• English
    • Login / Register

    ಬಿಡುಗಡೆಗೆ ಮುಂಚಿತವಾಗಿಯೇ ಡೀಲರ್‌ಗಳ ಬಳಿ ತಲುಪಿದ ನವೀಕೃತ ಟೊಯೋಟಾ ಇನೋವಾ ಕ್ರಿಸ್ಟಾ

    ಟೊಯೋಟಾ ಇನೋವಾ ಕ್ರಿಸ್ಟಾ ಗಾಗಿ ansh ಮೂಲಕ ಮಾರ್ಚ್‌ 13, 2023 08:03 pm ರಂದು ಪ್ರಕಟಿಸಲಾಗಿದೆ

    • 24 Views
    • ಕಾಮೆಂಟ್‌ ಅನ್ನು ಬರೆಯಿರಿ

    ಈ ಎಂಪಿವಿಯ ಮುಂಭಾಗದ ಪ್ರೊಫೈಲ್ ಅನ್ನು ಮರುವಿನ್ಯಾಸಗೊಳಿಸಲಾಗಿದೆ ಹಾಗೂ ಡೀಸೆಲ್- ಮ್ಯಾನ್ಯುವಲ್ ಪವರ್‌ಟ್ರೇನ್‌ನೊಂದಿಗೆ ಮಾತ್ರ ಬರುತ್ತಿದೆ.

    2023 Toyota Innova Crysta

    • ಟೊಯೋಟಾ ಈ ತಿಂಗಳಿನಲ್ಲೇ ನವೀಕೃತ ಇನೋವಾ ಕ್ರಿಸ್ಟಾವನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.

    • ಇದು 2.4-ಲೀಟರ್ ಡಿಸೇಲ್ ಇಂಜಿನ್ ಜೊತೆಗೆ ಫೈವ್-ಸ್ವೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ಬರುತ್ತದೆ.

    • ನವೀಕೃತ ಮುಂಭಾಗದ ಪ್ರೊಫೈಲ್ ಹೊರತುಪಡಿಸಿ ಯಾವುದೇ ಪ್ರಮುಖ ಬದಲಾವಣೆಗಳಿಲ್ಲ.

    •  ಏಳು ಏರ್‌ಬ್ಯಾಗ್‌ಗಳು ಮತ್ತು ಲೆದರ್ ಮೇಲುಹಾಸಿನಂತಹ ಫೀಚರ್‌ಗಳೊಂದಿಗೆ ನಾಲ್ಕು ಟ್ರಿಮ್‌ಗಳಲ್ಲಿ ಲಭ್ಯವಿದೆ.

    •  ರೂ. 20 ಲಕ್ಷದಿಂದ (ಎಕ್ಸ್-ಶೋರೂಮ್) ಬೆಲೆಗಳು ಆರಂಭವಾಗುವ ಸಾಧ್ಯತೆಯಿದೆ. 

     

     

    ಎಂಪಿವಿ ವಿಭಾಗದಲ್ಲಿ ಪ್ರಮುಖ ವಾಹನವಾಗಿರುವ ಈ ಟೊಯೋಟಾ ಇನೋವಾ ಕ್ರಿಸ್ಟಾ, ದ ಬುಕಿಂಗ್‌ಗಳು ಈಗಾಗಲೇ ಆರಂಭವಾಗಿದ್ದು, ಕಾರು ತಯಾರಕರು ಅದರ ಬಿಡುಗಡೆಗೆ ಸಜ್ಜಾಗಿರುವುದರಿಂದ ಶೀಘ್ರದಲ್ಲೇ ಅದು ಮಾರುಕಟ್ಟೆ ಪುನಃ ಲಗ್ಗೆಯಿಡುವ ಸಾಧ್ಯತೆಯಿದೆ. ಆದರೆ ಅದಕ್ಕಿಂತ ಮುಂಚಿತವಾಗಿ ಈ ಎಂಪಿವಿಯ ಕೆಲವು ಯೂನಿಟ್‌ಗಳು ಡೀಲರ್‌ಶಿಪ್‌ಗಳನ್ನು ತಲುಪಲು ಆರಂಭಿಸಿವೆ ಮತ್ತು ಟೆಸ್ಟ್ ಡ್ರೈವ್‌ಗಳಿಗಾಗಿ ಲಭ್ಯವಿದೆ.

    ಈ ಕ್ರಿಸ್ಟಾ ಏನನ್ನು ನೀಡುತ್ತಿದೆ

    2023 Toyota Innova Crysta wheel

    ಎಂಪಿವಿಯ ಈ ಆವೃತ್ತಿಯನ್ನು ನಾಲ್ಕು ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತಿದೆ: G, GX, VX ಮತ್ತು ZX. ಇಲ್ಲಿನ ಚಿತ್ರಗಳಲ್ಲಿನ ಈ ಯೂನಿಟ್‌ಗಳು ಎಂಪಿವಿಯ ಎರಡನೇ ಬೇಸ್‌ನ ‘GX’ ವೇರಿಯೆಂಟ್ ಆಗಿದೆ. ಇದು ಟಚ್-ಸ್ಕ್ರೀನ್ ಇನ್‌ಫೋಟೈನ್‌ಮೆಂಟ್ ಡಿಸ್‌ಪ್ಲೇ, 16-ಇಂಚಿನ ಅಲೋಯ್ ವ್ಹೀಲ್‌ಗಳು, ಮ್ಯಾನ್ಯುವಲ್ ಎಸಿ, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳು, ಮೂರು ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ (VSC) ಮತ್ತು ಎಲ್ಲಾ ಪ್ರಯಾಣಿಕರಿಗೆ ಮೂರು-ಪಾಯಿಂಟ್ ಸೀಟ್‌ಬೆಲ್ಟ್‌ಗಳನ್ನು ಹೊಂದಿದೆ.

    ಇನ್ನಷ್ಟು ಫೀಚರ್‌ಗಳು

    2023 Toyota Innova Crysta cabin

     ಇನೋವಾ ಕ್ರಿಸ್ಟಾದ ಮೇಲ್ಮಟ್ಟದ ವೇರಿಯೆಂಟ್‌ಗಳು ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಂಟು-ವೇಗಳಲ್ಲಿ ಹೊಂದಿಸಬಹುದಾದ ಡ್ರೈವರ್ ಸೀಟ್‌, ಆರು-ಸ್ಪೀಕರ್ ಸೌಂಡ್ ಸಿಸ್ಟಮ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಯುಎಸ್‌ಬಿ ವೇಗದ ಚಾರ್ಜಿಂಗ್ ಮತ್ತು ಕ್ಲೈಮೆಟ್ ಕಂಟ್ರೋಲ್‌ಗಳನ್ನು ಹೊಂದಿವೆ. ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ, ಟೊಯೋಟಾ ಏಳು ಏರ್‌ಬ್ಯಾಗ್‌ಗಳು, ರಿಯರ್ ಡಿಫಾಗರ್, ರಿಯರ್‌ವ್ಯೂ ಕ್ಯಾಮರಾ ಮತ್ತು ISOFIX ಆ್ಯಂಕರ್‌ಗಳನ್ನು ಹೊಂದಿದೆ.

     ಸಂಬಂಧಿತ: 2023 ಟೊಯೋಟಾ ಇನೋವಾ ಕ್ರಿಸ್ಟಾ ವೇರಿಯೆಂಟ್‌ಗಳ ವಿವರಗಳು

    ಪವರ್‌ಟ್ರೇನ್

    2023 Toyota Innova Crysta

    ಇನೋವಾ ಕ್ರಿಸ್ಟಾ ಈಗ ಡಿಸೇಲ್ ಮಾತ್ರದ ಇಂಜಿನ್ ಅನ್ನು ನೀಡುತ್ತಿದ್ದು, 150PS ಮತ್ತು 343Nm ಬಿಡುಗಡೆಗೊಳಿಸುವ 2.4-ಲೀಟರ್ ಡಿಸೇಲ್ ಇಂಜಿನ್ ಅನ್ನು ಫೈವ್-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಜೊತೆಗೆ ಜೋಡಿಸಲಾಗಿದೆ. ಈ ಎಂಪಿವಿಯು ಬಿಡುಗಡೆಯ ಸಮಯದಲ್ಲಿ ಆಯೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಅನ್ನು ಹೊಂದಿರುವುದಿಲ್ಲ.

    ಬೆಲೆ ಮತ್ತು ಪ್ರತಿಸ್ಪರ್ಧಿಗಳು

    2023 Toyota Innova Crysta rear

    ಟೊಯೋಟಾ ಈ ತಿಂಗಳು ಇನೋವಾ ಕ್ರಿಸ್ಟಾವನ್ನು ರೂ.20 ಲಕ್ಷ (ಎಕ್ಸ್-ಶೋರೂಮ್) ಆರಂಭಿಕ ಬೆಲೆಗೆ ಬಿಡುಗಡೆಗೊಳಿಸುವ ನಿರೀಕ್ಷೆಯಿದೆ. ಈ ಎಂಪಿವಿಯು ಹೊಸ-ತಲೆಮಾರಿನ ಇನೋವಾ ಹೈಕ್ರಾಸ್ ಗೆ ಕೈಗೆಟಕುವ ಪರ್ಯಾಯವಾಗಿದೆ ಮಾತ್ರವಲ್ಲದೇ ಇದು ಮಹೀಂದ್ರಾ ಮರಾಜೋ ಮತ್ತು ಕಿಯಾ ಕಾರೆನ್ಸ್‌ ನಂತಹ ಕಾರುಗಳಿಗಿಂತ ಒಂದು ಹೆಜ್ಜೆ ಮೇಲಿದೆ.

    ಇದನ್ನೂ ಓದಿ:  ಫೆಬ್ರವರಿ 2023 ರಲ್ಲಿ ಹೆಚ್ಚು ಮಾರಾಟವಾದ 10 ಕಾರ್ ಬ್ರ್ಯಾಂಡ್‌ಗಳು 

     

    was this article helpful ?

    Write your Comment on Toyota ಇನೋವಾ Crysta

    1 ಕಾಮೆಂಟ್
    1
    V
    vikramsinh balkrishna nipane
    Mar 14, 2023, 4:20:42 PM

    Excellent car

    Read More...
      ಪ್ರತ್ಯುತ್ತರ
      Write a Reply

      Similar cars to compare & consider

      ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

      ಕಾರು ಸುದ್ದಿ

      • ಟ್ರೆಂಡಿಂಗ್ ಸುದ್ದಿ
      • ಇತ್ತಿಚ್ಚಿನ ಸುದ್ದಿ

      trending ಎಮ್‌ಯುವಿ ಕಾರುಗಳು

      • ಲೇಟೆಸ್ಟ್
      • ಉಪಕಮಿಂಗ್
      • ಪಾಪ್ಯುಲರ್
      ×
      We need your ನಗರ to customize your experience