚ್ಚಿನ ಆರಂಭಿಕ ಬೆಲೆಗಳೊಂದಿಗೆ, ಉಳಿದವುಗಳ ಬೆಲೆಗಳು ಪ್ರಕಟಗೊಂಡರೆ ಈ MPV ಇನ್ನೋವಾ ಹೈಕ್ರಸ್‌ನ ಕೆಳಗಿನ ಸ್ಥಾನದಲ್ಲಿ ಬರುತ್ತದೆ.ಈ ಇನ್ನೋವಾ ಕ್ರಿಸ್ಟಾ, ಕಿಯಾ ಕಾರೆನ್ಸ್ ಮತ್ತು ಮಹೀಂದ್ರಾ ಮರಾಝೋಗೆ ಅತ್ಯುತ್ತಮ ಪರ್ಯಾಯವೆಂದು ಪರಿಗಣಿಸಬಹುದಾಗಿದೆ.

Share via

Write your Comment on Toyota ಇನೋವಾ Crysta

explore similar ಕಾರುಗಳು

ಟೊಯೋಟಾ ಇನ್ನೋವಾ ಹೈಕ್ರಾಸ್

4.4242 ವಿರ್ಮಶೆಗಳುಈ ಕಾರಿಗೆ ಅಂಕಗಳನ್ನು ನೀಡಿ
ಪೆಟ್ರೋಲ್16.13 ಕೆಎಂಪಿಎಲ್
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

ಟ್ರೆಂಡಿಂಗ್ ಎಮ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
ಎಲೆಕ್ಟ್ರಿಕ್
ಎಲೆಕ್ಟ್ರಿಕ್ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.10.60 - 19.70 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ